ಶಾಲಿವಾಹನ ಶಕ 1949, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಗುರುವಾರವಾದ ಇಂದು ಪ್ರತಿಯೊಂದು ರಾಶಿಗೂ ವಿಭಿನ್ನ ಫಲಗಳು ಕಂಡುಬರುತ್ತವೆ. ಕೆಲವರಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರು ಹಣಕಾಸು ಮತ್ತು ಸಂಬಂಧಗಳ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ಪ್ರೀತಿ, ಆರೋಗ್ಯ, ಕುಟುಂಬ, ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾವ ರಾಶಿಗೆ ಏನು ಫಲ ಎಂಬುದನ್ನು ತಿಳಿಯೋಣ.
ಮೇಷ: ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಸೂಕ್ತ ಯೋಜನೆ ರೂಪಿಸಿ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸ್ವಲ್ಪ ಅಸಹಕಾರ ಎದುರಾಗಬಹುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.
ವೃಷಭ: ವ್ಯಾಪಾರಿಗಳಿಗೆ ಮಾರುಕಟ್ಟೆ ಸ್ಪರ್ಧೆ ಹೆಚ್ಚಾಗಬಹುದು. ಕೋಪವನ್ನು ನಿಯಂತ್ರಿಸಿದರೆ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಅವಿವಾಹಿತರಿಗೆ ಉತ್ತಮ ವಿವಾಹ ಯೋಗ ಕಂಡುಬರುತ್ತದೆ. ಕೃಷಿ ಹಾಗೂ ವಿದೇಶ ಪ್ರಯಾಣದ ಯೋಚನೆಗಳು ಫಲ ನೀಡುವ ಸಾಧ್ಯತೆ ಇದೆ.
ಮಿಥುನ: ಪ್ರೇಮ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವ ಸೂಚನೆಗಳಿವೆ. ಮಾತಿನಲ್ಲಿ ಮಿತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ವಿದೇಶಿ ಉದ್ಯೋಗದ ಅವಕಾಶಕ್ಕಾಗಿ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಬಹುದು. ಸಣ್ಣ ವಿಷಯಗಳನ್ನು ದೊಡ್ಡದಾಗಿಸಬೇಡಿ.
ಕರ್ಕಾಟಕ: ಹಿರಿಯರ ಸಲಹೆ ನಿಮ್ಮ ಯಶಸ್ಸಿಗೆ ಕಾರಣವಾಗಬಹುದು. ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಿ. ಹಠದಿಂದ ತೆಗೆದುಕೊಳ್ಳುವ ನಿರ್ಧಾರಗಳು ಸಮಸ್ಯೆ ಉಂಟುಮಾಡಬಹುದು. ಅತಿಯಾದ ಚಿಂತೆಗಳನ್ನು ದೂರವಿಡಿ.
ಸಿಂಹ: ಆರ್ಥಿಕವಾಗಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿ. ಔಷಧ ಅಥವಾ ಆರೋಗ್ಯ ಕ್ಷೇತ್ರದ ವ್ಯಾಪಾರಿಗಳಿಗೆ ಲಾಭದ ಸೂಚನೆ ಇದೆ. ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಖಚಿತ.
ಕನ್ಯಾ: ದಿನದ ಆರಂಭದಲ್ಲಿ ಹಣಕಾಸಿನ ಒತ್ತಡ ಕಂಡುಬಂದರೂ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗಬಹುದು. ಕೋಪದ ನಿಯಂತ್ರಣ ಅಗತ್ಯ.
ತುಲಾ: ವ್ಯಾಪಾರದಲ್ಲಿ ಎಚ್ಚರಿಕೆ ಅಗತ್ಯ. ಮಕ್ಕಳಿಂದ ಸಂತೋಷದ ಸುದ್ದಿ ದೊರೆಯಬಹುದು. ಆದಾಯ ಹೆಚ್ಚಾದರೂ ಖರ್ಚಿನ ಮೇಲೂ ಗಮನ ಇರಲಿ. ಯಾವುದೇ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳುವುದು ಉತ್ತಮ.
ವೃಶ್ಚಿಕ: ಹೊಸ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಳೆಯ ಹೂಡಿಕೆಗಳಿಂದ ಲಾಭ ದೊರೆಯಬಹುದು. ಉದ್ಯೋಗದಲ್ಲಿ ಅದೃಷ್ಟ ಕೈಹಿಡಿಯಬಹುದು. ಸೃಜನಾತ್ಮಕ ಕೆಲಸಗಳಲ್ಲಿ ಆತುರ ಬೇಡ.
ಧನು: ಚಂಚಲ ಮನಸ್ಸು ಕೆಲಸಕ್ಕೆ ಅಡ್ಡಿಯಾಗಬಹುದು. ಹಳೆಯ ಹಣಕಾಸಿನ ಸಮಸ್ಯೆಗಳು ಮತ್ತೆ ಎದುರಾಗಬಹುದು. ವ್ಯವಹಾರದಲ್ಲಿ ಮಾತಿನ ಮೇಲೆ ಹಿಡಿತ ಇರಲಿ. ಅನಗತ್ಯ ವಾದಗಳಿಂದ ದೂರವಿರುವುದು ಒಳಿತು.
ಮಕರ: ಉದ್ಯೋಗ ಮತ್ತು ವೈಯಕ್ತಿಕ ಜೀವನದಲ್ಲಿ ಏರಿಳಿತಗಳು ಕಂಡುಬರಬಹುದು. ಕುಟುಂಬ ಸಂಬಂಧಗಳನ್ನು ಕಾಪಾಡಿಕೊಳ್ಳಿ. ನ್ಯಾಯಾಲಯ ಅಥವಾ ಕಾನೂನು ಸಂಬಂಧಿತ ವಿಷಯಗಳಲ್ಲಿ ಪರಿಹಾರ ಸಿಗುವ ಸಾಧ್ಯತೆ ಇದೆ.
ಕುಂಭ: ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸಬಹುದು. ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳು ದೊರೆಯಬಹುದು. ಸಾಹಸಮಯ ನಿರ್ಧಾರಗಳನ್ನು ತಪ್ಪಿಸಿ.
ಮೀನ: ವ್ಯಾಪಾರದಲ್ಲಿ ನಿರೀಕ್ಷಿತ ಫಲ ಸಿಗದಿದ್ದರೂ ನಿರಾಶರಾಗಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಧಾನಗತಿಯ ಕೆಲಸಗಳಿಗೆ ವೇಗ ಸಿಗಲಿದೆ.





