ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸೊಂಟದ ವಿಷಯ ಬ್ಯಾಡವೋ ಶಿಷ್ಯ.. ಹೀಗಂತ ಕಿಚ್ಚ ಸುದೀಪ್ ಜಮಾನದಲ್ಲೇ ಹೇಳಿದ್ದಾರೆ. ಸಿನಿಮಾ ಹಾಡಿಗೆ ಬರೆದ ಈ ಲಿರಿಕ್ಸ್, ಇವತ್ತು ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಮ್ಯಾಚ್ ಆಗ್ತಿದೆ ಅಂದ್ರೆ ಅತಿಶಯೋಕ್ತಿ ಅಲ್ಲ. ಯಾಕಂದ್ರೆ ಸದ್ಯ ಬಾಲಿವುಡ್‌ನಲ್ಲಿ ನಟಿಯರ ಸೊಂಟವೇ ಹಾಟ್ ಟಾಪಿಕ್. ಸ್ಲಿಮ್ ಸೊಂಟ ಬೇಕು ಅಂತ ತಮ್ಮ ದೇಹದಲ್ಲಿರೋ ರಿಬ್ಸ್ ಸರ್ಜರಿ ಮಾಡಿಸಿಕೊಳ್ತಿದ್ದಾರೆ.
ಬಿಟೌನ್ ಸುಂದರಿ ದಿಶಾ ಪಟಾನಿ ಸೌಂದರ್ಯ ಅಂದ್ರೆ ಕಣ್ಣಿಗೆ ಬಿದ್ದ ತಕ್ಷಣವೇ ಹಾರ್ಟ್ ಬೀಟ್ ಸ್ವಲ್ಪ ಜಾಸ್ತಿಯಾಗುತ್ತೆ. ಫೈಯರ್‌ನಂತೆ ಹಾಟ್ ಕರ್ವ್ಸ್, ಮೆರುಗುಗೊಳ್ಳುವ ಸ್ಕಿನ್, ಕಾನ್ಫಿಡೆಂಟ್ ಬಾಡಿ ಲ್ಯಾಂಗ್ವೇಜ್ ಇವೆಲ್ಲಾ ಸೇರಿ ದಿಶಾ ಗ್ಲಾಮರ್‌ನ ಡೆಫಿನಿಷನ್ ಆಗಿ ಮಾಡಿವೆ. ಪಡ್ಡೆ ಹುಡುಗರ ಮನಸ್ಸನ್ನು ಲಾಕ್ ಮಾಡುವ ಪ್ರೆಸೆನ್ಸ್ ದಿಶಾ ಮೈಮಾಟದಲ್ಲಿದೆ. ಯೆಸ್.. ಬಾಲಿವುಡ್ ಗ್ಲಾಮ್ ಕ್ವೀನ್ ದಿಶಾ ಪಟಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಿನಿಮಾ ಅಲ್ಲ ರಿಬ್ಸ್ ಸರ್ಜರಿ ಎಂಬ ಹಾಟ್ ವದಂತಿ. ಹೌದು.. ಏರ್‌ಪೋರ್ಟ್ ಲುಕ್, ಬೀಚ್ ಲುಕ್‌ಗಳಲ್ಲಿ ದಿಶಾ ಕಾಣಿಸಿಕೊಂಡ ಬಳಿಕ ಅವರ ಸೊಂಟ ಇನ್ನಷ್ಟು ಸ್ಲಿಮ್ ಆಗಿ ಕಾಣುತ್ತಿದೆ ಎಂಬ ಕಾರಣಕ್ಕೆ, ದಿಶಾ ರಿಬ್ಸ್ ಸರ್ಜರಿ ಮಾಡಿಸಿಕೊಂಡ್ರಾ ಅನ್ನೋ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.
ಬಿಟೌನ್ ದಿಶಾ ಸೊಂಟದ ವಿಷ್ಯ ಗೊತ್ತಾದ್ರೆ ಶಾಕ್ ಆಗ್ತೀರಾ
OMG..! ಸೌಂದರ್ಯಕ್ಕಾಗಿ ದೇಹದಿಂದ ತೆಗೆಸಿದ್ದೆಷ್ಟು ರಿಬ್ಸ್ ?
ಗ್ಲಾಮರ್ ಇಂಡಸ್ಟ್ರಿಯಲ್ಲಿ ಸ್ಲಿಮ್ ವೇಸ್ಟ್, ಅವರ್ ಗ್ಲಾಸ್ ಫಿಗರ್ ದೊಡ್ಡ ಟ್ರೆಂಡ್ ಆಗಿದೆ. ಕ್ಯಾಮೆರಾ ಮುಂದೆ ತಳಕು ಬಳುಕಿನಂತೆ ಕಾಣಲು, ಡಿಸೈನರ್ ಔಟ್‌ಫಿಟ್‌ಗಳಿಗೆ ಫಿಟ್ ಆಗಲು, ಕೆಲವು ನಟಿಮಣಿಯರು ಕಾಸ್ಮೆಟಿಕ್ ಸರ್ಜರಿಗಳ ಮೊರೆ ಹೋಗುತ್ತಾರೆ ಅನ್ನೋದು ಇಂಡಸ್ಟ್ರಿಯ ನಗ್ನಸತ್ಯ. ಸದ್ಯ ಈ ಲಿಸ್ಟ್ ನಲ್ಲಿ ದಿಶಾ ಹೆಸರು ಕೇಳಿಬರ್ತಿದೆ.
ಬಾಲಿವುಡ್ ವಲಯದಲ್ಲಿ ಹರಿದಾಡುವ ವದಂತಿಗಳ ಪ್ರಕಾರ, ಕೆಲ ನಟಿಯರು 2 ರಿಂದ 4 ರಿಬ್ಸ್ ರಿಮೂವಲ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಹಾಗೆ ಅವಶ್ಯಕತೆ ಬಂದ್ರೆ 11ನೇ ಮತ್ತು 12ನೇ ಫ್ಲೋಟಿಂಗ್ ರಿಬ್ಸ್ ರಿಮೂವಲ್ ಮಾಡಿಸ್ತಾರೆ. ಹೀಗೆ ಮಾಡಿದ್ರೆ ಸೊಂಟದ ಲೈನ್ ಸಣ್ಣದಾಗಿ ಕಾಣುತ್ತೆ ಅನ್ನೋದು ಗ್ಲಾಮರ್ ಇಂಡಸ್ಟ್ರಿಯ ಗುಟ್ಟು. ಆದರೆ ದಿಶಾ ಈ ಬಗ್ಗೆ ಎಲ್ಲೂ ಪ್ರತಿಕ್ರಿಯಿಸಿಲ್ಲ. ಹಾಗಾಗಿ ಇದು ಕೇವಲ ಸೋಶಿಯಲ್ ಮೀಡಿಯಾ ಸ್ಪೆಕ್ಯುಲೇಶನ್ ಎಂದು ಕೆಲವರು ಹೇಳುತ್ತಾರೆ.
ಆದರೆ ದಿಶಾ ಪಟಾನಿ ವಿಷಯಕ್ಕೆ ಬಂದ್ರೆ ಅವರು ಫಿಟ್ನೆಸ್ ಫ್ರೀಕ್ ಅನ್ನೋದು ಎಲ್ಲರಿಗೂ ಗೊತ್ತು. ದಿನಕ್ಕೆ ಗಂಟೆಗಟ್ಟಲೆ ಹೈ ಇಂಟೆನ್ಸಿಟಿ ಜಿಮ್ ವರ್ಕೌಟ್, ಕಾರ್ಡಿಯೋ, ಯೋಗ, ಸ್ಟ್ರೆಚಿಂಗ್ ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ದಿಶಾ ಶೇರ್ ಮಾಡೋ ವರ್ಕೌಟ್ ವಿಡಿಯೋಗಳೇ ಸಾಕು ಅವರ ಫಿಗರ್ ಹಾರ್ಡ್ ವರ್ಕ್‌ನ ಫಲ ಅನ್ನೋದಕ್ಕೆ. ಜೊತೆಗೆ ದಿಶಾ ಬೀಚ್ ಲವರ್ ಕೂಡ ಹೌದು. ಸ್ವಿಮ್ಮಿಂಗ್, ಸನ್ ಬಾತ್, ವಾಟರ್ ಆ್ಯಕ್ಟಿವಿಟೀಸ್ ಅವರ ಲೈಫ್ ಸ್ಟೈಲ್‌ನ ಒಂದು ಪಾರ್ಟ್ ಆಗಿದೆ.
11 & 12ನೇ ಫ್ಲೋಟಿಂಗ್ ರಿಬ್ಸ್ ಸರ್ಜರಿ ಮಾಡಿಸಿರೋ ಬ್ಯೂಟಿ
2 to 4 ರಿಬ್ಸ್ ರಿಮೂವ್ ಆದ್ರೆ ಅವರ್-ಗ್ಲಾಸ್ ಫಿಗರ್ ಫಿಕ್ಸ್..!
ಬಿಕಿನಿ ಲುಕ್ ಆಗಿರಲಿ, ಗ್ಲಾಮರಸ್ ಔಟ್‌ಫಿಟ್ ಆಗಿರಲಿ, ದಿಶಾ ಕಾಣಿಸಿಕೊಂಡ ಕ್ಷಣದಿಂದಲೇ ಸ್ಕ್ರೀನ್ ಟೆಂಪರೇಚರ್ ಏರಿಸಿಬಿಡ್ತಾರೆ. ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುವ ದಿಶಾ, ಬಿಕಿನಿ ಲುಕ್, ಬೀಚ್ ಫೋಟೋಶೂಟ್‌ಗಳಿಂದಲೇ ಸ್ಪೆಷಲ್ ಫ್ಯಾನ್ ಬೇಸ್ ಕಟ್ಟಿಕೊಂಡಿದ್ದಾರೆ. ಹೀಗಾಗಿ ಅವರ ಫಿಟ್ ಬಾಡಿ ನೋಡಿ ಸರ್ಜರಿ ವದಂತಿಗಳು ಹುಟ್ಟೋದು ಹೊಸದೇನಲ್ಲ.
ರಿಬ್ಸ್ ರಿಮೂವಲ್ ಬಹಳ ದುಬಾರಿ ಕಾಸ್ಮೆಟಿಕ್ ಪ್ರೊಸೀಜರ್. ಇದಕ್ಕೆ ಲಾಂಗ್ ರಿಕವರಿ ಪಿರಿಯೆಡ್ ಬೇಕಾಗುತ್ತದೆ. ಕೆಲವೊಮ್ಮೆ ವಾರಗಳಲ್ಲ, ತಿಂಗಳುಗಳ ಕಾಲ ವಿಶ್ರಾಂತಿ ಅಗತ್ಯವಿರುತ್ತೆ. ಗ್ಲಾಮರ್ ಇಂಡಸ್ಟ್ರಿಯಲ್ಲಿ ಇವತ್ತು ಸ್ಕ್ರೀನ್ ಮೇಲೆ ಫಿಗರ್ ಕೂಡ ಒಂದು ಬ್ರ್ಯಾಂಡ್ ಆಗಿದೆ. ಹೀಗಾಗಿ ಕೆಲ ನಟಿಯರು ಡಯೆಟ್ ಮತ್ತು ವರ್ಕೌಟ್ ಸಾಲಲ್ಲ ಅನ್ನಿಸಿದ್ರೆ, ಕಾಸ್ಮೆಟಿಕ್ ಸರ್ಜರಿ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದು ಇಂಡಸ್ಟ್ರಿಯ ಒಳಗಿನ ಸತ್ಯ.
ಇನ್ನೂ ದಿಶಾ ಪಟಾನಿ ನಟ ಟೈಗರ್ ಶ್ರಾಫ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ರು. ಆದ್ರೀಗ ಇತ್ತೀಚೆಗೆ ಅವರ ಇಬ್ಬರ ನಡುವೆ ಇದ್ದಂತಹ ಪ್ರೀತಿ-ಪ್ರೇಮಕ್ಕೆ ಫುಲ್‌ಸ್ಟಾಪ್ ಬಿದ್ದಿದೆ. ಅದೇನಾಯ್ತೋ ಏನೋ ಲವ್ ಬ್ರೇಕಪ್ ಮಾಡಿಕೊಂಡಿದ್ದಾರೆ. ಆದ್ರೂ ಕೂಡ ದಿಶಾ ಹವಾ ಕಮ್ಮಿ ಆಗಿಲ್ಲ. ಈಗ ಮೋಸ್ಟ್ ಎಲಿಜಿಬಲ್ ಬಿಟೌನ್ ಬಾಲೆಯಾಗಿ ಸದ್ದು ಮಾಡ್ತಿದ್ದಾರೆ. ಐಪಿಎಲ್ ಓಪನಿಂಗ್‌ನಿಂದ ಹಿಡಿದು, ಸಿನಿಮಾಗಳ ಸ್ಪೆಷಲ್ ಸಾಂಗ್ಸ್‌ನಿಂದ ಹಿಡಿದು ಲೀಡ್ ನಟಿಯಾಗಿಯೂ ಸಿಕ್ಕಾಪಟ್ಟೆ ಬ್ಯುಸಿ ಈ ಚೆಲುವೆ.





