• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ

ಕವಿತಾ by ಕವಿತಾ
July 17, 2026 - 5:19 pm
in ಸಿನಿಮಾ
0 0
0
ಕೃಷ್ಣ (5)

‘ಪುಣ್ಯಕೋಟಿ’ ಹಾಡನ್ನು ಕೇಳದ ಕಿವಿಗಳೆ ಇಲ್ಲ ಎನ್ನಬಹುದು. ಅಂತಹ “ಪುಣ್ಯಕೋಟಿ” ಹಾಡನ್ನು ಖ್ಯಾತ ಕಾದಂಬರಿಕಾರ, ಬರಹಗಾರ, ಕೃಷಿ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಕೆ.ಎನ್ ಗಣೇಶಯ್ಯ ಪುನರಚಿಸಿದ್ದಾರೆ. ಇದಕ್ಕೆ “ಪುಣ್ಯಕೋಟಿ ಶತಕರುಣಿ” ಎಂದು ಹೆಸರಿಟ್ಟಿದ್ದಾರೆ. ಲಾಫ್ಟಿಲ್ಯಾನ್ಡ್ ಸಂಸ್ಥೆ, ದಿನಿ ಸಿನಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ಈ ಹಾಡನ್ನು ದೃಶ್ಯಕಾವ್ಯವಾಗಿ ನಿರ್ಮಾಣ ಮಾಡಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ಅಜಯ್ ಶ್ರೀನಿವಾಸಮೂರ್ತಿ ಸಂಗೀತ ನೀಡಿರುವ ಈ ದೃಶ್ಯಕಾವ್ಯದ ಹಾಡನ್ನು ಮೇಘನ ಹಳಿಯಾಳ್, ಚಿಂತನ್ ವಿಕಾಸ್ ಹಾಗೂ ಆರವ್ ಜೋಶಿ ಹಾಡಿದ್ದಾರೆ. ಇತ್ತೀಚೆಗೆ ಈ ದೃಶ್ಯಕಾವ್ಯದ ಲೋಕಾರ್ಪಣೆ ಸಮಾರಂಭ ಜಯನಗರದ ಯಡಿಯೂರಿನಲ್ಲಿರುವ ಅ.ನ.ಕೃ ಸಮುದಾಯ ಭವನದ ಪುನೀತ್ ರಾಜಕುಮಾರ್ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜ್ಯಸಾಭಾ ಸದಸ್ಯರಾದ ಸುಧಾಮೂರ್ತಿ ಹಾಗೂ ಹೆಸರಾಂತ ನಟರಾದ ರಮೇಶ್ ಅರವಿಂದ್ ಈ ದೃಶ್ಯಕಾವ್ಯವನ್ನು ಲೋಕಾರ್ಪಣೆ ಮಾಡಿದರು. ಕನ್ನಡ ಹಾಗೂ ಇಂಗ್ಲೀಷ್ ಎರಡರಲ್ಲೂ ಈ ದೃಶ್ಯಕಾವ್ಯ ಮೂಡಿಬಂದಿರುವುದು ವಿಶೇಷ. ಇಂಗ್ಲೀಷ್ ನ‌ ದೃಶ್ಯಕಾವ್ಯಕ್ಕೆ ರಮೇಶ್ ಅರವಿಂದ್ ಅವರೆ ಧ್ವನಿ ನೀಡಿದ್ದಾರೆ. “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆಯ ನಂತರ ಗಣ್ಯರು ಹಾಗೂ ತಂಡದವರು ಮಾತನಾಡಿದರು.

ಗಣೇಶಯ್ಯ ಅವರಿಗೆ ಪುಣ್ಯಕೋಟಿ ಎಂದರೆ ಬಹಳ ಇಷ್ಟ. ಏಕೆಂದರೆ ಅವರ ಮಗಳಿಗೂ ಅದೇ ಹೆಸರಿಟ್ಟಿದ್ದಾರೆ ಎಂದು ಮಾತನಾಡಿದ ಸುಧಾಮೂರ್ತಿ, ಪುಣ್ಯಕೋಟಿ ಹಾಡನ್ನು ನಾವೆಲ್ಲಾ ಕೇಳಿ ಬೆಳೆದಿದ್ದೇವೆ. ನಾವು ಪುಣ್ಯಕೋಟಿಯ ತ್ಯಾಗವನ್ನಷ್ಟೇ ನೋಡಿದ್ದೇವೆ. ಆದರೆ ಗಣೇಶಯ್ಯ ಅವರು ಇಲ್ಲಿ ಶತಕರುಣಿಯ(ಹುಲಿ) ತ್ಯಾಗವನ್ನು ಹೇಳಿದ್ದಾರೆ. ಕೊನೆಗೆ‌ ಅವರು ಹೇಳಿರುವ “ಲೋಕವೆಲ್ಲವು ಏಕವಾಗಿ ನಾಕವಾಗುವುದಿ ಧರೆ” ಎಂಬ ಸಾಲು ನನ್ನ ಮನಮುಟ್ಟಿತ್ತು. ಈ ದೃಶ್ಯಕಾವ್ಯ ಕರ್ನಾಟಕ ಮಾತ್ರವಲ್ಲದೆ ಎಲ್ಲಾ ಕಡೆಗೂ ತಲುಪುವಂತಾಗಲಿ. ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದರು.

RelatedPosts

ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!

ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಡಿಸೆಂಬರ್ 3ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ‘ಫೌಜಿ’

‘ಬಾಸ್’ ಸಿನಿಮಾಗೆ ಗ್ರೀನ್ ಸಿಗ್ನಲ್: ದರ್ಶನ್ ಅರ್ಜಿ ವಜಾ

‘3 ಇಡಿಯಟ್ಸ್’ಗೂ ಸೋನಂ ವಾಂಗ್ಚುಕ್ ಸಂಬಂಧವೇ ಇಲ್ಲ: ವೈರಲ್ ನಂಬಿಕೆಗೆ ಆಮಿರ್ ಖಾನ್ ಬ್ರೇಕ್

ADVERTISEMENT
ADVERTISEMENT

ನಾನು ಓದಿದ್ದ ಶಾಲೆಯ ಪ್ರಿನ್ಸಿಪಲ್ ರೂಮ್ ನಲ್ಲಿ ಒಂದು ಪೇಂಟಿಂಗ್. ಆ ಪೇಂಟಿಂಗ್ ನಲ್ಲಿ ಪಿಂಕ್ ಸೀರೆ ಉಟ್ಟು ಹಣತೆ ಹಿಡಿದು ನಗುತ್ತಿರುವ ಹೆಣ್ಣಮಗಳ ಫೋಟೊ. ಅದರ ಕೆಳಗೆ ಲೇಡಿ ವಿತ್ ದ ಲ್ಯಾಂಪ್ ಎಂದು ಬರೆದಿತ್ತು. ಆ ಫೋಟೊ ನೋಡಿದಾಗಲೆಲ್ಲ ನನಗೆ ಸುಧಾಮೂರ್ತಿ ಅವರು ನೆನಪಾಗುತ್ತಾರೆ. ಅವರ ಬರವಣಿಗೆ ಮೂಲಕ, ಚಾರಿಟಿಯ ಮೂಲಕ‌ ಸುಧಾಮೂರ್ತಿ ಅವರು ಬೆಳಕನ್ನು ಚೆಲ್ಲುತ್ತಿದ್ದಾರೆ. ಅಂತಹ ಸುಧಾಮೂರ್ತಿ ಅವರು ಈ ದೃಶ್ಯಕಾವ್ಯವನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ ಅವರಿಗೆ ಧನ್ಯವಾದ. ಕೆ.ಎನ್‌. ಗಣೇಶಯ್ಯ ಅವರು ವಿಜ್ಞಾನವನ್ನು ಹಿಸ್ಟರಿ ಜೊತೆಗೆ ಸೇರಿಸಿ,‌‌ ಫಿಲಾಸಫಿಯನ್ನೂ ಸೇರಿಸಿ ನಮಗೆ ಮೂರು ದಶಕಗಳಿಂದ ಕುತೂಹಲವಾದ ಕಥೆಗಳನ್ನು ಕೊಡುತ್ತಿದ್ದಾರೆ. ನಾನು ಅವರ “ಕನಕ ಮುಸುಕು” ಹಾಗೂ “ಕರಿಸಿರಿಯಾನ” ಎರಡನ್ನು ಸೇರಿಸಿ ಚಿತ್ರಕಥೆ ಮಾಡಿ ಒಂದು ಚಿತ್ರ‌ಮಾಡಬೇಕೆಂದು ಕಾಯುತ್ತಿದ್ದೇನೆ. ಈ ದೃಶ್ಯಕಾವ್ಯವನ್ನು ಗಣೇಶಯ್ಯ ಅವರು ಅಷ್ಟೇ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನೂ ಈ ದೃಶ್ಯಕಾವ್ಯದ ಅನಿಮೇಶನ್ ಅಂತೂ ಅದ್ಭುತ. ಒಂದು ಹಸುವಿನ ಮೇಲೆ ಹುಲಿ ಕುಳಿತು ಬರುವುದನ್ನು ನಾನು ಇಲ್ಲಿವರೆಗೂ ನೋಡೆ ಇಲ್ಲ. ನಿರ್ದೇಶಕ ಬಾಲು ಅವರೆ ಕಲ್ಪನೆಗೆ ಧನ್ಯವಾದ. ಸಾಮೂಹಿಕವಾಗಿ ನೆನಪಲ್ಲಿರುವ ಒಂದು ಕಥೆಯನ್ನು ತೆಗೆದುಕೊಂಡು ಇದು ಅಷ್ಟೇ ಅಲ್ಲ. ಅದರ ಹಿಂದೆ ಇನ್ನೊಂದು ಕಥೆ ಇದೆ ಎಂದು ಈ ದೃಶ್ಯಕಾವ್ಯದ ಮೂಲಕ ಹೇಳಿರುವ ಗಣೇಶಯ್ಯ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಕಡೆಯಿಂದ ಮತ್ತೊಮ್ಮೆ ಧನ್ಯವಾದ ಎಂದರು‌ ನಟ ರಮೇಶ್ ಅರವಿಂದ್.

ನನ್ನ ಮಗಳಿಗೆ ಪುಣ್ಯಕೋಟಿ ಎಂದು ಹೆಸರಿಟ್ಟಿದ್ದೇವೆ. ನಾನು ಹಾಗೂ ನನ್ನ ಹೆಂಡತಿ ನನ್ನ ಮಗಳಿಗೆ ಒಂದುವರೆ ವರ್ಷ ಇರಬೇಕಾದರೆ, ಅವಳನ್ನು ಕಾಡಿಗೆ ಕರೆದುಕೊಂಡು ಹೋಗಿ ಬರುತ್ತಿದ್ದೆವು. ಅವಳಿಗೆ ಅಲ್ಲಿ ತರಚಿದ ಗಾಯಗಳಾಗಿರುತ್ತಿತ್ತು. ಅದನ್ನು ನೋಡಿ, ನಮ್ಮ ಅಪ್ಪ ಬಯ್ಯುತ್ತಿದ್ದರು. ಅದರ ಮೇಲೆ ಒಂದು ಹಾಡನ್ನು ಕೂಡ ಬರೆದಿದ್ದರು. ಈ ಹಾಡಿನಲ್ಲಿ ಪುಣ್ಯಕೋಟಿ ನನ್ನ ಮಗಳಾಗಿದ್ದಳು. ನಾನು, ನನ್ನ ಹೆಂಡತಿ ವಿಲನ್ ಆಗಿದ್ದೆವು. ಈಗ ನಮ್ಮಪ್ಪ ಇಲ್ಲ. ನಾನು ಈ ಹಾಡಿನಲ್ಲಿ ಪುಣ್ಯಕೋಟಿಯನ್ನು ಸಾಯಿಸಿದ್ದೇನೆ.‌ ಇದನ್ನು ನೋಡಿದ್ದರೆ, ನಮ್ಮಪ್ಪನ ಪಾಲಿಗೆ ನಾನು ಪರ್ಮನೆಂಟ್ ವಿಲನ್ ಆಗುತ್ತಿದೆ.  ಅಪ್ಪ ಬರೆದ ಹಾಡಿನಲ್ಲಿ  ನನ್ನನ್ನು ಅವರು ವ್ಯಾಘ್ರ ಮಾಡಿದಾಗ, ಆ ವ್ಯಾಘ್ರನ್ನು ಕೂಡ ಒಳ್ಳೆಯವನೆ ಎಂದು ನಾನು ವಾದ ಮಾಡಬೇಕಿತ್ತು. ಅದೇ ಈ ಕಥೆಯ ಮೂಲ. ನನ್ನ ಕಥೆ ಪುಣ್ಯಕೋಟಿ ಸತ್ತ ನಂತರ ಮುಗಿದು ಹೋಗುತ್ತಿತ್ತು. ಅಪರ್ಣ ಎಂಬ ಹುಡುಗಿ ಕಥೆ ಬಹಳ ಚೆನ್ನಾಗಿದೆ. ಇಲ್ಲಿ ನಿಲಿಸಬೇಡಿ. ನೀವು ಪರಿಸರ ವಿಜ್ಞಾನಿ. ಪುಣ್ಯಕೋಟಿ ಹಾಗೂ ಶತಕರುಣಿ ವಂಶ ಬೆಳೆಯಿತು ಎಂಬುದನ್ನು ಸೇರಿಸಿ ಎಂದರು. ಆ ಹುಡುಗಿಯಿಂದ ಕಥಾ ವಿಸ್ತರಣೆ ಆಯಿತು. ನಂತರ ಬಾಲು ಚಂದ್ರಶೇಖರ್ ಅವರು ಇದನ್ನು ಸಿನಿಮಾ ಮಾಡುತ್ತೇನೆ ಎಂದರು. ಈ ದೃಶ್ಯಕಾವ್ಯದ ಇಂಗ್ಲಿಷ್ ಅವತರಣಿಕೆಗೆ ರಮೇಶ್ ಅರವಿಂದ್ ಅವರು ಧ್ವನಿ ನೀಡಿ, ಅವರು ಇದರ ಕುರಿತು ಆಡಿದ ಮಾತುಗಳು ಹಾಗೂ ಸುಧಾಮೂರ್ತಿ ಅವರ ಆಫೀಸ್ ಗೆ ಹೋಗಿ ಈ ದೃಶ್ಯಕಾವ್ಯ ತೋರಿಸಿದಾಗ ಅವರ ಕಣ್ಣಿನಿಂದ ನೀರು ಬಂತು. ಇವೆಲ್ಲವು ನನ್ನ ಮನ ಮುಟ್ಟಿತ್ತು ಎಂದು ದೃಶ್ಯಕಾವ್ಯದ ಸೂತ್ರಧಾರಿ ಕೆ.ಎನ್ ಗಣೇಶಯ್ಯ ಹೇಳಿದರು.

ಮೂಲತಃ ಎಂಜಿನಿಯರ್ ಆಗಿರುವ ನಿರ್ದೇಶಕ ಬಾಲು ಚಂದ್ರಶೇಖರ್ ಅವರು ಸಹ ಈ ಅನಿಮೇಶನ್ ಸಿನಿಮಾ ಸಾಗಿ ಬಂದ ಕುರಿತು ಮಾಹಿತಿ ನೀಡಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ದಿನಿ ಸಿನಿ ಕ್ರಿಯೇಷನ್ಸ್ ನ ದಿನೇಶ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಂಗೀತ ನಿರ್ದೇಶಕ ಅಜಯ್ ಶ್ರೀನಿವಾಸಮೂರ್ತಿ ಹೊಸಬರಾದರೂ ತುಂಬಾ ಒಳ್ಳೆಯ ಸಂಗೀತ ನೀಡಿದ್ದಾರೆ. ಒಂದು ಅಪ್ಪಟ ಕನ್ನಡದ ತಂಡ ಜಗತ್ತು ನೋಡುವಂತೆ ಈ ಹಾಡನ್ನು ಕಟ್ಟಿಕೊಟ್ಟಿದ್ದಾರೆ.

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 17T180958.085

ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!

by ಶಾಲಿನಿ ಕೆ. ಡಿ
July 17, 2026 - 6:20 pm
0

ಕೃಷ್ಣ (11)

ಚೆನ್ನಮ್ಮ ದೇವೇಗೌಡ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ ಕುಮಾರಸ್ವಾಮಿ, ರೇವಣ್ಣ

by ಕವಿತಾ
July 17, 2026 - 6:07 pm
0

ಕೃಷ್ಣ (6)

ಮದುವೆಯಾಗಿ 15 ದಿನದಲ್ಲೇ ದುರಂತ: ಬೈಕ್ ಸ್ಕಿಡ್ ಆಗಿ ನವವಿವಾಹಿತೆ ಸಾ*ವು

by ಕವಿತಾ
July 17, 2026 - 5:44 pm
0

Untitled design 2026 07 17T172418.329

ರಾಜ್ಯದಲ್ಲಿ ಮಳೆ-ಬರದ ವೈಪರೀತ್ಯ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್,

by ಶಾಲಿನಿ ಕೆ. ಡಿ
July 17, 2026 - 5:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 17T180958.085
    ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!
    July 17, 2026 | 0
  • Untitled design (5)
    ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಡಿಸೆಂಬರ್ 3ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ‘ಫೌಜಿ’
    July 17, 2026 | 0
  • Untitled design (2)
    ‘ಬಾಸ್’ ಸಿನಿಮಾಗೆ ಗ್ರೀನ್ ಸಿಗ್ನಲ್: ದರ್ಶನ್ ಅರ್ಜಿ ವಜಾ
    July 17, 2026 | 0
  • Your paragraph text (2)
    ‘3 ಇಡಿಯಟ್ಸ್’ಗೂ ಸೋನಂ ವಾಂಗ್ಚುಕ್ ಸಂಬಂಧವೇ ಇಲ್ಲ: ವೈರಲ್ ನಂಬಿಕೆಗೆ ಆಮಿರ್ ಖಾನ್ ಬ್ರೇಕ್
    July 17, 2026 | 0
  • Untitled design (91)
    ಆಲ್ಫಾ Vs ಧುರಂಧರ್: ಆಲ್ಫಾಗೆ ಕರೀನಾ ಸಪೋರ್ಟ್ ಧುರಂಧರ್ ಫ್ಯಾನ್ಸ್ ಗರಂ
    July 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version