ತಲೈವರ್ ರಜನಿಕಾಂತ್ ಅಖಾಡಕ್ಕಿಳಿದರೆ ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ. ‘ಜೈಲರ್’ ಸಿನಿಮಾದ ಹುಕೂಮ್ ಸೌಂಡ್ ಇನ್ನು ಕಿವಿಯಲ್ಲಿ ಅನುರಣಿಸುತ್ತಿರುವಾಗಲೇ, ಈಗ ‘ಜೈಲರ್ 2’ ಹವಾ ಶುರುವಾಗಿದೆ. ಸಿನಿಮಾ ರಿಲೀಸ್‌ಗೂ ಮುನ್ನವೇ ಆಂಧ್ರ-ತೆಲಂಗಾಣದಿಂದ ಹಿಡಿದು ಅಮೆರಿಕದವರೆಗೆ ರಜನಿ ಮ್ಯಾನಿಯಾ ಯಾವ ರೇಂಜ್‌ಗೆ ನಡೀತಿದೆ ಅಂದ್ರೆ, ಬಿಸಿನೆಸ್ ಲೆಕ್ಕಾಚಾರ ತಲೆತಿರುಗುವಂತೆ ಮಾಡುತ್ತಿವೆ.
- ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು.. ತಲೈವಾ ರಾಕ್ಸ್
- 45 ಕೋಟಿಗೆ ‘ಜೈಲರ್ 2’ ಆಂಧ್ರ-ತೆಲಂಗಾಣ ರೈಟ್ಸ್ ಸೇಲ್
- ಟಾಲಿವುಡ್‌ನಲ್ಲಿ ಅಕ್ಟೋಬರ್ ತಿಂಗಳು ಬಿಗ್ ಬಾಕ್ಸ್ ಆಫೀಸ್ ಫೈಟ್
- ರಜನಿ ಕ್ರೇಜ್‌ಗೆ ಸವಾಲೊಡ್ಡುತ್ತಾ ವಿಜಯ್-ರಶ್ಮಿಕಾ ಕಾಂಬೋ..?
ಸೂಪರ್‌ಸ್ಟಾರ್ ರಜನಿಕಾಂತ್ ಅಂದ್ರೆ ಬರಿ ಹೆಸರಲ್ಲ, ಅದೊಂದು ಮಾಸ್ ಫಿನಾಮಿನನ್. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ತೆರೆಗೆ ಬರೋಕೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಸಜ್ಜಾಗಿದೆ. ತೆಲುಗು ರಾಜ್ಯಗಳ ಪ್ರದರ್ಶನ ಹಕ್ಕನ್ನು ಪ್ರಸಿದ್ಧ ನಿರ್ಮಾಪಕ ನಾಗವಂಶಿ ಬರೋಬ್ಬರಿ 45 ಕೋಟಿ ಭಾರಿ ಮೊತ್ತಕ್ಕೆ ತಮ್ಮದಾಗಿಸಿಕೊಂಡಿದ್ದರೆ, ಇತ್ತ ಶ್ಲೋಕ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ಓವರ್‌ಸೀಸ್ ಹಕ್ಕುಗಳನ್ನು 47.5 ಕೋಟಿಗೆ ಜೇಬಿಗಿಳಿಸಿಕೊಂಡಿದೆ. ಅಮೆರಿಕ ಒಂದರಲ್ಲೇ 28 ಕೋಟಿಯ ಬಿಸಿನೆಸ್ ಆಗಿದ್ದು, ಬರಿ ತೆಲುಗು ಮತ್ತು ಓವರ್‌ಸೀಸ್ ರೈಟ್ಸ್ ಒಂದರಿಂದಲೇ 90 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ತಲೈವರ್ ತಮ್ಮ ಪವರ್ ಏನೆಂದು ಮತ್ತೆ ಪ್ರೂವ್ ಮಾಡಿದ್ದಾರೆ.
ಅಕ್ಟೋಬರ್ 15ರಂದು ‘ಜೈಲರ್ 2’ ಪ್ರಪಂಚದಾದ್ಯಂತ ಗ್ರ್ಯಾಂಡ್ ಆಗಿ ತೆರೆಕಾಣುತ್ತಿದ್ದು, ದಸರಾ ಹಬ್ಬದ ರಜೆಯ ಲಾಭ ಪಡೆಯಲು ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್ ಏರ್ಪಟ್ಟಿದೆ. ತಲೈವರ್ ಹಂಟಿಂಗ್‌ಗೆ ಟಕ್ಕರ್ ನೀಡಲು ಮಾರನೇ ದಿನವೇ ಅಂದರೆ ಅಕ್ಟೋಬರ್ 16ರಂದು ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ಅಖಾಡಕ್ಕಿಳಿಯುತ್ತಿದೆ. ‘ಇರುಮುಡಿ’ ಸಿನಿಮಾದ ಭರ್ಜರಿ ಸಕ್ಸಸ್ ಬೆನ್ನಲ್ಲೇ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದ್ದು, ‘ರೌಡಿ ಬಾಯ್’ ರಶ್ಮಿಕಾ ಕಾಂಬಿನೇಷನ್ ರಜನಿ ಕ್ರೇಜ್‌ಗೆ ಸವಾಲೊಡ್ಡಲು ರೆಡಿಯಾಗಿದೆ.
ಇಷ್ಟಕ್ಕೇ ಮುಗಿದಿಲ್ಲ ಈ ಅಕ್ಟೋಬರ್ ಹಂಗಾಮಾ. ಇದಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 9ರಂದು ವೆಂಕಟೇಶ್ ಹಾಗೂ ಮಾಂತ್ರಿಕ ತ್ರಿವಿಕ್ರಮ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ AK47’ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಸಿತಾರಾ ಮಾತೃಸಂಸ್ಥೆ ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವೂ ದಸರಾ ರೇಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ಒಟ್ಟಿನಲ್ಲಿ ಈ ಬಾರಿ ಅಕ್ಟೋಬರ್ ತಿಂಗಳು ಟಾಲಿವುಡ್ ಅಖಾಡದಲ್ಲಿ ಕೋಟಿ ಕೋಟಿ ಹಣಾಹಣಿಗೆ ಸಾಕ್ಷಿಯಾಗಲಿದ್ದು, ತಲೈವರ್ ಮುನ್ನಡೆ ಸಾಧಿಸ್ತಾರಾ ಅಥವಾ ಯಂಗ್ ಬ್ರಿಗೇಡ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ ಅನ್ನೋದೇ ಸದ್ಯದ ಹಾಟ್ ಟಾಪಿಕ್.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





