ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಜಗಳಗಳು ಸಾಮಾನ್ಯ. ಆದರೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಂದು ವಿಚಿತ್ರ ಘಟನೆ ವೈರಲ್ ಆಗಿದೆ. 21 ವರ್ಷದ ವಿವಾಹಿತ ಮಹಿಳೆ ಒಬ್ಬಳು ತನ್ನ ಗಂಡ ಮತ್ತು ಅತ್ತೆ-ಮಾವಂದಿರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಆಕೆಯ ಆರೋಪ: “ಗಂಡನು ನನ್ನನ್ನು ಪ್ರತಿದಿನ ನೈಟ್ ಗೌನ್ ಧರಿಸಲು ಬಲವಂತಿಸುತ್ತಿದ್ದ, ನನ್ನ ಉಡುಗೆ-ತೊಡುಗೆ, ನಿದ್ರೆ-ಎಚ್ಚರವನ್ನೂ ನಿಯಂತ್ರಿಸುತ್ತಿದ್ದ.
ಮೇ 2023ರಲ್ಲಿ ಸೌದಿ ಅರೇಬಿಯಾದಲ್ಲಿ ವಿವಾಹವಾದ ಈ ಮಹಿಳೆ, ನಂತರ ಗಂಡನೊಂದಿಗೆ ಅಹಮದಾಬಾದ್‌ನ ಬಾಪುನಗರದ ಅತ್ತೆಯ ಮನೆಗೆ ತೆರಳಿದಳು. ಆರಂಭದಲ್ಲಿ ಸುಖವಾಗಿದ್ದ ಸಂಸಾರ, ಕ್ರಮೇಣ ಹದಗೆಟ್ಟಿತು. ವೃತ್ತಿಯಿಲ್ಲಿ ವೈದ್ಯರಾದ ಗಂಡನು ಮದ್ಯಪಾನ ಮಾಡಿ ಆಕೆಯನ್ನು ನಿಂದಿಸುತ್ತಿದ್ದನು. ಅಲ್ಲದೆ, “ನೀನು ನೈಟ್ ಗೌನ್ ಮಾತ್ರ ಧರಿಸಬೇಕು” ಎಂದು ಒತ್ತಾಯಿಸುತ್ತಿದ್ದ. ಈ ಬಗ್ಗೆ ಅತ್ತೆ-ಮಾವಂದಿರಿಗೆ ದೂರು ಕೊಟ್ಟಾಗ, “ಸುಮ್ಮನಿರಿ” ಎಂದು ಹೇಳಲಾಯಿತು.
ಮೇ 2024ರಲ್ಲಿ ಕುಟುಂಬದೊಂದಿಗೆ ಕಾಶ್ಮೀರ್ ಪ್ರವಾಸ ಹೋದಾಗ ಪರಿಸ್ಥಿತಿ ಹದಗೆಟ್ಟಿತು. ಗಂಡನು ಆಕೆಯ ಪಾದಗಳಿಗೆ ಮಸಾಜ್ ಮಾಡಲು ಒತ್ತಾಯಿಸಿದನಂತೆ. ನಿರಾಕರಿಸಿದರೆ, ನಿದ್ರೆ ಮಾಡಲು ಸಹ ಅವಕಾಶ ನೀಡಲಿಲ್ಲ. ಪ್ರವಾಸದ ನಂತರ, ಮಹಿಳೆ ತನ್ನ ಹೆತ್ತವರ ಮನೆಗೆ ಓಡಿದಳು. ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರೂ, ಗಂಡನು ನಿರಾಕರಿಸಿದ್ದರಿಂದ, ಅಂತಿಮವಾಗಿ ವೆಜಲ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ದೈಹಿಕ ಹಿಂಸೆ, ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳದ ಆರೋಪಗಳನ್ನು ಒಳಗೊಂಡ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.