ಸಂಖ್ಯಾಶಾಸ್ತ್ರ (Numerology) ಪ್ರಕಾರ ಪ್ರತಿಯೊಬ್ಬರ ಜೀವನದಲ್ಲಿ ಅಂಕೆಗಳಿಗೆ ವಿಶಿಷ್ಟ ಪ್ರಭಾವವಿದೆ. ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿ ಬಂದ ಸಂಖ್ಯೆಯೇ ನಿಮ್ಮ ಜನ್ಮಸಂಖ್ಯೆ. ಈ ಸಂಖ್ಯೆಯ ಆಧಾರದ ಮೇಲೆ ಪ್ರತಿದಿನದ ಉನ್ನತಿ, ಅವಕಾಶ ಮತ್ತು ಸವಾಲುಗಳು ಬದಲಾಗುತ್ತವೆ. ಇಂದಿನ ದಿನವಾದ ನವೆಂಬರ್ 3 (ಸೋಮವಾರ) ನಿಮ್ಮ ಜನ್ಮಸಂಖ್ಯೆಗೆ ಯಾವ ರೀತಿಯ ಫಲ ನೀಡಲಿದೆ ಎಂಬುದನ್ನು ನೋಡಿ.
ಜನ್ಮಸಂಖ್ಯೆ 1 – (1, 10, 19, 28)
ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಇದೆ. ದೇವಸ್ಥಾನ, ಜಾತ್ರೆ, ಪೂಜೆ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಂದು ಪರಿಹಾರದ ದಾರಿ ಕಾಣಿಸಲಿದೆ. ಕಾಯುತ್ತಿದ್ದ ಹಣ ಬರುವ ಸೂಚನೆ. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸ್ವಲ್ಪ ತಾತ್ಕಾಲಿಕ ಹಿನ್ನಡೆಯನ್ನು ಎದುರಿಸಬಹುದು.
ಜನ್ಮಸಂಖ್ಯೆ 2 – (2, 11, 20, 29)
ಸಂಗಾತಿಯ ಹಠ ಅಥವಾ ಅಸಹಕಾರ ಮನಸ್ಸಿಗೆ ತೊಂದರೆ ಉಂಟುಮಾಡಬಹುದು. ಸಾಲ ಪಡೆದಿದ್ದರೆ, ಇಂದು ಅದನ್ನು ಹಿಂತಿರುಗಿಸುವ ಒತ್ತಡ ಬರಬಹುದು. ಹಣಕಾಸು ವ್ಯವಹಾರಗಳಲ್ಲಿ ಸಮಯಪಾಲನೆ ಮುಖ್ಯ. ಥೈರಾಯ್ಡ್ ಸಮಸ್ಯೆ ಇರುವವರು ಆರೋಗ್ಯದ ಕಡೆ ಹೆಚ್ಚು ಎಚ್ಚರಿಕೆಯಿಂದಿರಬೇಕು.
ಜನ್ಮಸಂಖ್ಯೆ 3 – (3, 12, 21, 30)
ಸರ್ಕಾರದಿಂದ ಅಥವಾ ಸಂಸ್ಥೆಯಿಂದ ಬಾಕಿ ಹಣ ಬರುವ ಸಾಧ್ಯತೆ. ಮನೆ ಹಿರಿಯರ ಆರೋಗ್ಯ ಸುಧಾರಣೆಯ ಯೋಗ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಅವಕಾಶ. ಆದರೆ ಅಂದಾಜಿಗಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇದ್ದು, ಹಣದ ನಿರ್ವಹಣೆ ಅಗತ್ಯ.
ಜನ್ಮಸಂಖ್ಯೆ 4 – (4, 13, 22, 31)
ಇತ್ತೀಚೆಗೆ ಕಾಡುತ್ತಿದ್ದ ಅನಿಶ್ಚಿತತೆಗಳು ನಿವಾರಣೆಯಾಗುತ್ತವೆ. ಹೊಸ ವ್ಯವಹಾರ ಆರಂಭಿಸಿದವರು ಹಿಡಿತ ಸಾಧಿಸುವಂತಾಗುತ್ತದೆ. ಕೌಟುಂಬಿಕ ವಿಷಯದಲ್ಲಿ ಮೌನವೇ ಶ್ರೇಷ್ಠ. ಫೈನಾನ್ಸ್ ಅಥವಾ ಕನ್ಸಲ್ಟಿಂಗ್ ಕ್ಷೇತ್ರದವರು ಉತ್ತಮ ಫಲಿತಾಂಶ ಕಾಣುತ್ತಾರೆ.
ಜನ್ಮಸಂಖ್ಯೆ 5 – (5, 14, 23)
ಹಳೆಯ ಸ್ನೇಹಿತರು ಅಥವಾ ಆಪ್ತರು ನೆನಪಾಗುವ ದಿನ. ಕೆಲವು ಮಂದಿ ಪುಸ್ತಕ, ಸಬ್‌ಸ್ಕ್ರಿಪ್ಶನ್ ಅಥವಾ ಹೊಸ ಸಂಪರ್ಕ ಯೋಜನೆಗಳಿಗೆ ಹಣ ಹೂಡಬಹುದು. ಆಯುರ್ವೇದ ಅಥವಾ ಔಷಧಿ ಉತ್ಪಾದನಾ ಕ್ಷೇತ್ರದವರು ಹೊಸ ಒಪ್ಪಂದದ ಅವಕಾಶ ಪಡೆಯಬಹುದು. ಭೂಮಿ ಹೂಡಿಕೆಗೆ ಉತ್ತಮ ದಿನ.
ಜನ್ಮಸಂಖ್ಯೆ 6 – (6, 15, 24)
ಉದ್ಯೋಗದಲ್ಲಿ ಮಾತಿನ ಅಸ್ಪಷ್ಟತೆ ತಪ್ಪು ಅರ್ಥ ಉಂಟುಮಾಡಬಹುದು. ಹಳೆಯ ನೆನಪುಗಳು ಮನಸ್ಸು ಕಾಡಬಹುದು. ತಾಯಿ ಅಥವಾ ಹಿರಿಯರಿಂದ ಹಣದ ಸಹಾಯ ಕೇಳುವವರು ಬರಬಹುದು. ಸಹಾನುಭೂತಿಯಿಂದ ವರ್ತಿಸಿರಿ.
ಜನ್ಮಸಂಖ್ಯೆ 7 – (7, 16, 25)
ಮನೆಯಲ್ಲಿ ಇತರರ ಹಸ್ತಕ್ಷೇಪ ಹೆಚ್ಚಾಗಿ ಕಾಣಬಹುದು. ಮಕ್ಕಳ ನಿರ್ಲಕ್ಷ್ಯ ಕೋಪ ತರಬಹುದು. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿ. ವೈಯಕ್ತಿಕ ಕೆಲಸಗಳಿಗೆ ಸಮಯದ ಅಭಾವ. ಸಂಜೆ ವೇಳೆಗೆ ಕುಟುಂಬದೊಂದಿಗೆ ಊಟ ಅಥವಾ ಔಟ್‌ಡಿಂಗ್‌ಗೆ ಹೋಗುವ ಸಾಧ್ಯತೆ.
ಜನ್ಮಸಂಖ್ಯೆ 8 – (8, 17, 26)
ಕಿಚುಮಿಚು ಮಾತುಗಳು ಕಿವಿಗೆ ಬೀಳುವ ಸಾಧ್ಯತೆ. ಹಳೆಯ ತಪ್ಪುಗಳು ನೆನಪಾಗಿ ಮನಸ್ಸು ಬೇಸರಗೊಳ್ಳಬಹುದು. ತಾತ್ಕಾಲಿಕ ನಿರ್ಧಾರಗಳಿಂದ ಸಮಸ್ಯೆ ಎದುರಾಗಬಹುದು, ಆದ್ದರಿಂದ ಶಾಂತವಾಗಿರಿ. ದೂರದ ವ್ಯವಹಾರ ಅಥವಾ ಶಾಖೆಗಳಲ್ಲಿ ಮೇಲುಸ್ತುವಾರಿ ಮಾಡಲು ಹೊರಟು ಹೋಗುವ ಯೋಗ ಇದೆ.
ಜನ್ಮಸಂಖ್ಯೆ 9 – (9, 18, 27)
ಕುಟುಂಬದಿಂದ ಮೆಚ್ಚುಗೆ, ಧೈರ್ಯದಿಂದ ಮಾತನಾಡಿದ ಮಾತುಗಳಿಗೆ ಪ್ರಶಂಸೆ. ಹಳೆಯ ವಸ್ತುಗಳ ರಿಪೇರಿ ಅಥವಾ ಬದಲಾವಣೆ ಮಾಡಲು ಹಣ ಖರ್ಚಾಗಬಹುದು. ಕಾಲಿನ ಬೆರಳಲ್ಲಿ ಸೋಂಕು ಅಥವಾ ಫಂಗಸ್ ಸಮಸ್ಯೆ ಎಚ್ಚರಿಕೆ ನೀಡುತ್ತದೆ, ಆರೋಗ್ಯದ ಕಡೆ ಗಮನ ಕೊಡಿ.





