• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ

ಶಿವಣ್ಣನ ಲಾಂಚ್ ಮಾಡಿದ ಸೂಪರ್ ಸ್ಟಾರ್‌‌ಗಳ ಡೈರೆಕ್ಟರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 4, 2026 - 5:17 pm
in ಸಿನಿಮಾ
0 0
0
ಸರ್ಕಾರ (11)

ಲೆಜೆಂಡರಿ ಡೈರೆಕ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ. ಯೆಸ್.. ಭಾರತೀಯ ಚಿತ್ರರಂಗದಲ್ಲಿ ಎಕ್ಸ್‌ಪೆರಿಮೆಂಟ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಮಾಸ್ಟರ್‌ಮೈಂಡ್, ಇಹಲೋಕ ತ್ಯಜಿಸೋ ಮೂಲಕ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಕರುನಾಡ ಚಕ್ರವರ್ತಿ ಶಿವಣ್ಣನನ್ನ ಹೀರೋ ಆಗಿ ಇಂಟ್ರಡ್ಯೂಸ್ ಮಾಡಿದ ದಿಗ್ಧರ್ಶಕ ಸಿಂಗೀತಂ ಸಿನಿ ಸಾಮ್ರಾಜ್ಯವನ್ನ ಒಮ್ಮೆ ಮೆಲುಕು ಹಾಕೋಣ ಬನ್ನಿ.

  • ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಇನ್ನು ನೆನಪು ಮಾತ್ರ
  • 6 ಭಾಷೆ.. 60+ ಸಿನಿಮಾ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್
  • ಶಿವಣ್ಣನ ಲಾಂಚ್ ಮಾಡಿದ ಸೂಪರ್ ಸ್ಟಾರ್‌‌ಗಳ ಡೈರೆಕ್ಟರ್
  • ಮೊದಲ ಮೂಕಿ ಮತ್ತು ಟೈಮ್ ಟ್ರಾವೆಲ್ ಚಿತ್ರಗಳ ಸರದಾರ

ಸಿಂಗೀತಂ ಶ್ರೀನಿವಾಸ್ ರಾವ್.. ಭಾರತೀಯ ಚಿತ್ರರಂಗ ಕಂಡ ಮಹಾನ್ ದಿಗ್ದರ್ಶಕ. ಹುಟ್ಟಿದ್ದು ಆಂಧ್ರದಲ್ಲಿ ಆದ್ರೂ ಸೆಟಲ್ ಆಗಿದ್ದು ಚೆನ್ನೈನಲ್ಲಿ. ಆದ್ರೆ ಭಾರತೀಯ ಚಿತ್ರರಂಗದ ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಬಹುದೊಡ್ಡ ಛಾಪು ಮೂಡಿಸಿದ್ದಾರೆ ಸಿಂಗೀತಂ. ಅಲ್ಲದೆ ಇಂಗ್ಲಿಷ್ ಮೂವಿಗಳನ್ನ ಮಾಡೋ ಮೂಲಕ ಹಾಲಿವುಡ್‌‌ಗೂ ಕೊಡುಗೆ ನೀಡಿದ ಗರಿಮೆ ಇವರದ್ದು.

RelatedPosts

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?

Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!

ADVERTISEMENT
ADVERTISEMENT

6 ಭಾಷೆಗಳಲ್ಲಿ 60ಕ್ಕೂ ಅಧಿಕ ಸಿನಿಮಾಗಳನ್ನ ನಿರ್ದೇಶಿಸಿರೋ ಇವರು, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಬರಹಗಾರರು, ನಿರ್ಮಾಪಕರು, ನಟ ಹಾಗೂ ಸಂಗೀತ ಸಂಯೋಜಕರೂ ಹೌದು. ಅದರಲ್ಲೂ ಎಕ್ಸ್‌ಪೆರಿಮೆಂಟ್ಸ್ ಮಾಡೋದ್ರಲ್ಲಿ ಮಾಸ್ಟರ್‌‌ ಈ ಸಿಂಗೀತಂ ಶ್ರೀನಿವಾಸ್ ರಾವ್. 1972ರಿಂದ 2026ರ ತನಕ ಇಡೀ ಜೀವಮಾನವನ್ನ ಕಲೆಗಾಗಿ ಮುಡಿಪಾಗಿಟ್ಟ ಸಿನಿಸಂತ ಅಂದ್ರೆ ತಪ್ಪಾಗಲ್ಲ.

95ನೇ ಇಳಿವಯಸ್ಸಿನಲ್ಲಿ ಕೂಡ ವ್ಹೀಲ್ ಚೇರ್ ಮೇಲೆಯೇ ಕೂತು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಲೆಜೆಂಡ್ ಡೈರೆಕ್ಟರ್. ಹೌದು.. ಇದೇ ವರ್ಷ ತೆರೆಕಂಡ ಸಿಂಗ್ ಗೀತಂ ಅನ್ನೋ ಮ್ಯೂಸಿಕಲ್ ಮೂವಿ ಅವ್ರ ಕಟ್ಟಕಡೆಯ ಸಿನಿಮಾ ಆಗಿ ಹೊರಹೊಮ್ಮಿತ್ತು. ಆ ಸಿನಿಮಾಗೆ ಡೈಲಾಗ್ಸ್ ಇಲ್ಲದೇನೇ ಬರೀ ಹಾಡುಗಳಲ್ಲೇ ಸಂಭಾಷಣೆ ಕಟ್ಟಿಕೊಡೋ ಮೂಲಕ ನೂತನ ದಾಖಲೆ ಬರೆದಿದ್ದರು. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಆ ಸಿನಿಮಾನ ನಿರ್ಮಾಣ ಮಾಡಿದ್ರು. ಅವರ ಬಳಿ ಸ್ವತಃ ಸಿಂಗೀತಂ ಅವ್ರೇ ಹಂಚಿಕೊಂಡಂತೆ ಕೊನೆಯ ಹಾಗೂ ಹೊಚ್ಚ ಹೊಸ ಸಿನಿಮಾಗೆ ‘ಆ ಫ್ರೂಟ್ ಕಟ್ಸ್ ದಿ ನೈಫ್’ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದ್ದು ಸುಳ್ಳಲ್ಲ.

ಅಷ್ಟರಲ್ಲೇ ಸಿಂಗೀತಂ ಶ್ರೀನಿವಾಸ್ ರಾವ್ ವಯೋಸಹಜ ಕಾಯಿಲೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಟೋಬರ್ 3, ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಕಮಲ್ ಹಾಸನ್ ಅಂತಹ ಸೂಪರ್ ಸ್ಟಾರ್‌‌ಗಳು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ರೆ, ಸಾಕಷ್ಟು ಮಂದಿ ಚಿತ್ರರಂಗದ ಮಂದಿ ಸೋಶಿಯಲ್ ಮೀಡಿಯಾಗಳ ಮೂಲಕ ನಮನ ಸಲ್ಲಿಸಿದ್ದಾರೆ.

ನೀವೇ ಒಂದು ಕಲೆ.. ಮತ್ತೆ ಹುಟ್ಟಿ ಬನ್ನಿ ಎಂದ ಶಿವಣ್ಣ

ಸಿಂಗೀತಂ ಶ್ರೀನಿವಾಸ್ ರಾವ್ ಹಲವು ಮೊದಲುಗಳಿಗೆ ಮುನ್ನುಡಿ ಬರೆದವರು. ಕಮಲ್ ಹಾಸನ್‌ ಅವರ ಪುಷ್ಪಕ ವಿಮಾನ ಸಿನಿಮಾದಿಂದ ಭಾರತದ ಮೊದಲ ಮೂಕಿ ಸಿನಿಮಾ ನಿರ್ದೇಶಕ ಅನಿಸಿಕೊಂಡರು. ನಂದಮೂರಿ ಬಾಲಕೃಷ್ಣ ನಟನೆಯ ಆದಿತ್ಯ 369 ಸಿನಿಮಾದ ಮೂಲಕ ಮೊದಲ ಟೈಮ್ ಟ್ರಾವೆಲ್ ಸಿನಿಮಾ ಮಾಡಿದ ಕೀರ್ತಿಗೆ ಪಾತ್ರರಾದವರು. ಅಲ್ಲದೆ.. ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌‌ಕುಮಾರ್‌ನ ಹೀರೋ ಆಗಿ ಆನಂದ್ ಸಿನಿಮಾದಿಂದ ಲಾಂಚ್ ಮಾಡಿದ್ದು ಕೂಡ ಇದೇ ಸಿಂಗೀತಂ.

ನಟ ಶಿವರಾಜ್‌‌ಕುಮಾರ್ ಕೂಡ ತಮ್ಮ 40 ವರ್ಷಗಳ ಸಿನಿಯಾನವನ್ನ ನೆನೆದು, ಅಂದು ಆನಂದ್ ಸಿನಿಮಾದಿಂದ ಶುರುವಾದ ಪಯಣ ಇಷ್ಟು ಸುದೀರ್ಘವಾಗಿ ಸಾಗಿರೋದು ನಿಮ್ಮಿಂದ. ಕಲೆಗಾಗಿ ನೀವು ಬದುಕಿದವರಲ್ಲ. ನೀವೇ ಒಂದು ಕಲೆ ಅಂತ ಬಣ್ಣಿಸೋ ಮೂಲಕ ಗುರುಗಳಿಗೆ ಮತ್ತೆ ಹುಟ್ಟಿ ಬನ್ನಿ ಅಂತ ಪೋಸ್ಟ್ ಹಾಕೋ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

  • ಡಾ. ರಾಜ್‌‌ ಎವರ್‌‌ಗ್ರೀನ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್
  • ಭೈರವ ದ್ವೀಪಂ, ವಿಚಿತ್ರ ಸೋದರುಲು ವಿಭಿನ್ನ ಪ್ರಯೋಗ

ನಟಸಾರ್ವಭೌಮ ಡಾ ರಾಜ್‌‌ಕುಮಾರ್‌ಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದ್ರು ಸಿಂಗೀತಂ. ಹಾಲು ಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮೀ ಬಾರಮ್ಮ, ದೇವತಾ ಮನುಷ್ಯ ಅಂತಹ ಎವರ್‌‌ಗ್ರೀನ್ ಸಿನಿಮಾಗಳನ್ನ ನಿರ್ದೇಶಿಸಿದ್ದರು. ಇವರ ಕಲಾ ವೃತ್ತಿಗೆ ಎರಡು ನ್ಯಾಷನಲ್ ಅವಾರ್ಡ್ಸ್, ಐದು ತೆಲುಗು ಸ್ಟೇಟ್ ಫಿಲ್ಮ್ ನಂದಿ ಅವಾರ್ಡ್ಸ್ ಹಾಗೂ 3 ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ಸ್‌ ಕೂಡ ಸಂದಿವೆ.

ಬಾಲಕೃಷ್ಣ ನಟನೆಯ ಭೈರವ ದ್ವೀಪಂ ಸಿನಿಮಾ ಆ ಕಾಲಕ್ಕೆ ಬಿಗ್ಗೆಸ್ಟ್ ಎಕ್ಸ್‌ಪೆರಿಮೆಂಟ್. ಅಲ್ಲದೆ.. ಕಮಲ್ ಹಾಸನ್‌ರನ್ನ ವಿಚಿತ್ರ ಸೋದರುಲು ಸಿನಿಮಾದಲ್ಲಿ 3 ಅಡಿ ಕುಬ್ಜನನ್ನಾಗಿ ತೋರಿಸಿದ್ರು ಸಿಂಗೀತಂ ಶ್ರೀನಿವಾಸ್ ರಾವ್. ಇಡೀ ಜೀವಮಾನದುದ್ದಕ್ಕೂ ಇಂಥದ್ದೇ ಪ್ರಯೋಗಗಳನ್ನ ಮಾಡುತ್ತಾ, ಸಾವಿರಾರು ಮಂದಿ ನಿರ್ದೇಶಕರುಗಳಿಗೆ ಸ್ಫೂರ್ತಿಯಾದವರು ಸಿಂಗೀತಂ.

ಹೀಗೆ ಮೂರು ಜನರೇಷನ್ ಹೀರೋಗಳಿಗೆ ಆ್ಯಕ್ಷನ್ ಕಟ್ ಹೇಳಿದಂತಹ ಲೆಜೆಂಡರಿ ಡೈರೆಕ್ಟರ್ ಸಿಂಗೀತಂ ಶ್ರೀನಿವಾಸ್ ರಾವ್.. ಸೆಲ್ಯುಲಾಯ್ಡ್‌‌ನಿಂದ ಡಿಜಿಟಲ್ ತನಕ ಚಿತ್ರರಂಗದ ಏಳಿಗೆಯನ್ನ ಬಹಳ ಹತ್ತಿರದಿಂದ ಕಂಡಿದ್ದಾರೆ. ಅವರ ಅಗಲಿಕೆ ಇಂದು ಚಿತ್ರರಂಗಕ್ಕೆ ಅಪಾರ ನಷ್ಟ ಉಂಟುಮಾಡಿದೆ. ಚಿತ್ರರಂಗದ ಬಹುದೊಡ್ಡ ಕೊಂಡಿ ಕಳಚಿದ್ದು ಮಾತ್ರ ಸುಳ್ಳಲ್ಲ. ಸಾಧ್ಯವಾದ್ರೆ ಮತ್ತೆ ಹುಟ್ಟಿ ಬನ್ನಿ ಲೆಜೆಂಡ್. ನಿಮ್ಮ ಕುಟುಂಬಕ್ಕೆ ಆ ನೋವನ್ನು ಭರಿಸೋ ಶಕ್ತಿ ಭಗವಂತ ನೀಡಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಕಾರ (15)

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

by ಶಾಲಿನಿ ಕೆ. ಡಿ
October 4, 2026 - 6:28 pm
0

ಸರ್ಕಾರ (14)

SIR: ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟ್ ವಿರುದ್ಧ FIR

by ಶಾಲಿನಿ ಕೆ. ಡಿ
October 4, 2026 - 6:17 pm
0

ಸರ್ಕಾರ (13)

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

by ಶಾಲಿನಿ ಕೆ. ಡಿ
October 4, 2026 - 5:52 pm
0

ಸರ್ಕಾರ (12)

ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ಮಾಹಿತಿ ಸೋರಿಕೆ ಆರೋಪ; ನೌಕಾಪಡೆ ನಾವಿಕ ಬಂಧನ

by ಶಾಲಿನಿ ಕೆ. ಡಿ
October 4, 2026 - 5:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಕಾರ (15)
    ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ
    October 4, 2026 | 0
  • ಸರ್ಕಾರ (13)
    ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!
    October 4, 2026 | 0
  • ಸರ್ಕಾರ (6)
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?
    October 4, 2026 | 0
  • ಸರ್ಕಾರ (3)
    Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!
    October 4, 2026 | 0
  • Untitled design 2026 10 04T124216.938
    ‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ
    October 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version