• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಮನಿ ಕೊಟ್ಟರೆ ಮನೆ, ಹೌಸಿಂಗ್‌ ಬೋರ್ಡ್‌ನ ಹೊಸ ಸ್ಲೋಗನ್: ಆರ್. ಅಶೋಕ್ ಲೇವಡಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 22, 2025 - 8:43 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಮಂಡ್ಯ
0 0
0
ಶಿವಪ್ಪ (2)

ಮಂಡ್ಯ: ಅನ್ನ ಕೊಡಿ ಅಂದರೆ ಕಂಡ ಕಂಡಲ್ಲಿ ಕನ್ನ ಹಾಕಲಾಗುತ್ತಿದೆ. ಹೌಸಿಂಗ್ ಬೋರ್ಡ್ ಕಮಿಷನ್ ಬೋರ್ಡ್ ಆಗಿದೆ. ಮನಿ ಕೊಟ್ಟರೆ ಮನೆ ಎಂಬುದು ಹೌಸಿಂಗ್ ಬೋರ್ಡ್ ನ ಹೊಸ ಸ್ಲೋಗನ್ ಆಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ನ ಕೊಡಿ ಅಂದ್ರೆ ಬಡವರ ಮನೆಗೆ ಕನ್ನ ಹಾಕಿದೆ . ಈ ಸರ್ಕಾರದಲ್ಲಿ ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್ ಆಗಿದೆ. ಮನಿ ಕೊಟ್ರೆ ಮನೆ ಎಂಬ ಹೊಸ ಸ್ಲೋಗನ್ ಬಿಟ್ಟಿದ್ದಾರೆ. ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿದೆ. ಬಡವರಿಗೆ ಮನೆ ನೀಡುವ ಬದಲು ಸೇಲ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RelatedPosts

2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

ಪಿಯುಸಿಯಲ್ಲಿ 600ಕ್ಕೆ 597 ಅಂಕ ಬಂದ್ರೂ ರೀ ವ್ಯಾಲ್ಯೂಯೇಷನ್‌ಗೆ ಹಾಕ್ತೇನೆ ಎಂದ ವಿದ್ಯಾರ್ಥಿ

ADVERTISEMENT
ADVERTISEMENT

ಅಬಕಾರಿ, ವಾಲ್ಮೀಕಿ ನಿಗಮದ ಬಳಿಕ ವಸತಿ ಇಲಾಖೆಯ ಭ್ರಷ್ಟಾಚಾರ ಬಯಲಿಗೆ ಬಂದಿದೆ. “ಮನೆಗಾಗಿ ಕಾಸು” ವಿಷಯ ಬಹಳ ಚರ್ಚಿತವಾಗುತ್ತಿದೆ. ಕಾಂಗ್ರೆಸ್‌ನವರೇ ಆದ ಶಾಸಕ ಬಿ.ಆರ್.ಪಾಟೀಲ್ ಅವರೇ ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ವೈರಲ್ ಆಗಿರುವ ಆಡಿಯೋದಲ್ಲಿನ ಮಾತುಗಳು ತಮ್ಮದೇ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಜತೆಗೆ, ಭ್ರಷ್ಟಾಚಾರದ ತನಿಖೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಇದರ ಸತ್ಯಾಸತ್ಯತೆ ಹೊರಬೀಳಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ವಸತಿ ಇಲಾಖೆಯು ಉಳ್ಳವರು, ಸಾಹುಕಾರರಿಗೆ ಸೈಟ್ ಹಂಚಲು ಇರುವುದಲ್ಲ. ಬದಲಿಗೆ ಬಡವರು, ಮನೆ ಇಲ್ಲದವರು, ನಿರಾಶ್ರಿತರಿಗೆ ಸೂರು ಕೊಡುವುದು ಹೌಸಿಂಗ್ ಬೋರ್ಡ್ ಕೆಲಸ. ಹಿಂದುಳಿದವರಿಗೆ ಮನೆ ಸಿಗಬೇಕು. ಆದರೆ, ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿವೆ. ಬಡವರಿಗೆ ಮನೆಗಳನ್ನು ಕೊಡುವ ಬದಲು ಮಾರಾಟ ಮಾಡಲಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ಟಿಪ್ಪು ವಂಶಜರಿಗೆ ಶೇ.15 ರಷ್ಟು ಮೀಸಲಾತಿ

ಬಳ್ಳಾರಿಯಲ್ಲಿ ಸಂಕಲ್ಪ ಸಮಾವೇಶ ಮಾಡಿದರು. ಆದರದು ಅಭಿವೃದ್ಧಿ ಸಂಕಲ್ಪ ಸಮಾವೇಶವಲ್ಲ. ಬಡವರನ್ನು ನಾಶ ಮಾಡುವ ಸಂಕಲ್ಪ ಸಮಾವೇಶವಾಗಿದೆ. ಮನೆ ಪಡೆಯಲು ಅರ್ಜಿ ಬೇಡ, ಮುಖ್ಯಮಂತ್ರಿ ಮರ್ಜಿ ಇದ್ದರಷ್ಟೇ ಸಾಕು. ಇದು ಶೇ.60ರಷ್ಟು ಕಮೀಷನ್ ಸರಕಾರ. ಬೇಕಿದ್ದರೆ ದಾಖಲೆಗಳನ್ನು ಕೊಡುತ್ತೇನೆ. ವಸತಿ ಇಲಾಖೆಯಲ್ಲೂ ಮುಸ್ಲಿಂರಿಗೆ ಶೇ.15 ರಷ್ಟು ಮೀಸಲು ತರಲಾಗಿದೆ. ಟಿಪ್ಪು ವಂಶಜರಿಗೆ ಶೇ.15 ರಷ್ಟು ಮೀಸಲಾತಿ. ನಮ್ಮವರಿಂದ ಶೇ. 60 ರಷ್ಟು ಕಮೀಷನ್. ಇದೇ ಸರಕಾರದ ಸಾಧನೆ ಎಂದು ಟೀಕಿಸಿದರು.

“ನಾನು ಬಾಯಿ ಬಿಟ್ಟರೆ ಈ ಸರಕಾರ 3 ದಿನ ಉಳಿಯೋದಿಲ್ಲ” ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ. ಸರಕಾರಕ್ಕೆ ಇದಕ್ಕಿಂತಲೂ ಛೀಮಾರಿ ಬೇಕೆ? ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವರಿಗೆ ಸರಕಾರ ನಡೆಸುವ ನೈತಿಕತೆ ಎಲ್ಲಿದೆ? ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ತಾಕತ್ತಿದ್ದರೆ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲವೇ ತಾವೇ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು. ನಮ್ಮ ಸರಕಾರದ ಬಗ್ಗೆ 40% ಕಮೀಷನ್ ಸರಕಾರ ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 3 ತಿಂಗಳಲ್ಲಿ ನಮ್ಮನ್ನೆಲ್ಲಾ ಜೈಲಿಗೆ ಹಾಕುತ್ತೇನೆ ಎಂದಿದ್ದರು. ಈಗ ಸರಕಾರ ಬಂದು 2 ವರ್ಷವಾಗಿದೆ. ಏನು ಮಾಡಿದ್ದಾರೆ? ಶೇ.60 ರಷ್ಟು ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಬಿಹಾರ ಚುನಾವಣೆಗಾಗಿ ಕರ್ನಾಟಕದಲ್ಲಿ ಕಲೆಕ್ಷನ್ ಮಾಡಲಾಗುತ್ತದೆ. ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಗ್ಯಾರಂಟಿಗಳಿಗೂ ಗ್ಯಾರಂಟಿ ಇಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ. 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ನಿಲುವಳಿ ಮಂಡಿಸಿ ಚರ್ಚಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.

ವಸತಿ ಯೋಜನೆ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರಕಾರ ಸಿಬಿಐ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಕರಾಗಿರದೆ ಬಾಯಿ ಬಿಟ್ಟು ಮಾತನಾಡಬೇಕು. ಮಾತೆತ್ತಿದರೆ ಮೋದಿ ವಿರುದ್ಧ ಮಾತನಾಡುವವರು ಈಗ ತಮ್ಮದೇ ಸರಕಾರದ ಹುಳುಕಿನ ಬಗ್ಗೆಯೂ ಮಾತನಾಡಲಿ ಎಂದು ಆಗ್ರಹಿಸಿದರು.

ಮಂಡ್ಯದ ಬೀಡಿ ಕಾರ್ಮಿಕರ ಕಾಲನಿಯಲ್ಲಿ ತಮಿಳುಕಾಲನಿ ನಿವಾಸಿಗಳಿಗೆ ನಿರ್ಮಿಸಿದ ಮನೆಗಳಿಗೆ ಏಕಾಏಕಿ ಅಲ್ಪಸಂಖ್ಯಾತರನ್ನು ಕಳುಹಿಸಲಾಗಿದೆ. ಮನೆ ಖಾಲಿ ಇವೆ ಎಂದ ಮಾತ್ರಕ್ಕೆ ಯಾರು ಬೇಕಾದರೂ ಹೋಗಿ ಇರಬಹುದಾ? ಇದೆಲ್ಲವೂ ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರ ಕುತಂತ್ರ. ಅವರ ಪ್ರೇರಣೆಯಿಂದಲೇ ಮುಸ್ಲಿಂರು ಖಾಲಿ ಮನೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.

ಶಾಸಕರ ಅನುಮತಿ ಇಲ್ಲದೆ ಹೇಗೆ ಮುಸ್ಲಿಂರು ಖಾಲಿ ಮನೆಗಳಿಗೆ ಹೋಗಲು ಸಾಧ್ಯ? ಅಧಿಕಾರಿಗಳು, ಜಿಲ್ಲಾಡಳಿತ ಕತ್ತೆ ಕಾಯುತ್ತಿದೆಯೇ? ಈ ಘಟನೆಯನ್ನು ಜಿಲ್ಲಾಡಳಿತ, ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಬೇಕು. ಆಸ್ಪತ್ರೆಗೆ ಸೇರಿದ ತಮಿಳುಕಾಲನಿ ಜಾಗದ ಒತ್ತುವರಿಯನ್ನು ತೆರವುಗೊಳಿಸಬೇಕು. ಯಾವುದೇ ಪಕ್ಷದವರಾದರೂ ಇರಲಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕೆಆರ್ಎಸ್ನಲ್ಲಿ ರಾಜ್ಯ ಸರ್ಕಾರದಿಂದ ಕಾವೇರಿ ಆರತಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ಆರತಿ ಹೆಸರಲ್ಲಿ ಇವರು ಕೀರ್ತಿ ಪಡೆಯೋಕೆ ಹೋಗುತ್ತಿದ್ದಾರೆ. ಸರ್ಕಾರ ಅಲ್ಲಿನ ಜನರ ಜೀವನ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅಲ್ಲಿ ಆರತಿಗೆ ನೂರು ಕೋಟಿ ಖರ್ಚು ಮಾಡ್ತಿರೋದು ಯಾಕೆ? ಇದರಲ್ಲಿ ಕಾಂಗ್ರೆಸ್ ಖರ್ಚು ಮಾಡುವುದು 30 ರಿಂದ 40 ಕೋಟಿ ರೂ. ಅಷ್ಟೇ. ಇನ್ನುಳಿದ ಹಣ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಜೊತೆಗೆ ಸದನದೊಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದ್ದೇವೆ ಎಂದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 09T191742.146

2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
April 9, 2026 - 7:20 pm
0

Untitled design 2026 04 09T190730.484

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ

by ಶಾಲಿನಿ ಕೆ. ಡಿ
April 9, 2026 - 7:10 pm
0

Untitled design 2026 04 09T190238.194

ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!

by ಶಾಲಿನಿ ಕೆ. ಡಿ
April 9, 2026 - 7:03 pm
0

Untitled design 2026 04 09T185439.488

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 9, 2026 - 6:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 09T191742.146
    2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ
    April 9, 2026 | 0
  • Untitled design 2026 04 09T190730.484
    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ
    April 9, 2026 | 0
  • Untitled design 2026 04 09T185439.488
    ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?
    April 9, 2026 | 0
  • Untitled design 2026 04 09T181447.681
    ಪಿಯುಸಿಯಲ್ಲಿ 600ಕ್ಕೆ 597 ಅಂಕ ಬಂದ್ರೂ ರೀ ವ್ಯಾಲ್ಯೂಯೇಷನ್‌ಗೆ ಹಾಕ್ತೇನೆ ಎಂದ ವಿದ್ಯಾರ್ಥಿ
    April 9, 2026 | 0
  • ಅರ್ಚನಾ (5)
    PUC ಫಲಿತಾಂಶ 2026: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯೇ ಮೊದಲ ಸ್ಥಾನ, ವಿದ್ಯಾರ್ಥಿನಿಯರೇ ಮೇಲುಗೈ
    April 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version