• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತದಲ್ಲೇ ಮೊದಲ ಬಾರಿಗೆ ‘ಒಡಿಸ್ಸಿ ಆಫ್ ಲವ್’ ಮ್ಯೂಸಿಕಲ್ ಶೋ

ಕಲೆಯ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಆಸರೆಯಾಗಲಿದೆ ಬಿಐಎಎಲ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 20, 2026 - 8:13 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2026 04 20T201121.310

ಬೆಂಗಳೂರು: ಕಲೆ ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ಕೂ ಬಳಕೆಯಾಗಬೇಕು ಎಂಬ ಆಶಯದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮಹತ್ವದ ಹೆಜ್ಜೆಯಿಟ್ಟಿದೆ. ತನ್ನ ಸಾಮಾಜಿಕ ಹೊಣೆಗಾರಿಕೆ ವಿಭಾಗವಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ (ಕೆಐಎಎಫ್‌) ವತಿಯಿಂದ, ಫೇಸ್ 1 ವರ್ಲ್ಡ್ ಹಾಗೂ ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಸಹಯೋಗದಲ್ಲಿ ‘ಒಡಿಸ್ಸಿ ಆಫ್ ಲವ್’ ಎಂಬ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ನಾಟಕವನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಆಯೋಜಿಸುತ್ತಿದೆ.

ಕಣ್ಣು, ಕಿವಿಗೆ ಹಬ್ಬವೆನಿಸುವ ಈ ಸಂಗೀತ ಹಾಗೂ ನೃತ್ಯಮಯ ಪ್ರದರ್ಶನವು ಮೇ 7 ರಿಂದ 9 ರವರೆಗೆ ಬೆಂಗಳೂರಿನ ಗುಡ್ ಶೆಫರ್ಡ್ ಆಡಿಟೋರಿಯಂನಲ್ಲಿ ನಡೆಯಲಿದೆ.

RelatedPosts

ಬಿಡದಿ ಟೌನ್‌ಶಿಪ್, ನೈಸ್ ವಿರುದ್ಧ ಜೆಡಿಎಸ್ ಕಹಳೆ: ಸರ್ಕಾರದ ವಿರುದ್ಧ ದೇವೇಗೌಡರ ಗುಡುಗು

MMDR ತಿದ್ದುಪಡಿ ಎಫೆಕ್ಟ್: ಕರ್ನಾಟಕಕ್ಕೆ ₹15,786 ಕೋಟಿ ತೆರಿಗೆ ಭೀತಿಯಲ್ಲಿ ಎನ್‌ಎಂಡಿಸಿ

16ನೇ ವಯಸ್ಸಿನಲ್ಲೇ ಗಿನ್ನೆಸ್ ದಾಖಲೆ: ಲಕ್ಷ್ಮಣನ್ ಮೇಯ್ಯಪ್ಪನ್ ವಿಶ್ವಕ್ಕೆ ಮಾದರಿ

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ಮರುನೇಮಕ

ADVERTISEMENT
ADVERTISEMENT

ಏನಿದು ‘ಒಡಿಸ್ಸಿ ಆಫ್ ಲವ್’?

ಮಹಾಕವಿ ಕಾಳಿದಾಸನ ಜಗತ್ಪ್ರಸಿದ್ಧ ಕೃತಿ ‘ಶಾಕುಂತಲ’ದ ಕಥಾಹಂದರವನ್ನು ಆಧರಿಸಿರುವ ಈ ನಾಟಕವನ್ನು, ಆಧುನಿಕ ‘ಪಾಪ್ ಒಪೆರಾ’ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರೀತಿ, ವಿರಹ, ಸ್ತ್ರೀತ್ವದ ಶಕ್ತಿ ಹಾಗೂ ರೂಪಾಂತರದ ಕಥೆಯನ್ನು ಇದು ಸಾರುತ್ತದೆ.

ಪಾಪ್, ರಾಕ್ ಮತ್ತು ಜಾಝ್ ಸಂಗೀತದ ಅಬ್ಬರಕ್ಕೆ ಭಾರತೀಯ ಶಾಸ್ತ್ರೀಯ ನೃತ್ಯದ ಲಯವನ್ನು ಬೆಸೆಯಲಾಗಿದ್ದು, ಪಾಶ್ಚಿಮಾತ್ಯ ಹಾಗೂ ಪೌರಸ್ತ್ಯ ಸಂಸ್ಕೃತಿಗಳ ಅದ್ಭುತ ಕಲಾ-ಸೇತುವೆಯಾಗಿ ಇದು ಮೂಡಿಬರಲಿದೆ. ಬರೋಬ್ಬರಿ 60 ನಿಮಿಷಗಳ ಕಾಲ ನಡೆಯುವ ಈ ಪ್ರದರ್ಶನ ಪ್ರೇಕ್ಷಕರನ್ನು ಅಕ್ಷರಶಃ ಬೇರೊಂದು ಮಾಯಾಲೋಕಕ್ಕೆ ಕರೆದೊಯ್ಯಲಿದೆ.

ಶಿಕ್ಷಣಕ್ಕಾಗಿ ಕಲೆ-‘ನಮ್ಮ ಶಿಕ್ಷಣ’ ಯೋಜನೆಗೆ ಆರ್ಥಿಕ ನೆರವು

ಕೇವಲ ಕಲಾ ಪ್ರದರ್ಶನವಲ್ಲದೆ, ಇದರ ಹಿಂದೆ ಒಂದು ದೊಡ್ಡ ಸಾಮಾಜಿಕ ಉದ್ದೇಶವಿದೆ. ಈ ಕಾರ್ಯಕ್ರಮದ ಟಿಕೆಟ್ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿಯನ್ನೂ ಕೆಐಎಎಫ್‌ನ ‘ನಮ್ಮ ಶಿಕ್ಷಣ’ ಯೋಜನೆಗೆ ಬಳಸಲಾಗುತ್ತದೆ.

ಈಗಾಗಲೇ ಈ ಯೋಜನೆಯಡಿ 6 ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಡಿಜಿಟಲ್ ಕಲಿಕೆ ಮತ್ತು ಸಮಗ್ರ ಶಿಕ್ಷಣವನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಇದರಿಂದ 2,750 ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಈ ಪ್ರದರ್ಶನದ ನಿಧಿಯ ಮೂಲಕ ಮುಂಬರುವ ದಿನಗಳಲ್ಲಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಬರೋಬ್ಬರಿ 30,000 ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.

ಈ ಮಹತ್ವದ ಕಾರ್ಯಕ್ರಮದ ಕುರಿತು ಮಾತನಾಡಿದ ಬಿಐಎಎಲ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್, “ಕಲೆಯಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂಬುದು ನಮ್ಮ ನಂಬಿಕೆ. ಸೃಜನಶೀಲತೆ ಮತ್ತು ಸಾಮಾಜಿಕ ಉದ್ದೇಶವನ್ನು ಒಗ್ಗೂಡಿಸಿರುವ ಈ ‘ಒಡಿಸ್ಸಿ ಆಫ್ ಲವ್’ ಪ್ರದರ್ಶನ ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಈ ಮೂಲಕ ರಂಗಭೂಮಿಯ ಆಚೆಗೂ ಶೈಕ್ಷಣಿಕವಾಗಿ ದೊಡ್ಡ ಬದಲಾವಣೆ ತರಲು ನಾವು ಸಜ್ಜಾಗಿದ್ದೇವೆ” ಎಂದರು.

ಫೇಸ್ 1 ವರ್ಲ್ಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಓಮ್ ಪ್ರದತ್ ಪ್ರತಿಕ್ರಿಯಿಸಿ, “ಕಳೆದ ವರ್ಷ ನಾವು ತಂದಿದ್ದ ಮ್ಯೂಸಿಕಲ್ ಶೋಗಿಂತಲೂ ಇದು ವಿಭಿನ್ನವಾಗಿದೆ. ಇಂತಹ ಬೃಹತ್ ಲೈವ್ ಶೋಗಳನ್ನು ಬೆಂಗಳೂರಿನ ಜನತೆಗೆ ಉಣಬಡಿಸುವುದು ನಮ್ಮ ಬದ್ಧತೆ. ಸದ್ಯದಲ್ಲೇ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಏರೋಡ್ರೋಮ್’ ಎಂಬ ಜಾಗತಿಕ ಮಟ್ಟದ ಮನರಂಜನಾ ಕೇಂದ್ರವನ್ನು ಸ್ಥಾಪಿಸಿ, ರಾಷ್ಟ್ರಮಟ್ಟದಲ್ಲಿ ಹೊಸ ಸಂಚಲನ ಮೂಡಿಸಲಿದ್ದೇವೆ” ಎಂದು ಮಾಹಿತಿ ನೀಡಿದರು.

ಖ್ಯಾತ ನಿರ್ದೇಶಕ ಕೆವಿನ್ ಒಲಿವರ್ ಮಾತನಾಡಿ, “ಸಂಗೀತ, ನೃತ್ಯ ಮತ್ತು ಫ್ಯಾಷನ್ ಮೂಲಕ ಕಥೆ ಹೇಳುವ ನನ್ನ ಬಹುದಿನದ ಕನಸು ಈ ಕೃತಿ. ಯಾವುದೇ ನಿರೀಕ್ಷೆಗಳಿಲ್ಲದೆ ಕುತೂಹಲದಿಂದ ಬರುವ ಪ್ರೇಕ್ಷಕರು ಮಂತ್ರಮುಗ್ಧರಾಗಿ ಹೋಗುವುದು ಖಚಿತ. ವಿಶೇಷವಾಗಿ ಈ ನನ್ನ ಸ್ವಂತ ಪ್ರದರ್ಶನವು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ನನಗೆ ಅತ್ಯಂತ ಖುಷಿ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತೀಯ ರಂಗಭೂಮಿ ಹಾಗೂ ಸಂಗೀತ ಪ್ರಿಯರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಈ ಕಾರ್ಯಕ್ರಮದ ಟಿಕೆಟ್‌ಗಳು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್ ‘ಬುಕ್‌ಮೈಶೋ’ನಲ್ಲಿ ಲಭ್ಯವಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಘೋಷಿಸಿದ (1)

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

by ಶಾಲಿನಿ ಕೆ. ಡಿ
August 18, 2026 - 6:48 pm
0

ಘೋಷಿಸಿದ

ಅಮೆರಿಕನ್ ಸೈನಿಕರ ತಲೆಗೆ 60 ಸಾವಿರ ಡಾಲರ್ ಘೋಷಿಸಿದ ಇರಾನ್

by Hemanth Kumar S
August 18, 2026 - 6:33 pm
0

Untitled design 2026 08 18T181351.095

ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?

by ಶಾಲಿನಿ ಕೆ. ಡಿ
August 18, 2026 - 6:17 pm
0

Untitled design 2026 08 18T175550.274

ಜಪಾನ್ ಹಾಗೂ ಕೊರಿಯಾ ಮೇಲೆ ಯುದ್ಧಕ್ಕೆ ಮುಂದಾಗುತ್ತ ಚೀನಾ

by Hemanth Kumar S
August 18, 2026 - 5:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಡುವ ಎಐ (9)
    ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ಮರುನೇಮಕ
    August 18, 2026 | 0
  • ಮಾಡುವ ಎಐ (3)
    ಚಿಕ್ಕಬಾಣಾವರ ಡಬಲ್ ಮರ್ಡರ್‌ಗೆ ಬಿಗ್ ಟ್ವಿಸ್ಟ್: ಪ್ರಿಯಕರನ ಜೊತೆ ಸೇರಿ ಗಂಡ, ಮಗನನ್ನೇ ಕೊಂದ ಪತ್ನಿ
    August 18, 2026 | 0
  • ಮಾಡುವ ಎಐ (2)
    ಆಟವಾಡುತ್ತಿದ್ದ ಬಾಲಕನ ಮೇಲೆ ಪಿಲ್ಲರ್ ಕುಸಿದು ಸ್ಥಳದಲ್ಲೇ ಸಾ*ವು
    August 18, 2026 | 0
  • ಮಾಡುವ ಎಐ (1)
    KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಮನೆ ಮೇಲೆ ED ದಾಳಿ; 13 ಕಡೆ ಏಕಕಾಲಕ್ಕೆ ಶೋಧ
    August 18, 2026 | 0
  • ಅನುಪಮಾ ಗೌಡ (1)
    ಸೌದಿಯಲ್ಲಿ ಭಿಕ್ಷೆ ಬೇಡಬೇಡಿ: ತನ್ನ ನಾಗರಿಕರಿಗೆ ಪಾಕ್‌ ವಾರ್ನಿಂಗ್‌.!
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version