• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ರಾಜಸ್ಥಾನದಲ್ಲಿ ರೈಲ್ವೆ ಹಳಿ ಮೇಲೆ ಭಾರಿ ಸ್ಫೋಟ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 4, 2026 - 11:00 am
in ದೇಶ
0 0
0
Untitled Design 2026 11 04T105659.712

ಜೈಪುರ: ರಾಜಸ್ಥಾನದಲ್ಲಿ ರೈಲ್ವೆ ಹಳಿಯ ಮೇಲೆ ಭಾರಿ ಸ್ಫೋಟ ಸಂಭವಿಸಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಶ್ರೀ ಗಂಗಾನಗರ ಜಿಲ್ಲೆಯ ಅನೂಪ್‌ಗಢ್ ಮತ್ತು ಸೂರತ್‌ಗಢ್ ನಡುವಿನ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದೆ.

ಸ್ಫೋಟದ ತೀವ್ರತೆಗೆ ರೈಲ್ವೆ ಹಳಿಯ ಕೆಳಭಾಗದಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದ್ದು, ಕಾಂಕ್ರೀಟ್ ಪಿಲ್ಲರ್‌ಗಳು ಹಾಗೂ ರೈಲ್ವೆ ಸ್ಲೀಪರ್‌ಗಳು ಹಾನಿಗೊಳಗಾಗಿವೆ. ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

RelatedPosts

ಮುರಸು ಚಂಡಮಾರುತಕ್ಕೆ ಆಂಧ್ರದಲ್ಲಿ ಇಬ್ಬರು ಬಲಿ: ಶಾಲಾ-ಕಾಲೇಜುಗಳಿಗೆ ರಜೆ

ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!

ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ

ಕಾಂಗ್ರೆಸ್ ರ‍್ಯಾಲಿಯಿಂದ ದೆಹಲಿ ವ್ಯಾಪಾರಿಗಳಿಗೆ ₹11 ಸಾವಿರ ಕೋಟಿ ನಷ್ಟ: ಬಿಜೆಪಿ ಕಾರಣ ಎಂದ ರಾಹುಲ್ ಗಾಂಧಿ

ADVERTISEMENT
ADVERTISEMENT
ರೈಲ್ವೆ ಹಳಿ ಮೇಲೆ ಸ್ಫೋಟ: ಹಳಿಗಳಿಗೆ ಭಾರಿ ಹಾನಿ

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಅನೂಪ್‌ಗಢ್-ಸೂರತ್‌ಗಢ್ ರೈಲು ಮಾರ್ಗದ ’50 ಜಿಬಿ’ ಪಾಯಿಂಟ್ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ರೈಲ್ವೆ ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್ ಪಿಲ್ಲರ್‌ಗಳು ಹಾಗೂ ಹಲವು ರೈಲ್ವೆ ಸ್ಲೀಪರ್‌ಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲದೆ, ಹಳಿಯ ಕೆಳಭಾಗದಲ್ಲಿ ದೊಡ್ಡ ಪ್ರಮಾಣದ ಗುಂಡಿ ನಿರ್ಮಾಣವಾಗಿದೆ.

ಸ್ಫೋಟದ ಸದ್ದು ಸುಮಾರು 200 ಮೀಟರ್ ದೂರದವರೆಗೂ ಕೇಳಿಬಂದಿದೆ. ಜನವಸತಿ ಪ್ರದೇಶದಿಂದ ದೂರದಲ್ಲಿರುವ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 

ರೈಲು ಹಾದುಹೋದ 45 ನಿಮಿಷಗಳ ಬಳಿಕ ಸ್ಫೋಟ

ಈ ಘಟನೆಯಲ್ಲಿ ಅಚ್ಚರಿಯ ಸಂಗತಿಯೆಂದರೆ, ಸ್ಫೋಟ ಸಂಭವಿಸುವುದಕ್ಕೂ ಕೆಲವೇ ನಿಮಿಷಗಳ ಮೊದಲು ರೈಲೊಂದು ಅದೇ ಮಾರ್ಗದಲ್ಲಿ ಸಂಚರಿಸಿತ್ತು. ರಾತ್ರಿ ಸುಮಾರು 9 ಗಂಟೆಗೆ ಅನೂಪ್‌ಗಢ್‌ನಿಂದ ಸೂರತ್‌ಗಢ್ ಕಡೆಗೆ ತೆರಳುತ್ತಿದ್ದ ರೈಲು ಈ ಮಾರ್ಗವನ್ನು ದಾಟಿತ್ತು. ರೈಲು ಹಾದುಹೋದ ಸುಮಾರು 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ.

ಒಂದು ವೇಳೆ ರೈಲು ಸಂಚರಿಸುವ ಸಮಯದಲ್ಲೇ ಸ್ಫೋಟ ಸಂಭವಿಸಿದ್ದರೆ ಭಾರಿ ಪ್ರಮಾಣದ ಜೀವಹಾನಿ ಹಾಗೂ ಆಸ್ತಿ ನಷ್ಟ ಉಂಟಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್, ರೈಲು ಹಾದುಹೋದ ಬಳಿಕ ಸ್ಫೋಟ ಸಂಭವಿಸಿದ್ದರಿಂದ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದಂತಾಗಿದೆ.

ಸ್ಥಳಕ್ಕೆ ATS, CID ಹಾಗೂ ಭದ್ರತಾ ಪಡೆಗಳ ದೌಡು

ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆ ರಾಜಸ್ಥಾನದ ಭದ್ರತಾ ಮತ್ತು ತನಿಖಾ ಸಂಸ್ಥೆಗಳು ತಕ್ಷಣ, ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಶ್ವಾನದಳ ಹಾಗೂ ರೈಲ್ವೆ ಅಧಿಕಾರಿಗಳ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಇದರ ಜೊತೆಗೆ ವಿವಿಧ ಭದ್ರತಾ ಸಂಸ್ಥೆಗಳ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು? ರೈಲ್ವೆ ಹಳಿಯನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಸ್ಫೋಟ ನಡೆಸಲಾಗಿದೆಯೇ? ಇದರ ಹಿಂದೆ ಯಾರಾದರೂ ಕಿಡಿಗೇಡಿಗಳ ಕೈವಾಡವಿದೆಯೇ? ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ಆರಂಭಿಸಿದ್ದಾರೆ. ಸ್ಫೋಟದ ಸ್ವರೂಪ, ಬಳಸಿರುವ ಸ್ಫೋಟಕ ವಸ್ತು ಹಾಗೂ ಘಟನೆಯ ಹಿಂದಿರುವ ಉದ್ದೇಶದ ಬಗ್ಗೆ ತನಿಖಾ ತಂಡಗಳು ಮಾಹಿತಿ ಸಂಗ್ರಹಿಸುತ್ತಿವೆ.

ಅನೂಪ್‌ಗಢ್-ಸೂರತ್‌ಗಢ್ ರೈಲು ಸಂಚಾರ ಸ್ಥಗಿತ

ಘಟನೆಯ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು ತಕ್ಷಣ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅನೂಪ್‌ಗಢ್ ಮತ್ತು ಸೂರತ್‌ಗಢ್ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹಳಿಗಳ ಸುರಕ್ಷತೆಯನ್ನು ಪರಿಶೀಲಿಸುವ ಕಾರ್ಯ ಕೈಗೊಳ್ಳಲಾಗಿದೆ.

ಸ್ಫೋಟದಿಂದ ಹಾನಿಗೊಳಗಾದ ರೈಲ್ವೆ ಹಳಿಗಳು, ಕಾಂಕ್ರೀಟ್ ಪಿಲ್ಲರ್‌ಗಳು ಹಾಗೂ ಸ್ಲೀಪರ್‌ಗಳ ದುರಸ್ತಿ ಮತ್ತು ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ತನಿಖಾ ವರದಿ ಹಾಗೂ ತಾಂತ್ರಿಕ ಪರಿಶೀಲನೆಯ ಬಳಿಕವಷ್ಟೇ ರೈಲು ಸಂಚಾರ ಪುನರಾರಂಭಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ ಪ್ರಮೋದಾ ದೇವಿ ಸ್ಪಷ್ಟನೆ

ಮೈಸೂರು ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ: ಪ್ರಮೋದಾ ದೇವಿ ಸ್ಪಷ್ಟನೆ

by ಶಾಲಿನಿ ಕೆ. ಡಿ
November 4, 2026 - 1:43 pm
0

Untitled Design 2026 11 04T132207.771

ಸಂಬಂಧಗಳನ್ನು ಮರೆಯುತ್ತಿರುವ ಯಾಂತ್ರಿಕ ಬದುಕು: ‘ಐಡೆಂಟಿಟಿ ಕಾರ್ಡ್’ ಹಿಂದಿನ ಕಹಿ ಸತ್ಯ

by ಶಾಲಿನಿ ಕೆ. ಡಿ
November 4, 2026 - 1:24 pm
0

Untitled Design 2026 11 04T131022.022

ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ಬೆಲೆ ಏರಿಕೆ, ಇಲ್ಲಿದೆ ಇಂದಿನ ದರಪಟ್ಟಿ

by ಶಾಲಿನಿ ಕೆ. ಡಿ
November 4, 2026 - 1:12 pm
0

BMTC, KSRTC ಟಿಕೆಟ್ ದರ 9 ರೂ. ಹೆಚ್ಚಳ

ಪ್ರಯಾಣಿಕರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಏರಿಕೆ, ಇಂದು ಮಧ್ಯರಾತ್ರಿಯಿಂದಲೇ ಜಾರಿ

by ಶಾಲಿನಿ ಕೆ. ಡಿ
November 4, 2026 - 12:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 04T111344.407
    ಮುರಸು ಚಂಡಮಾರುತಕ್ಕೆ ಆಂಧ್ರದಲ್ಲಿ ಇಬ್ಬರು ಬಲಿ: ಶಾಲಾ-ಕಾಲೇಜುಗಳಿಗೆ ರಜೆ
    November 4, 2026 | 0
  • Your paragraph text 2026 11 03T174250.217
    ಭಾರತದ ಮೊಟ್ಟಮೊದಲ ‘ಸ್ವದೇಶಿ’ ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!
    November 3, 2026 | 0
  • Untitled Design 2026 11 02T183849.135
    ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ
    November 2, 2026 | 0
  • Untitled design 2026 11 02T164938.624
    ಕಾಂಗ್ರೆಸ್ ರ‍್ಯಾಲಿಯಿಂದ ದೆಹಲಿ ವ್ಯಾಪಾರಿಗಳಿಗೆ ₹11 ಸಾವಿರ ಕೋಟಿ ನಷ್ಟ: ಬಿಜೆಪಿ ಕಾರಣ ಎಂದ ರಾಹುಲ್ ಗಾಂಧಿ
    November 2, 2026 | 0
  • Untitled Design 2026 11 02T122648.908
    ಬರಿಗೈಯಲ್ಲೇ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ: ವಿಡಿಯೋ ವೈರಲ್
    November 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version