ಮುಖದ ಮೇಲಿನ ಕಪ್ಪು ಕಲೆಗಳು, ಮೊಡವೆ ಗುರುತುಗಳು, ಜಾಡೆಗಳು—ಇವೆಲ್ಲವೂ ಬೇಸಿಗೆಯಲ್ಲಿ ಹೆಚ್ಚಾಗುವುದೊಂದು ಸಾಮಾನ್ಯ ಸಮಸ್ಯೆ. ಬಿಸಿಲಿನ ತೀವ್ರತೆ, ಬೆವರು ಹಾಗೂ ಧೂಳು ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡಿ ಮುಖದ ಸಾಲು ಬಣ್ಣವನ್ನು ಕಳೆಸುತ್ತವೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಕ್ರೀಮ್ಗಳು, ಸೀರಮ್ಗಳು, ಫೇಸ್ವಾಶ್ಗಳು ದುಬಾರಿ ಬೆಲೆಯಾದರೂ, ಎಲ್ಲರ ಚರ್ಮಕ್ಕೆ ಅವು ಸೂಟಾಗುವುದಿಲ್ಲ. ಆದರೆ ಮನೆಯಲ್ಲೇ ಇರುವ ಕೆಲವು ಸರಳ ವಸ್ತುಗಳಿಂದ, ಹೆಚ್ಚಿನ ಸಮಯ ಅಥವಾ ಹಣ ಖರ್ಚುಮಾಡದೇ, ಮುಖದ ಕಲೆಗಳನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯ.
ಆಯ್ಸ್ ಕ್ಯೂಬ್ ಥೆರಪಿ
ಐಸ್ ಕ್ಯೂಬ್ಗಳನ್ನು ಮುಖದ ಮೇಲೆ ಸ್ಕ್ರಬ್ ಮಾಡಿಕೊಳ್ಳುವುದರಿಂದ ಚರ್ಮ ತಾಜಾಗುತ್ತದೆ, ರಂಧ್ರಗಳು ಕ್ಲೀನ್ ಆಗುತ್ತವೆ ಮತ್ತು ತೈಲ ಪ್ರಮಾಣ ನಿಯಂತ್ರಣವಾಗುತ್ತದೆ. ಇದರಿಂದ ಕಲೆಗಳು, ಮೊಡವೆಗಳ ಸಾಧ್ಯತೆ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಆದರೆ ಸಾಮಾನ್ಯ ಐಸ್ ಕ್ಯೂಬ್ಗಳಿಗಿಂತ ನೀವು ಮನೆಯಲ್ಲೇ ಮಾಡಿದ ಫೇಸ್ ಐಸ್ ಕ್ಯೂಬ್ಗಳು ಇನ್ನಷ್ಟು ಪರಿಣಾಮಕಾರಿ.
ಆಲೂಗಡ್ಡೆ ರಸದ ಐಸ್ ಕ್ಯೂಬ್
ಆಲೂಗಡ್ಡೆಯಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಗುಣಗಳು ಚರ್ಮದ ಮೇಲಿನ ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಹಗುರಗೊಳಿಸುತ್ತವೆ. ಆದರೆ ಎಣ್ಣೆಯುಕ್ತ ಚರ್ಮ ಹೊಂದಿರುವವರು ಆಲೂಗಡ್ಡೆ ರಸದ ಐಸ್ಕ್ಯೂಬ್ ಬಳಸುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಅದು ಕೆಲವೊಮ್ಮೆ ತೈಲ ಉತ್ಪಾದನೆಯನ್ನು ಹೆಚ್ಚಿಸಬಹುದು.
ತುಳಸಿ–ಪುದೀನದ ಐಸ್ ಕ್ಯೂಬ್
ತುಳಸಿಯಲ್ಲಿ ಬ್ಯಾಕ್ಟೀರಿಯಾ ನಿರ್ಮೂಲಕ ಗುಣಗಳಿದ್ದು, ಮೊಡವೆ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಪುದೀನದ ತಂಪಾದ ಸ್ವಭಾವವು ಚರ್ಮಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ತಾಜಾತನ ನೀಡುತ್ತದೆ. ಇವೆರಡನ್ನು ಸೇರಿಸಿ ತಯಾರಿಸಿದ ಐಸ್ ಕ್ಯೂಬ್ ಬೇಸಿಗೆಯಲ್ಲಿ ನಿಜಕ್ಕೂ ಉತ್ತಮ.
ತುಳಸಿ–ಪುದೀನ ಐಸ್ ಕ್ಯೂಬ್ ತಯಾರಿಸುವ ವಿಧಾನ
-
ಒಂದು ಕಪ್ ನೀರು ತೆಗೆದುಕೊಳ್ಳಿ.
-
6–7 ತುಳಸಿ ಎಲೆಗಳು ಮತ್ತು 6–7 ಪುದೀನಾ ಎಲೆಗಳನ್ನು ಅದರಲ್ಲಿ 10–15 ನಿಮಿಷ ನೆನೆಸಿಡಿ.
-
ನಂತರ ಎಲೆಗಳನ್ನು ನೀರಿನಿಂದ ತೆಗೆದು ಚೆನ್ನಾಗಿ ತೊಳೆದ್ದು ಪೇಸ್ಟ್ ಮಾಡಿಕೊಳ್ಳಿ.
-
ಈ ಪೇಸ್ಟ್ ಅನ್ನು ಮುಂಚೆ ತೆಗೆದುಕೊಂಡ ನೀರಿಗೆ ಸೇರಿಸಿ ಮತ್ತು ಕುದಿಸಿರಿ.
-
ಮಿಶ್ರಣ ತಣ್ಣಗಾದ ನಂತರ, ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಿ.
-
ಮಿಶ್ರಣವನ್ನು ಐಸ್ ಟ್ರೇಗೆ ತುಂಬಿ ಫ್ರೀಜ್ ಮಾಡಿ.
-
ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಐಸ್ ಕ್ಯೂಬ್ನ್ನು ವೃತ್ತಾಕಾರದ ಚಲನೆಯಿಂದ ಮುಖದ ಮೇಲೆ ಸ್ಕ್ರಬ್ ಮಾಡಿ.
ಐಸ್ ಕ್ಯೂಬ್ ಥೆರಪಿಯ ಪ್ರಯೋಜನಗಳು
-
ಬಿಸಿಲಿನಿಂದ ಉಂಟಾಗುವ ಚರ್ಮದ ಕಪ್ಪು ಕಲೆಗಳು ಕಡಿಮೆಯಾಗುತ್ತವೆ/
-
ಮೊಡವೆ, ಮೊಡವೆ ಗುರುತು ಮತ್ತು ರಂಧ್ರ ಸಮಸ್ಯೆ ನಿಯಂತ್ರಣ/
-
ಚರ್ಮಕ್ಕೆ ತಕ್ಷಣದ ಗ್ಲೋ.
-
ಚರ್ಮದ ರಕ್ತ ಸಂಚಾರ ಸುಧಾರಿಸಿ ನೈಸರ್ಗಿಕ ಕಾಂತಿ.
-
ಮೇಕಪ್ ಮಾಡುವ ಮೊದಲು ಬಳಸಿದರೆ ಮೇಕಪ್ ಜಾಸ್ತಿ ಹೊತ್ತಿರುತ್ತದೆ.
ಬೇಸಿಗೆಯಲ್ಲಿ ಚರ್ಮಕ್ಕೆ ಸರಿಯಾದ ಕಾಳಜಿ ಕೊಡಬೇಕಾದರೆ, ದುಬಾರಿ ಬ್ಯೂಟಿ ಪ್ರಾಡಕ್ಟ್ಗಳಿಗಿಂತ ಮನೆಲ್ಲಿರುವ ನೈಸರ್ಗಿಕ ಪರಿಹಾರಗಳು ಹೆಚ್ಚು ಪರಿಣಾಮಕಾರಿ. ದಿನಕ್ಕೆ 5–10 ನಿಮಿಷ ತೆಗೆದುಕೊಂಡು ಈ ಫೇಸ್ ಐಸ್ ಕ್ಯೂಬ್ಗಳನ್ನು ಬಳಸಿದರೆ ನಿಮ್ಮ ಚರ್ಮದ ಸೌಂದರ್ಯ ಮತ್ತು ಕಲೆರಹಿತ ತಾಜಾತನ ಮರಳಿ ಬರುತ್ತದೆ.





