• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಜಾಗತಿಕ ಶಾಂತಿ, ಆರೋಗ್ಯ-ಸೌಹಾರ್ದತೆ ಕಾಪಾಡಲು ಮುಂದಾದ ರೋಟರಿ ಸಂಸ್ಥೆ

admin by admin
March 18, 2025 - 6:48 pm
in Flash News, ಕರ್ನಾಟಕ
0 0
0
Befunky collage 2025 03 18t142623.263

ರೋಟರಿ ಇಂಟರ್‌ ನ್ಯಾಷನಲ್‌, ರೋಟರಿ ಡಿಸ್ಟ್ರಿಕ್‌ 3192 ಆಯೋಜಿಸುತ್ತಿರುವ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನದ ಕುರಿತಾದ ಸಮಗ್ರ ಮಾಹಿತಿ ನೀಡಲಾಗುತ್ತಿದೆ.ಜಾಗತಿಕ ಶಾಂತಿ, ಜಾಗತಿಕ ಆರೋಗ್ಯ ಮತ್ತು ಜಾಗತಿಕ ಸಮುದಾಯಗಳ ನಡುವೆ ಸೌಹಾರ್ಧತೆ ಮೂಡಿಸುವ ಉದಾತ್ತ ಉದ್ದೇಶದಿಂದ ರೋಟರಿ ಇಂಟರ್‌ ನ್ಯಾಷನಲ್‌ ಸಂಸ್ಥೆ ರೋಟರಿ ಜಿಲ್ಲೆ 3192 ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ ಆಯೋಜಿಸಿದೆ ಎಂದು ರೋಟರಿ ಇಂಟರ್‌ ನ್ಯಾಷನಲ್‌ ಜಿಲ್ಲಾ ಗವರ್ನರ್‌ ಮಹದೇವ್‌ ಪ್ರಸಾದ್‌ ಹೇಳಿದರು. ನಗರದ ಪ್ರೆಸ್‌ ಕ್ಲಬ್‌ ನ ಮಾಧ್ಯಮ ಗೋಷ್ಟಿಯನ್ನು ಉದ್ದೇಶಿಸಿ ಅವರು ಶಾಂತಿ ಸಮ್ಮೇಳನದ ವಿವರಗಳನ್ನು ಹಂಚಿಕೊಂಡಿದರು.
ಈ ಶಾಂತಿ ಸಮ್ಮೇಳನವನ್ನು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ತಾವರಚಂದ್‌ ಗೆಹ್ಲೋಟ್‌ ಅವರು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಶ್ರೀ ಹೆಚ್‌.ಡಿ ಕುಮಾರಸ್ವಾಮಿಯವರು, ರಾಜ್ಯದ ಗೃಹಸಚಿವರಾದ ಶ್ರೀ ಡಾ. ಜಿ ಪರಮೇಶ್ವರ್‌, ಆರೋಗ್ಯ ಸಚಿವರಾದ ಶ್ರೀ ದಿನೇಶ್‌ ಗುಂಡೂರಾವ್‌, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಶ್ರೀ ಈಶ್ವರ್‌ ಖಂಡ್ರೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ ಉಪಸ್ಥಿತರಿರಲಿದ್ದಾರೆ. ಶಾಂತಿ ಸಮ್ಮೇಳನದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಜಿ ಮತ್ತು ಆರ್ಟ್‌ ಆಫ್‌ ಲೀವಿಂಗ್‌ ರವಿಶಂಕರ್‌ ಗುರೂಜಿಯವರ ದಿವ್ಯ ಸಾನಿಧ್ಯವೂ ಇರಲಿದೆ ಎಂದರು.

ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ಸಂಯೋಜಕ ಪದ್ಮಶ್ರೀ ರಿಕ್ಕಿ ಕೇಜ್‌ ಈ ಶಾಂತಿ ಸಮ್ಮೇಳನದ ರಾಯಭಾರಿಯಾಗಿದ್ದು, ನೇಪಾಳದಿಂದ ಸಂದೀಪ್‌ ರಾಜ್‌ ಪಾಂಡೆ, ಶ್ರೀಲಂಕಾದ ಸರತ್‌ ಕೋಟಗಾಮ, ನಮ್ಮ ರಾಜ್ಯದಿಂದ ಖ್ಯಾತ ಕೃಷಿ ವಿಜ್ಞಾನಿ ಡಾ. ಕೆ.ಎನ್‌ ಗಣೇಶಯ್ಯ ಮತ್ತು ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಸೇರಿದಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು.
ಭಾರತ ಸೇರಿದಂತೆ ಸುಮಾರು 8 ದೇಶಗಳ ವಿವಿದ ಕ್ಷೇತ್ರಗಳ 2000ಕ್ಕೂ ಅಧಿಕ ಉತ್ಸಾಹಿಗಳು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ನೊಂದಾವಣೆ ಮಾಡಿಕೊಂಡಿದ್ದು, ನೇಪಾಳ, ಭೂತಾನ್‌, ಮಾಲ್ಡೀವ್ಸ್‌, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ, ಟರ್ಕಿ ದೇಶಗಳ ಪ್ರತಿನಿಧಿಗಳು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು. ಜಗತ್ತು ಮೂರನೆಯ ಮಹಾಯುದ್ದದ ಭೀತಿಯಲ್ಲಿದೆ, ಗಾಜಾ ಪಟ್ಟಿಯಲ್ಲಿ ಮತ್ತು ಉಕ್ರೇನ್‌ ನಲ್ಲಿ ನಿರಂತರ ಯುದ್ಧಗಳಿಂದ ಜನಸಮುದಾಯ ತತ್ತರಿಸಿದೆ, ನೆರೆಯ ಬಾಂಗ್ಲಾದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಜಾಗತಿಕ ಶಾಂತಿಯನ್ನು ರೋಟರಿ ಸಂಸ್ಥೆ ಸಮರ್ಥಿಸುತ್ತದೆ, ಜೊತೆಗೆ ಕೋವಿಡ್‌ ನಂತ ಮಾರಣಾಂತಿಕ ಮಹಾಮಾರಿ ರೋಗಗಳು ಮತ್ತೆ ಬರದಂತೆ ತಡೆಗಟ್ಟುವುದು ಹಾಗೂ ಗಡಿಯ ಸಮಸ್ಯೆಗಳನ್ನು ಸಂಘರ್ಷಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದನ್ನು ರೋಟರಿ ಬಯಸುತ್ತದೆ ಎಂದರು.
ಈ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನದ ಮುಖ್ಯ ಮೂರು ಆಯಾಮಗಳೆಂದರೆ ಆರೋಗ್ಯದ ಮೂಲಕ ಶಾಂತಿ, ಪರಿಸರ ಸಂರಕ್ಷಣೆಯ ಮೂಲಕ ಶಾಂತಿ ಮತ್ತು ಸಮಾಜ-ಸಮುದಾಯದ ಕಲ್ಯಾಣ. ಆರೋಗ್ಯಕರ ಜಗತ್ತು ಮತ್ತು ಹಸಿರು ನಾಳೆಗಳು ಎನ್ನುವುದು ಈ ಸಮ್ಮೇಳನದ ಧ್ಯೇಯವಾಕ್ಯ ಎಂದು ಅವರು ಮಾಹಿತಿ ನೀಡಿದರು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ನೇಪಾಳ, ಶ್ರೀಲಂಕಾ, ಭೂತಾನ್‌ ದೇಶಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಗಳಿಗೆ ಈ ಶಾಂತಿ ಸಮ್ಮೇಳನ ವೇದಿಕೆ ಒದಗಿಸಿಕೊಡಲಿದೆ ಎಂದರು.
ಎಡಗೈನಲ್ಲಿ ಮಾಡಿದ ಕೆಲಸವನ್ನು ಬಲಗೈಗೆ ಗೊತ್ತಾಗದಂತೆ ರೋಟರಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ರೋಟರಿ ಸಂಸ್ಥೆಯಿಂದ ಈವರೆಗೆ ಸುಮಾರು 12,000ಕ್ಕೂ ಅಧಿಕ ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಲಾಗಿದೆ, ರೋಟರಿ ಮತ್ತು ಟಿಟಿಕೆ ಬ್ಲಡ್‌ ಬ್ಯಾಂಕ್‌ ಸಹಯೋಗದಲ್ಲಿ ಬೆಂಗಳೂರಿನ ರಕ್ತದ ಅವಶ್ಯಕತೆಯ ಮೂರನೆಯ ಎರಡು ಭಾಗದಷ್ಟು ಪೂರೈಸಲಾಗುತ್ತದೆ. ಈವರೆಗೆ ರೋಟರಿ ಇಂಟರ್‌ ನ್ಯಾಷನಲ್‌ ಸಂಸ್ಥೆ ಜಗತ್ತಿನ 201 ರಾಷ್ಟ್ರಗಳಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಪೋಲಿಯೋ ನಿರ್ಮೂಲನೆಗಾಗಿಯೇ ರೋಟರಿ ಸಂಸ್ಥೆ ಸುಮಾರು 50 ಮಿಲಿಯನ್‌ ಡಾಲರ್‌ ವ್ಯಯಿಸುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ದಕ್ಷಿಣ ಏಷ್ಯಾ ಅಂತರಾಷ್ಟ್ರೀಯ ಶಾಂತಿ ಸಮ್ಮೇಳನ ಸಮಿತಿಯ ಚೇರ್ಮನ್‌ ಶಂಕರ್‌ ಶ್ರೀನಿವಾಸ್‌, ಜಿಲ್ಲಾ ಕಾರ್ಯದರ್ಶಿಗಳಾದ ರಂಗಸ್ವಾಮಿ, ನಿಂರಂಜನ್‌, ರಾಜಾರಾಮ್‌, ಮೀಡಿಯಾ ಕೋಆರ್ಡಿನೇಟರ್‌ ಝರೀರ್‌ ಭಾತಾ ಹಾಗೂ ರೋಟರಿ ಸಂಸ್ಥೆಯ ವಾಸನ್‌, ಅಬಾ ಸಕ್ಸೇನಾ, ಕ್ಯಾಪ್ಟನ್‌ ಹೆಗಡೆ ಮುಂತಾದವರು ಉಪಸ್ಥಿತರಿದ್ದಾರೆ.

RelatedPosts

ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ, ಬಿಜೆಪಿ-ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು JDS ಸೇರ್ಪಡೆ

ಕ್ಲಬ್‌ಗಳಿಗೆ ಆಹಾರ ಇಲಾಖೆ ಶಾಕ್: ಮುಂದಿನ ವಾರ ಹೋಟೆಲ್ ಮಾಲೀಕರ ಜೊತೆ ಯು.ಟಿ. ಖಾದರ್ ಸಭೆ

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಮಲೆನಾಡಿನ ರೈತರಿಗೆ ಮಧು ಬಂಗಾರಪ್ಪ ಅಭಯ!

ನಾಗೇಂದ್ರ ರಾಜೀನಾಮೆ ಕೊಟ್ಟರೂ ಬಿಜೆಪಿ ಪಾದಯಾತ್ರೆ ನಿಲ್ಲಲ್ಲ: ವಿಜಯೇಂದ್ರ ಖಡಕ್‌ ಮಾತು!

ADVERTISEMENT
ADVERTISEMENT
ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (43)

‘ಖೇಲೋ ಇಂಡಿಯಾ ಸಂವಾದ’: ನಾಳೆ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತು-ಕತೆ

by ಕವಿತಾ
August 26, 2026 - 7:47 pm
0

Untitled design (42)

ತುಂಗಾ ನಾಲೆಯಲ್ಲಿ ಈಜಲು ಹೋದ 15ವರ್ಷದ ಬಾಲಕ ನೀರುಪಾಲು!

by ಕವಿತಾ
August 26, 2026 - 7:17 pm
0

Untitled design (40)

ನೇಪಾಳ ಪ್ರವಾಹಕ್ಕೆ ಮೋದಿ ಸಂತಾಪ: ದೂರವಾಣಿ ಮೂಲಕ ಬಾಲೆನ್ ಶಾ ಜೊತೆ ಮಾತುಕತೆ

by ಕವಿತಾ
August 26, 2026 - 7:02 pm
0

Untitled design (38)

ನೇಪಾಳದಲ್ಲಿ ಜಲಪ್ರಳಯ: 400ಕ್ಕೂ ಹೆಚ್ಚು ಮಂದಿ ನಾಪತ್ತೆ

by ಕವಿತಾ
August 26, 2026 - 6:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 26T143832.929
    ನೇಪಾಳದಲ್ಲಿ ಭೀಕರ ಜಲಪ್ರಳಯ: 8 ಮಂದಿ ಸಾ*ವು, ಕೊಚ್ಚಿಹೋದ ವಾಹನಗಳು
    August 26, 2026 | 0
  • Untitled design 2026 08 26T140414.957
    ತರಕಾರಿಗಳಿಗೆ ಕೆಮಿಕಲ್‌ ಸ್ಪ್ರೇ ಆರೋಪ: ಪರಿಶೀಲನೆ ಬಳಿಕ ಕ್ರಮ ಎಂದ ಯು.ಟಿ. ಖಾದರ್
    August 26, 2026 | 0
  • ನಿರ್ಬಂಧ! (2)
    ಅಗ್ನಿಶಾಮಕ ವಾಹನದಿಂದ ಬಿಜೆಪಿ ಶಾಸಕರ ಕಾರು ಕ್ಲೀನ್: ವಿಡಿಯೋ ವೈರಲ್
    August 26, 2026 | 0
  • ನಿರ್ಬಂಧ! (1)
    ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಪತ್ರ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್
    August 26, 2026 | 0
  • ನಿರ್ಬಂಧ!
    ಇರಾನ್ ತೈಲ ವಹಿವಾಟಿಗೆ ಅಮೆರಿಕ ಬ್ರೇಕ್: 4 ಭಾರತೀಯ ಕಂಪನಿಗಳು, 3 ಭಾರತೀಯರ ಮೇಲೆ ನಿರ್ಬಂಧ!
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version