• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ: ಇಂದಿನಿಂದ ಮಹಾರಾಜ ಟಿ20 ಟ್ರೋಫಿ ಆರಂಭ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
June 20, 2026 - 10:35 am
in ಕ್ರೀಡೆ
0 0
0
Untitled design 2026 06 20T103432.126

5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇಂದು(ಜೂನ್.20) ಅದ್ಧೂರಿಯಾಗಿ ಚಾಲನೆ ದೊರೆಯಲಿದೆ. ಆರು ತಂಡಗಳು ಭಾಗವಹಿಸುತ್ತಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್‌ ಸೇರಿದಂತೆ ಒಟ್ಟು 34 ಪಂದ್ಯಗಳು ನಡೆಯಲಿದ್ದು, 23 ದಿನಗಳ ಕಾಲ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕ್ರಿಕೆಟ್ ರಸದೌತಣ ನಡೆಯಲಿದೆ.

ಟೂರ್ನಿಯ ಮೊದಲ ಹಂತಕ್ಕೆ ಮೈಸೂರು ಆತಿಥ್ಯ ವಹಿಸುತ್ತಿದ್ದು, ಜೂನ್‌ 20ರಿಂದ 26ರವರೆಗೆ ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್‌ ತಂಡಕ್ಕೆ ಶಿವಮೊಗ್ಗ ಯೋಧಾಸ್‌ ಸವಾಲು ಎದುರಾಗಲಿದೆ. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ಹಾಗೂ ಹುಬ್ಬಳ್ಳಿ ಟೈಗರ್ಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಉಳಿದ ಎರಡು ತಂಡಗಳಾಗಿವೆ.

RelatedPosts

ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

WPL 2027ಕ್ಕೆ ಮುಹೂರ್ತ ಫಿಕ್ಸ್; ಜನವರಿ 14ರಿಂದ ಮಹಿಳಾ ಕ್ರಿಕೆಟ್ ಕದನ

ರಿಂಕು ಸಿಂಗ್-ಪ್ರಿಯಾ ಸರೋಜ್ ವಿವಾಹಕ್ಕೆ ಡೇಟ್ ಫಿಕ್ಸ್? ಲಕ್ನೋದಲ್ಲಿ ಅದ್ಧೂರಿ ವಿವಾಹಕ್ಕೆ ಸಿದ್ಧತೆ

ADVERTISEMENT
ADVERTISEMENT

ತಂಡಗಳ ನಾಯಕತ್ವದ ಜವಾಬ್ದಾರಿಯನ್ನು ಅನುಭವಿ ಆಟಗಾರರಿಗೆ ನೀಡಲಾಗಿದೆ. ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಶುಭಾಂಗ್‌ ಹೆಗಡೆ ಮುನ್ನಡೆಸಲಿದ್ದು, ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಮನೀಶ್‌ ಪಾಂಡೆ ನಾಯಕತ್ವ ವಹಿಸಿದ್ದಾರೆ. ಮೈಸೂರು ವಾರಿಯರ್ಸ್‌ ತಂಡಕ್ಕೆ ವೈಶಾಕ್‌ ವಿಜಯ್‌ಕುಮಾರ್‌, ಶಿವಮೊಗ್ಗ ಯೋಧಾಸ್‌ಗೆ ಆರ್‌. ಸ್ಮರಣ್‌, ಕೋಸ್ಟಲ್‌ ಕಿಂಗ್ಸ್‌ ಮಂಗಳೂರಿಗೆ ಕರುಣ್‌ ನಾಯರ್‌ ಹಾಗೂ ಹುಬ್ಬಳ್ಳಿ ಟೈಗರ್ಸ್‌ಗೆ ಅನೀಶ್ವರ್‌ ಗೌತಮ್‌ ನಾಯಕರಾಗಿದ್ದಾರೆ.

ಮೈಸೂರಿನಲ್ಲಿ ಮೊದಲ ಹಂತದ ಪಂದ್ಯಗಳು ಮುಕ್ತಾಯವಾದ ಬಳಿಕ, ಜೂನ್‌ 27ರಿಂದ ಜುಲೈ 3ರವರೆಗೆ ಹುಬ್ಬಳ್ಳಿಯಲ್ಲಿ ಎರಡನೇ ಹಂತದ ಪಂದ್ಯಗಳು ನಡೆಯಲಿವೆ. ಅಂತಿಮ ಹಂತದ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸಲಿದ್ದು, ಜುಲೈ 5ರಿಂದ 12ರವರೆಗೆ ಪಂದ್ಯಗಳು ಆಯೋಜನೆಗೊಳ್ಳಲಿವೆ. ಈ ಬಾರಿ ಟೂರ್ನಿಯಲ್ಲಿ ಹಲವು ರೋಚಕ ಹಣಾಹಣಿಗಳ ಜೊತೆಗೆ ಕೆಲವು ಹೊಸ ನಿಯಮಗಳೂ ಗಮನ ಸೆಳೆಯುತ್ತಿವೆ.

ಮೊದಲ ಬಾರಿಗೆ ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಾಮಾನ್ಯವಾಗಿ ಅಂಪೈರ್‌ ಬ್ಯಾಟರ್‌ಗೆ ಔಟ್‌ ತೀರ್ಪು ನೀಡಿದ ಬಳಿಕ ಚೆಂಡು ಡೆಡ್‌ ಬಾಲ್‌ ಎಂದು ಪರಿಗಣಿಸಲಾಗುತ್ತದೆ. ಆದರೆ ಮಹಾರಾಜ ಟ್ರೋಫಿಯಲ್ಲಿ ಡಿಆರ್‌ಎಸ್‌ ಪರಿಶೀಲನೆಯ ಬಳಿಕ ಬ್ಯಾಟರ್‌ ನಾಟೌಟ್‌ ಎಂದು ಘೋಷಣೆಯಾದರೆ, ಆ ಎಸೆತದಲ್ಲಿ ಗಳಿಸಲಾದ ರನ್‌ಗಳನ್ನು ತಂಡದ ಒಟ್ಟು ಮೊತ್ತಕ್ಕೆ ಸೇರಿಸಲಾಗುತ್ತದೆ. ಈ ನಿಯಮವು ಬ್ಯಾಟರ್‌ಗಳಿಗೆ ಹೆಚ್ಚು ನ್ಯಾಯ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆ ಫ್ರೀ-ಹಿಟ್‌ ನಿಯಮಕ್ಕೆ ಸಂಬಂಧಿಸಿದೆ. ಫ್ರೀ-ಹಿಟ್‌ ಎಸೆತದಲ್ಲಿ ಬ್ಯಾಟರ್‌ ಬೌಲ್ಡ್‌ ಅಥವಾ ಕ್ಯಾಚ್‌ ಆದರೂ ಔಟ್‌ ಆಗುವುದಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಓಡಿ ಗಳಿಸುವ ರನ್‌ಗಳನ್ನು ಇನ್ನು ಮುಂದೆ ಪರಿಗಣಿಸಲಾಗುವುದಿಲ್ಲ. ನೋ-ಬಾಲ್‌ ಬಳಿಕ ಉತ್ತಮ ಎಸೆತ ಮಾಡುವ ಬೌಲರ್‌ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ನಿಯಮ ಜಾರಿಗೆ ಬಂದಿದೆ.

ಅದೇ ರೀತಿ, ಟಾಸ್‌ಗೆ ಮುನ್ನವೇ ಉಭಯ ತಂಡಗಳು ತಮ್ಮ ಅಂತಿಮ ಆಡುವ ಹನ್ನೊಂದರ ಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಜೊತೆಗೆ ನಾಲ್ಕರಿಂದ ಐದು ಇಂಪ್ಯಾಕ್ಟ್‌ ಆಟಗಾರರ ಪಟ್ಟಿಯನ್ನೂ ನೀಡಬೇಕು. ಬಳಿಕ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್‌ ಆಟಗಾರನಾಗಿ ಬಳಸಿಕೊಳ್ಳಬಹುದು. ಆಲ್‌ರೌಂಡರ್‌ಗಳ ಮಹತ್ವ ಕಡಿಮೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.  ಹೊಸ ನಿಯಮಗಳು ಮತ್ತು ಯುವ ಪ್ರತಿಭೆಗಳ ಪ್ರದರ್ಶನದೊಂದಿಗೆ 5ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 09 17T222104.768

ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!

by ಶಾಲಿನಿ ಕೆ. ಡಿ
September 17, 2026 - 10:22 pm
0

Untitled design 2026 09 17T215838.621

ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
September 17, 2026 - 9:59 pm
0

Untitled design 2026 09 17T214544.648

ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

by ಶಾಲಿನಿ ಕೆ. ಡಿ
September 17, 2026 - 9:47 pm
0

Untitled design 2026 09 17T204230.825

4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!

by ಶಾಲಿನಿ ಕೆ. ಡಿ
September 17, 2026 - 8:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 17T215838.621
    ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್
    September 17, 2026 | 0
  • ಹ್ಮೋ (23)
    ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
    September 17, 2026 | 0
  • Your paragraph text 2026 09 16T220742.532
    WPL 2027ಕ್ಕೆ ಮುಹೂರ್ತ ಫಿಕ್ಸ್; ಜನವರಿ 14ರಿಂದ ಮಹಿಳಾ ಕ್ರಿಕೆಟ್ ಕದನ
    September 16, 2026 | 0
  • ಯ್ಯ (18)
    ರಿಂಕು ಸಿಂಗ್-ಪ್ರಿಯಾ ಸರೋಜ್ ವಿವಾಹಕ್ಕೆ ಡೇಟ್ ಫಿಕ್ಸ್? ಲಕ್ನೋದಲ್ಲಿ ಅದ್ಧೂರಿ ವಿವಾಹಕ್ಕೆ ಸಿದ್ಧತೆ
    September 16, 2026 | 0
  • ಯ್ಯ (16)
    ಅಫ್ಘಾನಿಸ್ತಾನಕ್ಕೆ 7 ವಿಕೆಟ್‌ಗಳ ಸೋಲು: 2-0 ಅಂತರದಲ್ಲಿ ಸರಣಿ ಗೆದ್ದ ಭಾರತ
    September 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version