ಸತೀಶ್-ರಚಿತಾ ರಾಮ್ ನಟನೆಯ ಅಯೋಗ್ಯ-2 ರಿಲೀಸ್‌ಗೆ ಇನ್ನೊಂದೇ ದಿನ ಬಾಕಿ. ಹಾಗಾದ್ರೆ ಎಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಆಗ್ತಿದೆ..? ಡಿಸ್ಟ್ರಿಬ್ಯೂಷನ್ ಯಾರ ಪಾಲಾಗಿದೆ..? ಈ ಚಿತ್ರದ ರಿಲೀಸ್‌ನಿಂದ ಅಭುನಯ ಚತುರ ಸತೀಶ್ ಮಾಡ್ತಿರೋ ಆ ಹೊಚ್ಚ ಹೊಸ ದಾಖಲೆ ಯಾವುದು ಅಂತೀರಾ..?
250+ ಸ್ಕ್ರೀನ್ಸ್‌ಗೆ ‘ಅಯೋಗ್ಯ-2’.. ಸತೀಶ್ ನ್ಯೂ ರೆಕಾರ್ಡ್
ಪ್ರತಿಷ್ಠಿತ KVN ಪ್ರೊಡಕ್ಷನ್ಸ್ ತೆಕ್ಕೆಗೆ ಡಿಸ್ಟ್ರಿಬ್ಯೂಷನ್ ರೈಟ್ಸ್..!!
ನೀನಾಸಂ ಸತೀಶ್ ಕರಿಯರ್‌ನಲ್ಲೇ ಇದು ಬಿಗ್ಗೆಸ್ಟ್ ರಿಲೀಸ್
ರಚಿತಾ ಫ್ಯಾನ್ಸ್‌ಗೆ ಗುಡ್ ನ್ಯೂಸ್.. ನಂದಿನಿ ಈಸ್ ಬ್ಯಾಕ್..!
ಅಯೋಗ್ಯ-2 ಇದೇ ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸೋಕೆ ಬರ್ತಿರೋ ಪಕ್ಕಾ ಹಳ್ಳಿ ಸೊಗಡಿನ ಮನರಂಜನೆ ಮತ್ತು ಮನೋ ವಿಕಾಸದ ಸಿನಿಮಾ. ಯೆಸ್.. 8 ವರ್ಷಗಳ ಹಿಂದೆ ಅಯೋಗ್ಯ ಚಿತ್ರದಿಂದ ಎಲ್ಲರ ದಿಲ್ ದೋಚಿದ್ದ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿ ಒನ್ಸ್ ಅಗೈನ್ ಮೋಡಿ ಮಾಡುವ ಲಕ್ಷಣ ತೋರಿದ್ದಾರೆ. ಯಾಕಂದ್ರೆ ಇದು ಅಯೋಗ್ಯ ಚಿತ್ರದ ಸೀಕ್ವೆಲ್. ಅಲ್ಲದೆ, ಅದೇ ಲೊಕೇಷನ್ಸ್, ಅದೇ ಕಲಾವಿದರ ಬಳಗದಿಂದ ಸೇಮ್ ಟು ಸೇಮ್ ಟೆಕ್ನಿಷಿಯನ್ಸ್ ಕಟ್ಟಿಕೊಟ್ಟಿರೋ ಸಿನಿಮಾ.
ಸಿದ್ದೇಗೌಡನಾಗಿ ಸತೀಶ್, ಬಚ್ಚೇಗೌಡನಾಗಿ ರವಿಶಂಕರ್ ಅಬ್ಬರಿಸಲಿದ್ದು, ಬೆಣ್ಣೆ-ಮಟನ್ ಪಾತ್ರಗಳಲ್ಲಿ ಗಿರಿ ಹಾಗೂ ಶಿವರಾಜ್ ಕೆಆರ್ ಪೇಟೆ ಕಾಣಸಿಗಲಿದ್ದಾರೆ. ನಂದಿನಿ ಪಾತ್ರದಲ್ಲಿ ಹಳ್ಳಿ ಗೃಹಿಣಿಯಾಗಿ ರಚಿತಾ ರಾಮ್ ನೋಡುಗರಿಗೆ ಮಸ್ತ್ ಮನರಂಜನೆ ನೀಡಲಿದ್ದಾರೆ. ಮಹೇಶ್ ಕುಮಾರ್ ನಿರ್ದೇಶನದ ಹಾಗೂ ಮುನೇಗೌಡ ನಿರ್ಮಾಣದ ಅಯೋಗ್ಯ-2ನ ವಿಶಾಲ ಕರ್ನಾಟಕಕ್ಕೆ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡ್ತಿರೋದು ವಿಶೇಷ.
ರಾಜ್ಯಾದ್ಯಂತ ಸುಮಾರು 250ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗ್ತಿದ್ದು, ಇದು ಅಭಿನಯ ಚತುರ ನೀನಾಸಂ ಸತೀಶ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ರಿಲೀಸ್ ಕೂಡ ಹೌದು. ಈ ಮೂಲಕ ಸತೀಶ್ ಹೊಚ್ಚ ಹೊಸ ದಾಖಲೆ ಕೂಡ ಬರೆಯುತ್ತಿದ್ದಾರೆ. ಅಂದಹಾಗೆ ಸತೀಶ್ ನಟನೆಯ ರೀಸೆಂಟ್ ರಿಲೀಸ್ ಸಿನಿಮಾ ದಿ ರೈಸ್ ಆಫ್ ಅಶೋಕಗೆ ಮಿಕ್ಸ್ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೆ ಓಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ ಸಿನಿಮಾ. ದೇಶಾದ್ಯಂತ ದಿ ರೈಸ್ ಆಫ್ ಅಶೋಕ ಚಿತ್ರದ ಪ್ರಯತ್ನಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬರ್ತಿದೆ. ಅದ್ರ ಬೆನ್ನಲ್ಲೀಗ ಅಯೋಗ್ಯ-2 ಬರ್ತಿರೋದು ಇಂಟರೆಸ್ಟಿಂಗ್.





