ಕರ್ನಾಟಕದ ರಾಜಕೀಯ ವಲಯದಲ್ಲಿ ಮತ್ತೊಂದು ಭಾರೀ ಸಂಚಲನ ಮೂಡಿಸಿದೆ. ಪಶುಸಂಗೋಪನಾ ಸಚಿವ ವೆಂಕಟೇಶ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಸಚಿವ ವೆಂಕಟೇಶ್ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ.
ಈ ಆಡಿಯೋದಲ್ಲಿ ಸಚಿವ ವೆಂಕಟೇಶ್, ಜೆಡಿಎಸ್ ನಾಯಕರಿಗೆ ಯಾವುದೇ ಟೆಂಡರ್, ಕಾಮಗಾರಿಗಳನ್ನು ನೀಡಬಾರದು ಎಂಬ ರೀತಿಯಲ್ಲಿ ಮಾತಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನೀನು ಜೆಡಿಎಸ್ ಪಕ್ಷದವನಾ? ಜೆಡಿಎಸ್ ನಾಯಕರಿಗೆ ಕೆಲಸ ಕೊಟ್ಟಿದಿಯಾ? ನಾನ್ ಮಗನೇ, ಇವತ್ತು ನಿನ್ನ ರಿಲೀವ್ ಮಾಡಿಸ್ತೀನಿ. ಲೋಫ** ನನ್ ಮಗನೇ, ಜೆಡಿಎಸ್‌ನವರಿಗೆ ಕೆಲಸ ಕೊಡ್ತಿಯಾ ಎಂದು ಪಿರಿಯಾಪಟ್ಟಣ ತಾಲೂಕು ಪಂಚಾಯ್ತಿ ಇಂಜಿನಿಯರ್ ರಾಘವೇಂದ್ರ ಅವರಿಗೆ ಧಮ್ಕಿ ಹಾಕಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. ಸರ್ಕಾರಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಆದೇಶಕ್ಕೆ ಮಾತ್ರ ಜೋಕು ನೀಡಬೇಕೆ? ಜೆಡಿಎಸ್ ನಾಯಕರಿಗೆ ಯಾವುದೇ ಸರ್ಕಾರಿ ಟೆಂಡರ್ ಸಿಗಬಾರದೇ? ಕಾಂಗ್ರೆಸ್‌ನವರಿಗೆ ಮಾತ್ರ ಟೆಂಡರ್ ಕೊಡಬೇಕೆಂದು ಸರ್ಕಾರದ ಆದೇಶ ಇದೆಯಾ? ಸಚಿವ ವೆಂಕಟೇಶ್ ಅವರದ್ದು ದ್ವೇಷ ರಾಜಕೀಯನಾ..? ಅಥವಾ ಮೈಸೂರಲ್ಲಿ ಜೆಡಿಎಸ್ ವಿರುದ್ಧ ದ್ವೇಷ ರಾಜಕೀಯ ಮಾಡ್ತಿದ್ದಾರಾ..? ಎಂಬ ಪ್ರಶ್ನೆ ಎದ್ದಿದೆ.
ಇದು ದ್ವೇಷ ರಾಜಕೀಯದ ಒಂದು ಉದಾಹರಣೆ ಎಂದು ಜೆಡಿಎಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆಡಿಯೋ ಸ್ಫೋಟ ರಾಜ್ಯದ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಇನ್ನೂ ಇದು ಗ್ಯಾರಂಟಿ ನ್ಯೂಸ್‌ನ ಬಿಗ್ ಎಕ್ಲೂಸಿವ್ ಸ್ಟೋರಿ ಆಗಿದೆ.