• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, June 15, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತ, ಬೆಂಗಳೂರು ಜಾಗತಿಕವಾಗಿ ಬೆಳೆಯಲು ಕೊಡುಗೆ ನೀಡಿದವರು ಮನಮೋಹನ್ ಸಿಂಗ್: ಡಿ.ಕೆ ಶಿವಕುಮಾರ್

ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಶಾಶ್ವತ ಯೋಜನೆಗೆ ಚಿಂತನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 3, 2025 - 4:11 pm
in Flash News, ಕರ್ನಾಟಕ
0 0
0
Gಜಹಕಜಹಲಜಕ

ಬೆಂಗಳೂರು: “ದೂರದೃಷ್ಟಿಯ ನಾಯಕ, ಆರ್ಥಿಕ ನೀತಿಗಳ ಮೂಲಕ ಜನಸಾಮಾನ್ಯರ ಹಾಗೂ ದೇಶ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ಕೊಡುಗೆ ನೀಡಿದ ವ್ಯಕ್ತಿ ಮನಮೋಹನ್ ಸಿಂಗ್ ಅವರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ವಿಧಾನಸಭೆ ಬಜೆಟ್ ಅಧಿವೇಶನದ ಮೊದಲನೇ ದಿನದ ಸಂತಾಪ ಸೂಚನೆ ವೇಳೆ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.

RelatedPosts

ಕರ್ನಾಟಕದಲ್ಲಿ ಭಾರೀ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಒಳನಾಡಿನಲ್ಲೂ ಮಳೆ ಜೋರು!

ಕರ್ನಾಟಕದಲ್ಲಿ ಸೈಕ್ಲೋನ್ ಆರ್ಭಟ: 9 ಜಿಲ್ಲೆಗಳಿಗೆ ರೆಡ್ ಅಲರ್ಟ್, ಶಾಲೆ-ಕಾಲೇಜು ರಜೆ!

ರಾಜ್ಯದಲ್ಲಿ ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸಂಪೂರ್ಣ ಬಂದ್: ಹೈಕೋರ್ಟ್ ಆದೇಶ

ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನ..!

ADVERTISEMENT
ADVERTISEMENT

“ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ವಿಮಾನ ನಿಲ್ದಾಣ, ಕೋಲಾರ ಕಡೆಯ ಮೇಲ್ಸೆತುವೆಗೆ ಅನುದಾನ ನೀಡಿದರು. ನರ್ಮ್ ಯೋಜನೆ ಮುಖಾಂತರ ಬೆಂಗಳೂರಿನ ಅಭಿವೃದಿಗೆ ಸಾಕಷ್ಟು ಅನುದಾನ ನೀಡಿದರು. ಬೆಂಗಳೂರಿನ ಬಗ್ಗೆ ಅಪಾರವಾದ ವಿಶ್ವಾಸವನ್ನು ಹೊಂದಿದ್ದವರು ಡಾ.ಸಿಂಗ್. ಹೃದಯಶ್ರೀಮಂತಿಕೆಯಿಂದ ಹಣದ ಸಹಾಯ ಮಾಡಿದ್ದಾರೆ. ಇಲ್ಲಿ ಆದಾಯವೂ ಸಹ ಅದೇ ರೀತಿ ಮರಳಿ ಬರುತ್ತಿತ್ತು. ಈಗ ಐಟಿ- ಬಿಟಿ ರಫ್ತು ಮೂಲಕ ಶೇ.39 ರಷ್ಟು ಆದಾಯ ದೇಶಕ್ಕೆ ಬೆಂಗಳೂರಿನಿಂದ ಬರುತ್ತಿದೆ. ಇಂತಹ ದೂರದೃಷ್ಟಿಯಿಂದ ಸಿಂಗ್ ಅವರು ಬೆಂಗಳೂರಿನ ಅಭಿವೃದ್ದಿಗೆ ಕೊಡುಗೆ ನೀಡಿದ್ದರು” ಎಂದರು.

“ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಯೋಜನೆ ಮಾಡುವ ಕುರಿತು ಈ ಹಿಂದೆ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚೆ ನಡೆಸಿದ್ದೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವ ಆಲೋಚನೆಯಿದೆ. ಇದಕ್ಕೆ ಯಾವ ರೀತಿ ಹೆಸರನ್ನು ಇಡಬೇಕು ಎಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಾಗುವುದು” ಎಂದು ಹೇಳಿದರು.

“ಯುಪಿಎ ಅವಧಿಯಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು, ಜನರ ಬದುಕು, ಕಲ್ಯಾಣಕ್ಕೆ ತೆಗೆದುಕೊಂಡಿರುವ ತೀರ್ಮಾನಗಳನ್ನು ನಾವುಗಳು ಮರೆಯಬಾರದು. ರಾಷ್ಟ್ರ್ರೀಕೃತ ಬ್ಯಾಂಕ್ ಗಳಲ್ಲಿ ಇದ್ದ ಸುಮಾರು 70 ಸಾವಿರ ಕೋಟಿಗೂ ಹೆಚ್ಚಿನ ರೈತರ ಸಾಲವನ್ನು ಮನ್ನಾ ಮಾಡಿದ್ದರು. ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಆಹಾರ ಭದ್ರತಾ ಕಾಯ್ದೆ ಎನ್ನುವ ಅತ್ಯುತ್ತಮ ಯೋಜನೆ ತಂದವರು. ನರೇಗಾ ಮೂಲಕ ಪ್ರತಿ ಪಂಚಾಯಿತಿಯು 3-4 ಕೋಟಿಯಷ್ಟು ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟವರು. ಇದಕ್ಕೂ ಹಿಂದೆ ಒಂದು ಪಂಚಾಯಿತಿಗೆ 1 ಲಕ್ಷ ಅನುದಾನವೂ ಸಿಗುತ್ತಿರಲಿಲ್ಲ. ಜೆ.ಎಚ್.ಪಟೇಲರ ಕಾಲದಲ್ಲಿ ರೂ.5 ಲಕ್ಷ ಅನುದಾನ ಬರುತ್ತಿತು. ಜೊತೆಗೆ ನರೇಗಾ ಮೂಲಕ ರೈತನು ತನ್ನ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿ ಹಣ ಪಡೆಯುವ ಯೋಜನೆ ನರೇಗಾದಲ್ಲಿದೆ” ಎಂದು ಹೇಳಿದರು.

“ಅರಣ್ಯ ಭೂಮಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಕಾನೂನುಗಳನ್ನು ತಂದರು. ಭೂಮಿ ಕಳೆದುಕೊಂಡ ಜನರಿಗೆ ದುಪ್ಪಟ್ಟು ಪರಿಹಾರ ಯೋಜನೆ, 15 ಕಿಮೀ ವ್ಯಾಪ್ತಿಯಿದ್ದರೆ ಮೂರುಪಟ್ಟು, ಗ್ರಾಮೀಣ ಭಾಗದಲ್ಲಿ 4 ಪಟ್ಟು ಪರಿಹಾರ ನೀಡುವ ಯೋಜನೆ ಜಾರಿಗೆ ತಂದರು. ಇದರಿಂದ ಅನೇಕರಿಗೆ ಉಪಯೋಗವಾಗಿದೆ. ಸರ್ಕಾರದಲ್ಲಿ ಕುಳಿತಿರುವ ನಮಗೆ ಈ ಹಣ ಹೊರೆ ಎಂದು ಅನ್ನಿಸಬಹುದು. ರಾಜ್ಯಪಾಲರ ಭಾಷಣದ ವೇಳೆ ಭೂಸ್ವಾಧಿನಕ್ಕೆ ಸುಮಾರು ರೂ. 20 ಸಾವಿರ ಕೋಟಿ ಹಣ ನೀಡಬೇಕು ಎಂದು ಹೇಳಿದರು. ಈ ಕಾಯ್ದೆ ಬರುವ ಮೊದಲು ರೂ. 3-4 ಸಾವಿರ ಕೋಟಿಗೆ ಮುಗಿಯುತಿತ್ತು. ಆದರೆ ಇದರಿಂದ ಭೂಮಿ ಕಳೆದುಕೊಂಡ ರೈತರಿಗೆ ಅನುಕೂಲವಾಗಿದೆ. ಇದು ಮನಮೋಹನ್ ಸಿಂಗ್ ಅವರು ದೂರದೃಷ್ಟಿ” ಎಂದು ತಿಳಿಸಿದರು.

ಸಿಎಸ್ ಆರ್ ಸದ್ಬಳಕೆಗೆ ನಾಂದಿ ಹಾಡಿದವರು ಡಾ.ಸಿಂಗ್

“ನಮ್ಮ ರಾಜ್ಯವೊಂದರಲ್ಲಿಯೇ ರೂ. 8,100 ಕೋಟಿ ಸಿಎಸ್ ಆರ್ ಹಣ ಸಂಗ್ರಹವಾಗುತ್ತಿದೆ. ಈ ಸಿಎಸ್ ಆರ್ ಯೋಜನೆ ಪರಿಚಯಿಸಿದವರು ಮನಮೋಹನ್ ಸಿಂಗ್ ಅವರು. ಅಂದು ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದರು. ಆಗ ಕಾರ್ಪೋರೇಟ್ ವಲಯದವರು ಶೇ. 2 ರಷ್ಟು ಹಣವನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಡಬೇಕು ಎಂದು ಈ ಯೋಜನೆ ಜಾರಿಗೆ ತಂದರು” ಎಂದರು.

“ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ವಿಚಾರವಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದೆ. ಇದರ ಮೂಲಕ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಬೇಕು ಎಂದು ಮುಂದಾಗಿದ್ದೇವೆ. ಈಗಾಗಲೇ ಮೊದಲನೇ ಹಂತದಲ್ಲಿ 500 ಶಾಲೆಗಳ ನಿರ್ಮಾಣಕ್ಕೆ ಹೆಜ್ಜೆಯಿಟ್ಟಿದ್ದೇವೆ. ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣ ಗುರಿ ನಮ್ಮ ಮುಂದಿದೆ. ಒಂದು ಕ್ಷೇತ್ರಕ್ಕೆ ಕನಿಷ್ಠ 5- 8 ಶಾಲೆಗಳು ನಿರ್ಮಾಣವಾಗುವ ಅವಕಾಶವಿದೆ. ಪ್ರತಿ ಶಾಲೆಗೆ ಕನಿಷ್ಠ ರೂ.7- 10 ಕೋಟಿ ಹಣವನ್ನು ವಿನಿಯೋಗಿಸಲಾಗುವುದು. ಜನರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹಾಗೂ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕೆಲ್ಲಾ ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಸಿಎಸ್ ಆರ್ ಯೋಜನೆ ಕಾರಣ” ಎಂದರು.

ಶಾಂತಿಯಿಂದಿರಿ ಎಂದು ಕಿವಿ ಮಾತು ಹೇಳಿದ್ದ ಸಿಂಗ್ ಅವರು

“ಸಮ್ಮಿಶ್ರ ಸರ್ಕಾರದಲ್ಲಿ ನನ್ನನ್ನು ಮಂತ್ರಿ ಮಾಡಿರಲಿಲ್ಲ. ದೇವೇಗೌಡರು, ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅವರು ಸಂಪುಟದಲ್ಲಿ ಇರಬಾರದು ಎಂದು ಹೇಳಿದ್ದ ಕಾರಣಕ್ಕೆ ನನ್ನನ್ನು ಹೊರಗಿಟ್ಟಿದ್ದರು. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಈ ಮಧ್ಯೆ ಮನಮೋಹನ್ ಸಿಂಗ್ ಅವರು ಬೆಂಗಳೂರಿಗೆ ಬಂದರು. ಆಗ ಬೆಂಗಳೂರು ವಿವಿಯ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಶ್ರೀಕಂಠಯ್ಯ, ಚಂದ್ರೇಗೌಡರು ಹಾಗೂ ನಾನು ನಿಂತಿದ್ದೆವು. ಆಗ ನನ್ನ ಕೈ ಹಿಡಿದು ಕರೆದುಕೊಂಡು ಹೋದ ಸಿಂಗ್ ಅವರು, ʼನನಗೆ ಸಂದೇಶವಿದೆ ನಿಮ್ಮ ಬಳಿ ಮಾತನಾಡಬೇಕುʼ ಎಂದರು. ನಂತರ ʼನೀವು ಸ್ವಲ್ಪ ತಾಳ್ಮೆಯಿಂದ ಇರಬೇಕು. ಈ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಇಡೀ ಪ್ರಪಂಚ ಬೆಂಗಳೂರು ಮೂಲಕ ದೇಶವನ್ನು ನೋಡುತ್ತಿದೆ. ನಾವೆಲ್ಲರೂ ಭಾರತವನ್ನು ಪ್ರತಿನಿಧಿಸುತ್ತಾ ಇದ್ಧೇವೆ. ನಾವು ಏನು ಬೇಕಾದರೂ ಬೆಂಗಳೂರಿಗೆ ಸಹಾಯ ಮಾಡಲು ತಯಾರಿದ್ದೇವೆ. ಈ ಸಮ್ಮಿಶ್ರ ಸರ್ಕಾರ ಬಹಳ ಶಾಂತಿಯಿಂದ ನಡೆಯಬೇಕುʼ ಎಂದು ನನಗೆ ಕಿವಿ ಮಾತು ಹೇಳಿದರು” ಎಂದು ಹಳೆಯ ಘಟನೆ ಮೆಲುಕು ಹಾಕಿದರು.

“ಮನುಷ್ಯನ ಜೀವ ಶಾಶ್ವತವಲ್ಲ. 60- 100 ವರ್ಷಗಳ ನಡುವಿನಲ್ಲಿ ಕೆಲವರು ನಾವುಗಳು ಸಹ ಯಾವಾಗ ಬೇಕಾದರೂ ಮರಣ ಹೊಂದಬಹುದು. ಮನಮೋಹನ್ ಸಿಂಗ್ ಅವರು ತಮ್ಮ ಜೀವಿತಾವಧಿಯಲ್ಲಿ ದೊಡ್ಡ ಸಾಧನೆ ಮಾಡಿ ತೆರಳಿದ್ದಾರೆ. 6 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಜನಾರ್ಧನ ಪೂಜಾರಿ ಅವರು ವಿತ್ತ ಮಂತ್ರಿಗಳಾಗಿದ್ದ ಸಮಯದಲ್ಲಿ ಇವರು ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಧಾನಿಗಳಾಗಿದ್ದ ಸಮಯ, ನಂತರದ ದಿನಗಳಲ್ಲಿಯೂ ಅವರನ್ನು ಭೇಟಿ ಮಾಡಿದ್ದೇನೆ” ಎಂದರು.

“ಗಾಂಧಿ ಭಾರತ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣವಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರಿಗೆ ಹಾಗೂ ನಮಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮರಣ ಹೊಂದಿದ್ದಾರೆ ಎನ್ನುವ ಸುದ್ದಿ ಬಂದಿತು. ನಂತರ ಗಾಂಧಿ ಭಾರತ ಕಾರ್ಯಕ್ರಮದ ವೇದಿಕೆಯಲ್ಲಿಯೇ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು” ಎಂದು ಹೇಳಿದರು.

“ಮಾಜಿ ಸಂಸದರಾಗಿದ್ದ ಶ್ರೀನಿವಾಸಯ್ಯ ಅವರು ನನಗೆ ಆತ್ಮೀಯರಾಗಿದ್ದರು. ಅವರ ಜೊತೆ ನಾನು 4 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅನೇಕ ಸಮಿತಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ವಿಮಾನ ನಿಲ್ದಾಣ ಸಮಿತಿಯಲ್ಲಿದ್ದಾಗ ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಜಯವಾಣಿ ಮಂಚೇಗೌಡ ರು ಅವರನ್ನು ಇದೇ ಸಮಯದಲ್ಲಿ ನೆನೆಯುತ್ತೇನೆ. ಇವರು ಉಪಚುನಾವಣೆಗೆ ನಿಂತಾಗ ದೊಡ್ಡ ಹೋರಾಟವೇ ನಡೆಯಿತು. ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್, ಸಾಹಿತಿ ನಾ. ಡಿಸೋಜಾ ಅವರು, ಜನಪದ ಕಲಾವಿದೆ ಸುಕ್ರೀ ಬೊಮ್ಮಗೌಡ ಅವರಿಗೂ ಇದೇ ವೇಳೆ ಸಂತಾಪಗಳನ್ನು ಸೂಚಿಸುತ್ತೇನೆ. ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 06 15t134844.079

ಸೇಫ್ ಸೇಫ್ ಸೇಫ್..ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೇಫ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2025 - 1:57 pm
0

Web 2025 06 15t133356.174

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಪತ್ನಿ ಒದ್ದು ದೈಹಿಕ ಹಿಂಸೆ: ವಿಡಿಯೋ ವೈರಲ್

by ಶ್ರೀದೇವಿ ಬಿ. ವೈ
June 15, 2025 - 1:34 pm
0

Web 2025 06 15t130145.462

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್‌ನನ್ನು ಹಿಂದಿಕ್ಕಿದ ಸ್ಯಾಮ್ಸುಂಗ್ ಮತ್ತೆ ನಂ.1

by ಶ್ರೀದೇವಿ ಬಿ. ವೈ
June 15, 2025 - 1:11 pm
0

Web 2025 06 15t124920.445

ಕ್ವಾಟ್ಲೆಗಳ ಕಾಟದಲ್ಲಿ ಕುಕ್‌ಗಳ ಸವಾಲು: ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋ!

by ಶ್ರೀದೇವಿ ಬಿ. ವೈ
June 15, 2025 - 12:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Download 2025 06 12t225849.672
    ಕರ್ನಾಟಕದಲ್ಲಿ ಭಾರೀ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಉತ್ತರ ಒಳನಾಡಿನಲ್ಲೂ ಮಳೆ ಜೋರು!
    June 15, 2025 | 0
  • Web 2025 06 13t201206.090
    ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನ..!
    June 13, 2025 | 0
  • ಇಂದ್ರ ಬಿಸ್ವಾನ್ (2)
    ಕೆಲಸ ಮಾಡದ ಸಚಿವರಿಗೆ ಕೊಕ್ ಕೊಡಿ: ಶಾಸಕ ಬಸವರಾಜ್ ಶಿವಗಂಗಾ ಆಗ್ರಹ
    June 12, 2025 | 0
  • ಇಂದ್ರ ಬಿಸ್ವಾನ್
    ಗಂಡನ ಹತ್ಯೆಯ ಆರೋಪಿಯನ್ನು ಪತ್ತೆಹಚ್ಚಿದ ಪತ್ನಿ
    June 12, 2025 | 0
  • Untitled design 2025 06 12t111358.682
    ಹನಿಮೂನ್ ಕೇಸ್ ಬೆನ್ನಲ್ಲೇ ಮತ್ತೊಂದು ಹತ್ಯೆ: ಪತಿಯನ್ನೇ ಕೊಂದು ನದಿಗೆ ಎಸೆದ ಪತ್ನಿ
    June 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version