20 ಕೋಟಿ ಬಜೆಟ್ ಸಿನಿಮಾದಿಂದ 242 ಕೋಟಿ ಪೈಸಾ ವಸೂಲ್ ಮಾಡಿದ್ದ ಡೈರೆಕ್ಟರ್ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದೇ ಬಾಲನ್ ದಿ ಬಾಯ್. ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಬಾಲನ್ ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಂಥದ್ದೇನಿದೆ ಅದ್ರಲ್ಲಿ ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ನೋಡಿ…
- ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್‌ನಿಂದ ‘ಬಾಲನ್’
- ಕನ್ನಡದ KVN ಜೊತೆ ಹೊಚ್ಚ ಹೊಸ ಪ್ರಯೋಗ ರೆಡಿ
- ಬಾಲಕನ ಸುತ್ತ ಸುತ್ತುವ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾ..!
- ಕಾನ್ಸ್ ಫಿಲ್ಮ್ ಫೆಸ್ಟ್‌ನಲ್ಲಿ ಬಾಲನ್ ದಿ ಬಾಯ್ ಪ್ರದರ್ಶನ
ಇದು ‘ಬಾಲನ್- ದಿ ಬಾಯ್’ ಅನ್ನೋ ಮಲಯಾಳಂ ಸಿನಿಮಾದ ಟ್ರೈಲರ್ ಝಲಕ್. ಈ ಹಿಂದೆ ಅಂದ್ರೆ 2024ರಲ್ಲಿ ಕೇವಲ 20 ಕೋಟಿ ಬಜೆಟ್‌ನಲ್ಲಿ ಮಂಜುಮ್ಮೆಲ್ ಬಾಯ್ಸ್ ಅನ್ನೋ ಸಿನಿಮಾ ಮಾಡಿ, ಅದ್ರಿಂದ ಬರೋಬ್ಬರಿ 242 ಕೋಟಿ 30 ಲಕ್ಷ ಗಳಿಸಿದ್ದ ಡೈರೆಕ್ಟರ್ ಚಿದಂಬರಂ ಆ್ಯಕ್ಷನ್ ಕಟ್ ಹೇಳಿರೋ ಹೊಚ್ಚ ಹೊಸ ಪ್ರಯೋಗವಿದು.
ಇಂಟರೆಸ್ಟಿಂಗ್ ಅಂದ್ರೆ ಈ ಸಿನಿಮಾನ ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಕೆ ವೆಂಕಟ್ ನಾರಾಯಣ್ ನಿರ್ಮಾಣ ಮಾಡಿದ್ದಾರೆ. ದಕ್ಷಿಣದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದ್ದು, ಬಹುಕೋಟಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಗೆ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡೋದ್ರ ಜೊತೆಗೆ ಪ್ರತಿಭಾನ್ವಿತ ನಿರ್ದೇಶಕರಿಗೂ ಅವಕಾಶ ಕಲ್ಪಿಸುತ್ತಿದೆ. ಸದ್ಯ ಮಂಜುಮ್ಮೆಲ್ ಬಾಯ್ಸ್‌ನ ನಿರ್ದೇಶಕ ಚಿದಂಬರಂಗೆ ಅವಕಾಶ ನೀಡಿದೆ.
ಒಬ್ಬ ಬಾಲಕನ ಸುತ್ತ ಸಾಗುವ ಕಥೆ ಬಾಲನ್ ದಿ ಬಾಯ್ ಆಗಿದ್ದು, ಸಸ್ಪೆನ್ಸ್ ಕ್ರೈಂ ಥ್ರಿಲರ್ ಅಂಶಗಳನ್ನ ಬ್ಲೆಂಡ್ ಮಾಡಿ ಟ್ರೈಲರ್ ಕಟ್ ಮಾಡಲಾಗಿದೆ. ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಈಗಾಗ್ಲೇ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿರೋದು ಹೈಲೈಟ್.
ಟ್ರೈಲರ್‌ನಲ್ಲೇ ಕುತೂಹಲ ಮೂಡಿಸಿರೋ ಬಾಲನ್ ದಿ ಬಾಯ್.. ಇದೇ ಜೂನ್ 19ರಂದು ತೆರೆಗೆ ಬರ್ತಿದ್ದು, ಬ್ಲಾಕ್ ಬಸ್ಟರ್ ಹಿಟ್ ಆವೇಶಂ ಸಿನಿಮಾನ ನಿರ್ದೇಶಿಸಿದ್ದ ಜೀತು ಮಾಧವನ್ ಈ ಬಾಲನ್ ಸಿನಿಮಾಗೆ ಕಥೆಯನ್ನ ಹೆಣೆದಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





