ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟ್ರೈಲರ್ ಜಗತ್ತಿನಾದ್ಯಂತ ಸೃಷ್ಟಿಸಿರೋ ಕ್ರೇಜ್ ಒಂದ್ಕಡೆಯಾದ್ರೆ, ಈಗ ಈ ಸಿನಿಮಾದ ಲೇಡಿ ಗ್ಯಾಂಗ್‌ಗೆ ಕೊಟ್ಟಿರೋ ಶಾಕಿಂಗ್ ಸಂಭಾವನೆ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. ಕಿಯಾರಾ ಅಡ್ವಾಣಿಯಿಂದ ಹಿಡಿದು ನಯನತಾರಾ, ರುಕ್ಮಿಣಿ ವಸಂತ್‌ವರೆಗೆ ಬ್ಯೂಟಿಫುಲ್ ಲೇಡೀಸ್ ಜೇಬಿಗಿಳಿಸಿದ ಆ ಕೋಟಿ ಕೋಟಿ ರೆಮ್ಯುನರೇಷನ್ ಎಷ್ಟು..? ನಯನತಾರಾನೇ ಹಿಂದಿಕ್ಕಿದ ಆ ಬಾಲಿವುಡ್ ಬ್ಯೂಟಿಗಿ ಯಾರು..?
‘ಟಾಕ್ಸಿಕ್’ ಲೇಡಿ ಗ್ಯಾಂಗ್.. ಯಾರಿಗೆ ಎಷ್ಟೆಷ್ಟು ಕೋಟಿ..?
ಸಂಭಾವನೆಯಲ್ಲಿ ನಯನತಾರಾನೇ ಹಿಂದಿಕ್ಕಿದ ಕಿಯಾರಾ..!
ಯಶ್ ಬಿಟ್ರೆ ಗ್ಲಾಮರ್ ಡಾಲ್ಸ್‌ದೇ ಹೆಚ್ಚು ರೆಮ್ಯುನರೇಷನ್
ಆ-26ಕ್ಕೆ ವರ್ಲ್ಡ್‌ವೈಡ್ ಟಾಕ್ಸಿಕ್ ಬಾಕ್ಸ್ ಆಫೀಸ್ ಸುನಾಮಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಟ್ರೇಲರ್ ಧೂಳೆಬ್ಬಿಸಿದ ಬೆನ್ನಲ್ಲೇ, ಈಗ ಗಾಂಧಿನಗರದಿಂದ ಹಾಲಿವುಡ್‌ವರೆಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಮಲ್ಟಿಸ್ಟಾರರ್ ಆಕ್ಷನ್ ಸುನಾಮಿಯಲ್ಲಿ ನಟಿಸಿರೋ ಲೇಡಿ ಗ್ಯಾಂಗ್‌ಗೆ ನೀಡಲಾಗಿರೋ ಸಂಭಾವನೆ ಕೇಳಿದ್ರೆ ಯಾರೇ ಆದ್ರೂ ಕಣ್ಣು ಅಗಲಿಸೋದು ಗ್ಯಾರಂಟಿ. ‘ಕೆಜಿಎಫ್’ ಬಳಿಕ ಯಶ್ ಬ್ರ್ಯಾಂಡ್ ವ್ಯಾಲ್ಯೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿರೋದ್ರಿಂದ, ಅವರ ಜೊತೆ ತೆರೆಹಂಚಿಕೊಂಡಿರೋ ಸೌತ್ ಹಾಗೂ ಬಾಲಿವುಡ್ ಬ್ಯೂಟಿಗಳಿಗೂ ನಿರ್ಮಾಪಕರು ಕೋಟಿ ಕೋಟಿ ಹಣ ಚೆಲ್ಲಿದ್ದಾರೆ ಅನ್ನೋ ಹಾಟ್ ಗಾಸಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸಂಭಾವನೆ ರೇಸ್‌ನಲ್ಲಿ ಲೇಡಿ ಸೂಪರ್‌ಸ್ಟಾರ್ ನಯನತಾರಾರನ್ನೇ ಹಿಂದಿಕ್ಕಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಬಂಪರ್ ಲಾಟರಿ ಹೊಡೆದಿದ್ದಾರೆ. ಸಿನಿಮಾದಲ್ಲಿ ನಾಡಿಯಾ ಪಾತ್ರದಲ್ಲಿ ಮಿಂಚಿರೋ ಕಿಯಾರಾ ಬರೋಬ್ಬರಿ 15 ಕೋಟಿ ಸಂಭಾವನೆ ಜೇಬಿಗಿಳಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಇನ್ನು ಗಂಗಾ ಪಾತ್ರದಲ್ಲಿ ಗನ್ ಹಿಡಿದು ರಗಡ್ ಅವತಾರದಲ್ಲಿ ಬೆಂಕಿ ಉಗುಳಿರೋ ಸೌತ್ ಕ್ವೀನ್ ನಯನತಾರಾ 12 ರಿಂದ 18 ಕೋಟಿ ವರೆಗೆ ಬಾಚಿಕೊಂಡಿದ್ರೆ, ನಮ್ಮ ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಮೆಲಿಸ್ಸಾ ಪಾತ್ರಕ್ಕಾಗಿ 3 ರಿಂದ 5 ಕೋಟಿ ಜೇಬಿಗಿಳಿಸಿಕೊಂಡು ಪ್ಯಾನ್-ಇಂಡಿಯಾ ಲೆವೆಲ್‌ನಲ್ಲಿ ಭರ್ಜರಿ ಸದ್ದು ಮಾಡ್ತಿದ್ದಾರೆ.
ಇಷ್ಟೇ ಅಲ್ಲದೇ, ಅಪರಾಧ ಲೋಕದ ಕರಾಳ ಕಥೆಯಲ್ಲಿ ಗ್ಲಾಮರಸ್ ಹಾಗೂ ಡೇಂಜರಸ್ ರೋಲ್‌ಗಳಲ್ಲಿ ಕಾಣಿಸಿಕೊಂಡಿರೋ ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ತಲಾ 2 ರಿಂದ 3 ಕೋಟಿ ವರೆಗೆ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಸಿನಿ ವಲಯದ ತುಂಬೆಲ್ಲಾ ಟಾಕ್ಸಿಕ್ ಲೇಡೀಸ್ ಹೈ-ವೋಲ್ಟೇಜ್ ಸಂಭಾವನೆಯದ್ದೇ ಟಾಕ್ ಆಫ್ ದಿ ಟೌನ್ ಆಗಿದೆ. ಒಟ್ಟಾರೆ ಸಹ ನಿರ್ಮಾಪರಾಗಿರೋ ಯಶ್ ಬಳಿಕ ಅತಿಹೆಚ್ಚು ಸಂಭಾವನೆ ಪಡೆದ ಟಾಕ್ಸಿಕ್ ಬಳಗ ಅಂದ್ರೆ ಅದು ಈ ಗ್ಲಾಮರ್ ಡಾಲ್ಸ್ ಅನ್ನೋದು ಖಚಿತವಾಗಿದೆ. ಒಟ್ಟಾರೆ ಇದೇ ಆಗಸ್ಟ್ 26ರಂದು ವಿಶ್ವದಾದ್ಯಂತ ಆರ್ಭಟಿಸಲು ಸಜ್ಜಾಗಿರೋ ‘ಟಾಕ್ಸಿಕ್’, ರಿಲೀಸ್‌ಗೂ ಮೊದಲೇ ಬಾಕ್ಸ್ ಆಫೀಸ್‌ನಲ್ಲಿ ಆಲ್ ಟೈಂ ರೆಕಾರ್ಡ್ ಮಾಡೋ ಮುನ್ಸೂಚನೆ ನೀಡಿದೆ.





