• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಫುಟ್ಬಾಲ್ ಮಾಂತ್ರಿಕ ಮೆಸ್ಸಿಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್‌ ತೆಂಡುಲ್ಕರ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 15, 2025 - 11:32 am
in ಕ್ರೀಡೆ
0 0
0
Untitled design 2025 12 15T111809.995

ಮುಂಬೈ: ಅರ್ಜೆಂಟೀನಾದ ಫುಟ್ಬಾಲ್‌ ದಿಗ್ಗಜ, ಜಾಗತಿಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿರುವ ಲಿಯೋನೆಲ್‌ ಮೆಸ್ಸಿಯ (Lionel Messi) G.O.A.T ಇಂಡಿಯಾ ಪ್ರವಾಸದ ಎರಡನೇ ದಿನ ಭಾನುವಾರ ಮುಂಬೈನಲ್ಲಿ ನಡೆಯಿತು.

ಭಾನುವಾರ ಸಂಜೆ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸಿದರು. ಅವರೊಂದಿಗೆ ಉರುಗ್ವೆಯ ಸ್ಟಾರ್‌ ಆಟಗಾರ ಲೂಯಿಸ್‌ ಸುವಾರೆಜ್‌, ರೋಡ್ರಿಗೋ ಡಿ ಪಾಲ್‌ ಕೂಡ ಹಾಜರಿದ್ದರು. ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು “ಮೆಸ್ಸಿ… ಮೆಸ್ಸಿ” ಎಂಬ ಘೋಷಣೆಯೊಂದಿಗೆ ಫುಟ್ಬಾಲ್‌ ದಿಗ್ಗಜನನ್ನು ಸ್ವಾಗತಿಸಿದರು.

RelatedPosts

ಚಿನ್ನಸ್ವಾಮಿ ಕಾಲ್ತುಳಿತ: ‘ಕ್ರೀಡಾಂಗಣದ ಹೊರಗಡೆ ನಡೆದ ಘಟನೆಗೆ ನಾವು ಜವಾಬ್ದಾರರಲ್ಲ’: ಆರ್‌ಸಿಬಿ

ಡ್ಯಾಡಿ ಡ್ಯೂಟಿಯಲ್ಲಿ ವಿರಾಟ್ ಕೊಹ್ಲಿ: ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವ ವಿಡಿಯೋ ವೈರಲ್

RCB ಫ್ಯಾನ್ಸ್‌ಗೆ ದೊಡ್ಡ ಗುಡ್ ನ್ಯೂಸ್! ಚಿನ್ನಸ್ವಾಮಿಯಲ್ಲಿ IPL ಮ್ಯಾಚ್ ಫಿಕ್ಸ್ ಆಯ್ತು

ಸಂಜು ಸ್ಯಾಮ್ಸನ್‌ಗೆ ರೋಹಿತ್ ಶರ್ಮಾ ನೀಡಿದ ಸ್ಪೂರ್ತಿದಾಯಕ ಸಂದೇಶ ವೈರಲ್

ADVERTISEMENT
ADVERTISEMENT

ಕಾರ್ಯಕ್ರಮದಲ್ಲಿ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಹಾಗೂ ಭಾರತೀಯ ಫುಟ್ಬಾಲ್‌ನ ಶ್ರೇಷ್ಠ ಆಟಗಾರ ಸುನಿಲ್‌ ಚೆಟ್ರಿ ಮೆಸ್ಸಿಯನ್ನು ಭೇಟಿಯಾದ ಕ್ಷಣ ಎಲ್ಲರ ಗಮನ ಸೆಳೆಯಿತು. ಚೆಟ್ರಿಯನ್ನು ಆತ್ಮೀಯವಾಗಿ ಅಪ್ಪಿಕೊಂಡ ಮೆಸ್ಸಿ, ಅವರೊಂದಿಗೆ ಕೆಲ ಕ್ಷಣ ಮಾತುಕತೆ ನಡೆಸಿದರು. ಬಳಿಕ ತಮ್ಮ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಜೆರ್ಸಿಯನ್ನು ಚೆಟ್ರಿಗೆ ಉಡುಗೊರೆಯಾಗಿ ನೀಡಿದರು. ಈ ದೃಶ್ಯ ಕ್ರೀಡಾಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿತ್ತು.

ಇನ್ನೊಂದೆಡೆ, ಕ್ರಿಕೆಟ್‌ ಮತ್ತು ಫುಟ್ಬಾಲ್‌ ನಡುವಿನ ಅಪರೂಪದ ಸಂಗಮಕ್ಕೆ ಸಾಕ್ಷಿಯಾದ ಕ್ಷಣವೂ ಈ ಕಾರ್ಯಕ್ರಮದಲ್ಲಿ ನಡೆಯಿತು. ಸಚಿನ್‌ ತೆಂಡುಲ್ಕರ್‌ ಅವರು 2011ರ ಏಕದಿನ ವಿಶ್ವಕಪ್‌ನಲ್ಲಿ ತಾವು ಧರಿಸಿದ್ದ ಐತಿಹಾಸಿಕ ಜೆರ್ಸಿಯೊಂದರ ಮೇಲೆ ತಮ್ಮ ಹಸ್ತಾಕ್ಷರ ಹಾಕಿ, ಅದನ್ನು ಮೆಸ್ಸಿಗೆ ಉಡುಗೊರೆಯಾಗಿ ನೀಡಿದರು. 2011ರ ವಿಶ್ವಕಪ್‌ ಸ್ಮರಣೆಯ ಜೆರ್ಸಿಯನ್ನು ಸ್ವೀಕರಿಸಿದ ಮೆಸ್ಸಿ, ಅದನ್ನು ಗೌರವದಿಂದ ಹಿಡಿದು ಕೃತಜ್ಞತೆ ವ್ಯಕ್ತಪಡಿಸಿದರು. ಪ್ರತಿಯಾಗಿ ಮೆಸ್ಸಿ, 2022ರ ಫಿಫಾ ವಿಶ್ವಕಪ್‌ನಲ್ಲಿ ಬಳಸಲಾಗಿದ್ದ ಫುಟ್ಬಾಲ್‌ ಒಂದನ್ನು ಸಚಿನ್‌ಗೆ ಗಿಫ್ಟ್‌ ನೀಡಿದರು. ಈ ಕ್ಷಣ ಕ್ರೀಡಾ ಲೋಕದ ಎರಡು ಮಹಾನ್‌ ದಿಗ್ಗಜರ ನಡುವಿನ ಪರಸ್ಪರ ಗೌರವದ ಸಂಕೇತವಾಗಿತ್ತು.

ಕಾರ್ಯಕ್ರಮದ ವೇಳೆ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಫುಟ್ಬಾಲ್‌ ಪ್ರತಿಭಾನ್ವೇಷಣೆ ಮತ್ತು ಅಭಿವೃದ್ಧಿಗಾಗಿ ಆರಂಭಿಸಿರುವ ‘ಮಹಾದೇವ’ ಯೋಜನೆಗೂ ಅಧಿಕೃತ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ಮೆಸ್ಸಿ ವೇದಿಕೆ ಹಂಚಿಕೊಂಡು ಈ ಯೋಜನೆಯನ್ನು ಉದ್ಘಾಟಿಸಿದರು.

ಭಾರತೀಯ ಫುಟ್ಬಾಲ್‌ ತಂಡದ ಆಟಗಾರರಾದ ನಿಖಿಲ್‌ ಪೂಜಾರಿ, ರಾಹುಲ್‌ ಭೇಕೆ, ಚಿಂಗ್ಲೆನ್‌ಸಾನಾ ಸಿಂಗ್‌, ಮಹಿಳಾ ಫುಟ್ಬಾಲ್‌ ತಾರೆ ಬಾಲಾ ದೇವಿ ಸೇರಿದಂತೆ ಹಲವರು ಮೆಸ್ಸಿಯನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಇಂದು (ಸೋಮವಾರ) ಮೆಸ್ಸಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ರಾಜ್ಯಸಭಾ ಸದಸ್ಯ ಹಾಗೂ ಎಐಎಫ್‌ಎಫ್‌ ಮಾಜಿ ಅಧ್ಯಕ್ಷ ಪ್ರಫುಲ್‌ ಪಟೇಲ್‌ ನಿವಾಸಕ್ಕೆ ತೆರಳಿ, ಅಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ಇಡಿ ಮುಖ್ಯಸ್ಥ ರಾಹುಲ್‌ ನವೀನ್‌ ಸೇರಿದಂತೆ ಹಲವು ಗಣ್ಯರನ್ನು ಭೇಟಿಯಾಗಲಿದ್ದಾರೆ. ನಂತರ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಕೂಡ ಉಪಸ್ಥಿತರಿರಬಹುದು ಎನ್ನಲಾಗಿದೆ. ಕಾರ್ಯಕ್ರಮಗಳ ನಂತರ ಮೆಸ್ಸಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತಕ್ಕೆ ವಿದಾಯ ಹೇಳಲಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (51)

ಕೊಪ್ಪಳದಲ್ಲಿ ಖಮೇನಿ ಹ*ತ್ಯೆ ಬಗ್ಗೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿದ ಹಿಂದೂ ಯುವಕನ ಮೇಲೆ ಹ*ಲ್ಲೆ

by ಯಶಸ್ವಿನಿ ಎಂ
March 4, 2026 - 11:09 am
0

ಬೆಂಗಳೂರಿನ ಅಬ್ಬಿಗೆರೆಯಲ್ಲಿ ಅತ್ತೆ-ಸೊಸೆ ಜಗಳ

ಅಡುಗೆ ಮಾಡುವ ವಿಚಾರಕ್ಕೆ ಅತ್ತೆ-ಸೊಸೆ ಗಲಾಟೆ: ಟೆಕ್ಕಿ ಸುಷ್ಮಾ ಆ*ತ್ಮಹ*ತ್ಯೆ

by ಶ್ರೀದೇವಿ ಬಿ. ವೈ
March 4, 2026 - 11:09 am
0

Untitled design (50)

israel iran war: ಡಾಲರ್ ಎದುರು ರೂಪಾಯಿ ಮೌಲ್ಯ 92.17ಕ್ಕೆ ಕುಸಿತ, ಬೆಲೆ ಏರಿಕೆ ಬಿಸಿ ?

by ಯಶಸ್ವಿನಿ ಎಂ
March 4, 2026 - 10:50 am
0

Untitled design (49)

iran israel war ಎಫೆಕ್ಟ್‌: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಮುಂದೂಡಿಕೆ

by ಯಶಸ್ವಿನಿ ಎಂ
March 4, 2026 - 10:36 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 03T222153.308
    ಚಿನ್ನಸ್ವಾಮಿ ಕಾಲ್ತುಳಿತ: ‘ಕ್ರೀಡಾಂಗಣದ ಹೊರಗಡೆ ನಡೆದ ಘಟನೆಗೆ ನಾವು ಜವಾಬ್ದಾರರಲ್ಲ’: ಆರ್‌ಸಿಬಿ
    March 3, 2026 | 0
  • Untitled design 2026 03 03T201328.617
    ಡ್ಯಾಡಿ ಡ್ಯೂಟಿಯಲ್ಲಿ ವಿರಾಟ್ ಕೊಹ್ಲಿ: ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವ ವಿಡಿಯೋ ವೈರಲ್
    March 3, 2026 | 0
  • RCB IPL ಮ್ಯಾಚ್ ಚಿನ್ನಸ್ವಾಮಿ ಸ್ಟೇಡಿಯಂ
    RCB ಫ್ಯಾನ್ಸ್‌ಗೆ ದೊಡ್ಡ ಗುಡ್ ನ್ಯೂಸ್! ಚಿನ್ನಸ್ವಾಮಿಯಲ್ಲಿ IPL ಮ್ಯಾಚ್ ಫಿಕ್ಸ್ ಆಯ್ತು
    March 3, 2026 | 0
  • Untitled design 2026 03 02T211157.869
    ಸಂಜು ಸ್ಯಾಮ್ಸನ್‌ಗೆ ರೋಹಿತ್ ಶರ್ಮಾ ನೀಡಿದ ಸ್ಪೂರ್ತಿದಾಯಕ ಸಂದೇಶ ವೈರಲ್
    March 2, 2026 | 0
  • ಪಾಕಿಸ್ತಾನದ ಪ್ರತಿ ಆಟಗಾರನ ಜೇಬಿಗೆ ಬಿತ್ತು 50 ಲಕ್ಷ ದಂಡ!
    ಪಾಕಿಸ್ತಾನದ ಪ್ರತಿ ಆಟಗಾರನ ಜೇಬಿಗೆ ಬಿತ್ತು 50 ಲಕ್ಷ ದಂಡ!
    March 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version