ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಸೌರ ಮಾಸ, ವೈಶಾಖ ಕೃಷ್ಣ ಪಕ್ಷ, ಮಂಗಳವಾರ, ಅಷ್ಟಮೀ ತಿಥಿ, ಶತಭಿಷಾ ನಕ್ಷತ್ರ, ಐಂದ್ರ ಯೋಗ, ಬಾಲವ ಕರಣ.
ದಿನದ ಶುಭಾಶುಭ ಕಾಲ
- ಸೂರ್ಯೋದಯ: 06:05 AM
- ಸೂರ್ಯಾಸ್ತ: 06:53 PM
- ರಾಹು ಕಾಲ: 03:41 PM – 05:17 PM
- ಯಮಘಂಡ ಕಾಲ: 09:17 AM – 10:53 AM
- ಗುಳಿಕ ಕಾಲ: 12:29 PM – 02:05 PM
ಮೇಷ ರಾಶಿ
ಶುಭ ಕಾರ್ಯಗಳಿಗೆ ಸಂಗಾತಿಯಿಂದ ಪ್ರೇರಣೆ ದೊರೆಯಬಹುದು. ನೂತನ ಯೋಜನೆಗಳನ್ನು ಆರಂಭಿಸಲು ಮನಸ್ಸು ಮಾಡುವಿರಿ. ಬಂಧುಗಳ ಸಹಾಯದಿಂದ ಯೋಜನೆಗಳು ಯಶಸ್ವಿಯಾಗಲಿವೆ. ವಿವಾಹಕ್ಕೆ ಸಂಬಂಧಿತ ಖರೀದಿಗಳು ಸಾಧ್ಯ. ಪ್ರೇಮ ಸಂಬಂಧಗಳಿಗೆ ಉತ್ತಮ ದಿನ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಸಹಕಾರ ಸಿಗಲಿದೆ. ಆದರೆ, ಕುಟುಂಬದ ನಿರ್ಲಕ್ಷ್ಯದಿಂದ ಮನಸ್ಸಿಗೆ ಬೇಸರವಾಗಬಹುದು. ವಿಶ್ರಾಂತಿಗೆ ಒತ್ತು ನೀಡಿ.
ವೃಷಭ ರಾಶಿ
ದೇವರ ಭಕ್ತಿಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಗುರಿಗಳನ್ನು ಕಠಿಣ ಪ್ರಯತ್ನದಿಂದ ಸಾಧಿಸುವಿರಿ. ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯಲಿದೆ. ಖರೀದಿಯಲ್ಲಿ ಹಣದ ಜಾಗರೂಕತೆ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆಯುವುದು ಆತ್ಮತೃಪ್ತಿ ನೀಡಲಿದೆ. ಹೊಸ ಯೋಜನೆಗಳು ಕೆಲಸದಲ್ಲಿ ಆರಂಭವಾಗಲಿವೆ. ಸಂಗಾತಿಯ ಪ್ರೀತಿಯಿಂದ ಸಂತೋಷ ದೊರೆಯುತ್ತದೆ.
ಮಿಥುನ ರಾಶಿ
ನಿಮ್ಮ ಕೀರ್ತಿಯನ್ನು ಕೊಂಡಾಡಲಾಗುವುದು. ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಮತ್ತೆ ಕೈಗೆತ್ತಿಕೊಳ್ಳುವಿರಿ. ಧನ ಮತ್ತು ಜನ ಸಹಾಯ ದೊರೆಯಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹಿರಿಯರೊಂದಿಗೆ ಯೋಜನೆಗಳ ಬಗ್ಗೆ ಚರ್ಚಿಸಿ. ಕುಟುಂಬದೊಂದಿಗೆ ಪ್ರವಾಸ ಯೋಜನೆ ರೂಪುಗೊಳ್ಳಲಿದೆ. ಸಂಗಾತಿಯ ತೀವ್ರ ವರ್ತನೆ ಮನಸ್ಸಿಗೆ ಘಾಸಿಯಾಗಬಹುದು.
ಕರ್ಕಾಟಕ ರಾಶಿ
ನಿಮ್ಮ ಕಾಳಜಿಯು ಇತರರಿಗೆ ಇಷ್ಟವಾಗಲಿದೆ. ಕಷ್ಟದ ಸಂದರ್ಭದಲ್ಲೂ ಧೈರ್ಯ ಮತ್ತು ಆತ್ಮವಿಶ್ವಾಸ ಕಾಪಾಡಿಕೊಳ್ಳುವಿರಿ. ಸಂಗಾತಿಯಿಂದ ಆರೋಗ್ಯವಂತರಾಗುವಿರಿ. ಹಣದ ಅವಶ್ಯಕತೆಯ ಮೌಲ್ಯವನ್ನು ಅರಿಯುವಿರಿ. ಪ್ರೇಮ ಸಂಬಂಧದಲ್ಲಿ ಸ್ಪಷ್ಟತೆ ಅಗತ್ಯ. ಸಂಗಾತಿಯ ಪ್ರೀತಿಯಿಂದ ಆಧ್ಯಾತ್ಮಿಕ ಶಾಂತಿ ದೊರೆಯಲಿದೆ.
ಸಿಂಹ ರಾಶಿ
ನೆಮ್ಮದಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕೆಲಸ ಮತ್ತು ಕುಟುಂಬವನ್ನು ಸಮತೋಲನಗೊಳಿಸುವುದು ಕಷ್ಟವಾಗಬಹುದು. ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿ. ಹಣದ ವ್ಯವಹಾರಕ್ಕೆ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ.
ಕನ್ಯಾ ರಾಶಿ
ವೃತ್ತಿಯಲ್ಲಿ ಮೋಸದ ಸಾಧ್ಯತೆ ಇದೆ. ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸಲಿದೆ. ಪೋಷಕರ ಆರೋಗ್ಯದತ್ತ ಗಮನ ಅಗತ್ಯ. ಪ್ರೀತಿಯಲ್ಲಿ ಸಹನೆ ಬೇಕು. ಸಂಗಾತಿಯೊಂದಿಗೆ ಮಾತಿನ ಕೊರತೆ ಭಾವನಾತ್ಮಕ ನೋವು ತರಬಹುದು.
ತುಲಾ ರಾಶಿ
ಕೆಲಸಗಳು ನೆನಪಿಗೆ ಬಾರದೇ ಇರಬಹುದು, ಇದರಿಂದ ಅಪಮಾನವಾಗುವ ಸಾಧ್ಯತೆ ಇದೆ. ಜಾಣತನದಿಂದ ಕೆಲಸ ಮಾಡಿ ಸಮಸ್ಯೆಗಳನ್ನು ಪರಿಹರಿಸುವಿರಿ. ಹೂಡಿಕೆಯಲ್ಲಿ ಲಾಭದ ಸೂಚನೆ. ಸ್ನೇಹಿತರ ಮೂಲಕ ಹೊಸ ಸಂಪರ್ಕಗಳು ದೊರೆಯಲಿವೆ. ಪ್ರೇಮ ಸಂಬಂಧದ ಗೊಂದಲಗಳು ತೀರಬಹುದು. ವ್ಯಾಪಾರದಲ್ಲಿ ಲಾಭವು ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ನಿಮ್ಮ ಸ್ಥೈರ್ಯವು ಇತರರಿಗೆ ಸ್ಪೂರ್ತಿಯಾಗಲಿದೆ. ಪಿತ್ರಾರ್ಜಿತ ಆಸ್ತಿಯ ಸಮಸ್ಯೆಗಳು ಪರಿಹಾರವಾಗಲಿವೆ. ಭಾವನಾತ್ಮಕವಾಗಿ ಅತಿಯಾಗದಿರಿ. ಪ್ರೀತಿಯ ಮಹತ್ವವನ್ನು ಹೊಸದಾಗಿ ಅರಿಯುವಿರಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಂಗಾತಿಯ ಸಾಂತ್ವನಮಯ ನಡೆಯಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ.
ಧನು ರಾಶಿ
ಯಾವ ಲಾಭವನ್ನೂ ನಗಣ್ಯವೆಂದು ತಿರಸ್ಕರಿಸಬೇಡಿ. ದಿನಚರಿಯಲ್ಲಿ ವ್ಯತ್ಯಾಸವಾಗಲಿದೆ. ಪ್ರತಿಭೆಗೆ ಇಂದು ಪರೀಕ್ಷೆಯ ಕಾಲ. ಆರ್ಥಿಕ ದುರ್ಬಲತೆಯಿಂದ ದುರ್ಮಾರ್ಗವನ್ನು ಅನುಸರಿಸದಿರಿ. ಕಾರ್ಯಕ್ಷೇತ್ರದ ಕೆಲಸಗಳು ಭವಿಷ್ಯದಲ್ಲಿ ಫಲ ನೀಡಲಿವೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ.
ಮಕರ ರಾಶಿ
ಕೈಲಾಗದು ಎಂದು ಸುಮ್ಮನಾಗಬೇಡಿ, ಪ್ರಯತ್ನ ಮಾಡಿ. ಕಷ್ಟದಲ್ಲಿರುವ ಸ್ನೇಹಿತನಿಗೆ ಸಹಾಯ ಮಾಡುವಿರಿ. ಕೋಪವನ್ನು ನಿಯಂತ್ರಿಸಿ. ಮಕ್ಕಳಿಂದ ಹಣಕಾಸಿನ ಲಾಭ ಸಾಧ್ಯ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳ ಸೂಚನೆ. ಸಂಗಾತಿಯೊಂದಿಗೆ ಸಂತೋಷದ ಸಂವಾದ ಇರಲಿದೆ. ಬಂಧುಗಳಿಂದ ಆಗಿರುವ ನೋವನ್ನು ಹೇಳಿಕೊಳ್ಳಲಾರಿರಿ.
ಕುಂಭ ರಾಶಿ
ಕಷ್ಟದಲ್ಲಿರುವವರಿಗೆ ಸಹಾನುಭೂತಿ ತೋರಿಸುವಿರಿ. ಸಕಾರಾತ್ಮಕ ಚಿಂತನೆಯಲ್ಲಿ ತೊಡಗುವಿರಿ. ಆಕರ್ಷಕ ವ್ಯಕ್ತಿತ್ವವು ಗಮನ ಸೆಳೆಯಲಿದೆ. ಸಾಲವನ್ನು ತೀರಿಸುವ ಅವಕಾಶ ದೊರೆಯಲಿದೆ. ಪ್ರೇಮ ಜೀವನದಲ್ಲಿ ಹೊಸ ತಿರುವು ಮೂಡಲಿದೆ. ವಾಹನದ ಬಳಕೆ ಹೆಚ್ಚಾಗಲಿದೆ. ದುಷ್ಕೃತ್ಯಕ್ಕೆ ಪ್ರೇರಣೆಯಾಗದಂತೆ ಎಚ್ಚರಿಕೆ.
ಮೀನ ರಾಶಿ
ಎಲ್ಲ ಕೆಲಸದಲ್ಲಿ ಕುತೂಹಲ ಇರಲಿದೆ. ಹೊಸ ಊರನ್ನು ನೋಡುವ ಕನಸು ಇದೆ. ಶಿಸ್ತಿನ ವಾತಾವರಣವು ಮನೆಯಲ್ಲಿ ಸಂತೋಷ ತರಲಿದೆ. ದೀರ್ಘಕಾಲದ ಖಾಯಿಲೆ ಕಡಿಮೆಯಾಗಲಿದೆ. ಹಣಕಾಸಿನ ಲಾಭದ ಸಾಧ್ಯತೆ. ಸಂಗಾತಿಯ ಒಲವಿನ ನಡೆಯಿಂದ ಹೊಸ ಉತ್ಸಾಹ ದೊರೆಯಲಿದೆ. ಗುರುಜನರ ಮಾರ್ಗದರ್ಶನದಿಂದ ಯೋಚನೆಗಳು ಬಲಗೊಳ್ಳಲಿವೆ.