• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 26, 2026 - 4:18 pm
in ಸಿನಿಮಾ
0 0
0
Untitled design (25)

ದಿ ವೆಯ್ಟ್ ಈಸ್ ಓವರ್.. ಟಾಕ್ಸಿಕ್ ಪ್ರಪಂಚ ಕೊನೆಗೂ ರಿವೀಲ್ ಆಗೇ ಬಿಟ್ಟಿದೆ. ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಬರೆದು, ನಟಿಸಿ, ಸಹ ನಿರ್ಮಾಣ ಮಾಡಿರೋ ಕನ್ನಡದ ಹಾಲಿವುಡ್ ಮೂವಿ ಇದಾಗಿದ್ದು, ವಿಶ್ವದ ಮೂಲೆ ಮೂಲೆಯಲ್ಲಿ ಬೆಳ್ಳಿತೆರೆ ಬೆಳಗುತ್ತಿದೆ. ಯಶ್‌ಗೆ ಯಶ್ ಮಾತ್ರ ಸರಿಸಾಟಿ ಅನ್ನೋದನ್ನ ಈ ಸಿನಿಮಾ ಮತ್ತೊಮ್ಮೆ ಮನದಟ್ಟು ಮಾಡಿದೆ. ಇಷ್ಟಕ್ಕೂ ಸ್ಟೋರಿ ಲೈನ್ ಏನು..? ಆರ್ಟಿಸ್ಟ್‌‌ಗಳ ಪರ್ಫಾಮೆನ್ಸ್ ಹೇಗಿದೆ..? ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಹೇಳಿದ್ದೇನು..? ಇಲ್ಲಿದೆ ಕಂಪ್ಲೀಟ್ ರಿವ್ಯೂ ರಿಪೋರ್ಟ್.

  • ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ
  • 12 ಸಾವಿರ ಸ್ಕ್ರೀನ್ಸ್‌‌ನಲ್ಲಿ ಹೆಮ್ಮೆಯ ಕನ್ನಡಿಗ ಯಶ್ ವಿಶ್ವ ದರ್ಶನ..!
  • 4 ಮಿಲಿಯನ್ ಟಿಕೆಟ್ಸ್.. ಅಡ್ವಾನ್ಸ್ ಬುಕ್ಕಿಂಗ್‌ನಿಂದ್ಲೇ 110 ಕೋಟಿ!
  • ಮುಗಿಲು ಮುಟ್ಟಿದ ಸೆಲೆಬ್ರೇಷನ್.. ಪ್ರೇಕ್ಷಕ ಪ್ರಭು ಏನಂದ್ರು ಗೊತ್ತಾ?

ಪ್ರತಿಯೊಂದು ಕಾಯುವಿಕೆಯ ಹಿಂದೆ ಒಂದೊಂದು ಕತೆ ಇರುತ್ತೆ. ಟಾಕ್ಸಿಕ್ ಕೊಂಚ ಲೇಟ್ ಮಾಡಿಸಿದ್ರೂ, ಲೇಟೆಸ್ಟ್ ಆಗಿಯೇ ಬೆಳ್ಳಿತೆರೆಗೆ ಬಂದಪ್ಪಳಿಸಿದೆ. ವಿಶ್ವದ ಮೂಲೆ ಮೂಲೆಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಖತ್ ಸದ್ದು ಮಾಡಿತ್ತು. ಅದ್ರಂತೆ ಇಂದು ವರ್ಲ್ಡ್‌‌ವೈಡ್ ಬರೋಬ್ಬರಿ 12 ಸಾವಿರ ಸ್ಕ್ರೀನ್ಸ್‌‌‌‌ನಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಗೀತು ಮೋಹನ್‌ದಾಸ್ ನಿರ್ದೇಶನದ, ಕೆವಿಎನ್ ನಿರ್ಮಾಣದ ಹಾಗೂ ಯಶ್ ಬರೆದು, ನಟಿಸಿ, ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ಯೂತ್‌ಗೆ ಸಿಕ್ಕಾಪಟ್ಟೆ ಕಿಕ್ ಕೊಡ್ತಿದೆ.

RelatedPosts

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!

ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ

ADVERTISEMENT
ADVERTISEMENT

ಅಂದಹಾಗೆ ರೂಮಿ ಹೇಳಿದಂತೆ ಸರಿ-ತಪ್ಪುಗಳ ಆಚೆ ಒಂದು ಪ್ರಪಂಚವಿದೆ. ಅಲ್ಲಿ ಭೇಟಿಯಾಗೋಣ ಅನ್ನೋ ಮಾತನ್ನ ಚಿತ್ರತಂಡ ಪ್ರಸ್ತುತ ಪಡಿಸಿತ್ತು. ಅದ್ರಂತೆ ಈ ಸಿನಿಮಾ ಸರಿ ಹಾಗೂ ತಪ್ಪುಗಳನ್ನ ಮೀರಿದ ಹೊಸ ಪ್ರಪಂಚಕ್ಕೆ ಪ್ರೇಕ್ಷಕ ಪ್ರಭುಗಳನ್ನ ಕೊಂಡೊಯ್ಯಲಿದೆ. ಅಂಥದ್ದೊಂದು ಟಾಕ್ಸಿಕ್ ವರ್ಲ್ಡ್‌‌ನ ಸೃಷ್ಠಿಸಿ, ಚಿತ್ರಪ್ರೇಮಿಗಳಿಗೆ ಅದನ್ನ ಉಣಬಡಿಸಿದೆ ಚಿತ್ರತಂಡ.

ಅಂದಹಾಗೆ ಗ್ಲೋಬಲ್ ಮಾರ್ಕೆಟ್‌‌ನ ಟಾರ್ಗೆಟ್ ಮಾಡಿದ್ದ ಟಾಕ್ಸಿಕ್.. ಪ್ರಪಂಚದದ್ಯಂತ ಸುಮಾರು 4 ಮಿಲಿಯನ್‌ಗೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿದ್ದು, ಅದ್ರಿಂದ ಅಂದ್ರೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಿಂದಲೇ 110 ಕೋಟಿ ಪೈಸಾ ವಸೂಲ್ ಮಾಡಿದೆ. ಈ ಮೂಲಕ ಯಶ್ ಸಾರ್ವಕಾಲಿಕ ದಾಖಲೆ ಕೂಡ ಬರೆದಿದ್ದಾರೆ. ಕನ್ನಡದ ಸಿನಿಮಾವೊಂದು ರಿಲೀಸ್‌ಗೂ ಮೊದಲೇ ಹೀಗೆ ಇಷ್ಟು ದೊಡ್ಡ ಮೊತ್ತ ಕಲೆಹಾಕಿದ ನಿದರ್ಶನವೇ ಇರಲಿಲ್ಲ. ಅಂಥದ್ದೊಂದು ಟ್ರೆಂಡ್‌ನ ಸೃಷ್ಟಿಸಿಯೇ ಬಿಟ್ಟರು ಯಶ್ ಅನ್ನೋ ಅಪ್ಪಟ ಕನ್ನಡ ಬ್ರ್ಯಾಂಡ್.

ಕರ್ನಾಟಕದಲ್ಲಿ ಮುಂಜಾನೆ 6 ಗಂಟೆಯಿಂದಲೇ ಫ್ಯಾನ್ಸ್ ಶೋಗಳು ಶುಭಾರಂಭ ಆಗಿದ್ದು, ಮೆಜೆಸ್ಟಿಕ್‌ನ ಸಂತೋಷ್, ನರ್ತಕಿ, ತ್ರಿವೇಣಿ ಹಾಗೂ ಭೂಮಿಕಾದಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಿನಿಮಾ ಪ್ರದರ್ಶನಗೊಳ್ಳುವ ಮೂಲಕ ನೂತನ ದಾಖಲೆ ಕೂಡ ಬರೆದಿದೆ. ರಾಜ್ಯದ ಆಲ್ಮೋಸ್ಟ್ ಆಲ್ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುಂಜಾನೆ ಶೋಗಳು ಶುರು ಆಗಿದ್ದು, ಕಟೌಟ್‌‌ಗಳು, ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ, ದೀಪ ಬೆಳಗಿ, ತೆಂಗಿನಕಾಯಿ ಹೊಡೆದು ಅಭಿಮಾನಿಗಳು ತಮ್ಮ ರಾಕಿಂಗ್ ಅಭಿಮಾನ ತೋರಿದ್ದಾರೆ.

1947ರಿಂದ 1967ರ ಕಾಲಘಟ್ಟದಲ್ಲಿ ಗೋವಾದಲ್ಲಿ ನಡೆಯೋ ಕಥಾನಕ ಇದಾಗಿದ್ದು.. ಟಿಕೆಟ್ ತನ್ನ ಅತ್ಯಂತ ಕೆಟ್ಟ ಹಾಗೂ ನೀಚ ಅಪ್ಪನಾದ ರಾಯನ ಬಗ್ಗೆ ಹೇಳುವ ಕಥೆ. ಪ್ರತಿ ಆಯ್ಕೆಗೂ ತಕ್ಕ ಬೆಲೆ ತೆರಲೇ ಬೇಕು ಅನ್ನೋ ಎಳೆಯ ಮೇಲೆ ಇಡೀ ಸಿನಿಮಾ ನಿಂತಿದ್ದು, ಓಪಿಯಂ ಟ್ರೇಡ್, ಕ್ಯಾಸಿನೋ ಬ್ಯುಸಿನೆಸ್, ಸರ್ಕಸ್, ಅಕ್ಕ-ತಮ್ಮನ ಬಾಂಧವ್ಯ, ತಂದೆ-ಮಗನ ಜಿದ್ದಾಜಿದ್ದು.. ಹೀಗೆ ಸಾಕಷ್ಟು ವಿಷಯಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ಮೊದಲಾರ್ಧ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಟಾಕ್ಸಿಕ್ ವರ್ಲ್ಡ್‌‌ಗೆ ನಿಮ್ಮನ್ನ ಅದ್ದೂರಿಯಾಗಿಯೇ ಸ್ವಾಗತಿಸಲಿದೆ.

ತಮ್ಮ ರಾಯನನ್ನ ಸಾಕೋಕೆ ಅಕ್ಕ ಗಂಗಾ ತೆಗೆದುಕೊಳ್ಳುವ ರಿಸ್ಕ್.. ಆ ನಂತ್ರ ಆ ಸಿಟಿಯನ್ನೇ ರಾಯ ಆಳಬೇಕು ಅಂತ ಮಹಾಭಾರತದಲ್ಲಿ ಅರ್ಜುನ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಮುನ್ನಡೆಯುವಂತೆ ಗಂಗಾ ಮುಂದೆ ನಿಂತು ರಾಯನನ್ನ ಪಟ್ಟಕ್ಕೇರಿಸುವ ಪರಿ ರೋಚಕ, ರೋಮಾಂಚಕ. ಗೋವಾ ಸಿಟಿಗೆ ಸಾಲ್ವಡಾರ್ ಅನ್ನೋ ಗ್ಯಾಂಗ್‌ಸ್ಟರ್. ಆತನ ಜೊತೆ ಕೈ ಜೋಡಿಸೋ ರಾಯನಿಗೆ ಆತನ ಮಗಳು ರೆಬೆಕ್ಕಾ ಮನಸೋಲುತ್ತಾಳೆ. ರಾಯ ಆಕೆಯನ್ನ ಮದ್ವೆ ಆಗಿ ಸಿಟಿ ಆಳುವ ಗ್ಯಾಂಗ್‌ಸ್ಟರ್ ಆಗ್ತಾನಾ ಅಥ್ವಾ ಅದೇ ಊರಲ್ಲಿ ಸರ್ಕಸ್‌ಗೆ ಅಂತ ಬಂದು ತನ್ನ ಪ್ರೇಮದ ಬಲೆಗೆ ಸಿಲುಕಿಸಿಕೊಳ್ಳೋ ನಾಡಿಯಾ ಪ್ರೇಮಪಂಜರದಲ್ಲಿ ಬಂಧಿ ಆಗ್ತಾನಾ ಅನ್ನೋದೇ ಕಥೆ.

ಇದರ ನಡುವೆ ಅಕ್ಕ ಗಂಗಾಳನ್ನ ಕೊಲ್ಲುವ ನಾಡಿಯಾ. ರಕ್ತ ಹಂಚಿಕೊಂಡು ಹುಟ್ಟಿದ ಮಗನನ್ನೇ ಕೊಲ್ಲಲು ಯತ್ನಿಸೋ ತಂದೆ. ಈ ಎರಡೂ ಮಿಸ್ ಅಂಡರ್‌‌ಸ್ಟ್ಯಾಂಡಿಂಗ್‌ನಿಂದ ಕಥೆ ಸಿಕ್ಕಾಪಟ್ಟೆ ಟ್ವಿಸ್ಟ್ & ಟರ್ನ್ಸ್ ಪಡೆಯುತ್ತಾ ಸಾಗುತ್ತೆ. ಅದೇನು ಎತ್ತ ಅನ್ನೋದನ್ನ ನಾವು ಹೇಳೋದಕ್ಕಿಂತ ನೀವೇ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ತೆರಳು ಒಮ್ಮೆ ಕಣ್ತುಂಬಿಕೊಳ್ಳಿ. ಆ ಸಿನಿಮ್ಯಾಟಿಕ್ ಎಕ್ಸ್‌‌ಪೀರಿಯೆನ್ಸ್‌ನ ಫೀಲ್ ಮಾಡಿ.

  • ಟಾಕ್ಸಿಕ್ ಆರ್ಟಿಸ್ಟ್ ಪರ್ಫಾಮೆನ್ಸ್ ಹೇಗಿದೆ..?
  • ಯಶ್ ಡಬಲ್ ರೋಲ್.. ಮಲ್ಟಿ ಶೇಡ್ಸ್.. ರಾಕಿಂಗ್ ಪರ್ಫಾಮೆನ್ಸ್
  • ಅಲ್ಟ್ರಾ ಸ್ಟೈಲಿಶ್ ಲುಕ್ಸ್‌‌ನಲ್ಲಿ ಕಿಕ್.. ಸ್ವ್ಯಾಗ್‌ಗೆ ಸಿನಿದುನಿಯಾ ಬೋಲ್ಡ್

ರಾಕಿಂಗ್ ಸ್ಟಾರ್ ಯಶ್ ಸಿನಿಮಾದಿಂದ ಸಿನಿಮಾಗೆ ಸಖತ್ ಸ್ಟೈಲಿಶ್ ಲುಕ್ಸ್‌‌ನಲ್ಲಿ ಕಾಣ್ತಾ ಹೋಗ್ತಿದ್ದಾರೆ. ಅದರಲ್ಲೂ ಈ ಟಾಕ್ಸಿಕ್‌‌ನಲ್ಲಿ ಅಲ್ಟ್ರಾ ಸ್ಟೈಲಿಶ್ ಲುಕ್ಸ್‌ನಲ್ಲಿ ನೋಡುಗರ ಕಣ್ಣು ಕುಕ್ಕುವಂತೆ ಕಾಣಸಿಗ್ತಾರೆ. ಒಂದ್ಕಡೆ ಯಂಗ್ ಆಗಿರೋ ರಾಯ, ಮತ್ತೊಂದ್ಕಡೆ ಮಿಲಿಟರಿ ಕಟಿಂಗ್‌‌ನಲ್ಲಿರೋ ಯೂತ್‌‌ಫುಲ್ ಟಿಕೆಟ್, ಮಗದೊಂದು ಕಡೆ ಗ್ರೇ ಹೇರ್‌‌ನಲ್ಲಿರೋ ಇಳಿ ವಯಸ್ಸಿನ ರಾಯ. ಒಂದೊಂದು ಶೇಡ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ಡಬಲ್ ರೋಲ್‌‌ನಲ್ಲಿ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಎಲ್ಲರ ಹುಬ್ಬೇರಿಸುವಂತಹ ಔಟ್ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ಯಶ್.

ಡೈಲಾಗ್ ಡೆಲಿವರಿ, ಸ್ವ್ಯಾಗ್, ಗ್ಯಾಂಗ್‌ಸ್ಟರ್ ಗತ್ತು, ಸ್ಟಂಟ್ಸ್, ರೊಮ್ಯಾನ್ಸ್.. ಹೀಗೆ ಎಲ್ಲಾ ಸೀಕ್ವೆನ್ಸ್‌‌ಗಳಲ್ಲಿ ಯಶ್ ಬೆಸ್ಟ್ ಅನಿಸ್ತಾರೆ. ಅದ್ರಲ್ಲೂ ರಾಯನ ಆಕ್ರಮಣಕಾರಿ ಗುಣಗಳು ಒಬ್ಬ ಗ್ಯಾಂಗ್‌ಸ್ಟರ್ ಆಗಿ ಹಾಗೂ ಹೆಣ್ಣಿನ ಮೋಹದ ದಾಹ ತೀರಿಸೋ ಗಂಡಾಗಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸ್ತಾರೆ.

  • ನಯನತಾರಾ ಸೂಪರ್.. ಕಣ್ಮನ ತಣಿಸೋ ಕಿಯಾರಾ..!
  • ರುಕ್ಮಿಣಿ ರಾಯನ ಪರ್ಮನೆಂಟ್.. ತಾರಾ ಗ್ಲಾಮರ್ ಟಚ್

ಲೇಡಿ ಸೂಪರ್ ಸ್ಟಾರ್ ನಯನತಾರಾ ರಾಯನ ಅಕ್ಕ ಗಂಗಾ ರೋಲ್‌‌ನಲ್ಲಿ ಸಖತ್ ಮೆಚ್ಯೂರ್ಡ್ ಪಾತ್ರ ಮಾಡಿದ್ದಾರೆ. ನಯನತಾರಾ-ಯಶ್ ನಡುವಿನ ಬ್ರದರ್-ಸಿಸ್ಟರ್ ಬಾಂಡಿಂಗ್ ಭೇಷ್ ಅನ್ನುವಂತಿದೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸರ್ಕಸ್‌‌ನಲ್ಲಿ ಕುಣಿಯೋ ನಾಡಿಯಾ ಅನ್ನೋ ಗೊಂಬೆಯಾಗಿ ತನ್ನ ಬೆಡಗು ಬಿನ್ನಾಣ ತೋರಿಸಿದ್ದು, ದೈಹಿಕ ಪ್ರೀತಿಗೂ ಮನಸ್ಸಿನ ಪ್ರೀತಿಗೂ ಇರುವ ಅಂತರವನ್ನ ಪರಿಚಯಿಸೋ ಪಾತ್ರವಾಗಿ ಸಿನಿಮಾಗೆ ಅತ್ಯಂತ ಟ್ವಿಸ್ಟ್ ಕೊಡೋ ರೋಲ್ ನಿರ್ವಹಿಸಿದ್ದಾರೆ.

ತಾರಾ ಸುತಾರಿಯಾ ಇಲ್ಲಿ ರೆಬೆಕ್ಕಾ ಪಾತ್ರದಲ್ಲಿ ಗ್ಯಾಂಗ್‌ಸ್ಟರ್ ಮಗಳ ಪಾತ್ರದಲ್ಲಿ ಮಿಂಚಿದ್ದಾರೆ. ಅದ್ರಲ್ಲೂ ಯಶ್ ಜೊತೆ ಸಖತ್ ಹಾಟ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಬದುಕುವುದಕ್ಕಾಗಿ ಈಕೆಯನ್ನ ರಾಯ ಮದ್ವೆ ಆಗಲು ನಿರ್ಧರಿಸಿರುತ್ತಾನೆ. ಆದ್ರೆ ದ್ವಿತಿಯಾರ್ಧದಲ್ಲಿ ಮೆಲ್ಲಿಸಾ ಆಗಿ ಬರೋ ಕನ್ನಡತಿ ರುಕ್ಮಿಣಿ ವಸಂತ್.. ರಾಯನ ಪರ್ಮೆನೆಂಟ್ ಆಗಿ ಕಾಣಸಿಗ್ತಾರೆ. ರುಕ್ಕಮ್ಮನ ಎಂಟ್ರಿಯಿಂದ ಸ್ಕ್ರೀನ್ ಮತ್ತಷ್ಟು ಗ್ಲಾಮರ್‌‌‌ನಿಂದ ರಂಗೇರಲಿದೆ.

ಹುಮಾ ಖುರೇಷಿ ನೆಗೆಟಿವ್ ರೋಲ್, ಅಕ್ಷಯ್ ಒಬೇರಾಯ್, ಸುದೇವ್ ನಾಯರ್, ಬಾಲಾಜಿ ಮನೋಹರ್, ಅಮಿತ್ ತಿವಾರಿ.. ಹೀಗೆ ಎಲ್ಲರೂ ಅವರವರ ಪಾತ್ರಗಳನ್ನ ಸಮರ್ಪಕವಾಗಿ ನಿಭಾಯಿಸಿದ್ದಾರೆ.

ಟಾಕ್ಸಿಕ್ ಪ್ಲಸ್ ಪಾಯಿಂಟ್ಸ್ ಏನು..?

  • ಯಶ್ ಸ್ವ್ಯಾಗ್ & ನಟನೆ
  • ಕಿಯಾರಾ, ರುಕ್ಮಿಣಿ ಅಭಿನಯ
  • ನಯನತಾರಾ-ಯಶ್ ಬಾಂಡಿಂಗ್
  • ಸಾಹಸ ದೃಶ್ಯಗಳು
  • ರಾಜೀವ್ ರವಿ ಸಿನಿಮಾಟೋಗ್ರಫಿ
  • ಕ್ಲೈಮ್ಯಾಕ್ಸ್ ಎಳೆ
  • ತಂದೆ-ಮಗನ ವೈರುಧ್ಯ
  • ಬ್ಯಾಗ್ರೌಂಡ್ ಮ್ಯೂಸಿಕ್
  • ಕೆವಿಎನ್ ರಿಚ್ ಪ್ರೊಡಕ್ಷನ್ ವ್ಯಾಲ್ಯೂಸ್

ಟಾಕ್ಸಿಕ್ ಮೈನಸ್ ಪಾಯಿಂಟ್ಸ್ ಏನು..?

  • ಗೀತು ಮೋಹನ್‌ದಾಸ್ ಕಥೆಯಲ್ಲಿ ಗಟ್ಟಿತನ ಬೇಕಿತ್ತು
  • ಸ್ಕ್ರೀನ್ ಪ್ಲೇ & ನಿರೂಪಣೆ ಡಲ್
  • ದ್ವಿತಿಯಾರ್ಧ ಸಿಕ್ಕಾಪಟ್ಟೆ ಲ್ಯಾಗ್
  • ಮಾಸ್ ಕಥೆಗೆ ಸೈಕಲಾಜಿಕಲ್ ಟಚ್
  • ದೀಪಾವಳಿ ಹಬ್ಬ/ ಗೇಮ್‌‌‌ನಂತಹ ಲಾಂಗ್ ಫೈಟ್ಸ್

ಕನ್ನಡ ಚಿತ್ರರಂಗದ ಮಟ್ಟಿಗೆ ಟಾಕ್ಸಿಕ್ ಒಂದು ಅಪರೂಪದ ಹಾಗೂ ಅನನ್ಯ ಪ್ರಯೋಗವೇ ಸರಿ. ಯಾಕಂದ್ರೆ ಇದು ಕನ್ನಡದಿಂದ ತಯಾರಾದ ಮೊಟ್ಟ ಮೊದಲ ಹಾಲಿವುಡ್ ಮೂವಿ ಅಂದ್ರೆ ತಪ್ಪಾಗಲ್ಲ. ನೋಡುಗರಿಗೆ ಅಂಥದ್ದೊಂದು ವಿಶ್ಯುವಲ್ ಟ್ರೀಟ್ ಟಾಕ್ಸಿಕ್ ನೀಡಲಿದೆ. ಕಲ್ಪನೆಯಲ್ಲಿರೋ ನಿಯತ್ತಿಗಿಂತ ವಾಸ್ತವದಲ್ಲಿರೋ ದ್ರೋಹ ಪ್ರಾಮಾಣಿಕವಾಗಿರುತ್ತೆ ಅನ್ನೋದನ್ನ ಈ ಚಿತ್ರ ತೋರಿದೆ. ಬದುಕೋದಕ್ಕಾಗಿ ಪ್ರೀತಿಸೋದು ಬೇರೆ.. ಬದುಕಾಗಿಯೇ ಪ್ರೀತಿಸೋದು ಬೇರೆ ಅನ್ನೋ ನಿಷ್ಕಲ್ಮಶವಾದ ಪ್ರೀತಿಯ ಮಹತ್ವ ಸಾರಿದೆ. ಮಾದಕ ವಸ್ತುಗಳು, ಮಾದಕತೆ, ಮೋಹ, ದಾಹದ ತಾಪ ಮಾನಗಳನ್ನ ಪರಿಚಯಿಸೋ ಕಾರ್ಯ ಆಗಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ತನ್ನನ್ನ ತಾನು ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಅನ್ನೋದನ್ನ ಹೇಳಿದೆ ಟಾಕ್ಸಿಕ್. ತನ್ನ ಮನಃಸಾಕ್ಷಿಗೆ ವಿರುದ್ಧವಾಗಿ ಏನೇ ಮಾಡಿದ್ರೂ ಸಹ ಅದು ಕರ್ಮದ ಬ್ಯಾಗೇಜ್ ಆಗಿ ಬೇತಾಳನಂತೆ ಬೆನ್ನ ಮೇಲೆಯೇ ಇರಲಿದೆ ಅನ್ನೋ ವೇದಾಂತ ಸಾರಿದೆ. ಮಿಗಿಲಾಗಿ ಕೊಡೋ ಕಾಸಿಗೆ ಮೋಸವಿಲ್ಲದಂತೆ ಮಸ್ತ್ ಮನರಂಜನೆ ನೀಡಲಿದೆ.

ಗೀತು ಮೋಹನ್‌ದಾಸ್ ಒಬ್ಬ ಹೆಣ್ಣಾಗಿದ್ದುಕೊಂಡು.. ಹೆಣ್ಣಿನ ಕಾಮ, ಕ್ರೋಧ, ಲೋಭ, ದಯಾ, ಮದ, ಮತ್ಸರದ ಗುಣಗಳನ್ನೆಲ್ಲಾ ಟಾಕ್ಸಿಕ್ ಚಿತ್ರದ ಮೂಲಕ ಅನಾವರಣಗೊಳಿಸೋ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸೋ.. ಗ್ಲೋಬಲ್ ಮಾರ್ಕೆಟ್‌‌ನಲ್ಲಿ ನಮ್ಮ ಸಿನಿಮಾಗಳು ರಾರಾಜಿಸಬೇಕು ಅನ್ನೋ ಕನಸು ಕಂಡಿರೋ ಯಶ್ ಅವ್ರ ಆಶಾದಾಯಕ ಭಾವನೆಗಳನ್ನ ಕನ್ನಡಿಗರಾದ ನಾವುಗಳು ಗೌರವಿಸಬೇಕಿದೆ. ಟಾಕ್ಸಿಕ್‌ನ ಥಿಯೇಟರ್‌‌ನಲ್ಲೇ ಕಣ್ತುಂಬಿಕೊಳ್ಳಿ. ಸಾವಿರಾರು ಮಂದಿ ತಂತ್ರಜ್ಞರು, ಕಲಾವಿದರ ಶ್ರಮವನ್ನ ಶ್ಲಾಘಿಸಿ. ಮನರಂಜನೆ ಜೊತೆ ಮನೋವಿಕಾಸದ ಬೀಜ ಕೂಡ ಇದು ಬಿತ್ತಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

 

 

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (25)

ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 26, 2026 - 4:18 pm
0

Untitled design (24)

ಕ್ಲಬ್‌ಗಳಿಗೆ ಆಹಾರ ಇಲಾಖೆ ಶಾಕ್: ಮುಂದಿನ ವಾರ ಹೋಟೆಲ್ ಮಾಲೀಕರ ಜೊತೆ ಯು.ಟಿ. ಖಾದರ್ ಸಭೆ

by ಕವಿತಾ
August 26, 2026 - 4:12 pm
0

Untitled design (22)

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಮಲೆನಾಡಿನ ರೈತರಿಗೆ ಮಧು ಬಂಗಾರಪ್ಪ ಅಭಯ!

by ಕವಿತಾ
August 26, 2026 - 3:45 pm
0

Untitled design (21)

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

by ಕವಿತಾ
August 26, 2026 - 3:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (21)
    ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್
    August 26, 2026 | 0
  • Untitled design 2026 08 26T141642.891
    ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್
    August 26, 2026 | 0
  • Image 3c1ae891
    ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!
    August 26, 2026 | 0
  • Image f256a0e5 (1)
    ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ
    August 26, 2026 | 0
  • Untitled design 2026 08 26T073026.447
    ಸಿನಿಮಾ ರೆಕಾರ್ಡ್ ಮಾಡಬೇಡಿ: ಅಭಿಮಾನಿಗಳಿಗೆ ಯಶ್‌ ವಿಶೇಷ ಮನವಿ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version