• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕರಳೆ’ ಚಿತ್ರದ ವಿವಾದಿತ ಪೋಸ್ಟರ್ ಬ್ಯಾನ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 25, 2025 - 5:26 pm
in ಸಿನಿಮಾ
0 0
0
11 (31)

ಕನ್ನಡ ದೇಶದೊಳ್ ಹಾಗೂ ಕಲಿವೀರ ಚಿತ್ರಗಳ ಖ್ಯಾತಿಯ ನಿರ್ದೇಶಕ ಅವಿರಾಮ್ ಕಂಠೀರವ ಅವರು ನಿರ್ದೇಶನ ಮಾಡಿರುವ ಸಿನಿಮಾ ಕರಳೆ ಚಿತ್ರದ ವಿವಾದಿತ ಪೋಸ್ಟರ್ ಇದೀಗ ಬ್ಯಾನ್ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಜೊತೆಗೂಡಿ ಕರಳೆ ಚಲನಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಬ್ಯಾನ್ ಮಾಡಲಾಗಿದೆ. ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಪ್ರಥಮಬಾರಿಗೆ ಒಂದು ಚಿತ್ರದ ಪೋಸ್ಟರ್ ಬ್ಯಾನ್ ಆಗಿರುವುದು ಕಂಡು ಬಂದಿದೆ.

ಕರಳೆ ಚಿತ್ರದ ನಾಯಕಿ ಕುಂಕುಮ್ ಹರಿಹರ್ ರವರು ಇತ್ತೀಚಿಗೆ ಕರೆಳೆಯ ಫರ್ಸ್ಟ್ ಲುಕ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಚಿತ್ರದ ನಿರ್ದೇಶಕರ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದರು. ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿ ಸೇರಿದಂತೆ ಚಿತ್ರತಂಡವನ್ನು ವಾಣಿಜ್ಯ ಮಂಡಳಿ ಕರೆದು ವಿವಾದದ ಕುರಿತು ಮಾಧ್ಯಮದವರ ಎದುರು ಸಭೆ ನಡೆಸಿದರು. ನಟಿ ಸಲ್ಲಿಸಿದ ಆರೋಪ ಪತ್ರದಲ್ಲಿ ಅವರ ಒಪ್ಪಿಗೆ ಪಡೆಯದೆ ಚಿತ್ರದ ನಾಯಕಿಯ ಮತ್ತೊಂದು ಬೋಲ್ಡ್ ಪೋಸ್ಟರ್ ಅನ್ನು ನಿರ್ದೇಶಕರು ಬಿಡುಗಡೆ ಮಾಡುವ ಆತಂಕ ನಟಿ ಕುಂಕುಮ್ ವ್ಯಕ್ತ ಪಡಿಸಿದರು.

RelatedPosts

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್

ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!

ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ

ADVERTISEMENT
ADVERTISEMENT

ಇದೊಂದು ಸೂಕ್ಷ್ಮ ವಿಷಯ ಎಂದು ಅರಿತ ವಾಣಿಜ್ಯಮಂಡಳಿ ದೂರು ಸಂಬಂಧಿಸಿದ ಈ ವಿವಾದವನ್ನು ಬಗೆಹರಿಸಿ ಕರಳೆಯ ಫರ್ಸ್ಟ್ ಲುಕ್ ವಿವಾದಿತ ಪೋಸ್ಟರ್ ಅನ್ನು ಬ್ಯಾನ್ ಮಾಡಿದೆ ಮತ್ತು ನಟಿಯ ಮತ್ತೊಂದು ಹೊಸ ಪೋಸ್ಟರ್ ಅನ್ನು ವಾಣಿಜ್ಯ ಮಂಡಳಿಗೆ ತೋರಿಸಿ ಸಮ್ಮತಿ ಪಡೆದು ಬಿಡುಗಡೆ ಮಾಡಲು ಸೂಚಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ನಿರ್ದೇಶಕ ಅವಿರಾಮ್ ಕಂಠೀರವ ಈ ಪೋಸ್ಟರ್ ವಿವಾದ ಬೇಡವಾದ ವಿವಾದವಾಗಿದೆ, ನಾನು ನನ್ನ ನೇರ ಹಾಗು ಸ್ಪಷ್ಟ ದೃಷ್ಟಿಕೋನದಿಂದ ಈ ಪೋಸ್ಟರ್ ರಚಿಸಿದ್ದೆ. ಈ ಪೋಸ್ಟರ್ ನಿಂದ ಇಷ್ಟು ದೊಡ್ಡ ವಿವಾದ ಆಗಲಿದೆ ಎನ್ನುವ ಕಲ್ಪನೆ ನನಗಿರಲಿಲ್ಲ. ನಾನು ನನ್ನ ಸಿನಿಮಾದಲ್ಲಿನ ಕಥೆಯ ಆಳವನ್ನು ಬಹಳ ಬಲವಾಗಿ ಪ್ರಸ್ತುತ ಪಡಿಸುವ ಕಾರಣಕ್ಕಾಗಿ ಈ ಪೋಸ್ಟರ್ ಮಾಡಿದ್ದೆ. ಅದರಲ್ಲಿ ತಾಯಿ ಮಗುವಿನ ಸಂಬಂಧ ತೋರಿಸಲಾಗಿದೆ. ಹಾಗಾಗಿ ನನ್ನ ದೃಷ್ಟಿಯಿಂದ ಅದು ವಿವಾದಿತ ಪೋಸ್ಟರ್ ಆಗಿರಲಿಲ್ಲ. ಆದರೆ ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ನಂತರ ನಾನು ಇದೀಗ ನಟಿಯ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆಗೆ ಮುನ್ನ ಅದನ್ನು ಅವರಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೂ ತೋರಿಸಲು ಸಮ್ಮತಿಸಿದ್ದೇನೆ ಎಂದರು. ಸಿನಿಮಾ ಈ ಕಾಲಘಟ್ಟದಲ್ಲಿ ಜನರಿಗೆ ತಲುಪುವಂತೆ ಮಾಡಲು ಇಂತಹ ಅರ್ಥಗರ್ಭಿತ ಪೋಸ್ಟರ್ ಅಗತ್ಯವಿದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ದೃಷ್ಟಿಕೋನದ ಪ್ರಕಾರ ಇದು ಬೇಕಿತ್ತು ಎಂದು ನಿರ್ದೇಶಕ ಹೇಳಿದ್ದು, ಮುಂದೆ ಬಿಡುಗಡೆ ಆಗಲಿರುವ ಪೋಸ್ಟರ್ ಇಂತಹಾ ಯಾವ ವಿವಾದಕ್ಕೆ ಆಸ್ಪದ ನೀಡುವಂತಿರುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ.

ನಟಿ ಕುಂಕುಮ್ ಹರಿಹರ್ ಅವರು ಮಾತನಾಡಿ, ನಾನಿಂದು ಈ ವಿಚಾರವನ್ನು ವಾಣಿಜ್ಯ ಮಂಡಳಿವರೆಗೆ ತಂದಿರುವ ಬಗ್ಗೆ ನನಗೂ ಬೇಸರವಿದೆ. ಆದರೆ ನಾನು ಈ ಚಿತ್ರದ ಭಾಗವಾಗಿರುವ ಕಾರಣಕ್ಕೆ ಮತ್ತು ನನಗೆ ಸಂಬಂದಿಸಿದ ಚಿತ್ರದ ಪೋಸ್ಟರ್ ಬಿಡುಗಡೆಯಂತಹ ವಿಷಯಗಳು ನನಗೂ ತಿಳಿಯಬೇಕಿದೆ ಎನ್ನುವುದು ನನ್ನ ಮಾತು. ಆದರೆ ಈಗ ನಿರ್ದೇಶಕರು ಪೋಸ್ಟರ್ ಗೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟಿರುವುದರಿಂದ ನಾನು ಸಹ ಅವರ ಮುಂದಿನ ನಡೆಗೆ ಒಪ್ಪಿಗೆ ಸೂಚಿಸಿದ್ದೇನೆ ಎಂದರು.

ನಾನೊಬ್ಬ ಕಲಾವಿದೆಯಾಗಿ ಈ ಪೋಸ್ಟರ್ ನೋಡಿದರೆ ನನಗೆ ಈ ಪೋಸ್ಟರ್ ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಪೋಸ್ಟರ್ ನೋಡುವವರೆಲ್ಲಾ ಇದನ್ನು ಕಲಾವಿದರ ದೃಷ್ಟಿಕೋನದಿಂದಲೇ ನೋಡುತ್ತಾರೆ ಎನ್ನಲಾಗುವುದಿಲ್ಲ. ಕೆಟ್ಟದಾಗಿ ನೋಡುವವರಿಗೆ ಅದು ಕೆಟ್ಟದಾಗಿಯೇ ಕಾಣುತ್ತದೆ. ನನಗೀಗಾಗಲೇ ಸಾಕಷ್ಟು ಜನರು ಕರೆ ಮಾಡಿ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಅದೆಷ್ಟು ಚೆನ್ನಾಗಿ ಮೂಡಿ ಬಂದಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಪೋಸ್ಟರ್ ನೋಡಿದರೆ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತದೆ. ಇದರ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಡಬೇಕಾಗಿತ್ತು. ಹಾಗೆ ಸ್ಪಷ್ಟನೆ ಕೊಟ್ಟಿದ್ದೇ ಆಗಿದ್ದರೆ ನಾನಿಲ್ಲಿಗೆ ಬರುವ ವಿಷಯವೇ ಇರುತ್ತಿರಲಿಲ್ಲ, ಇಷ್ಟು ದೊಡ್ಡ ವಿವಾದವೂ ಆಗುತ್ತಿರಲಿಲ್ಲ ಎಂದು ನಟಿ ಹೇಳಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ರವರು ಮಾತನಾಡಿ, ದೂರು ಕೊಟ್ಟ ಕಲಾವಿದೆ ಮತ್ತು ನಿರ್ದೇಶಕರು ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದನ್ನು ನಾವೀಗ ಅಂತಿಮವಾಗಿ ಬಗೆಹರಿಸಿದ್ದೇವೆ. ಮುಂದಿನ ದಿನದಲ್ಲಿ ನಿರ್ದೇಶಕರು ಯಾವುದೇ ಪೋಸ್ಟರ್ ಮಾಡಿದರೂ ಕಲಾವಿದರೆಲ್ಲರಿಗೆ ತೋರಿಸಿಯೇ ಬಿಡುಗಡೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿವಾದ ಸುಖಾಂತ್ಯವಾಗಿದೆ ಎಂದು ಬಣಕಾರ್ ಹೇಳಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ನರಸಿಂಹುಲು ಮಾತನಾಡಿ ನಾವೆಂದೂ ಹೆಣ್ಣಿಗೆ ನೋವಾಗುವ ಸೂಕ್ಷ್ಮ ವಿಚಾರಗಳನ್ನು ಸಹಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ನೋವಾಗುವ ಯಾವ ವಿಚಾರವನ್ನೂ ತೋರಿಸಲು ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿರುವುದಿಲ್ಲ ಎಂದರು.

ಚಿತ್ರದ ನಿರ್ಮಾಪಕ ಪಾಲಾಕ್ಷ ರವರು ಮಾತನಾಡಿ ಪೋಸ್ಟರ್ ವಿವಾದ ಬಗೆಹರಿಸಿದಕ್ಕೆ ಧನ್ಯವಾದ ಸೂಚಿಸಿದರು ಮತ್ತು ಸಿನಿಮಾ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ಯಾವ ಅಶ್ಲೀಲತೆ ಇಲ್ಲ. ಇಂದು ಈ ವಿವಾದ ಬಗೆಹರಿದಿದ್ದು ಮುಂದಿನ ದಿನದಲ್ಲಿ ಯಾವ ಅಡ್ಡಿ ಆತಂತವಿಲ್ಲದೆ ಚಿತ್ರ ಪೂರ್ಣವಾಗುತ್ತದೆ ಎನ್ನುವ ಭರವಸೆ ಇದೆ. ಇಂತಹಾ ಉತ್ತಮವಾದ ಚಿತ್ರಕ್ಕೆ ಮಾಧ್ಯಮದವರು, ಜನರು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ವಿಭಿನ್ನ ಕಥೆ ಹೊಂದಿರುವ ‘ಕರಳೆ’ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಮಾಜದ ವಾಸ್ತವ ಅಂಶಗಳೊಂದಿಗೆ ಚಿತ್ರೀಕರಿಸಲಾಗುತ್ತಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ. ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದೆ. ಕನ್ನಡ ಮತ್ತು ಚೀನಾ ಬಾಷೆಯಲ್ಲಿ ಚಿತ್ರ ನಿರ್ಮಾಣ ಆಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಕರಳೆ ಚಿತ್ರಕ್ಕಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 22T231737.105

ಸಚಿವ ಶಿವರಾಜ್ ತಂಗಡಗಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
March 22, 2026 - 11:21 pm
0

Untitled design 2026 03 22T225907.626

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್

by ಶಾಲಿನಿ ಕೆ. ಡಿ
March 22, 2026 - 11:06 pm
0

Untitled design 2026 03 22T224931.893

ಲೋಕದ ಆಗುಹೋಗುಗಳ ಬಗ್ಗೆ ಕತಕನಹಳ್ಳಿ ಶ್ರೀಗಳ‌ ಕಾಲಜ್ಞಾನ ಭವಿಷ್ಯ

by ಶಾಲಿನಿ ಕೆ. ಡಿ
March 22, 2026 - 10:50 pm
0

Untitled design 2026 03 22T215359.460

ಸಿಲಿಂಡರ್ ಕೊರತೆ: ರಾಜ್ಯದಲ್ಲಿ ಮತ್ತಷ್ಟು ರೆಸ್ಟೋರೆಂಟ್, ಹೋಟೆಲ್‌ಗಳು ಬಂದ್

by ಶಾಲಿನಿ ಕೆ. ಡಿ
March 22, 2026 - 10:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 22T225907.626
    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಉಗಾಂಡ ಏಜೆಂಟ್ ಜೊತೆ 50 ಕೆಜಿ ಚಿನ್ನ ಸಾಗಣೆಗೆ ಡೀಲ್
    March 22, 2026 | 0
  • Untitled design 2026 03 22T201530.208
    ಭಾವನಾ ರಾಮಣ್ಣ ಮಗಳ ಅದ್ದೂರಿ ನಾಮಕರಣ ಶಾಸ್ತ್ರ..!
    March 22, 2026 | 0
  • Untitled design 2026 03 22T193906.012
    ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!
    March 22, 2026 | 0
  • Untitled design 2026 03 22T181358.006
    ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ
    March 22, 2026 | 0
  • Untitled design 2026 03 22T172606.428
    ದರ್ಶನ್ ಜೈಲಲ್ಲಿದ್ದಾಗ ‘ಸಾರಥಿ’..ಮತ್ತೆ ಜೈಲಲ್ಲಿದ್ದಾಗ್ಲೇ ರೀ-ರಿಲೀಸ್
    March 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version