ತಿರುತ್ತಣಿ: ಕುಡಿದ ಮತ್ತಿನಲ್ಲಿದ್ದ ನಾಲ್ವರು ಅಪ್ರಾಪ್ತ ಹುಡುಗರು ಸೇರಿ ಒಡಿಶಾ ಮೂಲದ 20 ವರ್ಷದ ಯುವಕನ ಮೇಲೆ ಮಚ್ಚುಗಳಿಂದ ಅಮಾನವೀಯವಾಗಿ ಹಲ್ಲೆ ನಡೆಸಿದ್ದಲ್ಲದೆ, ಆ ಇಡೀ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವಿಕೃತಿ ಮೆರೆದಿರುವ ಘಟನೆ ತಮಿಳುನಾಡಿನ ತಿರುತ್ತಣಿಯಲ್ಲಿ ನಡೆದಿದೆ.
ಒಡಿಶಾ ಮೂಲದ ಕೆ. ಸೂರಜ್ ಎಂಬ ಯುವಕ ಕೌಟುಂಬಿಕ ಕಲಹದ ಕಾರಣದಿಂದ ಬದುಕು ಕಟ್ಟಿಕೊಳ್ಳಲು ಇತ್ತೀಚೆಗಷ್ಟೇ ಚೆನ್ನೈಗೆ ಬಂದಿದ್ದನು. ಶನಿವಾರ ಸಂಜೆ ಸೂರಜ್ ಚೆನ್ನೈ-ತಿರುತ್ತಣಿ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತಿರುವಲಂಗಾಡು ನಿಲ್ದಾಣದಲ್ಲಿ ರೈಲು ಏರಿದ ನಾಲ್ವರು ಅಪ್ರಾಪ್ತರು ಮದ್ಯ ಸೇವಿಸಿದ್ದರು ಜೊತೆಗೆ ಅವರ ಬಳಿ ಇದ್ದ ಬ್ಯಾಗ್‌ನಲ್ಲಿ ಮಾರಕಾಸ್ತ್ರಗಳಿದ್ದವು ಎಂದು ತಿಳಿದುಬಂದಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪ್ರಾಪ್ತ ಬಾಲಕರು ಸೂರಜ್ ಜೊತೆ ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದ್ದರು. ಈ ವೇಳೆ ಭಾಷೆಯ ವಿಚಾರವೋ ಅಥವಾ ಸಣ್ಣ ವಿಷಯವೋ ಚರ್ಚೆಗೆ ಬಂದಿದೆ. ಈ ಮಧ್ಯ ಸೂರಜ್ ಹಾಗೂ ಆ ಗುಂಪಿನ ನಡುವೆ ಜಗಲವಾಗಿರಬಹುದು. ಬಳಿಕ ರೈಲು ತಿರುತ್ತಣಿ ನಿಲ್ದಾಣ ತಲುಪುತ್ತಿದ್ದಂತೆ, ಈ ಗ್ಯಾಂಗ್ ಸೂರಜ್‌ನನ್ನು ಬಲವಂತವಾಗಿ ರೈಲ್ವೆ ಕ್ವಾರ್ಟರ್ಸ್ ಬಳಿಯ ಪಾಳುಬಿದ್ದ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿದೆ.
ಅಲ್ಲಿ ಮೂವರು ಹುಡುಗರು ತಮ್ಮಲ್ಲಿದ್ದ ಮಚ್ಚುಗಳಿಂದ ಸೂರಜ್‌ನ ತಲೆ, ಕೆನ್ನೆ ಮತ್ತು ಕೈಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಸೂರಜ್ ಕಿರುಚಾಡುತ್ತಿದ್ದರೂ ಇನ್ನೂ ಹೆಚ್ಚಾಗಿ ಅವನ ಮೇಲೆ ಹಲ್ಲೆ ಮಾಡಲೊಉ ಮುಂದಾಗಿದ್ದಾನೆ. ಈ ಹುಡುಗರ ಗುಂಪಿನಲ್ಲಿದ್ದ ನಾಲ್ಕನೇಯವನು ಇಡೀ ಘಟನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ.
ಹಲ್ಲೆಯ ನಂತರ ಸೂರಜ್ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಆದರೆ ಸೆರೆಹಿಡಿದಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ‘ವಿಕ್ಟರಿ’ (ಗೆಲುವಿನ) ಸಂಕೇತ ತೋರಿಸಿ ಸಂಭ್ರಮಿಸಿದ್ದಾರೆ. ಪ್ರಜ್ಞೆ ಬಂದ ನಂತರ ಸೂರಜ್ ಹೇಗೋ ತೆವಳುತ್ತಾ ರಸ್ತೆಗೆ ಬಂದು ಜನರ ಸಹಾಯ ಕೇಳಿದಾಗ ಈ ವಿಚಾರ ತಿಳಿದುಬಂದಿದೆ. ಸದ್ಯ ಸಂತ್ರಸ್ತ ಯುವಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ತಿರುತ್ತಣಿ ಪೊಲೀಸರು ತನಿಖೆ ಆರಂಭಿಸಿದರು. ಬೈಪಾಸ್ ರಸ್ತೆಯ ದೇವಸ್ಥಾನವೊಂದರ ಬಳಿ ಮದ್ಯ ಸೇವಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಂಧಿತರೆಲ್ಲರೂ ಶಾಲೆಯಿಂದ ಶಾಲೆ ಬಿಟ್ಟವರು ಎಂದು (School Dropouts) ತಿಳಿದುಬಂದಿದೆ. ಅವರ ಮೇಲೆ ಕೊಲೆ ಯತ್ನ (Section 307) ಪ್ರಕರಣ ದಾಖಲಿಸಲಾಗಿದ್ದು, ಅಪ್ರಾಪ್ತರಾದ ಕಾರಣ ಅವರನ್ನು ಸರ್ಕಾರಿ ವೀಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.





