ಬಸ್ ಮತ್ತು ಮೆಟ್ರೋ ಸೌಕರ್ಯಗಳ ನಂತರ ಈಗ ನಿತ್ಯಬಳಕೆಯ ಅಡುಗೆ ಎಣ್ಣೆಗಳ ಸರದಿ.ಕಳೆದ ಒಂದು ತಿಂಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಗಗನಕ್ಕೇರಿದೆ. ಸೂರ್ಯಕಾಂತಿ, ತೆಂಗು, ಸಾಸಿವೆ, ಮತ್ತು ಕಡಲೆ ಎಣ್ಣೆಗಳ ಬೆಲೆ ಪ್ರತಿ ಕೆ.ಜಿಗೆ ₹10 ರಿಂದ ₹50 ರವರೆಗೆ ಏರಿಕೆಯಾಗಿದ್ದು, ಸಾಮಾನ್ಯರ ಜೀವನದಮೇಲೆ ಒತ್ತಡ ಹೆಚ್ಚಿದೆ.
ಏರಿಕೆಯ ವಿವರಗಳು:
ತೆಂಗಿನ ಎಣ್ಣೆ: ಬೇಸಿಗೆ ಕಾಲದಲ್ಲಿ ತೆಂಗಿನಕಾಯಿ ಲಭ್ಯತೆ ಕಡಿಮೆಯಾಗಿದೆ. ಎಳೆನೀರಿನ ಬೇಡಿಕೆ ಹೆಚ್ಚಾದ್ದರಿಂದ ತೆಂಗಿನ ಎಣ್ಣೆಗೆ ಪ್ರತಿ ಕೆ.ಜಿಗೆ ₹50 ಹೆಚ್ಚಳ. ಸದ್ಯ ಬೆಲೆ: ₹320/ಕೆ.ಜಿ.
ಸೂರ್ಯಕಾಂತಿ ಎಣ್ಣೆ:ಪೂರೈಕೆ ಕೊರತೆಯಿಂದಾಗಿ ಬೆಲೆ ₹10–20 ಹೆಚ್ಚಾಗಿದೆ.
ಇತರ ಎಣ್ಣೆಗಳು:ಸಾಸಿವೆ, ಕಡಲೆ, ಅರಳೆ, ಮತ್ತು ಫಾಮ್ ಆಯಿಲ್‌ಗಳ ಬೆಲೆಗೂ ₹10 ಏರಿಕೆ.
ಕಾರಣಗಳು:
- ತೆಂಗಿನಕಾಯಿ ಉತ್ಪಾದನೆ ಕುಸಿತ (ಬೇಸಿಗೆ ಬೇಡಿಕೆ).
- ಸೂರ್ಯಕಾಂತಿ ಎಣ್ಣೆ ಆಮದು ಮತ್ತು ಪೂರೈಕೆ ಸರಪಳಿ ತೊಂದರೆ.
- ರೂಪಾಯಿಯ ದುರ್ಬಲತೆ ಮತ್ತು ಇಂಧನ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಹೆಚ್ಚಳ.
ಪರಿಣಾಮಗಳು:
ದಿನಬಳಕೆಯ ಅಡುಗೆಗೆ ಪರ್ಯಾಯಗಳನ್ನು ಹುಡುಕುತ್ತಿರುವ ಕುಟುಂಬಗಳು.
ಹೋಟೆಲ್ ಮತ್ತು ಆಹಾರ ಉದ್ಯಮಗಳು ಲಾಭ ಕಡಿಮೆಯಾಗಿದೆ ಎಂದು ದೂರು.
“ಬೇಸಿಗೆ ಕೊರತೆ ಮತ್ತು ವಿದೇಶಿ ಮಾರುಕಟ್ಟೆ ಏರಿಕೆಗಳು ಬೆಲೆಗಳನ್ನು ಪ್ರಭಾವಿಸಿವೆ. ಸರ್ಕಾರವು ಪೂರೈಕೆ ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
ಸರ್ಕಾರವು ಕೃಷಿ ಸಂಶೋಧನೆ ಮತ್ತು ಸಬ್ಸಿಡಿ ನೀಡಿ ಬೆಲೆ ನಿಯಂತ್ರಿಸಬೇಕು. ನಾಗರಿಕರು ಸಣ್ಣ ಪ್ಯಾಕ್‌ಗಳಲ್ಲಿ ಎಣ್ಣೆ ಖರೀದಿಸುವುದು, ಸ್ಥಳೀಯ ತೈಲಗಳನ್ನು ಬಳಸುವುದು ಉತ್ತಮ.