• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 21, 2026 - 1:32 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಮೈಸೂರು
0 0
0
Untitled design 2026 10 21T133120.919

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ದಸರಾ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾದ ಐತಿಹಾಸಿಕ ವಜ್ರಮುಷ್ಠಿ ಜಟ್ಟಿ ಕಾಳಗವನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ನಿಗದಿತ ಮುಹೂರ್ತ ಮೀರಿದ ಹಿನ್ನೆಲೆ ಜಟ್ಟಿ ಕಾಳಗ ನಡೆಯದೆ ಖಾಸಗಿ ದರ್ಬಾರ್‌ ಅಂತ್ಯಗೊಂಡಿದೆ.

ಮೈಸೂರು ಅರಮನೆಯ ಸಂಪ್ರದಾಯದಂತೆ ವಿಜಯದಶಮಿಯಂದು ಖಾಸಗಿ ದರ್ಬಾರ್‌ ಬಳಿಕ ವಿಜಯಯಾತ್ರೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತದೆ. ಈ ಸಂದರ್ಭದಲ್ಲಿ ವಜ್ರಮುಷ್ಠಿ ಜಟ್ಟಿ ಕಾಳಗಕ್ಕೂ ವಿಶೇಷ ಮಹತ್ವವಿದೆ. ಆದರೆ ಈ ಬಾರಿ ಪೂಜೆ ಮತ್ತು ಜಟ್ಟಿಗಳ ಸಿದ್ಧತೆಯಲ್ಲಿ ವಿಳಂಬವಾದ ಕಾರಣ, ನಿಗದಿತ ಸಮಯದಲ್ಲಿ ಕಾಳಗ ನಡೆಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

RelatedPosts

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ

ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?

ದಸರಾ ಜಂಬೂಸವಾರಿ ಭದ್ರತೆಗೆ ಬಿಗಿ ಬಂದೋಬಸ್ತ್‌: 5 ಸಾವಿರ ಪೊಲೀಸರ ನಿಯೋಜನೆ

ಮೈಸೂರು ದಸರಾ ಕೇಕ್ ಪ್ರದರ್ಶನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಕಲಾಕೃತಿ

ADVERTISEMENT
ADVERTISEMENT
ಏನಿದು ವಜ್ರಮುಷ್ಠಿ ಜಟ್ಟಿ ಕಾಳಗ?

ಮೈಸೂರು ದಸರಾ ಆಚರಣೆಯ ಭಾಗವಾಗಿರುವ ವಜ್ರಮುಷ್ಠಿ ಜಟ್ಟಿ ಕಾಳಗವು ರಾಜಮನೆತನದ ಪರಂಪರೆಯೊಂದಿಗೆ ನಂಟು ಹೊಂದಿದೆ. ಸಾಂಪ್ರದಾಯಿಕವಾಗಿ ಜಟ್ಟಿಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ. ಮಟ್ಟಿ ಪೂಜೆಯ ನಂತರ ಶ್ವೇತ ವರಾಹಸ್ವಾಮಿ ದೇವಸ್ಥಾನದ ಬಳಿ ಸಿದ್ಧತೆ ಮಾಡಿಕೊಂಡು, ಕರಿಕಲ್ ತೊಟ್ಟಿಯಲ್ಲಿ ಸೆಣಸಾಟ ನಡೆಸುವುದು ಈ ಆಚರಣೆಯ ಭಾಗವಾಗಿದೆ.

ರಾಜಮನೆತನದ ಮುಂದೆ ಜಟ್ಟಿಗಳು ತಮ್ಮ ಪರಂಪರೆಯ ನಿಷ್ಠೆ ಪ್ರದರ್ಶಿಸುವ ಈ ಕಾಳಗದಲ್ಲಿ ರಕ್ತ ಸುರಿಯುವಷ್ಟು ತೀವ್ರವಾದ ಸೆಣಸಾಟ ನಡೆಯುತ್ತದೆ. ಹೀಗಾಗಿ ದಸರಾ ಸಂಪ್ರದಾಯದಲ್ಲಿ ಈ ಆಚರಣೆಗೆ ವಿಶಿಷ್ಟ ಸ್ಥಾನವಿದೆ.

ಬೆಳಗ್ಗೆಯಿಂದ ಕಾದಿದ್ದ ಜಟ್ಟಿಗಳು

ಈ ಬಾರಿ ಜಟ್ಟಿ ಕಾಳಗದಲ್ಲಿ ಭಾಗವಹಿಸಲು ಮೈಸೂರು, ಬೆಂಗಳೂರು, ಚನ್ನಪಟ್ಟಣ ಮತ್ತು ಚಾಮರಾಜನಗರದಿಂದ ನಾಲ್ವರು ಜಟ್ಟಿಗಳು ಆಗಮಿಸಿದ್ದರು. ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ ಹಾಗೂ ಚನ್ನಪಟ್ಟಣದ ತೇಜಸ್ ಶೆಟ್ಟಿ ಕಾಳಗದಲ್ಲಿ ಪಾಲ್ಗೊಳ್ಳಬೇಕಿತ್ತು.

ಮೈಸೂರು ಮತ್ತು ಬೆಂಗಳೂರು ಜಟ್ಟಿಗಳ ನಡುವೆ ಒಂದು ಸುತ್ತು ಹಾಗೂ ಚನ್ನಪಟ್ಟಣ ಮತ್ತು ಚಾಮರಾಜನಗರದ ಜಟ್ಟಿಗಳ ನಡುವೆ ಮತ್ತೊಂದು ಸುತ್ತಿನ ಸೆಣಸಾಟ ನಡೆಯಬೇಕಿತ್ತು. ಇದಕ್ಕಾಗಿ ಜಟ್ಟಿಗಳು ಬೆಳಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ಬೆಳಗ್ಗೆ 9 ಗಂಟೆಯ ವೇಳೆಗೆ ಅವರು ಕಾಳಗಕ್ಕೆ ಸಜ್ಜಾಗಿದ್ದರು. ಆದರೆ ವಜ್ರಮುಷ್ಠಿ ಕಾಳಗದ ಪೂಜೆ ಆರಂಭವಾಗದ ಕಾರಣ ಮುಂದಿನ ಪ್ರಕ್ರಿಯೆ ವಿಳಂಬವಾಯಿತು.

ಪಾಸ್‌ ವಿಚಾರವಾಗಿ ವಾಗ್ವಾದ?

ಜಟ್ಟಿಗಳು ಮತ್ತು ಅವರ ಕಡೆಯವರಿಗೆ ಪ್ರವೇಶ ಪಾಸ್‌ ವಿಚಾರವಾಗಿ ಪೊಲೀಸರು ಅನುಮತಿ ನೀಡಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಹಾಗೂ ಜಟ್ಟಿಗಳ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಮತ್ತೊಂದೆಡೆ, ಪೂಜೆ ಮತ್ತು ಸಿದ್ಧತೆಗಳಲ್ಲಿನ ವಿಳಂಬವೂ ಕಾಳಗದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು.

ನಿಗದಿತ ಮುಹೂರ್ತ ಮೀರಿದರೆ ವಿಜಯಯಾತ್ರೆಯ ಪೂಜೆ ನಡೆಸಲು ಸಮಸ್ಯೆಯಾಗಬಹುದು ಎಂಬ ಆತಂಕ ಎದುರಾಯಿತು. ಆರಂಭದಲ್ಲಿ ಬನ್ನಿ ಪೂಜೆಯ ಬಳಿಕ ಜಟ್ಟಿ ಕಾಳಗ ನಡೆಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದ್ದರೂ, ಅಂತಿಮವಾಗಿ ಕಾಳಗವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಕಾಳಗವಿಲ್ಲದೇ ಅಂತ್ಯಗೊಂಡ ಖಾಸಗಿ ದರ್ಬಾರ್‌

ಜಟ್ಟಿ ಕಾಳಗಕ್ಕಾಗಿ ಕಾಯುತ್ತಿದ್ದವರಿಗೆ ಈ ಬೆಳವಣಿಗೆ ನಿರಾಸೆ ಮೂಡಿಸಿದೆ. ಕೊನೆಗೆ ರಾಜವಂಶಸ್ಥ ಯದುವೀರ್‌ ಅವರು ವಿಜಯಯಾತ್ರೆಗೆ ತೆರಳಿದ್ದು, ಜಟ್ಟಿ ಕಾಳಗ ನಡೆಯದೇ ಖಾಸಗಿ ದರ್ಬಾರ್‌ ಪ್ರಕ್ರಿಯೆ ಅಂತ್ಯಗೊಂಡಿದೆ.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ನಂದಿಧ್ವಜ (1)

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
October 21, 2026 - 2:04 pm
0

ನಂದಿಧ್ವಜ

ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?

by ಶಾಲಿನಿ ಕೆ. ಡಿ
October 21, 2026 - 1:41 pm
0

Untitled design 2026 10 21T133120.919

ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

by ಶಾಲಿನಿ ಕೆ. ಡಿ
October 21, 2026 - 1:32 pm
0

Untitled design 2026 10 21T131701.841

ವಿಜಯದಶಮಿ ದಿನ ಬಂಗಾರ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆ ಮತ್ತೆ ಇಳಿಕೆ

by ಶಾಲಿನಿ ಕೆ. ಡಿ
October 21, 2026 - 1:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • ನಂದಿಧ್ವಜ (1)
    ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ
    October 21, 2026 | 0
  • ನಂದಿಧ್ವಜ
    ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?
    October 21, 2026 | 0
  • Untitled design 2026 10 21T120520.271
    ದಸರಾ ಜಂಬೂಸವಾರಿ ಭದ್ರತೆಗೆ ಬಿಗಿ ಬಂದೋಬಸ್ತ್‌: 5 ಸಾವಿರ ಪೊಲೀಸರ ನಿಯೋಜನೆ
    October 21, 2026 | 0
  • Untitled design 2026 10 21T112649.419
    ಮೈಸೂರು ದಸರಾ ಕೇಕ್ ಪ್ರದರ್ಶನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಕಲಾಕೃತಿ
    October 21, 2026 | 0
  • Untitled design 2026 10 21T103944.837
    ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
    October 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version