ಸ್ಯಾಂಡಲ್ವುಡ್ನ ಸುವರ್ಣ ಯುಗದ ಅತಿ ದೊಡ್ಡ ಕ್ಲಾಸಿಕ್ ಭಾಗ್ಯದ ಬಳೆಗಾರ ಸಿನಿಮಾದ ಮ್ಯಾಜಿಕ್ ಈಗ ಮತ್ತೆ ಮರುಕಳಿಸುವಂತಾಗಿದೆ. ಶಿವರಾಜ್ಕುಮಾರ್ ಅವರ ಆ ಸುಂದರ ನೆನಪುಗಳಿಗೂ, ಈಗ ರಿಲೀಸ್ ಆಗಿರೋ ಧೀರೇನ್ ಪಬ್ಬಾರ್ ಚಿತ್ರದ ಲಾಲಿ ಹಾಡಿಗೂ ಅಚ್ಚರಿಯ ಕನೆಕ್ಷನ್ ಇದೆ. ರಾಜಕುಮಾರ್ ಪಾರ್ವತಮ್ಮ ನೆನೆದು ಧೀರೇನ್ ಕಣ್ಣೀರು ಹಾಕಿದ್ದೇಕೆ..? ಶಿವಣ್ಣ ಮತ್ತೆ ಬಳೆಗಾರನಾದ ಇಂಟೆರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.
- ಮತ್ತೆ ಬಳೆಗಾರನಾದ ಶಿವಣ್ಣ.. ಎಕ್ಸ್ಪೆಕ್ಟ್, ಅಕ್ಸೆಪ್ಟ್ & ಪಬ್ಬಾರ್
- ಹಳೆಯ ನೆನಪುಗಳ ಪುಳಕ.. ಧೀರೇನ್ ಪ್ರಯೋಗಾತ್ಮಕ ಹೆಜ್ಜೆ..!
- 165 ಲೊಕೇಷನ್ಸ್ನಲ್ಲಿ ಪಬ್ಬಾರ್ ಪಯಣ.. ಗೀತಕ್ಕ ರೆಕಾರ್ಡ್
- s/o ಬಂಗಾರದ ಮನುಷ್ಯನ ಜೊತೆ ಅಮೃತಾ ಪ್ರೇಮ್ ಡ್ಯಾನ್ಸ್..!
2009ರಲ್ಲಿ ಬಿಡುಗಡೆ ಆದ ಶಿವಣ್ಣನ ಭಾಗ್ಯದ ಬಳೆಗಾರ ಹಾಡು ಸೃಷ್ಟಿಸಿದ ಸಂಚಲನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ವಿಶೇಷ ಅಂದ್ರೆ, ಅದೇ ಪರಂಪರೆಯನ್ನು ಮುಂದುವರಿಸುವಂತೆ ಈಗ ಪಬ್ಬಾರ್ ಚಿತ್ರದ ಲಾಲಿಹಾಡು ಕೂಡ ಕೌಟುಂಬಿಕ ಮಮತೆ ಮತ್ತು ಬಳೆಗಳ ನಂಟುಳ್ಳ ಭಾವನಾತ್ಮಕ ಸನ್ನಿವೇಶಗಳೊಂದಿಗೆ ಪ್ರೇಕ್ಷಕರನ್ನು ನೇರವಾಗಿ ಆ ಕಾಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ.
ನಿರ್ದೇಶಕ ಸಂದೀಪ್ ಸುಂಕದ್ 165 ಲೋಕೇಷನ್ಗಳಲ್ಲಿ ಚಿತ್ರೀಕರಿಸಿರುವ ಪಬ್ಬಾರ್ ಚಿತ್ರಕ್ಕೆ ಗೀತಾ ಪಿಕ್ಚರ್ಸ್ ಬ್ಯಾನರ್ನಡಿ ಗೀತಾ ಶಿವರಾಜ್ಕುಮಾರ್ ಅದ್ಧೂರಿ ನಿರ್ಮಾಣದ ಬಲ ತುಂಬಿದ್ದಾರೆ. ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನದ ಲಾಲಿಹಾಡಿಗೆ ಗಾಯಕರಾದ ಅನುರಾಗ್ ಕುಲಕರ್ಣಿ ಮತ್ತು ಮೇಘನಾ ಹಳಿಯಾಳ್ ಕಂಠಸಿರಿ ಪ್ರೇಕ್ಷಕರ ಹೃದಯ ಗೆದ್ದಿದೆ.
ಪಬ್ಬಾರ್ ಚಿತ್ರದ ಆಡಿಯೋ ಲಾಂಚ್ ವೇದಿಕೆ ಮೇಲೆ ಸ್ವತಃ ಶಿವರಾಜ್ಕುಮಾರ್ ಅವರೇ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲೂ ಬಳೆ ಸೀಕ್ವೆನ್ಸ್ ಇತ್ತು.. ಆ ಬಳೆಗಾರನಿಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ ಎಂದರು. ಅಂದು ಶಿವಣ್ಣ ತೆರೆಮೇಲೆ ಸೃಷ್ಟಿಸಿದ್ದ ಆ ಮ್ಯಾಜಿಕಲ್ ಅನುಭವವೇ ಈಗ ಧೀರೇನ್ ಆರ್ ರಾಜ್ಕುಮಾರ್- ಅಮೃತಾ ಪ್ರೇಮ್ ನಟನೆಯ ಪಬ್ಬಾರ್ ಗೀತೆ ಮತ್ತೊಮ್ಮೆ ಜೀವ ಪಡೆದುಕೊಂಡಿದೆ.
ಅಂದಹಾಗೆ ಧೀರೇನ್ ಈ ಸಿನಿಮಾಗಾಗಿ ಎಷ್ಟು ಶ್ರಮಿಸಿದ್ದಾರೆ.. ಶಿವಣ್ಣನ ಬೆಂಬಲ ಹೇಗಿದೆ ಅನ್ನೋದನ್ನ ಹೇಳುತ್ತಾ ಭಾವುಕರಾಗಿ ಶಿವಣ್ಣ-ಗೀತಕ್ಕ ಮುಂದೆ ಮಗುವಿನಂತೆ ಕಣ್ಣೀರು ಹಾಕಿದ್ರು. ಇನ್ನು ಅಮೃತಾ ಪ್ರೇಮ್ ತಾವೇ ಶಾಲಾ ದಿನಗಳಲ್ಲಿ ಭಾಗ್ಯದ ಬಳೆಗಾರ ಹಾಡಿಗೆ ಡ್ಯಾನ್ಸ್ ಮಾಡಿದ್ದನ್ನು ನೆನಪಿಸಿಕೊಂಡು, ಇಂದು ಅದೇ ಶಿವಣ್ಣನ ಜೊತೆ ಹೆಜ್ಜೆ ಹಾಕಿರುವ ತಮ್ಮ ಕನಸಿನ ಹಾದಿಯನ್ನು ಹಂಚಿಕೊಂಡರು.
ಒಟ್ಟಿನಲ್ಲಿ ಟೀಸರ್ ಹಾಗೂ ಹಾಡಿನ ಮೂಲಕವೇ ಕರುನಾಡಿನ ಮನಗೆದ್ದಿರುವ ಪಬ್ಬಾರ್ ಇದೇ ಡಿಸೆಂಬರ್ 11ಕ್ಕೆ ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸೋಕೆ ಬರ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





