ತಮಿಳುನಾಡು : ದಳಪತಿ ವಿಜಯ್ ತಮಿಳುನಾಡಿನಲ್ಲಿ ಈ ಹೆಸರನ್ನ ಕೇಳದವರೇ ಇಲ್ಲಾ, ಅಷ್ಟರಮಟ್ಟಿಗೆ ಕಾಲಿವುಡ್‌ನಲ್ಲಿ ಇವರು ಫೇಮಸ್. ಇವರ ನಟನೆಗೆ ಹಾಗೂ ಇವರು ಅಭಿನಯಿಸಿರುವ ಸಿನಿಮಾಗಳಿಗೆ ಅಷ್ಟು ಜನ ಫ್ಯಾನ್ಸ್ ಇದ್ದು, ಇದೀಗ ತಮಿಳುನಾಡಿನ ಸಿಎಂ ಆಗಿ ವಿಜಯ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಡಿಎಂಕೆ ಹಾಗೂ ಎಡಿಎಂಕೆ ಪಕ್ಷವನ್ನ ಸೋಲಿಸಿ ತಮಿಳುನಾಡಿನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ರಾಜಕೀಯಕ್ಕೆ ಬರ್ತಾರಂತೆ ಅ ನಟ
ನಟ ವಿಜಯ್ ಭಾರೀ ಅಂತರದಿಂದ ತಮಿಳುನಾಡಿ ಎಲೆಕ್ಷನ್ ಗೆದ್ದ ನಂತರ ಇದೀಗ ತಮಿಳಿನ ಆ ಸೂಪರ್ ಸ್ಟಾರ್ ರಾಜಕೀಯಕ್ಕೆ ಕಾಲಿಡಲು ಸಕಲ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದರಂತೆ. ಯಾರು ಆ ನಟ ಎಂದು ನೋಡುವುದಾದ್ರೆ ಅವರೇ ತಮಿಳಿನ ಮತ್ತೊರ್ವ ಸೂಪರ್ ಸ್ಟಾರ್ ಅಜಿತ್ ಕುಮಾರ್. ತಮಿಳಿನಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಮ್ಯಾನರಿಸಂ ಹೊಂದಿರುವ ಅಜಿತ್ ಅವರಿಗೆ 2014 ರಲ್ಲಿಯೇ ಚುನಾವಣೆಗೆ ಬರಬೇಕಿತ್ತು ಎಂಬ ಮಾತುಗಳು ಕೂಡ ಇದೆ.
ನಟ ಅಜಿತ್ ಕುಮಾರ್ ಅವರು ಮಂಕಾಥ, ವೀರಂ, ಉಲ್ಲಾಸಂ, ವಾಲಿ, ವಾಲಿಮೈ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನ ನೀಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಿಜಯ್‌ಗೆ ಎಷ್ಟು ಜನ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೋ, ಅಷ್ಟೇ ಜನ ಫ್ಯಾನ್ ಫಾಲೋಯಿಂಗ್ ನಟ ಅಜಿತ್ ಕೂಡ ಹೊಂದಿದ್ದಾರೆ. ಅಲ್ಲದೇ ನಟ ಅಜಿತ್ ಕುಮಾರ್ ರೇಸಿಂಗ್ ಮೇಲೆ ಒಲವನ್ನ ಹೊಂದಿದ್ದು, ಅವರ ಬಳಿ ಹಲವು ರೇಸಿಂಗ್ ಕಾರು , ಬೈಕ್‌ಗಳನ್ನ ಹೊಂದಿದ್ದಾರೆ. ಅವರು ಆಗಾಗ ಎಫ್ ರೇಸ್‌ನಲ್ಲಿಯೂ ಕೂಡ ಭಾಗಿಯಾಗುತ್ತಿರುತ್ತಾರೆ. ಇದೀಗ ಕಾಲಿವುಡ್‌ನಲ್ಲಿ ಬಂದಿರುವ ಮಾಹಿತಿ ಪ್ರಕಾರ ವಿಜಯ್‌ಗೆ ಸೆಡ್ಡುಹೊಡೆಯಲು ನಟ ಅಜಿತ್ ಕೂಡ ಚುನಾವಣೆಗೆ ನಿಲ್ಲುತ್ತಾರೆ ಎಂಬಂತಹ ಮಾತುಗಳು ಕೇಳಿ ಬರುತ್ತಿದೆ.
ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾರ ವಿಜಯ್ ದಳಪತಿ
2014ರಲ್ಲಿಯೇ ಚುನಾವಣೆಗೆ ಬರಲು ಪ್ರಯತ್ನಿಸಿದ್ದ ನಟ ವಿಜಯ್ ಅವರಿಗೆ ಅಂದಿನ ಸಿಎಂ ಆಗಿದ್ದಂತಹ ಜಯಲಲಿತಾ ಭೇಟಿಗೆ ಅವಕಾಶವನ್ನ ಕೂಡ ನೀಡದೇ ಅವಮಾನ ಮಾಡಿದ್ರು.. ಬಳಿಕ ಸಂಜೆ 6 ರ ನಂತರ ಭೇಟಿಗೆ ಅವಕಾಶ ನೀಡುವುದಾಗಿ ಭರವಸೆಯನ್ನ ನೀಡಿದ್ರು. ಆದ್ರೆ ಕೊನೆಯಲ್ಲಿ ಭೇಟಿಗೆ ಅವಕಾಶ ನೀಡದೇ ಅವಮಾನ ಮಾಡಿದ್ರು. ಮೂಲಗಳ ಪ್ರಕಾರ ಇದೀಗ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷವನ್ನ ಸೋಲಿಸುವುದೇ ಅವರ ಗುರಿ ಎಂಬಂತಹ ಮಾತುಗಳು ಕೇಳಿ ಬರುತ್ತಿದೆ.
ಅಲ್ಲದೇ ಯಾವಾಗ ಅಜಿತ್ ಅವರೊಂದಿಗೆ ಅಂದಿನ ಸಿಎಂ ಜಯಲಲಿತಾ ಆಪ್ತರಾದ್ರೋ ಅಂದಿನಿಂದಲೂ ಕೂಡ ಅಜಿತ್ ಅವರನ್ನ ಮುಂದಿನ ಉತ್ತರಾಧಿಕಾರಿ ಎಂದು ಹೇಳಲಾಗತ್ತಿತ್ತು. ಇದೀಗ ಅಜಿತ್ ಅವರು ಕೂಡ ರಾಜಕೀಯಕ್ಕೆ ಬರ್ತಾರೆ ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ತಮಿಳುನಾಡಿನಲ್ಲಿ ಮತ್ತೊಂದು ಇತಿಹಾಸವನ್ನ ಸೃಷ್ಟಿ ಮಾಡಲಿದ್ಯಾ ಎಂಬಂತಹ ಪ್ರಶ್ನೆಗಳು ಎದ್ದಿವೆ. ಒಟ್ಟಿನಲ್ಲಿ ಕಾಲಿವುಡ್‌ನ ಫೇಮಸ್ ನಟರು ಈ ರೀತಿ ಚುನಾವಣೆ ಕಡೆಗೆ ಒಲವನ್ನ ತೋರಿಸುತ್ತಿರುವುದು ಕಾಲಿವುಡ್ ಫ್ಯಾನ್ಸ್‌ಗೆ ಒಂದು ರೀತಿಯ ಖುಷಿಯ ವಿಚಾರ ಎನ್ನಬಹುದಾಗಿದೆ.





