ಸಂಖ್ಯಾಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ಕಂಪನ ಹಾಗೂ ದಿನದ ಮೇಲೆ ಪರಿಣಾಮ ಬೀರುವ ಸಂಖ್ಯೆ ಇರುತ್ತದೆ. ಜನ್ಮತಾರೀಖಿನಲ್ಲಿ ಬರುವ 1ರಿಂದ 9ರ ತನಕದ ಸಂಖ್ಯೆಯನ್ನು ಜನ್ಮಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಇಂದು ಬುಧವಾರ. ಈ ದಿನವು ನಿಮ್ಮ ಜನ್ಮಸಂಖ್ಯೆಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.
ಜನ್ಮಸಂಖ್ಯೆ 1 (1, 10, 19, 28)
ಇಂದು ನೀವು ಬಹಳ ನೆಚ್ಚಿನವರನ್ನು ತೀವ್ರವಾಗಿ ನೆನಪಿಸಿಕೊಳ್ಳುವ ದಿನ. ಕೆಲಸದ ಒತ್ತಡ ಹೆಚ್ಚಾಗುವುದರಿಂದ ಊಟ-ತಿಂಡಿಗಳಿಗೂ ಸರಿಯಾದ ಸಮಯ ಸಿಗದೇ ಇರಬಹುದು. ಮಾರ್ಕೆಟಿಂಗ್ ಹಾಗೂ ಜಾಹೀರಾತು ಕ್ಷೇತ್ರದವರಿಗೂ ಬಡ್ತಿ ಅಥವಾ ಹೊಸ ಜವಾಬ್ದಾರಿಗಳ ಸೂಚನೆ ಬರಬಹುದು. ರಾಜಕೀಯ ಕ್ಷೇತ್ರದವರಿಗೆ ಪ್ರಮುಖ ಜವಾಬ್ದಾರಿ ಭಾರ ಹೊರುವ ಅವಕಾಶ. ಸ್ಥೂಲಕಾಯದಿಂದ ಬಳಲುತ್ತಿರುವವರು ಚಿಕಿತ್ಸೆಯ ಬಗ್ಗೆ ಗಂಭೀರವಾಗಿ ಯೋಚಿಸುವ ದಿನ.
ಜನ್ಮಸಂಖ್ಯೆ 2 (2, 11, 20, 29)
ನಿಮ್ಮ ಸಹನೆ ಇಂದು ಪರೀಕ್ಷೆಗೆ ಒಳಗಾಗಬಹುದು. ನೀವು ಒತ್ತಾಯಿಸಿ ಕೊಟ್ಟ ಕೆಲಸವನ್ನು ಕಾಲಹರಣ ಮಾಡುತ್ತಿರುವವರ ಮೇಲೆ ಸ್ಪಷ್ಟವಾಗಿ ಮಾತು ಹೇಳಬೇಕಾಗುತ್ತದೆ. ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹಾಕಿಸಿಕೊಳ್ಳುವ ಯೋಗ. ಚರ್ಮಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ. ವೈದ್ಯಕೀಯ ವೃತ್ತಿಯವರಿಗೂ ಹೊಸ ಅವಕಾಶಗಳು ಲಭ್ಯ.
ಜನ್ಮಸಂಖ್ಯೆ 3 (3, 12, 21, 30)
ಇತರರಿಗೆ ಸುಲಭವಿಲ್ಲದ ಕೆಲಸಗಳೂ ನಿಮಗೆ ಸುಲಭವಾಗಿ ತೋರುವ ದಿನ. ನಿಮ್ಮನ್ನು ಹಗರಣಕ್ಕೆ ಎಳೆಯಲು ಪ್ರಯತ್ನಿಸುವವರೇ ಸಿಕ್ಕಿಬೀಳುವ ಪರಿಸ್ಥಿತಿ. ಉದ್ಯೋಗ-ವ್ಯವಹಾರದಲ್ಲಿ ಮಹತ್ವದ ಮಾಹಿತಿಗಳು ದೊರೆಯುವ ಅವಕಾಶ. ಕಮಿಷನ್ ಆಧಾರಿತ ಉದ್ಯೋಗದಲ್ಲಿದ್ದವರಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಹೆಚ್ಚಿನ ಆದಾಯದ ದಾರಿಗಳು ತೆರೆದುಕೊಳ್ಳುವ ಯೋಗ. ಸಂಗಾತಿಗೆ ದುಬಾರಿ ಉಡುಗೆ ಖರೀದಿಸುವ ಸಾಧ್ಯತೆ. ಅಚಾನಕ್ ಪ್ರಯಾಣ ಮತ್ತು ಹೆಚ್ಚು ಖರ್ಚು ಸಂಭವ.
ಜನ್ಮಸಂಖ್ಯೆ 4 (4, 13, 22, 31)
ಸಣ್ಣಮಟ್ಟದ ಕಟ್ಟಡ ದುರಸ್ತಿ ಕೆಲಸ ಮಾಡುತ್ತಿದ್ದವರಿಗೆ ದೊಡ್ಡ ಕೆಲಸ ಸಿಗುವ ಶುಭಯೋಗ. ನೀವು ಹಿಂದಿನ ದಿನದಲ್ಲಿ ತೋರಿಸಿದ ನಿಷ್ಠೆಗೆ ಇಂದು ಫಲ ದೊರೆಯಲಿದೆ. ಮಾತು ಮಧ್ಯೆ ನುಗ್ಗುವುದನ್ನು ತಪ್ಪಿಸಿ, ಕೇಳುವ ಕಲೆ ಬೆಳೆಸಿಕೊಳ್ಳಿ. ನರ ಸಂಬಂಧಿ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ, ಈಗಿನ ಔಷಧಿ ಪರಿಣಾಮಕಾರಿಯಾಗದಿದ್ದರೆ ವೈದ್ಯರಿಂದ ಹೊಸ ಸಲಹೆ ಬರಬಹುದು.
ಜನ್ಮಸಂಖ್ಯೆ 5 (5, 14, 23)
ಇಂದು ನಿಮಗೆ ಇತರರ ಸಹಾಯಕ್ಕೆ ಓಡಾಡುವ ದಿನ. ಜಗಳ-ವ್ಯಾಜ್ಯವಿರುವವರು ರಾಜೀನಾಮೆ ಅಥವಾ ಸಂಧಾನಕ್ಕೆ ಬರುವ ಯೋಗ. ಒಂದೇ ಕೆಲಸಕ್ಕೆ ಅನೇಕ ಸಾರಿ ಓಡಾಡುವ ಪರಿಸ್ಥಿತಿ. ದಾಖಲೆ-ಪತ್ರಗಳ ಪರಿಶೀಲನೆಯಲ್ಲಿ ಜಾಗ್ರತೆ ಮುಖ್ಯ. ಹಲ್ಲಿನ ತೀವ್ರ ನೋವು ಕಾಡುವ ಸಾಧ್ಯತೆ, ಮನೆ ಮದ್ದಿಗಿಂತ ವೈದ್ಯರ ಚಿಕಿತ್ಸೆ ಉತ್ತಮ.
ಜನ್ಮಸಂಖ್ಯೆ 6 (6, 15, 24)
ಇಂದು ಮನೆ-ಮನೆಯಲ್ಲಿ ಕಾರ್ಯಕ್ರಮಗಳ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ. ಹಣಕಾಸಿನ ವಿಷಯಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಡಿ. ಫೈನಾನ್ಷಿಯಲ್ ಕನ್ಸಲ್ಟಂಟ್‌ಗಳಿಗೆ ಒತ್ತಡದ ದಿನ, ಆದರೆ ಫಲಿತಾಂಶ ಉತ್ತಮವಾಗಬಹುದು. ನಿಮ್ಮ ತಪ್ಪಿನಿಂದ ಉದ್ಭವಿಸಿದ ಸನ್ನಿವೇಶಕ್ಕೆ ನಿಮ್ಮ ಬುದ್ಧಿಬಲ ತೋರಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಆಹಾರದಲ್ಲಿ ಮೃದುವಾದ ಪದಾರ್ಥಗಳಿಗೆ ಆದ್ಯತೆ ನೀಡಿರಿ.
ಜನ್ಮಸಂಖ್ಯೆ 7 (7, 16, 25)
ಹೊಸ ಆದಾಯ ಮೂಲಗಳನ್ನು ಹುಡುಕುವ ಪ್ರಯತ್ನ ಫಲಕಾರಿ. ಬರವಣಿಗೆ ಮತ್ತು ಮಾಧ್ಯಮ ಕ್ಷೇತ್ರದವರಿಗೆ ಅವಕಾಶಗಳು ಹೆಚ್ಚಾಗುವ ದಿನ. ಮಕ್ಕಳ ಆರೋಗ್ಯ ಚಿಂತೆಗೆ ಕಾರಣ. ಮಹಿಳಾ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಜಾಗ್ರತೆ ಅಗತ್ಯ, ತಪ್ಪು ಅರ್ಥೈಸುವ ಸಾಧ್ಯತೆ. ಹೂಡಿಕೆ ಮಾಡಿದ ಹಣವನ್ನು ಉದ್ದೇಶಿತ ಕೆಲಸಗಳಿಗೆ ಬಳಸಿ.
ಜನ್ಮಸಂಖ್ಯೆ 8 (8, 17, 26)
ಸಿವಿಲ್ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ಅಥವಾ ಇಂಟರ್ವ್ಯೂ ಫಲಕಾರಿಯಾಗುವ ಸುದ್ದಿ. ಹಳೆಯ ಸ್ನೇಹಗಳನ್ನು ಪುನಃ ಪ್ರಾರಂಭಿಸುವ ಅವಕಾಶ. ಕುಟುಂಬದಲ್ಲಿ ಹಣಕಾಸು ಸಂಬಂಧಿಸಿದ ವಿವಾದಗಳು ನಿವಾರಣೆ ಆಗುವ ಯೋಗ. ದೂರ ಪ್ರಯಾಣದಿಂದ ದೈಹಿಕ ಅಲಸು.
ಜನ್ಮಸಂಖ್ಯೆ 9 (9, 18, 27)
ನೀವು ತಿಳಿದಿರುವುದನ್ನೇ ಹೇಳುವ ಸ್ವಭಾವದಿಂದ ಕೆಲ ಅಸಮಾಧಾನ ಬರಬಹುದು. ಆಹಾರದ ಒಳ್ಳೆಯ- ಕೆಟ್ಟ ಪರಿಣಾಮ ದೇಹದ ಮೇಲೆ ತಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ.





