ಯಾದಗಿರಿ: ಕುಟುಂಬದಲ್ಲಿ ಸಂಘರ್ಷದ ಜೊತೆಗೆ ಪತ್ನಿಯ ಮೇಲಿನ ಅನುಮಾನಕ್ಕೆ ತಂದೆ ತನ್ನದೇ ಹೆತ್ತ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಂದ ದುರಂತ ಘಟನೆಯ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಮಲಗಿರುವ ಮಕ್ಕಳ ಮೇಲೆ ಕ್ರೌರ್ಯ ಮೆರೆದ ಈ ರಾಕ್ಷಸನಂತಹ ತಂದೆಯ ಕಾರ್ಯವು ಮಾನವತೆಯ ಕತ್ತರಿಸುವಂತಿದೆ. ಪೊಲೀಸ್ ತಂಡವು ತಕ್ಷಣ ಕಾರ್ಯಾಚರಣೆಗಿಳಿದು ಆರೋಪಿಯನ್ನು ಬಂಧಿಸಲು ತೊಡಗಿದ್ದು, ಈ ಘಟನೆಯ ಹಿನ್ನೆಲೆಯನ್ನು ತೀವ್ರವಾಗಿ ತನಿಖೆ ಮಾಡುತ್ತಿದೆ.
ಘಟನೆಯ ವಿವರಗಳು:
ಆರೋಪಿಯಾದ ಶರಣಪ್ಪ ತನ್ನ ಪತ್ನಿ ಜಯಮ್ಮನ ಮೇಲೆ ಅನುಮಾನ ಹೊಂದಿರುತ್ತಿದ್ದ. ಕಳೆದ ಕೆಲವು ದಿನಗಳಿಂದ ಗಂಡ-ಹೆಂಡತಿಯ ನಡುವೆ ಗಂಭೀರ ಸಂಘರ್ಷಗಳು ನಡೆಯುತ್ತಿದ್ದವು. ಈ ಸಂಘರ್ಷದಿಂದಾಗಿ ಜಯಮ್ಮ ತನ್ನ ತವರು ಮನೆಗೆ ಹೋಗಿದ್ದಳು. ಕಳೆದ ಹದಿನೈದು ದಿನಗಳ ಹಿಂದಷ್ಟೇ ಶರಣಪ್ಪ ತನ್ನ ಪತ್ನಿಯನ್ನು ಮನೆಗೆ ಕರೆತಂದಿದ್ದ. ಆದರೆ ಮತ್ತೆ ಇಬ್ಬರ ನಡುವೆ ಜಗಳ ಉಂಟಾಗುತ್ತು. ನಿನ್ನೆ (ಸೆ. 24, 2025) ಶರಣಪ್ಪ ತನ್ನ ಮಗಳು ಸಾನ್ವಿಯನ್ನು (5 ವರ್ಷ) ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ.ನಿನ್ನೆ ಪತ್ನಿ ಇಲ್ಲದಿರುವುದನ್ನ ಕಂಡು ಶರಣಪ್ಪ, ಕೋಪದಲ್ಲಿ ಕೊಡಲಿಯನ್ನು ತೆಗೆದುಕೊಂಡು ಮಲಗಿರುವ ಮಕ್ಕಳ ಮೇಲೆ ದಾಳಿ ಮಾಡಿದ. 5 ವರ್ಷದ ಮಗಳು ಸಾನ್ವಿ ಮತ್ತು 3 ವರ್ಷದ ಮಗ ಭರತ್ ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಮಗ (ವಯಸ್ಸು ಸುಮಾರು 2-3 ವರ್ಷಗಳು) ಗಂಭೀರವಾಗಿ ಗಾಯಗೊಂಡು ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ವೈದ್ಯರ ಪ್ರಕಾರ, ಅವನ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ತನಿಖೆ:
ಘಟನೆಯ ಬಗ್ಗೆ ತಿಳಿದು ಯಾದಗಿರಿ ಡಿವೈಎಸ್ಪಿ ಸುರೇಶ್ ನಾಯಕ್ ಮತ್ತು ಪಿಎಸ್‌ಐ ಹಣಮಂತ ಬಂಕಲಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.ಘಟನೆಯು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಆರೋಪಿ ಶರಣಪ್ಪ ಮಕ್ಕಳನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ.ಸ್ಥಳದಲ್ಲಿ ರಕ್ತದ ಕಲೆಗಳು, ಕೊಡಲಿ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಫೋರೆನ್ಸಿಕ್ ತಂಡವು ತಲುಪುತ್ತದೆ.
ಪೊಲೀಸ್ ಹೇಳಿಕೆ:
ಘಟನೆ ಬಗ್ಗೆ ಡಿವೈಎಸ್ಪಿ ಸುರೇಶ್ ನಾಯಕ್ ಮಾತನಾಡಿ ,ಈ ಘಟನೆಯನ್ನು ತೀವ್ರತೆಯೊಂದಿಗೆ ತನಿಖೆ ಮಾಡುತ್ತಿದ್ದೇವೆ. ಆರೋಪಿಯನ್ನು ಶೀಘ್ರ ಬಂಧಿಸುತ್ತೇವೆ. ಕುಟುಂಬ ಸಂಘರ್ಷಗಳು ಇಂತಹ ದುರಂತಗಳಿಗೆ ಕಾರಣವಾಗಬಾರದಂತೆ ಸಲಹೆ ನೀಡುತ್ತೇವೆ.