ಸಂಖ್ಯಾಶಾಸ್ತ್ರವು ಪುರಾತನ ವಿಜ್ಞಾನವಾಗಿದ್ದು, ನಮ್ಮ ಜನ್ಮದಿನಾಂಕದ ಸಂಖ್ಯೆಯ ಆಧಾರದ ಮೇಲೆ ದೈನಂದಿನ ಜೀವನದ ಏರಿಳಿತಗಳನ್ನು ಮುನ್ಸೂಚಿಸುತ್ತದೆ. ನಿಮ್ಮ ಜನ್ಮಸಂಖ್ಯೆಯನ್ನು ಅನುಸರಿಸಿ, ಸೆಪ್ಟೆಂಬರ್ 11ರ ದಿನ ನಿಮಗೆ ಏನನ್ನು ತರಲಿದೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಜನ್ಮಸಂಖ್ಯೆ 1 (1, 10, 19, 28): ಇಂದು ನಿಮ್ಮ ಕಾರ್ಯೋತ್ಸಾಹ ಕಡಿಮೆಯಾಗಿರಬಹುದು. ಪ್ರೀತಿಯ ಸಂಬಂಧಗಳಲ್ಲಿ ಬೇಸರ ಮತ್ತು ಗೊಂದಲಗಳ ಸಾಧ್ಯತೆ ಇದೆ. ಹಳೆಯ ವ್ಯವಹಾರಗಳು ಅಥವಾ ಸರ್ಕಾರಿ ಸಂಬಂಧಿತ ಕಾಗದಪತ್ರಗಳಲ್ಲಿ ತೊಂದರೆ ಎದುರಾಗಬಹುದು. ಚಿಕ್ಕಪುಟ್ಟ ಅಡೆತಡೆಗಳಿಗೆ ಸಿದ್ಧರಿರಿ.
ಜನ್ಮಸಂಖ್ಯೆ 2 (2, 11, 20, 29): ಹೊಸ ಹೂಡಿಕೆ ಅಥವಾ ವ್ಯಾಪಾರವು ಚೆನ್ನಾಗಿ ಪ್ರಗತಿ ಸಾಧಿಸಲಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ. ವಾಹನ ಖರೀದಿಸುವ ಅವಕಾಶಗಳು ಲಭ್ಯವಿದೆ. ಆದರೆ, ಜೂಜು ಅಥವಾ ಅನಿಶ್ಚಿತ ಹೂಡಿಕೆಗಳಿಂದ ದೂರ ಇರುವುದು ಒಳ್ಳೆಯದು.
ಜನ್ಮಸಂಖ್ಯೆ 3 (3, 12, 21, 30): ಕುಟುಂಬದೊಳಗೆ ಸಣ್ಣಪುಟ್ಟ ವಾಗ್ವಾದಗಳ ಸಾಧ್ಯತೆ ಇದೆ. ನಿಮ್ಮಿಂದ ಲಾಭ ಪಡೆದವರು ನಿಮಗೆ ತೊಂದರೆ ಕೊಡುವ ಸನ್ನಿವೇಶ ಉದ್ಭವಿಸಬಹುದು. ಆರ್ಥಿಕವಾಗಿ ಎಚ್ಚರಿಕೆ ಅವಶ್ಯಕ. ನಿಮ್ಮ ಉಳಿತಾಯವನ್ನು ಬೇರೆಯವರ ಸಹಾಯಕ್ಕೆ ಉಪಯೋಗಿಸಬೇಕಾದ ಪರಿಸ್ಥಿತಿ ಒದಗಿಬರಲಿದೆ.
ಜನ್ಮಸಂಖ್ಯೆ 4 (4, 13, 22, 31): ಇಂಟೀರಿಯರ್ ಡಿಸೈನ್, ಆರ್ಟ್ ವರ್ಕ್ ಅಥವಾ ಹೋಮ್ ಥಿಯೇಟರ್ ಸಂಬಂಧಿತ ವ್ಯವಸ್ಥಾಪಕರಿಗೆ ಉತ್ತಮ ದಿನ. ದೀರ್ಘಕಾಲೀನ ಯೋಜನೆಗಳು ಮತ್ತು ಹೆಸರಾಂತ ವ್ಯಕ್ತಿಗಳ ಸಹಕಾರ ಲಭ್ಯವಾಗಬಹುದು. ಆದರೆ, ನಿಮಗೆ ಅನುಕೂಲಕರವಲ್ಲದ ಪ್ರಸ್ತಾಪಗಳನ್ನು ನಿರಾಕರಿಸುವ ಧೈರ್ಯ ಮಾಡಿ. ಒತ್ತಾಯಪಡಿಸುವ ವ್ಯಕ್ತಿಗಳಿಂದ ದೂರವಿರುವುದು ಲಾಭದಾಯಕ.
ಜನ್ಮಸಂಖ್ಯೆ 5 (5, 14, 23): ಇಂದು ನಿಮ್ಮಲ್ಲಿ ಒಂದು ಹೊಸ ಶಕ್ತಿ ಮತ್ತು ದೃಢ ನಿರ್ಧಾರ ತಾಳುವ ಭಾವನೆ ಉಂಟಾಗಲಿದೆ. ಬಾಕಿ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸಲು ಉತ್ತಮ ದಿನ. ಸ್ನೇಹಿತರೊಂದಿಗೆ ಊಟ ಅಥವಾ ಫ್ಯಾಷನ್ ಖರೀದಿಗೆ ಸಮಯ ಕಳೆಯಬಹುದು.
ಜನ್ಮಸಂಖ್ಯೆ 6 (6, 15, 24): ನಿರೀಕ್ಷೆ ಇಟ್ಟಿದ್ದ ಕೆಲಸದಲ್ಲಿ ವಿಳಂಬ ಅಥವಾ ಸಂವಹನದಲ್ಲಿ ಗ್ಯಾಪ್ ನಿಮಗೆ ನಿರಾಶೆ ತರಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿರೀಕ್ಷಿತ ಬೆಳವಣಿಗೆ ಸಿಗದಿರಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಟೀಕೆ ಮತ್ತು ವಿರೋಧ ಎದುರಾಗಬಹುದು. ಕೆಲವು ಹಿರಿಯ ಅಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸನ್ನಿವೇಶವೂ ಉಂಟಾಗಬಹುದು.
ಜನ್ಮಸಂಖ್ಯೆ 7 (7, 16, 25): ಇಂದು ನಿಮಗೆ ಇಷ್ಟವಾದ ವ್ಯಕ್ತಿಗಳ ಸಹವಾಸ ಮತ್ತು ಚಟುವಟಿಕೆಗಳಲ್ಲಿ ಸಮಯ ಕಳೆಯಲು ಸಿಗಲಿದೆ. ಜನಪ್ರಿಯತೆ ಹೆಚ್ಚಲಿದೆ. ಪೊಲೀಸ್ ಅಥವಾ ಸೇನಾ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸೂಚನೆ ಇದೆ. ಸೌಂದರ್ಯವರ್ಧಕ ವಸ್ತುಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಿ, ಚರ್ಮದ ಅಲರ್ಜಿ ಆಗಬಹುದು.
ಜನ್ಮಸಂಖ್ಯೆ 8 (8, 17, 26): ಚರ್ಮ ಮತ್ತು ತಲೆನೋವಿನ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ. ಹೋಟೆಲ್ ವ್ಯವಸ್ಥಾಪಕರಿಗೆ ಆದಾಯ ಕಡಿಮೆಯಾಗಲಿದೆ. ಸೋದರರು ಮತ್ತು ಸಂಬಂಧಿಕರ ಸಹಾಯಕ್ಕೆ ನೀವು ಓಡಾಡಬೇಕಾಗಬಹುದು. ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡದ ಕಾರ್ಯ ಲಭ್ಯವಾಗಬಹುದು.
ಜನ್ಮಸಂಖ್ಯೆ 9 (9, 18, 27): ವೃತ್ತಿಪರ ಜೀವನದಲ್ಲಿ ಗೌರವ ಮತ್ತು ಮನ್ನಣೆ ಲಭ್ಯವಾಗಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆ. ಬ್ಯಾಂಕ್ ಸಾಲದ ಅನುಮೋದನೆಗೆ ಸಿಕ್ಕಿದೆ. ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿರುವವರಿಗೆ ಲಾಭದಾಯಕ ದಿನ. ಆರೋಗ್ಯದತ್ತ ಗಮನ ಹರಿಸಲು ಉತ್ತಮ ಸಮಯ.