• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಸ್ಕರ್ ಅಂಗಳಕ್ಕೆ ಯಶ್ ರಾಮಾಯಣ..ಜೈಹೋ ಕನ್ನಡಿಗ

ರಾಕಿಭಾಯ್ ಮುಂದಿನ ಗುರಿ ಆಸ್ಕರ್ ಪ್ರಶಸ್ತಿ ಗೆಲ್ಲುವುದೇ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 12, 2026 - 4:35 pm
in ಸಿನಿಮಾ
0 0
0
Untitled Design 2026 11 12T163040.213

ಬಾಕ್ಸಾಫೀಸ್ ಅಂಗಳದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿ, ನೂರಾರು ಕೋಟಿ ಲೂಟಿ ಮಾಡುತ್ತಿರುವ ರಾಮಾಯಣ ಭಾಗ 1 ಈಗ ಸೀದಾ ಹಾಲಿವುಡ್‌ನ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟಿದೆ. ಯೆಸ್.. ಇಡೀ ವಿಶ್ವವೇ ತಿರುಗಿ ನೋಡುವಂತಹ ಬಿಗ್ ಬ್ರೇಕಿಂಗ್ ನ್ಯೂಸ್ ಇದು ನಿತೇಶ್ ತಿವಾರಿ ನಿರ್ದೇಶನದ ಈ ಬ್ರಹ್ಮಾಂಡ ದೃಶ್ಯಕಾವ್ಯ ಈಗ 2027ರ ಸಾಲಿನ 99ನೇ ಅಕಾಡೆಮಿ ಪ್ರಶಸ್ತಿ ರೇಸ್‌ಗೆ ಅಧಿಕೃತವಾಗಿ ಧುಮುಕುವ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಅಷ್ಟಕ್ಕೂ ಭಾರತದಿಂದ ಬೇರೆ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿದ್ದರೂ, ರಾಮಾಯಣ ಟೀಮ್ ಆಸ್ಕರ್‌ಗೆ ಎಂಟ್ರಿ ಕೊಟ್ಟಿದ್ದು ಹೇಗೆ? ಅದರ ರಿಪೋರ್ಟ್ ಇಲ್ಲಿದೆ.

  • ಆಸ್ಕರ್ ಅಂಗಳಕ್ಕೆ ಯಶ್ ರಾಮಾಯಣ.. ಜೈಹೋ ಕನ್ನಡಿಗ
  • ಆಸ್ಕರ್ ನಾಮಿನೇಷನ್ ಪಡೆಯಲು ರಾಮಾಯಣಕ್ಕೆ ಸವಾಲು
  • ರಾಕಿಭಾಯ್ ಮುಂದಿನ ಗುರಿ ಆಸ್ಕರ್ ಪ್ರಶಸ್ತಿ ಗೆಲ್ಲುವುದೇ
  • 2027ರ ಆಸ್ಕರ್ ವೇದಿಕೆಯಲ್ಲಿ ಮಿಂಚುತ್ತಾ ರಾಮಾಯಣ..?

ಬಾಕ್ಸಾಫೀಸ್‌ನಲ್ಲಿ ಬಿಡುಗಡೆಯಾದ ಮೊದಲ ದಿನದಿಂದಲೇ ಹೊಸ ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ರಾಮಾಯಣ: ಪಾರ್ಟ್ 1 ಚಿತ್ರ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ದೊಡ್ಡ ಸಂಚಲನ ಸೃಷ್ಟಿಸಿದೆ. ದೇಶ-ವಿದೇಶಗಳಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಕಿಂಗ್ ಆಗಿ ಮೆರೆಯುತ್ತಿರುವ ಈ ಮಹಾಕಾವ್ಯ, ಇದೀಗ 2027ರ ಪ್ರತಿಷ್ಠಿತ 99ನೇ ಆಸ್ಕರ್ ಪ್ರಶಸ್ತಿ ರೇಸ್‌ಗೆ ಅಧಿಕೃತವಾಗಿ ಕಾಲಿಟ್ಟಿದೆ. ಈ ಸುದ್ದಿ ಕೇಳುತ್ತಿದ್ದಂತೆ ಭಾರತೀಯ ಸಿನಿಪ್ರಿಯರು ಹಾಗೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

RelatedPosts

ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ಸಂಗೀತ ಹಬ್ಬ!

ಮತ್ತೆ ಬಳೆಗಾರನಾದ ಶಿವಣ್ಣ..ಎಕ್ಸ್‌‌‌ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್

ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ..ಮಾಸ್ ಕಟ್

ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ?

ADVERTISEMENT
ADVERTISEMENT

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಚಿತ್ರವನ್ನು ಆಸ್ಕರ್‌ನ ‘ಜನರಲ್ ಎಂಟ್ರಿ’ ವಿಭಾಗದಲ್ಲಿ ಸಲ್ಲಿಕೆ ಮಾಡುವ ಮೂಲಕ ಮಾಸ್ಟರ್‌ಸ್ಟ್ರೋಕ್ ನೀಡಿದ್ದಾರೆ. ಭಾರತದಿಂದ ಆಸ್ಕರ್‌ನ ಅಧಿಕೃತ ಎಂಟ್ರಿಯಾಗಿ ಮರಾಠಿಯ ‘ಗೋಂಧಲ್’ ಸಿನಿಮಾ ಆಯ್ಕೆಯಾಗಿದ್ದರೂ ಸಹ, ‘ರಾಮಾಯಣ’ ತಂಡ ಯಾವುದೇ ಅಧಿಕೃತ ಪ್ರವೇಶದ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಆಸ್ಕರ್ ಸ್ಪರ್ಧೆಗೆ ಅರ್ಜಿ ಸಲ್ಲಿಸಿದೆ. ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌’ ನಿಯಮದಂತೆ ಅಮೆರಿಕದ ನಿರ್ದಿಷ್ಟ ನಗರಗಳಲ್ಲಿ ಸತತ ಏಳು ದಿನಗಳ ಕಾಲ ಪ್ರದರ್ಶನ ಕಾಣುವ ಮೂಲಕ ನೇರವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿಕೊಂಡಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯವೈಭವದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ‘ಶ್ರೀರಾಮ’ನಾಗಿ, ದಕ್ಷಿಣ ಭಾರತದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ‘ಸೀತೆ’ಯಾಗಿ ಹಾಗೂ ನಮ್ಮ ಕರುನಾಡಿನ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ‘ರಾವಣ’ನ ಪಾತ್ರದಲ್ಲಿ ಅಕ್ಷರಶಃ ಪರಕಾಯ ಪ್ರವೇಶ ಮಾಡಿದ್ದಾರೆ. ಇವರೊಂದಿಗೆ ಸನ್ನಿ ಡಿಯೋಲ್ ಹಾಗೂ ರವಿ ದುಬೆ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಚಿತ್ರದಲ್ಲಿದ್ದು, ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್, ಗ್ರಾಫಿಕ್ಸ್ ಹಾಗೂ ಮೇಕಿಂಗ್ ಈಗ ಜಾಗತಿಕ ಪ್ರೇಕ್ಷಕರ ಕಣ್ಣು ಕುಕ್ಕುತ್ತಿದೆ.

ಆಸ್ಕರ್ ರೇಸ್‌ಗೆ ಸಿನಿಮಾ ಎಂಟ್ರಿ ಕೊಟ್ಟಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾದರೂ, ಮುಂದಿನ ಹಾದಿ ಅಷ್ಟು ಸುಲಭವಿಲ್ಲ. ‘ಜನರಲ್ ಎಂಟ್ರಿ’ ವಿಭಾಗದಲ್ಲಿ ಸಲ್ಲಿಕೆಯಾದ ಮಾತ್ರಕ್ಕೆ ನೇರವಾಗಿ ಆಸ್ಕರ್ ನಾಮನಿರ್ದೇಶನ ಸಿಗುವುದಿಲ್ಲ, ಬದಲಾಗಿ ಅಕಾಡೆಮಿ ಸದಸ್ಯರ ಕಠಿಣ ಸ್ಕ್ರೀನಿಂಗ್ ಹಂತಗಳು ಹಾಗೂ ಜಾಗತಿಕ ಮಟ್ಟದ ವೋಟಿಂಗ್ ಪ್ರಕ್ರಿಯೆಯನ್ನು ದಾಟಿ ‘ರಾಮಾಯಣ’ ಅಂತಿಮ ಪಟ್ಟಿಗೆ ಲಗ್ಗೆ ಇಡಬೇಕಿದೆ.

ಒಟ್ಟಿನಲ್ಲಿ, ಭಾರತೀಯ ಪುರಾಣ ಹಾಗೂ ಸಂಸ್ಕೃತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಶ್ವದ ಮೂಲೆ ಮೂಲೆಗೂ ತಲುಪಿಸುತ್ತಿರುವ ‘ರಾಮಾಯಣ: ಭಾಗ 1’, ಈಗ ಆಸ್ಕರ್ ವೇದಿಕೆಯಲ್ಲೂ ತನ್ನ ತಾಕತ್ತು ತೋರಿಸಲು ರೆಡಿಯಾಗಿದೆ. ಬಾಕ್ಸಾಫೀಸ್ ದಂಗಲ್‌ನಲ್ಲಿ ಗೆದ್ದ ಈ ಬ್ರಹ್ಮಾಂಡ ಸಿನಿಮಾ 2027ರ 99ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಎಷ್ಟು ವಿಭಾಗಗಳಲ್ಲಿ ನಾಮಿನೇಟ್ ಆಗಿ ಇತಿಹಾಸ ನಿರ್ಮಿಸಲಿದೆ ಎಂಬುದನ್ನು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 14T182604.227

ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ಸಂಗೀತ ಹಬ್ಬ!

by ಶಾಲಿನಿ ಕೆ. ಡಿ
November 14, 2026 - 6:27 pm
0

ಎಕ್ಸ್ ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್

ಮತ್ತೆ ಬಳೆಗಾರನಾದ ಶಿವಣ್ಣ..ಎಕ್ಸ್‌‌‌ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್

by ಶಾಲಿನಿ ಕೆ. ಡಿ
November 14, 2026 - 6:17 pm
0

Untitled Design 2026 11 14T175805.797

ತೆಲಂಗಾಣದ ಗಿಗ್ ಕಾರ್ಮಿಕರಿಗೆ ಬಂಪರ್ ಗಿಫ್ಟ್: ₹15 ಲಕ್ಷದವರೆಗೆ ವಿಮೆ ಘೋಷಣೆ

by ಶಾಲಿನಿ ಕೆ. ಡಿ
November 14, 2026 - 5:58 pm
0

ಹಲ್ಕಾಡಾನ್ ಪ್ರಮೋದ್ vs ಡಾನ್ ಅಮೃತಾ..ಮಾಸ್ ಕಟ್

ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ..ಮಾಸ್ ಕಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 14, 2026 - 4:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 14T182604.227
    ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ಸಂಗೀತ ಹಬ್ಬ!
    November 14, 2026 | 0
  • ಎಕ್ಸ್ ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್
    ಮತ್ತೆ ಬಳೆಗಾರನಾದ ಶಿವಣ್ಣ..ಎಕ್ಸ್‌‌‌ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್
    November 14, 2026 | 0
  • ಹಲ್ಕಾಡಾನ್ ಪ್ರಮೋದ್ vs ಡಾನ್ ಅಮೃತಾ..ಮಾಸ್ ಕಟ್
    ಹಲ್ಕಾಡಾನ್ ಪ್ರಮೋದ್ v/s ಡಾನ್ ಅಮೃತಾ..ಮಾಸ್ ಕಟ್
    November 14, 2026 | 0
  • ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ
    ಸೀತೆ ಊರು ನೇಪಾಳದಲ್ಲಿ ರಾಮಾಯಣ ಗಳಿಸಿದ್ದೆಷ್ಟು ಕೋಟಿ?
    November 14, 2026 | 0
  • ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..
    ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ..? ಇಲ್ಲಿದೆ ಗ್ಯಾರಂಟಿ ಆನ್ಸರ್
    November 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version