ಹುಬ್ಬಳ್ಳಿ : ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಿನಿಮಾಗಳು ತಯಾರಾಗಲಿ. ಇಲ್ಲಿನ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿ ಎಂದು ಸ್ವರ್ಣ ಗ್ರೂಪ್ ಪಾ ಕಂಪನಿ ಚೇರ್ಮನ್ ಡಾ. ವಿ. ಎಸ್. ವಿ ಪ್ರಸಾದ್ ಹೇಳಿದರು.
ಡಾ. ವಿ. ಎಸ್. ವಿ ಪ್ರಸಾದ್ ಅವರು ಹುಬ್ಬಳ್ಳಿ ಸಿದ್ದಾರೂಢ ಮಠದಲ್ಲಿ ನಡೆದ ವಿಸ್ಮಯ ವೆಂಚರ್ಸ್ ನಿರ್ಮಾಣದ “ಏನಾಯಿತು” ಸಿನಿಮಾಗೆ ಕ್ಯಾಮೆರಾ ಚಾಲನೆ ನೀಡಿ ಮಾತನಾಡಿದರು. ಉತ್ತಮ ಸದಬಿರುಚಿಯ ಚಿತ್ರಗಳು ಹೆಚ್ಚು ಹೊರಬರಬೇಕಿದೆ. ಏನಾಯಿತು ಈ ಸಿನಿಮಾ ಸಾಹಿತಿಕವಾಗಿದೆ ಇಂಥ ಸಾಹಿತ್ಯಕ್ಕೆ ಚಿತ್ರಗಳು ಬರುತ್ತಿರುವುದು ಅಪರೂಪ. ಇಂತಹ ಒಂದು ಸಿನಿಮಾ ಮೂಡಿ ಬರುತ್ತಿರುವುದು ಹೆಚ್ಚು ಖುಷಿ ನೀಡುವ ವಿಷಯ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಹಲವು ಕಲಾವಿದರು ತಂತ್ರಜ್ಞರು ಇದ್ದಾರೆ ಇವರಿಗೆಲ್ಲ ಇನ್ನಷ್ಟು ಅವಕಾಶ ಸಿಗಬೇಕಾಗಿದೆ ಆ ನಿಟ್ಟಿನಲ್ಲಿ ಈ ಭಾಗದಲ್ಲಿ ಸಿನಿಮಾ ಕೆಲಸಗಳು ಹೆಚ್ಚು ನಡೆಯಬೇಕಿದೆ ಎಂದರು. ಯುವ ಜನಾಂಗವನ್ನು ಉತ್ತಮ ದಾರಿಗೆ ಕೊಂಡೊಯ್ಯುವ ಮಾರ್ಗದರ್ಶಿ ಸಿನಿಮಾಗಳು ಇಂದು ಮೂಡಿ ಬರಬೇಕಿದೆ. ಇಂತಹ ಸಿನಿಮಾಾಕೆ ಇಂದು ಚಾಲನೆ ಸಿಕ್ಕಿದ್ದು ಇದೊಂದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಿನಿಮಾಕ್ಕೆ ಕ್ಲಾಪ್ ಮಾಡಿದ ಸಿದ್ಧಾರೂಢ ಮಠ ಟ್ರಸ್ಟ್ ಚೇರ್ಮನ್ ಬಾಳು ಮಗಜಿಕೊಂಡಿ ಮಾತನಾಡಿ, ಇಡೀ ಕುಟುಂಬದವರು ಕುಳಿತು ನೋಡುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಲನಚಿತ್ರಗಳು ಹೊರಬರಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಎವಿಕೆ ಫೌಂಡೇಶನ್ ವೆಂಕಟೇಶ್ ಕಾಟವೆ, ಹಿರಿಯ ಕವಿ ಮಹಾಂತಪ್ಪ ನಂದೂರ್, ಡಾ. ರಾಮು ಮುಲಗಿ ಹಾಗೂ ನಾಯಕ ನಟ ಇಶಾನ್, ನಟಿ ಚೈತ್ರ ತೋಟದ್,ನಿರ್ದೇಶಕ ತಮನ್ನಾ, ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ,ವಿನಾಯಕ ಶೆಟ್ಟಿ,ನವೀನ ಪಾಟೀಲ ಜೈನ್ ,ರಾಘು ಬುಧಪನವರ್, ಕೃಷ್ಣ ಉಲ್ಲಿಕಾಶಿ ಚಿತ್ರ ತಂಡದವರು ಪಾಲ್ಗೊಂಡಿದ್ದರು.





