ಆತನ ಪತ್ನಿಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿತ್ತು. ಅನೈತಿಕ ಸಂಬಂಧ ಶಂಕೆ ಮೇಲೆ ಪತ್ನಿಗೆ ಸಾಕಷ್ಟು ಬಾರಿ ಬುದ್ದಿಮಾತು ಹೇಳಿದ್ರು. ಆದರೆ ಹೆಂಡತಿ ಮಾತ್ರ ಗಂಡನ ಮಾತು ಕೇಳದೆ ತವರು ಮನೆ ಸೇರಿದ್ದಳು. ಹೋದ್ರೆ ಹೋಗಲಿ ಅಂತಾ ಸುಮ್ಮನೆ ತನ್ನಷ್ಟಕ್ಕೆ ತಾನಿದ್ದ ವ್ಯಕ್ತಿಗೆ ಪತ್ನಿಯ ಪ್ರಿಯಕರ ಕಿರುಕುಳ ನೀಡಲಾರಂಭಿಸಿದ್ದನು. ಪತ್ನಿ ಪ್ರಿಯಕರನ ಕಿರುಕುಳ ಹಾಗೂ ಬ್ಲಾಕ್‌ಮೇಲ್‌ಗೆ ಬೇಸತ್ತ ಯುವಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ನ್ಯಾಯ ಕೊಡಿಸಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ..
ಪತ್ನಿ, ಪತ್ನಿಯ ಪ್ರಿಯಕರನ ಕಿರುಕುಳದಿಂದ ಯುವಕನೊಬ್ಬ ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ, ಪತ್ನಿ ತಾಯಿ ಹಾಗೂ ಪತ್ನಿ ಪ್ರಿಯಕರನ ಕಿರುಕುಳದಿಂದ ಬೇಸತ್ತು ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೀದರ್‌ನ ಹುಲಸೂರು ಪಟ್ಟಣದ ನಿವಾಸಿ 32 ವಯಸ್ಸಿನ ಪಾಂಡುರಂಗ ಮಧುಕರ್ ಕುಶೋಬಾ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ತಮ್ಮನಿಗೆ ಕಳುಹಿಸಿದ್ದ. ವಿಡಿಯೋದಲ್ಲಿ ಪತ್ನಿ ಪ್ರಿಯಕರ ಯುನೂಸ್, ಪತ್ನಿ ಮಂಗಲಾ ಹಾಗೂ ಪತ್ನಿಯ ತಾಯಿ ಸಾವಿತ್ರಿಬಾಯಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ನನ್ನ ಸಾವಿಗೆ ಯುನೂಸ್, ನನ್ನ ಪತ್ನಿ ಮತ್ತು ಅವಳ ತಾಯಿಯೇ ನೇರ ಹೊಣೆ ಎಂದು ಆರೋಪಿಸಿದ್ದು, ಪತ್ನಿ ಪ್ರಿಯಕರನ ಕಿರುಕುಳ ಹೆಚ್ಚಾಗಿದ್ದು. ಸಾವಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ.
ಇನ್ನು ಆರೋಪಿ ಯುನೂಸ್ ಮೃತ ಪಾಂಡುರಂಗ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ. ಆಕೆಯ ಜೊತೆ ಎಲ್ಲವನ್ನೂ ಮುಗಿಸಿದ್ದಾನೆ ಎಂದು ಹೇಳಿದ್ದಷ್ಟೇ ಅಲ್ಲದೇ, ಸಹೋದರಿಯ ಪೋಟೋ ಇದೆ ಎಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ನನ್ನ ಸಾವಿಗೆ ನನ್ನ ಪತ್ನಿ ಮಂಗಲಾ, ಅತ್ತೆ ಸಾಬಿತ್ರಿಬಾಯಿ ಹಾಗೂ ಪತ್ನಿ ಪ್ರಿಯಕರ ಯುನೂಸ್ ಹೆಡೆ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಹುಲಸೂರು ಠಾಣೆಯಲ್ಲಿ ಮೃತನ ತಾಯಿ ದೂರು ದಾಖಲಿಸಿದ್ದು, ಮೃತನ ಹೆಂಡತಿ ಮಂಗಲಾ ಜೊತೆ ಆರೋಪಿ ಯುನೂಸ್ ಅನೈತಿಕ ಸಂಬಂಧ ಹೊಂದಿದ್ದು, ರಾಜೀ ಪಂಚಾಯತಿಯೂ ನಡೆದಿತ್ತು. ಆದ್ರೆ, ಪತ್ನಿ ಮಂಗಲಾ ಹಳೆ ಚಾಳಿ ಮುಂದುವರೆಸಿದ್ದಳು. ಜೊತೆಗೆ ತವರು ಮನೆಯನ್ನೂ ಸೇರಿದ್ದಳು. ತವರು ಮನೆ ಸೇರಿದ ಬಳಿಕ ಕುಪಿತಗೊಂಡಿದ್ದ ಆರೋಪಿ ಯುನೂಸ್ ಮೃತ ಪಾಂಡುರಂಗನಿಗೆ ಸಾಯುವಂತೆ ಪ್ರೇರೆಪಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಇಷ್ಟು ಸಾಲದು ಅಂತಾ ಆರೋಪಿ ಯುನೂಸ್ ನಿನ್ನ ಹೆಂಡತಿಯೊಂದಿಗೆ ಸಂಬಂಧ ಹೊಂದಿದ್ದು ಏನ್ ಮಾಡಿಕೊಳ್ತಿಯೋ ಮಾಡಿಕೋ ಅಂತಾ ಜನರ ಮುಂದೆಯೇ ಅವಾಜ್ ಹಾಕಿದ್ದನಂತೆ. ಇದನ್ನ ಮೃತ ಪಾಂಡುರಂಗ ತಾಯಿ ಎದುರಿಗೆ ಹೇಳಿಕೊಂಡಿದ್ದನಂತೆ. ಈ ಬಗ್ಗೆ ಮೃತನ ತಾಯಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಿನಲ್ಲಿ ಪತಿಯೇ ಪರದೈವ ಅಂತಾ ಜೀವನ ನಡೆಸಬೇಕಿದ್ದ ಪತ್ನಿ ಅನೈತಿಕ ಸಂಬಂಧಕ್ಕೆ ಬಲಿಯಾಗಿ ಗಂಡನ ಜೊತೆ ಬಾಳ್ವೆ ನಡೆಸದೇ ತವರು ಮನೆ ಸೇರಿದ್ದಳು. ಪತ್ನಿ ಹೋದ್ರೆ ಹೊಗಲಿ ಅಂತಾ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಪತ್ನಿ ಹಾಗೂ ಪತ್ನಿ ಪ್ರಿಯಕರ ನೀಡಿದ ಕಿರುಕುಳಕ್ಕೆ ಬಲಿಯಾಗಿದ್ದು ದುರಂತವೇ ಸರಿ…
ಶಿವಯ್ಯ ಮಠಪತಿ, ಗ್ಯಾರಂಟಿ ನ್ಯೂಸ್, ಬೀದರ್