ನೆಲಮಂಗಲ: ನಿವೃತ್ತ ಡಿವೈಎಸ್ಪಿ ಪುತ್ರಿಗೆ ಅವರ ಪತಿ ಹಾಗೂ ಮಾವನಿಂದ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಘಟನೆ ನೆಲಮಂಗಲ ತಾಲ್ಲೂಕಿನ ತಿಮ್ಮಪ್ಪನಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಗೋವಿಂದರಾಜ್ ಅವರ ಪುತ್ರಿ ಅನಿತಾ, ತಮ್ಮ ಪತಿ ಮತ್ತು ಮಾವ-ಅತ್ತೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಅನಿತಾ ಹಾಗೂ ಡಾ. ಗೋವರ್ಧನರ ಮದುವೆ 2023ರ ನವೆಂಬರ್ 2ರಂದು ಅದ್ದೂರಿಯಾಗಿ ನೆರವೇರಿತ್ತು. ಮಗಳ ಮದುವೆಗಾಗಿ ಗೋವಿಂದರಾಜ್ ಲಕ್ಷಾಂತರ ರೂ. ವೆಚ್ಚ ಮಾಡಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ನೀಡಿದ್ದರು. ಆದರೆ ಮದುವೆಯಾದ ಕೇವಲ 15ನೇ ದಿನದಲ್ಲೇ ಕಿರುಕುಳ ನೀಡಿದ್ದಾರೆಂದು ಅನಿತಾ ಆರೋಪಿಸಿದ್ದಾರೆ.
ವಿವಾಹದ ಕೆಲವೇ ದಿನಗಳಲ್ಲೇ ಪತಿ ಗೋವರ್ಧನ, ಸರ್ಕಾರಿ ಸೇವೆಯಲ್ಲಿದ್ದ ವೈದ್ಯ ವೃತ್ತಿ ಬಿಟ್ಟು ನರ್ಸಿಂಗ್ ಹೋಂ ತೆರೆಯುವುದಾಗಿ ಹೇಳಿದ್ದ. ಇದಕ್ಕಾಗಿ ಅನಿತಾ ತಂದೆಯಿಂದ ಆಸ್ತಿ ತಮ್ಮ ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಪತಿಯ ಮಾವ ಪ್ರೋ. ನಾಗರಾಜು ಕೂಡ ಅನಿತಾಗೆ ಮಾನಸಿಕ ಒತ್ತಡ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಮದುವೆಯಾಗಿ ಹಲವು ವರ್ಷವಾದರೂ ದಂಪತಿಗೆ ಮಕ್ಕಳು ಆಗದಿರುವ ಹಿನ್ನೆಲೆಯಲ್ಲಿ, ಮಾವ ಅನಿತಾಗೆ ದೂರವಾಣಿ ಕರೆಮಾಡಿ, “ನನ್ನ ಮಗ ನಿಂಗೆ ಲೈಂಗಿಕ ಕ್ರಿಯೆ ನಡೆಸಿದ್ದಾನಾ ಇಲ್ವಾ? ಇಲ್ಲಂದ್ರೆ ನಾನೇ ಬರುವೆ ”
ಎಂದು ಅಸಭ್ಯವಾಗಿ ಮಾತನಾಡಿದ್ದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಮಾವ ಮನೆಗೆ ಬಂದಾಗ ಸೊಸೆಯೊಂದಿಗೆ ಸರಿಯಾಗಿ ವರ್ತಿಸದೆ, ಅಸಭ್ಯವಾಗಿ ನಡೆದುಕೊಳ್ಳುತ್ತಾನೆಂದು ಮತ್ತೊಂದು ಆರೋಪ ಮಾಡಿದ್ದು, “ಈಗಿನ ಕಾಲದ ಹುಡುಗಿಯರಂತೆ ತುಂಡು ಬಟ್ಟೆ ಧರಿಸಬೇಕು ಎಂದು ಹೇಳಿದ್ದನಂತೆ” ಎಂದು ಅನಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಅತ್ತೆ–ಗಂಡನಿಗೆ ಹೇಳಿದರೂ, “ಒಂದೇ ಕುಟುಂಬದವರು… ಇರೋದೆ ಹೀಗೆ, ಹೇಗೋ ಸಹಿಸಿಕೊಂಡು ಹೋಗು” ಎಂದು ಬೈದಿದ್ದರು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಕಿರುಕುಳಗಳಿಂದ ನೊಂದ ಅನಿತಾ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪತಿ ಡಾ.ಗೋವರ್ಧನ ಮತ್ತು ಮಾವ
ಪ್ರೋ ನಾಗರಾಜ್,ಮತ್ತು ಅತ್ತೆಯ ವಿರುದ್ಧ BNS ಕಾನೂನುಗಳ ಸೆಕ್ಷನ್ 84, 74, 75, 352BNS 3 & 4 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ನೆಲಮಂಗಲ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ





