ಲೇಖಕರು: ನಮ್ರತಾ ರಾವ್, ಸೀನಿಯರ್ ಕಾಪಿ ಎಡಿಟರ್
WHATSAPP ನಮ್ಮ ದೈನಂದಿನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.. ಅದರಲ್ಲೂ ಭಾರತದಲ್ಲಿ ಬಹುತೇಕ ಎಲ್ಲರೂ ವಾಟ್ಸಾಪ್ ಬಳಕೆದಾರರೇ.. ಬಳಕೆದಾರರಿಗಾಗಿ ವಾಟ್ಸಾಪ್ ಮಾತೃಸಂಸ್ಥೆ ಮೆಟಾ ಹೊಸ ಹೊಸ ಫೀಚರ್ಸ್ ಗಳು , ಯೂಸರ್ ಫ್ರೆಂಡ್ಲಿ ಆಯ್ಕೆಗಳನ್ನ ಅಪ್ ಡೇಟ್ ಮಾಡುತ್ತಲೇ ಇರುತ್ತದೆ.. ವಿಶ್ವದ ಯಾವುದೇ ಮೂಲೆಯಲ್ಲಿ ಇರುವವರ ಜೊತೆಗೂ ವಿಡಿಯೋ ಕಾಲ್ ನಿಂದ ಹಿಡಿದು , ವಾಯ್ಸ್ ರೆಕಾರ್ಡ್ ಮೂಲಕ ಮೆಸೇಜ್ , ಆಡಿಯೋ ಕಾಲ್ ಮಾಡುವ ಸೌಲಭ್ಯವೂ ಇದೆ. ಹೀಗಾಗಿಯೇ ವಾಟ್ಸಾಪ್ ಇಂದು ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೆಸೇಜಿಂಗ್ ಆಪ್ ಆಗಿದೆ.
ವಾಟ್ಸಾಪ್ ನಲ್ಲಿ ಉತ್ತಮ ಆಯ್ಕೆಗಳು , ಯೂಸರ್ ಫ್ರೆಂಡ್ಲಿ ಪೀಚರ್ ಗಳನ್ನ ಮೆಟಾ ದಿನೇ ದಿನೇ ಅಭಿವೃದ್ಧಿಪಡಿಸುತ್ತಲೇ ಇದೆ.. ಅಂದ್ಹಾಗೆ ಇದೀಗ ಅಪ್ ಡೇಟ್ ವರ್ಷನ್ ನಲ್ಲಿ ಒಂದು ಆಕರ್ಷಕ ಫೀಚರ್ ಅನ್ನ WHATSAPP ನೀಡಿರೋದನ್ನ ನೀವೆಲ್ಲರೂ ಸಹ ಗಮನಿಸಿಯೇ ಇರುತ್ತೀರಾ ಅಲ್ವಾ..?
ಏನಿದು ಹೊಸ ಫೀಚರ್..? ವಿಶೇಷತೆ ಏನು..?
ಎಸ್.. ನಿಮ್ಮೆಲ್ಲರ ವಾಟ್ಸ್ ಆಪ್ ಅಪ್ಲಿಕೇಷನ್ ತೆರೆಯುತ್ತಿದ್ದಂತೆ ನಿಮಗೆ ಮೆಟಾದಿಂದ ಒಂದು ಪಾಪ್ ಅಪ್ ಮೆಸೇಜ್ ಬರುತ್ತಿದೆ. Read your voice messages, Transcripts make it easy to get the message ಅಂತ.. ಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತಹ ಅದ್ಭುತ ಟೆಕ್ನಾಲಜಿಯಿಂದ ನೀವು , ನಿಮಗೆ ಬಂದಂತಹ ಧ್ವನಿ ಸಂದೇಶವನ್ನ ಸ್ಕ್ರಿಪ್ಟ್ ರೂಪದಲ್ಲಿ ಓದಲೂ ಬಹದು..
ಎಸ್………….!!! ಇದು ಸತ್ಯ…!!! ಕಳೆದ ನವೆಂಬರ್‌ನಲ್ಲಿ ಘೋಷಿತವಾದ ವೈಶಿಷ್ಟ್ಯವು, ಸ್ವಯಂ ಪ್ರಕ್ರಿಯೆ ಮೂಲಕ ಧ್ವನಿ ಅಥವಾ ವಾಯ್ಸ್ ಮೆಸೇಜ್‌ಗಳ ಪಠ್ಯ ನ್ಸ್ಕ್ರಿಪ್ಟ್ಗಳನ್ನು ತಯಾರಿಸುತ್ತದೆ. ಸುಲಭದಲ್ಲಿ ಹೇಳೋದಾದ್ರೆ ನೀವು ಮೊದಲೆಲ್ಲಾ ಹೇಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ವಾಕ್ಯಗಳು ಅಥವಾ , ಆರ್ಟಿಕಲ್‌ನ ಟ್ರಾನ್ಸ್ ಲೇಟ್ ಮಾಡಬಹುದಿತ್ತೋ ಹಾಗೆಯೇ ಇನ್ಮುಂದೆ ನೀವು ವಾಯ್ಸ್ ಮೆಸೇಜ್ ನೂ ಕೂಡ ಆರಾಮಾಗಿ ಕನ್ವರ್ಟ್ ಮಾಡಿ ಪಠ್ಯದ ರೂಪದಲ್ಲಿ ಅದನ್ನ ಓದಲೂ ಬಹುದು..
ಹೇಗೆ ಉಪಯೋಗ ಮಾಡುವುದು..?
ವಾಟ್ಸಾಪ್‌ನ ಧ್ವನಿ ಸಂದೇಶ ಟ್ರಾನ್ಸ್ಕ್ರಿಪ್ಟ್ ವೈಶಿಷ್ಟ್ಯವು ಬಳಕೆದಾರರು ಸ್ವೀಕರಿಸಿದ ಧ್ವನಿ ಸಂದೇಶದ ಪಠ್ಯ ಟ್ರಾನ್ಸ್ಕ್ರಿಪ್ಟ್‌ನ್ನು ಓದುವ ಅವಕಾಶವನ್ನು ನೀಡುತ್ತದೆ. ಅಂದ್ರೆ ಉದಾಹರಣೆಗೆ ಈಗ ನೀವು ಮೀಟಿಂಗ್ ಅಥವಾ ಆಫೀಸ್‌ನಲ್ಲಿ ಇದ್ದೀರಿ. ವಾಯ್ಸ್ ಮೆಸೇಜ್ ಕೇಳಿಸಿಕೊಳ್ಳಲು ಆಗದ ಸಂದರ್ಭದಲ್ಲಿ ನೀವು ಈ ಫೀಚರ್ ಮೂಲಕ ನಿಮಗೆ ಸಂದೇಶ ಕಳುಹಿಸಿದವರ ಮೆಸೇಜ್ ಅನ್ನು ಓದಿ ಅರ್ಥ ಮಾಡಿಕೊಳ್ಳಬಹುದು..
ಈ ಫೀಚರ್ ಎನೇಬಲ್ ಮಾಡಿಕೊಳ್ಳುವುದು ಹೇಗೆ..?
ಸ್ಟೆಪ್ 1 – ಮೊದಲಿಗೆ WHATSAPP ಸೆಟಿಂಗ್ಸ್ ಓಪನ್ ಮಾಡಬೇಕು
ಸ್ಟೆಪ್ 2 – ವಾಯ್ಸ್ ಚಾಟ್ ಆಪ್ಷನ್ ಆಯ್ಕೆ ಮಾಡಿ
ಸ್ಟೆಪ್ 3 – ವಾಯ್ಸ್ ಮೆಸೇಜ್ TRANSCRIPT ಆಪ್ಷನ್‌ನ ಆಯ್ಕೆ ಮಾಡಿ ಆನ್ ಮಾಡಿ
ಸ್ಟೆಪ್ 4 – ನೀವು ಅಧಿಕವಾಗಿ ಸಂಹವಿಸುವ ಭಾಷೆಯನ್ನ ಆಯ್ಕೆ ಮಾಡಿ
ಸ್ಟೆಪ್ 5 – ಸೆಟ್ ಅಪ್ ಆಪ್ಷನ್ ಟಾಪ್ ಮಾಡಿ WI-FIಗಾಗಿ ಕಾಯಿರಿ..
ನೀವು ಯಾವಾಗ ಬೇಕಾದರೂ ಸೆಟಿಂಗ್ಸ್ ಗೆ ಬಂದು ಭಾಷೆಯನ್ನ ಬದಲಾಯಿಸಬಹುದು..
ಯಾವೆಲ್ಲಾ ಭಾಷೆಗಳಿಗೆ ಲಭ್ಯ..?
ವಾಟ್ಸಾಪ್ನ ಆಂಡ್ರಾಯ್ಡ್ ಆಪ್ ನಲ್ಲಿ ಈಗಾಗಲೇ ಈ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತಿದ್ದು, IOS ಆಪ್ನಲ್ಲಿ ಕೂಡ ಶೀಘ್ರದಲ್ಲಿ ಲಭ್ಯವಾಗಲಿದೆ.
ಸದ್ಯಕ್ಕೆ ಹಿಂದಿ, ಕನ್ನಡ ಭಾಷೆಗೆ ಸಂಬಂಧಿಸಿದ ಪಠ್ಯ ಟ್ರಾನ್ಸ್ಕ್ರಿಪ್ಟ್ ವೈಶಿಷ್ಟ್ಯವನ್ನು ನಿರ್ದಿಷ್ಟವಾಗಿ ಬೆಂಬಲಿಸಲಾಗುತ್ತಿಲ್ಲ. ಆದ್ರೆ ಶೀಘ್ರವೇ ಈ ಬಗ್ಗೆಯೂ ಮೆಟಾ ಕೆಲಸ ಮಾಡಲಿದೆ.
ಸದ್ಯಕ್ಕೆ ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ರಷ್ಯನ್ ಭಾಷೆಗಳಿಗೆ ಈ ಫೀಚರ್ ಅಳವಡಿಸಲಾಗಿದೆ.
VOICE MESSAGE ಗಳನ್ನ ಹೇಗೆ ಟ್ರಾನ್ಸ್ಕ್ರಿಪ್ಟ್ ಗೆ ಕನ್ವರ್ಟ್ ಮಾಡಬೇಕು..?
ಸ್ಟೆಪ್ 1 – ನಿಮ್ಮ ಡಿವೈಸ್ ನಲ್ಲಿ ವಾಯ್ಸ್ ಮೆಸೇಜ್ ಟ್ರಾನ್ಸ್ ಕ್ರಿಪ್ಟ್ಸ್ ಫೀಚರ್ ಎನೇಬಲ್ ಮಾಡಿ..
ಸ್ಟೆಪ್ 2 – ನಿಮ್ಮ ಮೊಬೈಲ್ ನಲ್ಲಿ ವಾಯ್ಸ್ ಮೆಸೇಜ್ ನ ಮೇಲೆ ಲಾಂಗ್ ಪ್ರೆಸ್ ಮಾಡಿ. ಚಾಟ್ ನಲ್ಲಿ ಮೇಲೆ ಕಾಣುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ ಟ್ರಾನ್ಸ್ಕ್ರಿಬ್ ಮೇಲೆ ಕ್ಲಿಕ್ ಮಾಡಬೇಕು..
ಈ ಪ್ರಾಸೆಸ್ ಕೆಲವೊಮ್ಮೆ ಹೆಚ್ಚು ಸಮಯವನ್ನೂ ತೆಗೆದುಕೊಳ್ಳಬಹುದು..
ಇನ್ನೂ ಕೆಲ ಸಂದರ್ಭದಲ್ಲಿ “ Transcript unavailable, error” ( ಟ್ರಾನ್ಸ್ಕ್ರಿಪ್ಟ್ ಎರರ್ ) ಅಂತ ತೋರಿಸಿದರೆ,, ಅದಕ್ಕೆ ಕಾರಣಗಳು
1. ನಿಮ್ಮ ಭಾಷೆ ಈ ಫೀಚರ್ ಗೆ ಸಪೋರ್ಟ್ ಮಾಡದೇ ಇರಬಹುದು
2. ಕೆಲ ಪದಗಳನ್ನು ಈ ಟೆಕ್ನಾಲಜಿಯಿಂದ ಗುರುತಿಸಲು ಸಾಧ್ಯವಾಗದೇ ಇರಬಹುದು
ಯಾವಾಗ ಈ ಫೀಚರ್ ಬಳಕೆಯಾಗುತ್ತದೆ
ಒಂದು ತಿಳಿದುಕೊಳ್ಳಿ WHATSAPP ಆಗಿರಲಿ ಅಥವಾ ಬೇರೆ ಯಾವುದೇ ಅಪ್ಲಿಕೇಷನ್ ಆಗಿರಲಿ ಹೊಸ ಹೊಸ ನವೀಕರಣಗಳು ಕೆಲಸ ಮಾಡಬೇಕಾದ್ರೆ ಮುಖ್ಯವಾಗಿ ಆ ಆಪ್‌ಗಳನ್ನು ಒಮ್ಮೆ ಅಪ್‌ಡೇಟ್ ಮಾಡಲೇಬೇಕು..
ಅದೇ ರೀತಿ ನೀವು WHATSAPP ನ ಅಪ್‌ಡೇಟ್ ಮಾಡಿದ್ರೆ ಮಾತ್ರವೇ ಈ ಫೀಚರ್ ಕೆಲಸ ಮಾಡುವುದು… ನೀವು ಇದೂವರೆಗೂ ಅಪ್‌ಡೇಟ್ ಮಾಡಿಲ್ಲ ಎಂದಾದ್ರೆ ಈ ಕೂಡಲೇ WHATSAPP ಅಪ್‌ಡೇಟ್ ಮಾಡಿಕೊಳ್ಳಿ.