ಒಂದು ಕಾಲದಲ್ಲಿ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡಿದ್ದ ಬ್ರಿಟನ್ ಸಾಮ್ರಾಜ್ಯ, ಇಂದು ತನ್ನದೇ ದೇಶದ ಒಳಗಿನಿಂದ ಒಡೆದು ಹೋಗುವ ಭೀತಿಯನ್ನು ಎದುರಿಸುತ್ತಿದೆ. ವಿಶ್ವ ಭೂಪಟದಲ್ಲಿ ಬೃಹತ್ ಶಕ್ತಿಯಾಗಿ ಮೆರೆದ ಯುನೈಟೆಡ್ ಕಿಂಗ್ಡಮ್ (ಯು.ಕೆ) ಈಗ ಆಂತರಿಕ ಬಿಕ್ಕಟ್ಟು ಹಾಗೂ ಪ್ರತ್ಯೇಕತೆಯ ಬೇಗೆಯಲ್ಲಿ ಸಿಲುಕಿದೆ.
ಯು.ಕೆ ಒಕ್ಕೂಟದಲ್ಲಿ ಅಸಮಾಧಾನ ಯಾಕೆ?
ಯು.ಕೆ ಎಂದರೆ ಕೇವಲ ಬ್ರಿಟನ್ ಅಲ್ಲ; ಇದು ಇಂಗ್ಲೆಂಡ್, ಸ್ಕಾಟ್ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲ್ಯಾಂಡ್ ಎಂಬ ನಾಲ್ಕು ಪ್ರಮುಖ ರಾಷ್ಟ್ರಗಳ ಒಕ್ಕೂಟ. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ಕಾಟ್ಲ್ಯಾಂಡ್ ಮತ್ತು ಉತ್ತರ ಐರ್ಲ್ಯಾಂಡ್ನಂತಹ ಪ್ರದೇಶಗಳು ಯು.ಕೆಯಿಂದ ಸಂಪೂರ್ಣವಾಗಿ ಹೊರಬಂದು ಸ್ವತಂತ್ರ ರಾಷ್ಟ್ರಗಳಾಗಲು ಅಥವಾ ಯುರೋಪಿಯನ್ ಒಕ್ಕೂಟಕ್ಕೆ (EU) ಮರಳಲು ತೀವ್ರ ಪ್ರಯತ್ನ ನಡೆಸುತ್ತಿವೆ. ಪ್ರಮುಖ ನೀತಿಗಳು ಮತ್ತು ನಿರ್ಧಾರಗಳಿಗೆ ಲಂಡನ್ (ಬ್ರಿಟನ್ ಸಂಸತ್ತು) ಸರ್ಕಾರದ ಅನುಮೋದನೆ ಕಡ್ಡಾಯವಾಗಿರುವುದೇ ಈ ಅಸಮಾಧಾನಕ್ಕೆ ಮುಖ್ಯ ಕಾರಣ.
ಜಾಗತಿಕ ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು
• ಜಾಗತಿಕ ಸ್ಥಾನಮಾನ ಕುಸಿತ: ಈ ರಾಷ್ಟ್ರಗಳು ಒಕ್ಕೂಟದಿಂದ ಹೊರನಡೆದರೆ, ಯು.ಕೆ ತನ್ನ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ ಮತ್ತು ಜಾಗತಿಕ ರಾಜಕೀಯ ಪ್ರಭಾವವನ್ನು ದೊಡ್ಡ ಮಟ್ಟದಲ್ಲಿ ಕಳೆದುಕೊಳ್ಳಲಿದೆ.
• ಆರ್ಥಿಕ ಹೊಡೆತ: ಬ್ರಿಕ್ಸಿಟ್ನಿಂದ ಈಗಾಗಲೇ ಆರ್ಥಿಕ ನಷ್ಟ ಅನುಭವಿಸಿರುವ ಯು.ಕೆಗೆ, ಈ ನಾಲ್ಕು ದೇಶಗಳ ಒಡೆತವು ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ದೂಡಲಿದೆ.
ಒಟ್ಟಿನಲ್ಲಿ ಒಡೆದು ಅಳುವ ನೀತಿಯನ್ನ ಹುಟ್ಟು ಹಾಕಿರುವವರೇ ಇಂದು ಅದಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಎನ್ನಬಹುದಾಗಿದೆ..





