ಅಗ್ರಾ: ಪತ್ನಿಯ ಕಿರುಕುಳದಿಂದ ಬೇಸತ್ತು ಟಿಸಿಎಸ್ (TCS) ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಗ್ರಾ ಜಿಲ್ಲೆಯಲ್ಲಿ ನಡೆದಿದೆ. ಮಾನವ್ ಶರ್ಮಾ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ಸಾವಿನ ಮೊದಲು ಏಳು ನಿಮಿಷಗಳ ಭಾವನಾತ್ಮಕ ವೀಡಿಯೊ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.
ಪತ್ನಿಯ ಕಿರುಕುಳದಿಂದ ತಾಳ್ಮೆ ಕಳೆದುಕೊಂಡು ಆತ್ಮಹತ್ಯೆ
ಪೊಲೀಸರ ಪ್ರಕಾರ, ಶರ್ಮಾ ಟಿಸಿಎಸ್‌ನಲ್ಲಿ ನೇಮಕಾತಿ ವ್ಯವಸ್ಥಾಪಕರಾಗಿ (Recruitment Manager) ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಈ ಘಟನೆಯ ಬಗ್ಗೆ ಸಿಎಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ ಮತ್ತು ತಮ್ಮ ಮಗನಿಗೆ ನ್ಯಾಯ ಸಿಗಬೇಕೆಂದು ಮನವಿ ಮಾಡಿದ್ದಾರೆ.
ಭಾವನಾತ್ಮಕ ವೀಡಿಯೊ: “ಪುರುಷರ ಬಗ್ಗೆ ಯೋಚಿಸಿ”
ಶರ್ಮಾ ತಮ್ಮ ವೀಡಿಯೊದಲ್ಲಿ ಪುರುಷರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. “ಪುರುಷರ ಬಗ್ಗೆ ಯೋಚಿಸಿ ಮತ್ತು ಮಾತನಾಡಿ” ಎಂದು ಅವರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ನಿರ್ಧಾರಕ್ಕಾಗಿ ಪೋಷಕರಲ್ಲಿ ಕ್ಷಮೆಯಾಚಿಸುತ್ತ, “ಅಪ್ಪ ಕ್ಷಮಿಸಿ, ಅಮ್ಮಾ ಕ್ಷಮಿಸಿ… ನಾನು ಸತ್ತ ನಂತರ ಎಲ್ಲವೂ ಸುಧಾರಿಸುತ್ತದೆ. ದಯವಿಟ್ಟು ನನ್ನನ್ನು ಹೋಗಲು ಬಿಡಿ…” ಎಂದು ಹೇಳಿದ್ದಾನೆ.