ಹಸಿವಿರೋ ಕಸಿಯಾದ ಸಿನಿಮೋತ್ಸಾಹಿ ತಂಡ ಲೇಟ್ ಆದ್ರೂ ಲೇಟೆಸ್ಟ್ ಆಗಿ ಪ್ರೇಕ್ಷಕರು ಮೆಚ್ಚುವಂತಹ ಸಿನಿಮಾ ಕೊಟ್ಟೇ ಕೊಡುತ್ತೆ. ಅದಕ್ಕೆ ಕಮಲ್-ಶ್ರೀದೇವಿ ತಂಡ ಬೆಸ್ಟ್ ಎಕ್ಸಾಂಪಲ್. ಸಚಿನ್ ಹಾಗೂ ಸಂಗೀತಾ ಭಟ್ ಕಂಬ್ಯಾಕ್ ಚಿತ್ರ, ರಾಜವರ್ಧನ್ ನೇತೃತ್ವದಲ್ಲಿ ಅದ್ಭುತ ಅನಿಸಿಕೊಂಡಿದೆ. ಕನ್ನಡದಲ್ಲಿ ಕಂಟೆಂಟ್ ಬೇಸ್ಡ್ ಸಿನಿಮಾಗಳು ಬರ್ತಿಲ್ಲ ಅನ್ನೋರಿಗೆ ಕಮಲ್ ಶ್ರೀದೇವಿ ಉತ್ತರ ಕೊಟ್ಟಿದೆ. ಈ ಸರ್‌ಪ್ರೈಸಿಂಗ್ ಚಿತ್ರದಲ್ಲಿ ಅಂಥದ್ದೇನಿದೆ ಅನ್ನೋದ್ರ ರಿವ್ಯೂ ರಿಪೋರ್ಟ್ ಇಲ್ಲಿದೆ ನೋಡಿ.
- ಮತ್ತೊಂದು ಹಿಟ್.. ಕಮಲ್-ಶ್ರೀದೇವಿ ಎಲ್ಲೆಡೆ ಕಮಾಲ್
- ಸಚಿನ್- ಸಂಗೀತಾಗೆ ಬಿಗ್ ಓಪನಿಂಗ್.. ಪ್ರೇಕ್ಷಕ ಖುಷ್..!
- 1st ಹಾಫ್ ರಮೇಶ್ ಇಂದಿರಾ.. 2nd ಹಾಫ್ ಸಂಗೀತಾ..!
- ಅವಾರ್ಡ್ ಲೆವೆಲ್ ಪರ್ಫಾಮೆನ್ಸ್.. 100% ಕಂಟೆಂಟ್ ಚಿತ್ರ
ಈ ವರ್ಷ ಮೊದಲಾರ್ಧಕ್ಕಿಂತ ದ್ವಿತಿಯಾರ್ಧ ಸೂಪರ್. ಬರೀ ಸೂಬಪ್ ಅಲ್ಲ ಬ್ಲಾಕ್ ಬಸ್ಟರ್. ಅದಕ್ಕೆ ಕಾರಣ ಸು ಫ್ರಮ್ ಸೋ ಸಿನಿಮಾದ ಬಿಗ್ಗೆಸ್ಟ್ ಸಕ್ಸಸ್. ಏಳುಮಲೆ ಚಿತ್ರಕ್ಕೆ ಬಂದ ಅಭೂತಪೂರ್ವ ಪ್ರಶಂಸೆಗಳು. ಇದೀಗ ಅವುಗಳ ಸಾಲಿಗೆ ಮತ್ತೊಂದು ಚಿತ್ರ ಕೂಡ ಸೇರಿಕೊಳ್ತಿದೆ. ಅದೇ ಕಮಲ್-ಶ್ರೀದೇವಿ. ಯೆಸ್.. ಇಂದು ರಾಜ್ಯಾದ್ಯಂತ ಎಲ್ಲೆಡೆ ಗ್ರ್ಯಾಂಡ್ ರಿಲೀಸ್ ಆಗಿರೋ ಈ ಚಿತ್ರಕ್ಕೆ ಪ್ರಶಂಸೆ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ.
ವೇಶ್ಯೆಯೊಬ್ಬಳ ಮರ್ಡರ್‌ನಿಂದ ತೆರೆದುಕೊಳ್ಳುವ ಕಮಲ್ ಶ್ರೀದೇವಿ, ನಂತ್ರ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳಿಂದ ನೋಡುಗರಿಗೆ ಸಿಕ್ಕಾಪಟ್ಟೆ ಥ್ರಿಲ್ ಕೊಡುತ್ತೆ. ನೋಡೋಕೆ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಜಾನರ್ ಸಿನಿಮಾ. ಆದ್ರೆ ಮನುಷ್ಯನ ಭಾವನೆಗಳು, ಬದುಕು, ವೃತ್ತಿ ನೈಪುಣ್ಯತೆ, ಮನುಷ್ಯತ್ವ ಹೀಗೆ ಸಾಕಷ್ಟು ವಿಷಯಗಳ ಮೇಲೆ ಇದು ಬೆಳಕು ಚೆಲ್ಲಲಿದೆ.
ರಾಜವರ್ಧನ್ ಈ ಸಿನಿಮಾನ ಬರೀ ನಿರ್ಮಾಣ ಮಾಡಿಲ್ಲ. ಇದಕ್ಕೆ ಕ್ರಿಯೇಟಿವ್ ಹೆಡ್ ಆಗಿ ಡೈರೆಕ್ಟರ್ ಸುನೀಲ್ ಜೊತೆ ಕೈ ಜೋಡಿಸಿದ್ದಾರೆ. ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್, ತಾನೊಬ್ಬ ನಟನಷ್ಟೇ ಅಲ್ಲ, ಒಳ್ಳೆಯ ಫಿಲ್ಮ್ ಮೇಕರ್ ಅಂತಲೂ ಈ ಚಿತ್ರದಿಂದ ತೋರಿಸಿದ್ದಾರೆ. ಇನ್ನು ಈ ಚಿತ್ರದ ನಾಯಕ-ನಾಯಕಿಯಾಗಿ ಸಚಿನ್ ಚಲುವರಾಯಸ್ವಾಮಿ ಹಾಗೂ ಸಂಗೀತಾ ಭಟ್ ಲೀಡ್‌ನಲ್ಲಿ ನಟಿಸಿದ್ದು, ಇವರು ಒಂದು ದೊಡ್ಡ ಗ್ಯಾಪ್ ಬಳಿಕ ಕಂಬ್ಯಾಕ್ ಮಾಡಿದ್ದಾರೆ. ಆದ್ರೆ ಇವ್ರ ಸೆಕೆಂಡ್ ಇನ್ನಿಂಗ್ಸ್ ನಿಮ್ಮ ನಿರೀಕ್ಷೆಗೆ ಮೀರಿದ ರೇಂಜ್‌ಗಿದೆ.
ರಮೇಶ್ ಇಂದಿರಾ ಈ ಕಮಲ್ ಶ್ರೀದೇವಿ ಚಿತ್ರದ ಮೊದಲ ಭಾಗದ ಹೀರೋ. ಹೌದು.. ತಲೆ ಹಿಡುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಔಟ್‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಆದ್ರೆ ಆತ ವೃತ್ತಿಪರತೆ ನೋಡಿದ್ರೆ ಈ ಕೆಲಸದಲ್ಲೂ ಇಷ್ಟು ಹಾನೆಸ್ಟಿನಾ ಅನಿಸಲಿದೆ. ಆದ್ರೆ ದ್ವಿತಿಯಾರ್ಧದ ಹೀರೋ ಮಾತ್ರ ಸಂಗೀತಾ ಭಟ್. ಯೆಸ್.. ವೇಶ್ಯೆಯ ಪಾತ್ರ ನಿರ್ವಹಿಸಿರೋ ಸಂಗೀತಾ, ಮಡಿ ಮೈಲಿಗೆ ಬಿಟ್ಟು ನಟಿಸಿದ್ದಾರೆ. ನಿಜಕ್ಕೂ ಈಕೆಯಲ್ಲಿ ಇಂತಹ ಅಭಿನಯ ಶಾರದೆ ಅಡಗಿದ್ದಾಳೆ ಅನ್ನೋದೇ ಸರ್‌ಪ್ರೈಸಿಂಗ್. ಸಿನಿಮಾ ನೋಡಿದವರೆಲ್ಲಾ ಈಕೆಗೆ ಅವಾರ್ಡ್ ಕನ್ಫರ್ಮ್ ಗುರು ಅನ್ನುವಂತಿದೆ.
ಕಿಶೋರ್, ರಘು ಶಿವಮೊಗ್ಗ ಖಾಕಿ ಖದರ್ ಜೋರಿದ್ದು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಮಿತ್ರ ನಟನೆಯಲ್ಲಿ ಭಯಂಕರ. ನೋಡುಗರ ಮನದಲ್ಲಿ ಉಳಿಯುವಂತಹ ಪಾತ್ರ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ. ಹಿರಿಯನಟ ಉಮೇಶ್ ಕೂಡ ತಮ್ಮ ಪಾತ್ರ ಸಮರ್ಪಕವಾಗಿಯೇ ನಿಭಾಯಿಸಿದ್ದಾರೆ. ಸಚಿನ್ ಹೀರೋ ಆದ್ರೂ ಸಿನಿಮಾದಲ್ಲಿ ಡೈರೆಕ್ಟರ್ ರೋಲ್‌ನಲ್ಲಿ ಮಿಂಚಿದ್ದಾರೆ.
ಪಾತ್ರಗಳಿಗೆ ಯಾವುದೇ ಬಿಲ್ಡಪ್ ಇಲ್ಲದೆ, ತುಂಬಾ ಸಹಜವಾಗಿ, ಸ್ವಾಭಾವಿಕವಾಗಿ ಕಥೆಗೆ ಪೂರಕವಾಗಿ ಸಿನಿಮಾದ ಕಟ್ಟುವ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಕೀರ್ತನ್ ಸಂಗೀತ, ನಾಗೇಶ್ ವಿ ಆಚಾರ್ಯ ಸಿನಿಮಾಟೋಗ್ರಫಿ ಚಿತ್ರದ ಮತ್ತೊಂದು ಹೈಲೈಟ್. ಬರವಣಿಗೆ ಬಹಳ ಚೆನ್ನಾಗಿದ್ದು, ಅದೇ ಈ ಚಿತ್ರದ ಜೀವಾಳ ಅನಿಸಿದೆ. ಓಪನಿಂಗ್‌ನಲ್ಲಿ ಇದು ಪಕ್ಕಾ ಅಡಲ್ಟ್ ಮೂವಿ ಅನಿಸಿದ್ರೂ, ಅದರೊಳಗೆ ಅಡಗಿರೋ ಅಸಲಿ ಕಥೆ ನೋಡುಗನ ಕಣ್ತೆರೆಸುತ್ತೆ.
ಇಂದು ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ರು. ನಿನ್ನೆ ಬೆಂಗಳೂರು, ಮೊನ್ನೆ ಮೈಸೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿದ್ದು, ರಿಲೀಸ್‌ಗೂ ಮೊದಲೇ ಜನ ಭೇಷ್ ಅಂತ ಕಮಲ್ ಶ್ರೀದೇವಿ ಟೀಂಗೆ ಬೆನ್ನು ತಟ್ಟಿದ್ದಾರೆ. ಕಂಟೆಂಟ್ ಬೇಸ್ಡ್ ಸಿನಿಮಾಗಳಲ್ಲಿ ನಮ್ಮ ಕನ್ನಡ ಫಿಲ್ಮ್ ಮೇಕರ್ಸ್ ಹಿಂದೆ ಇದ್ದಾರೆ ಗುರು ಅಂತ ಕೊಂಕು ಮಾತಾಡೋರು ಈ ಚಿತ್ರವನ್ನು ಒಮ್ಮೆ ನೋಡಿದ್ರೆ ಆ ರೀತಿ ಆಡಿಕೊಳ್ಳೋದನ್ನ ಕಂಡಿತ ನಿಲ್ಲಿಸ್ತಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





