ಡಿಬಾಸ್ ದರ್ಶನ್-ಪವಿತ್ರಾ ಗೌಡಗೆ ಜೈಲಿಗೋದ್ರೂ ಬುದ್ಧಿ ಬಂದಂತಿಲ್ಲ. ಸುಬ್ಬ-ಸುಬ್ಬಿಯ ಲವ್ ಸ್ಟೋರಿ ಬಹಳ ಜೋರಾಗೇ ನಡೆಯುತ್ತಿದ್ದು.. ಜೈಲಲ್ಲಿ ಕೂಡ ಅವ್ರ ಪ್ರೇಮಪರ್ವ ಎಲ್ಲರ ಹುಬ್ಬೇರಿಸುವಂತಿದೆ. ನಿನ್ನ ಸಹವಾಸವೇ ಸಾಕು ಅಂತ ದಚ್ಚು ಏನೂ ಆಕೆಗೆ ಫುಲ್ಸ್ಟಾಪ್ ಇಟ್ಟಿಲ್ಲ. ಕೇಸ್ನ ಮತ್ತಷ್ಟು ಕಾಂಪ್ಲಿಕೇಟ್ ಮಾಡಿಕೊಳ್ಳೋಕೆ ಏನು ಬೇಕೋ ಅದನ್ನೇ ಮಾಡಿಕೊಂಡಿದ್ದಾರೆ. ಹದ್ದು ಮೀರಿ ಮಾತಾಡಿಕೊಂಡಿದ್ದಾರೆ. ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
- 4 ತಿಂಗಳಲ್ಲಿ ಜಡ್ಜ್ ಚೇಂಜ್.. ದಚ್ಚು-ಪವಿತ್ರಾ ಜೈಲ್ ಟಾಕ್
- ಜಡ್ಜ್ ಬಗ್ಗೆ ಮಾತಾಡೋಕೆ ಸುಬ್ಬ-ಸುಬ್ಬಿಗೆ ಎಷ್ಟು ಧೈರ್ಯ..?!
- ಒಂದೇ ಕೇಸ್ನ ಇಬ್ರು ಆರೋಪಿಗಳು ಮಾತಾಡುವಂತಿಲ್ಲ..!
- ಕೇಸ್ ಈಗ ಮತ್ತಷ್ಟು ಕಾಂಪ್ಲಿಕೇಟ್.. ಇನ್ನಷ್ಟು ಪ್ರಪಾತಕ್ಕೆ ದಚ್ಚು
ಸುಬ್ಬಿಯಿಂದ ಸುಬ್ಬನ ಲೈಫೇ ಬೀದಿಗೆ ಬಂತು. ಸದ್ಯ ನಾಲ್ಕು ಗೋಡಗಳ ನಡುವೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವಂತಾಗಿದೆ. ಯೆಸ್.. ನಾವು ಹೇಳ್ತಿರೋದು ದರ್ಶನ್-ಪವಿತ್ರಾ ಗೌಡ ಅನ್ನೋ ಸುಬ್ಬ-ಸುಬ್ಬಿಯ ಕಥೇನೇ. ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲು ಪಾಲಾಗಿರೋ ಇವರುಗಳ ನಡುವೆ ಮಾತುಕತೆ ಕಟ್ ಆಗಿದೆ. ನಿನ್ನ ಸಹವಾಸವೇ ಸಾಕಮ್ಮ ಅಂದಿದ್ದಾರೆ ದರ್ಶನ್ ಅಂತೆಲ್ಲಾ ಸುದ್ದಿಗಳು ಹರಡಿದ್ದವು. ಆದ್ರೆ ಅಸಲಿ ಮ್ಯಾಟರ್ ಈಗ ಜೈಲಿಂದಲೇ ಲೀಕ್ ಆಗಿದೆ.
ಇನ್ನೊಂದು ನಾಲ್ಕು ತಿಂಗಳು ತಡ್ಕೋ. ಹೈ ಕೋರ್ಟ್ನಲ್ಲಿ ನ್ಯಾಯಾಧೀಶರೇ ಬದಲಾಗ್ತಾರೆ. ಆವಾಗ ಹಾಕೋಣ. ಇಷ್ಟು ದಿನಾನೇ ತಡೆದಿದ್ದೀಯ. ಇನ್ನೊಂದು ಸ್ವಲ್ಪ ದಿವಸ.. ಹೀಗೆ ರೇಣುಕಾಸ್ವಾಮಿ ಮರ್ಡರ್ ಕೇಸ್ನ ಎರಡನೇ ಆರೋಪಿ ನಟ ದರ್ಶನ್.. ಮೊದಲೇ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲೇ ಭರವಸೆ ನೀಡಿದ್ದಾರೆ. ಕೋರ್ಟ್ನಲ್ಲಿ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್ ಬಂದಿರೋ ದರ್ಶನ್-ಪವಿತ್ರಾ ಜಡ್ಜ್ ಬರೋದು ತಡ ಆದಾಗ ಹೀಗಂತ ಮಾತಾಡಿಕೊಂಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಪವಿತ್ರಾ ಗೌಡ ಕೂಡ ಏನು..? ವಿಶ್ವಜಿತ್ತಾ..? ಅಂತ ಜಡ್ಜ್ ಅವ್ರ ಹೆಸರು ಪ್ರಸ್ತಾಪಿಸಿ ದರ್ಶನ್ನ ಪ್ರಶ್ನಿಸಿದ್ದಾರೆ. ಅಲ್ಲದೆ.. ಹೇಗಿದೆ ಬ್ಯಾಕ್ಪೇನ್..? ಫಿಸಿಯೋಥೆರಪಿ ಆಯ್ತಾ..? ಅಂತೆಲ್ಲಾ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರೋ ದಾಸ.. ಪೂರ್ತಿ ಮುರಿದೇ ಹೋಗಿದೆ ಅನ್ನೋ ತರಹ ಕೈ ಸನ್ನೆ ಮಾಡಿ, ನೋವಾಗ್ತಿದೆ. ಫಿಸಿಯೋ ಥೆರಪಿ ಮಾಡ್ತಿದ್ದಾರೆ ಎಂದಿದ್ದಾರೆ. ಅವರ ಸಂಭಾಷಣೆಯ ತುಣುಕು ಸೋರಿಕೆ ಆಗಿ ಎಲ್ಲೆಡೆ ವೈರಲ್ ಆಗಿದೆ. ಇದೆಲ್ಲಾ ನೋಡಿದ್ರೆ ಯಾಕೋ ಇವರಿಬ್ಬರೂ ತಮ್ಮ ಕೇಸ್ನ ದಿನೇ ದಿನೆ ಮತ್ತಷ್ಟು ಕಾಂಪ್ಲಿಕೇಟ್ ಮಾಡಿಕೊಳ್ತಿದ್ದಾರೆ ಅನಿಸ್ತಿದೆ.
ಫಸ್ಟ್ ಅಪ್ ಆಲ್.. ಒಂದೇ ಕೇಸ್ನ ಇಬ್ಬರು ಆರೋಪಿಗಳು ಆ ಬಗ್ಗೆ ಕೋರ್ಟ್ನಲ್ಲಿ ಮಾತನಾಡಿಕೊಳ್ಳುವಂತಿಲ್ಲ. ಆದ್ರೆ ಇಲ್ಲಿ ಹದ್ದು ಮೀರಿ ಅದು ನಡೆದು ಹೋಗಿದೆ. ಸಾಲದು ಅಂತ ನ್ಯಾಯಮೂರ್ತಿಗಳ ಬಗ್ಗೆಯೂ ಇವರುಗಳು ಮಾತನಾಡಿಕೊಂಡಿದ್ದಾರೆ. ಜಡ್ಜ್ ಬದಲಾಗೋ ವಿಷಯ ಇವರಿಗ್ಯಾಕೆ..? ಜಡ್ಜ್ ಬಗ್ಗೆ ಮಾತಾಡಿಕೊಳ್ಳುವ ಅಧಿಕಾರ ಇವರಿಗೇನಿದೆ ಅನ್ನೋದೇ ಎಲ್ಲರ ಪ್ರಶ್ನೆ. ಕೋರ್ಟ್ ಕಲಾಪಗಳಿಗೆ ಟೆಕ್ನಾಲಜಿ ಉಪಯೋಗ ಆಗಬೇಕಿತ್ತು.. ಆದ್ರೆ ಇಲ್ಲಿ ದುರುಪಯೋಗ ಆಗಿದೆ.
ಈಗಾಗ್ಲೇ ದಾಸ ದರ್ಶನ್ಗೆ ತಾವು ನಂಬಿದ ಲಕ್, ಕಾನೂನು, ಆಪ್ತರು, ವಿಧಿ ಎಲ್ಲವೂ ಕೈ ಕೊಟ್ಟಿ ಆಗಿದೆ. ಈಗ ಇಂತಹ ಎಡವಟ್ಗಳು ಮಾಡಿಕೊಳ್ಳೋದ್ರಿಂದ ಅದು ಅವರಿಗೇ ತಿರುಗುಬಾಣ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಕರಿಯರ್ ಅಷ್ಟೇ ಅಲ್ಲ.. ತಲೆ ಮೇಲೆಯೇ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ ದಚ್ಚು. ಇದೆಲ್ಲಾ ನೋಡ್ತಿದ್ರೆ.. ಅವರಿಗೂ ತಲೆಯಲ್ಲಿ ಬುದ್ಧಿ ಇಲ್ಲ.. ಅಥ್ವಾ ಅವರಿಗೆ ಸರಿಯಾಗಿ ತಿಳಿ ಹೇಳುವ ಯಾವುದೇ ಜೀವಗಳಿಲ್ಲ ಅನ್ನೋದು ಇದ್ರಿಂದ ಗೊತ್ತಾಗ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





