ನವದೆಹಲಿ: ದೊಡ್ಡ ಮಟ್ಟದ ತಾಂತ್ರಿಕ ತೊಂದರೆಯಿಂದಾಗಿ ಪ್ರಸಿದ್ಧ ಸಾಮಾಜಿಕ ಮಾಧ್ಯಮ ವೇದಿಕೆ ‘X’ (ಹಿಂದೆ ಟ್ವಿಟರ್) ಇಂದು ವಿಶ್ವದಾದ್ಯಂತ ಸಂಪೂರ್ಣ ಸ್ಥಗಿತಗೊಂಡಿದೆ. ಭಾರತ, ಅಮೆರಿಕ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಬಳಕೆದಾರರು ಅಪ್ಲಿಕೇಶನ್ ತೆರೆಯುತ್ತಿದ್ದಂತೆ “Something went wrong. Try reloading” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಟೈಮ್‌ಲೈನ್ ಲೋಡ್ ಆಗುತ್ತಿಲ್ಲ, ಹೊಸ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ, ಡೈರೆಕ್ಟ್ ಮೆಸೇಜ್ ಕಳಿಸಲೂ ಆಗುತ್ತಿಲ್ಲ. ಒಟ್ಟಿನಲ್ಲಿ ಪ್ಲಾಟ್‌ಫಾರ್ಮ್ ಪೂರ್ತಿ ಸ್ಥಗಿತಗೊಂಡಿದೆ.
ಡೌನ್‌ಡಿಟೆಕ್ಟರ್ (Downdetector) ವೆಬ್‌ಸೈಟ್‌ನಲ್ಲಿ ಮಂಗಳವಾರ ಸಂಜೆ 6 ಗಂಟೆಯೊಳಗೆ 80,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಭಾರತದಲ್ಲಿ 24,000ಕ್ಕಿಂತ ಹೆಚ್ಚು ಬಳಕೆದಾರರು ತಮ್ಮ ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈನಂತಹ ಮಹಾನಗರಗಳಲ್ಲಿ ಈ ತೊಂದರೆ ತೀವ್ರವಾಗಿ ಕಾಣಿಸಿಕೊಂಡಿದೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿ 68% ದೂರುಗಳು, ವೆಬ್‌ಸೈಟ್‌ನಲ್ಲಿ 24% ಮತ್ತು ಅಪ್ಲಿಕೇಶನ್ ಲಾಗಿನ್ ಸಮಸ್ಯೆ 8% ಎಂದು ಡೌನ್‌ಡಿಟೆಕ್ಟರ್ ತಿಳಿಸಿದೆ.
ಈ ತೊಂದರೆ ಆರಂಭವಾದ ತಕ್ಷಣ ಭಾರತೀಯ ಬಳಕೆದಾರರು ಇತರ ಪ್ಲಾಟ್‌ಫಾರ್ಮ್‌ಗಳಾದ ಇನ್‌ಸ್ಟಾಗ್ರಾಮ್, ಬ್ಲೂಸ್ಕೈ, ಥ್ರೆಡ್ಸ್‌ಗಳಲ್ಲಿ “#XDown” “#TwitterDown” ಹ್ಯಾಷ್‌ಟ್ಯಾಗ್‌ಗಳೊಂದಿಗೆ ಸಾವಿರಾರು ಪೋಸ್ಟ್‌ಗಳನ್ನು ಹಾಕಿದ್ದಾರೆ. “ಇವತ್ತು ಮತ್ತೆ ಎಲಾನ್ ಮಸ್ಕ್ ಸರ್ವರ್ ಆಫ್ ಮಾಡಿದ್ದಾರಾ?” ಎಂದು ಒಬ್ಬರು ತಮಾಷೆಯಾಗಿ ಬರೆದರೆ, ಮತ್ತೊಬ್ಬರು “ಈಗ ಯಾರಿಗೆ ಟ್ವೀಟ್ ಮಾಡೋದು? ಇಡೀ ದಿನದ ಸುದ್ದಿ ಎಲ್ಲಿಗೆ ಹೋಗುತ್ತದೆ?” ಎಂದು ಗಾಬರಿಯಿಂದ ಹೇಳಿದ್ದಾರೆ.
ತನ್ನದೇ xAI ಕಂಪನಿಗೆ ತನ್ನದೇ ಎಕ್ಸ್‌ನ (ಟ್ವಿಟರ್) ಮಾರಾಟ ಮಾಡಿದ ಎಲಾನ್ ಮಸ್ಕ್..!
ವಿಶ್ವದ ನಂಬರ್ ಒನ್ ಶ್ರೀಮಂತ.. ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಕೆಲವೊಂದು ನಿರ್ಧಾರಗಳಿಂದಲೇ ಎಲಾನ್ ಮಸ್ಕ್ ಸಖತ್ ಸೌಂಡ್ ಮಾಡುತ್ತಾರೆ. ಇದೀಗ ತಮ್ಮದೇ ಎಕ್ಸ್ ಸೋಷಿಯಲ್ ಮೀಡಿಯಾವನ್ನ ತಮ್ಮದೇ ಮತ್ತೊಂದು ಕಂಪನಿಗೆ ಮಾರಾಟ ಮಾಡಿದ್ದಾರೆ.
ಎಲಾನ್ ಮಸ್ಕ್ 2022ರಲ್ಲಿ ಟ್ವಿಟರ್ ಖರೀದಿ ಮಾಡಿದ್ದರು. ಇದರ ಖರೀದಿಗೆ ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ 3.40 ಲಕ್ಷ ಕೋಟಿ ನೀಡಿದ್ದರು. ಬಳಿಕ ಟ್ವಿಟರ್ ಸೋಶಿಯಲ್ ಮೀಡಿಯಾವನ್ನ ಎಕ್ಸ್ ಆಗಿ ಬದಲಿಸಿದ್ರು. ಹಲವು ಹೊಸತನ, ಎಡಿಟಿಂಗ್, ನ್ಯೂ ಫೀಚರ್ಸ್ ನೀಡುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದರು. ಆದರೆ ಈಗ ಅದೇ ಎಕ್ಸ್ ಸೋಶಿಯಲ್ ಮೀಡಿಯಾವನ್ನು ಮಾರಾಟ ಮಾಡಿದ್ದಾರೆ. ಅದು ಬೇರೆ ಯಾರಿಗೂ ಅಲ್ಲ. ತಮ್ಮದೇ ಎಕ್ಸ್ ಖಾತೆಯನ್ನ ತಮ್ಮದೇ ಕಂಪನಿಗೆ ಸುಮಾರು 12 ಬಿಲಿಯನ್ ಡಾಲರ್ ಕಡಿಮೆ ಮೊತ್ತಕ್ಕೆ ಸೇಲ್ ಮಾಡಿದ್ದಾರೆ.
ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆನ ಮಾರಾಟ ಮಾಡಿದ್ದು, ತಮ್ಮದೇ ಮತ್ತೊಂದು ಸಂಸ್ಥೆಯಾಗಿರುವ xAI ಸಂಸ್ಥೆಗೆ. 2023ರಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ xAI ಸಂಸ್ಥೆಯನ್ನು ಎಲಾನ್ ಮಸ್ಕ್ ಆರಂಭಿಸಿದ್ದರು. ಇದೀಗ ಈ ಸಂಸ್ಥೆಗೆ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ಮಾರಾಟ ಮಾಡಿದ್ದಾರೆ. ಎಲಾನ್ ಮಸ್ಕ್ನ ಈ ಮಾರಾಟವನ್ನ ಜಗತ್ತಿನ ಉದ್ಯಮಿಗಳು ಬಿಸಿನೆಸ್ ಗೂಗ್ಲಿ ಅಂತ ಕರೆದಿದ್ದಾರೆ.
ಈ ವ್ಯಾಪಾರದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಎಲಾನ್ ಮಸ್ಕ್, xAI ಮತ್ತು X ನ ಭವಿಷ್ಯವು ಪರಸ್ಪರ ಸಂಪರ್ಕ ಹೊಂದಿದೆ. ಇಂದು ನಾವು ಡೇಟಾ, ಮಾಡೆಲ್, ಕಂಪ್ಯೂಟ್, ಡಿಸ್ಟ್ರೂಬ್ಯೂಟ್ ಮತ್ತು ಟ್ಯಾಲೆಂಟ್ ವಿಲೀನಗೊಳಿಸುವತ್ತ ಒಂದು ದೊಡ್ಡ ಹೆಜ್ಜೆ ಇಡ್ತಿದ್ದೀವಿ. ಈ ವಿಲೀನದ ನಂತರ ಸಂಯೋಜಿತ ಕಂಪನಿಯ ಒಟ್ಟು ಮೌಲ್ಯವು 80 ಬಿಲಿಯನ್ ಡಾಲರ್ ಆಗಲಿದೆ ಎಂದು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಎಲಾನ್ ಮಸ್ಕ್ ಆರಂಭಿಸಿದ xAI ಶರವೇಗದಲ್ಲಿ ವಿಶ್ವದ ಪ್ರಮುಖ AI ಪ್ರಯೋಗಾಲಯ ಗಳಲ್ಲಿ ಒಂದಾಗಿದೆ. xAI ನ ಅಡ್ವಾನ್ಸ್ಡ್ AI ಸಾಮರ್ಥ್ಯಗಳು ಮತ್ತು ಪರಿಣತಿಯನ್ನು X ನ ವಿಶಾಲ ವ್ಯಾಪ್ತಿಯೊಂದಿಗೆ ಈ ಸಂಯೋಜನೆಯು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಈ ಸಂಸ್ಥೆಯಿಂದ ಶತಕೋಟಿ ಜನರಿಗೆ ಚುರುಕಾದ, ಹೆಚ್ಚು ಅರ್ಥಪೂರ್ಣ ಅನುಭವ, ಸತ್ಯದ ಶೋಧ ಮತ್ತು ಜ್ಞಾನವನ್ನು ಹೆಚ್ಚಾಗಲಿದೆ. ಎಲಾನ್ ಮಸ್ಕ್ನ ಬಿಸಿನೆಸ್ ಗೂಗ್ಲಿಗೆ ಕೆಲವರು ಅಸಮಾಧಾನ ಹೊರ ಹಾಕಿದ್ದಾರೆ. xAI ತೆಕ್ಕೆಗೆ ಎಕ್ಸ್ನ ಸೇರಿಸಿರುವುದರಿಂದ ಟ್ವಿಟರ್ ತನ್ನ ನೈಜತೆಯನ್ನ ಕಳೆದುಕೊಳ್ಳಲ್ಲಿದೆ. ಆರ್ಫಿಫಿಶಿಯಲ್ ಇಂಟಲಿಜೆನ್ಸ್ ಪ್ರಾಮುಖ್ಯತೆ ಪಡೆದುಕೊಂಡರೆ ಬಳಕೆದಾರರು ಬೇಸರಗೊಳ್ಳುವ ಸಾಧ್ಯತೆಯಿದೆ. ಇದ್ರಿಂದ ಎಕ್ಸ್ಗೆ ಪರ್ಯಾಯಾ ಮಾರ್ಗಗಳು ಹುಟ್ಟಿಕೊಳ್ಳಲಿದೆ ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ.





