ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಬಾಲಿವುಡ್ ಬಾದ್‌ಷಾ, ಕಿಂಗ್ ಖಾನ್ ಶಾರೂಖ್ ಮಗ ಆರ್ಯನ್ ಖಾನ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್ ಖಾನ್ ಝೈದ್‌ನ ಮೀಟ್ ಮಾಡಿ, ಕಲ್ಟ್ ಚಿತ್ರದ ಗ್ಲಿಂಪ್ಸ್ ಕೂಡ ನೋಡಿದ್ದಾರೆ. ಇಷ್ಟಕ್ಕೂ ಈ ಕಾಂಬೋನಲ್ಲಿ ಒಂದು ಸಿನಿಮಾ ಏನಾದ್ರೂ ಬರಬಹುದಾ..? ಹೇಳ್ತೀವಿ ಈ ಸ್ಟೋರಿ ನೋಡಿ.
ಸ್ಯಾಂಡಲ್‌ವುಡ್‌ನ ಬನಾರಸ್ ಚಿತ್ರದ ಹೀರೋ ಝೈದ್ ಖಾನ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಕಲ್ಟ್ ಚಿತ್ರಕ್ಕಾಗಿ ಝೈದ್ ವಿಭಿನ್ನ ಲುಕ್ ಪ್ರಯತ್ನ ಮಾಡಿದ್ದಾರೆ. ಇತೀಚೆಗಷ್ಟೇ ಕಲ್ಟ್ ಚಿತ್ರದ ಪ್ಯಾಥೋ ಸಾಂಗ್ ರಿಲೀಸ್ ಆಗಿದೆ. ಪ್ರತಿ ಭಗ್ನಪ್ರೇಮಿಗೂ ಈ ಹಾಡಿನ ಸಾಲುಗಳು.. ಸಂಗೀತ ಮನ ಮುಟ್ಟಿದೆ. ಜನವರಿ 23, 2026ರಲ್ಲಿ ಈ ಸಿನಿಮಾ ತೆರೆಗೆ ಬರಲು ಪ್ಲಾನ್ ನಡೀತಿದೆ ಇದೆ ವೇಳೆ ಸಿನಿಮಾ ಪ್ರಚಾರಕ್ಕೆ ಸ್ಟ್ರಾಂಗ್ ಆಗಿ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ ಝೈದ್.
ಬಾಲಿವುಡ್ ಖಾನ್ ಮೀಟ್ಸ್ ಸ್ಯಾಂಡಲ್‌ವುಡ್ ಕಲ್ಟ್ ಖಾನ್
ಝೈದ್ ಕಲ್ಟ್ ಗ್ಲಿಂಪ್ಸ್ ನೋಡಿ ಶಾರೂಖ್ ಮಗ ಹೇಳಿದ್ದೇನು..?
ಎಸ್, ಝೈದ್ ಪಾತ್ರ ನೋಡ್ತಿದ್ರೆ ಅರ್ಜುನ್ ರೆಡ್ಡಿ ಚಿತ್ರದ ವಿಜಯ್ ದೇವರಕೊಂಡ ರೀತಿನೇ ಕಾಣಿಸುತ್ತಾರೆ. ಅನಿಮಲ್ ಚಿತ್ರದ ರಣಬೀರ್ ಕಪೂರ್ ತರವೂ ಫೀಲ್ ಆಗುತ್ತಾರೆ. ಅಂದ್ರೆ, ಆ ರೀತಿಯ ಬ್ಯಾಡ್ ಬಾಯ್ ಇಮೇಜ್ ಅನ್ನೆ ಇಲ್ಲಿ ಡೈರೆಕ್ಟರ್ ಅನಿಲ್ ಕುಮಾರ್ ಕಟ್ಟಿಕೊಡುತ್ತಿದ್ದಾರೆ. ಅದ್ರಲ್ಲೂ ಸೇಮ್ ಬಾಲಿವುಡ್ ಹೀರೋ ಅಂತೆ ಕಾಣುವ ಝೈದ್ ಕಲ್ಟ್ ಸಿನಿಮಾ ಬಿಡುಗಡೆ ಆಗ್ತಿದ್ದಂತೆ ಬಿಟೌನ್ ಗೆ ಹಾರ್ತಾರ ಎನ್ನುವ ಪ್ರಶ್ನೆ ಭುಗಿಲೆದ್ದಿದೆ.
ಬಾಲಿವುಡ್ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಈಗಾಗಲೇ ಅಪ್ಪನಂತೆ ಕ್ರೇಜ್ ಹುಟ್ಟುಹಾಕಿದ್ದಾರೆ. ಹೀಗಿರುವಾಗ ಝೈದ್ ಖಾನ್ ಆರ್ಯನ್ ಖಾನ್ ನ ಭೇಟಿ ಆಗಿ ಮಾತನಾಡಿರೋ ವಿಡಿಯೋ ವೈರಲ್ ಆಗ್ತಿದೆ. ಎಸ್ ಶಾರುಖ್ ಮಗ ಆರ್ಯನ್ ಜೊತೆ ಝೈದ್ ಹೊಸ ಸಿನಿಮಾ ಮಾಡ್ತಿದ್ದಾರಾ..? ಇಬ್ಬರು ಯಂಗ್ ಸ್ಟರ್ಸ್ ಸೇರಿ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸೋಕೆ ಯೋಜನೆ ಹಾಕ್ತಿದ್ದಾರಾ ಎಂಬ ಪ್ರಶ್ನೆಗಳು ಬಂದಿದೆ. ಆದ್ರೆ ಅಸಲಿ ಸತ್ಯ ಏನಂದ್ರೆ ಝೈದ್ ಅಭಿನಯಿಸಿರುವ ಕಲ್ಟ್ ಸಿನಿಮಾದ ಪ್ರಚಾರವನ್ನ ಆರ್ಯನ್ ಖಾನ್ ಯಿಂದ ಆರಂಭ ಮಾಡಿದ್ದಾರೆ. ಎಸ್, ಕಲ್ಟ್ ಚಿತ್ರದ ಗ್ಲಿಂಪ್ಸ್ ಆರ್ಯನ್ ಖಾನ್ ನೋಡಿ ಮೆಚ್ಚಿದ್ದಾರೆ.
ಒಂದೇ ಚಿತ್ರದಲ್ಲಿ ನಟಿಸ್ತಾರಾ ಬಿಟೌನ್ & ಕನ್ನಡದ ಖಾನ್..?!
ತಂದೆ ಕಿಂಗ್ ಖಾನ್ ರೀತಿ ಫ್ಯಾನ್ಸ್‌ಗೆ ಕೈಬೀಸಿದ ಆರ್ಯನ್..!
ಕನ್ನಡದ ಕಲ್ಟ್ ಸಿನಿಮಾ ಆರ್ಯನ್ ಖಾನ್ ಮೂಲಕ ಬಾಲಿವುಡ್ ಗೂ ರೀಚ್ ಆಗಿದೆ. ಇಷ್ಟು ಆತ್ಮೀಯವಾಗಿ ಭೇಟಿ ಆಗಿರೋ ಝೈದ್ ಹಾಗೂ ಆರ್ಯನ್ ಮುಂದಿನ ದಿನಗಳಲ್ಲಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಲ್ಟ್ ಸಿನಿಮಾದ ಮುಂದಿನ ಸುದ್ಧಿಗೋಷ್ಠಿಗಾಗಿ ಆರ್ಯನ್ ಖಾನ್ ಬೆಂಗಳೂರಿಗೆ ಬರ್ತಾರಾ..? ಝೈದ್ ಗೆ ಯಾವ ರೀತಿ ಬೆಂಬಲ ಕೊಡ್ತಾರೆ ಎಂದು ಕಾಡುನೋಡ್ಬೇಕು.
ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಬುಲ್ ಬುಲ್ ರಚಿತಾ ರಾಮ್ ಹಾಗು ಉಪಾಧ್ಯಕ್ಷ ಚಿತ್ರದ ನಾಯಕಿ ಮಲೈಕಾ ವಸೂಪಾಲ್ ಕೂಡ ಅಭಿನಯಿಸಿದ್ದಾರೆ. ಇಬ್ಬರು ಹೀರೋಯಿನ್‌ಗಳ ಈ ಚಿತ್ರದಲ್ಲಿ ಝೈದ್ ಖಾನ್ ಪಾತ್ರಕ್ಕೆ ಯಾರು ಮೋಸ ಮಾಡ್ತಾರೆ. ಈ ಪಾತ್ರದ ಹಿಂದಿನ ಅಸಲಿ ಮ್ಯಾಟರ್ ಏನು? ಈ ಎಲ್ಲ ಪ್ರಶ್ನೆಗಳೂ ಇದೀಗ ಹುಟ್ಟಿವೆ. ಇನ್ನು, ಬನಾರಸ್ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಕಲ್ಟ್ ನಲ್ಲಿ ಮಾಸ್ ಲುಕ್ ತುಂಬಾನೆ ರಫ್ ಆ್ಯಂಡ್ ಕಾಣಿಸಿಕೊಳ್ಳಲಿದ್ದಾರೆ.




