• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ!: ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 5, 2026 - 12:07 pm
in ಆರೋಗ್ಯ-ಸೌಂದರ್ಯ
0 0
0
ಹಬ್ಬದ ವೇಳೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಡಿ (1)

ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ ಮನಸ್ಥಿತಿಯ ಕುರಿತು ನಡೆಸಿದ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

ಮೆಟ್ರೋ ಮತ್ತು ಮೊದಲ ಸ್ಥರದ ನಗರಗಳಲ್ಲಿರುವ 18 ರಿಂದ 45 ವರ್ಷ ವಯಸ್ಸಿನ 1,000 ಸಿಂಗಲ್ಸ್‌ಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಡೇಟಿಂಗ್ ಆ್ಯಪ್‌ಗಳ ಪ್ರಸಿದ್ಧ ಸಂಸ್ಥೆ ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದವು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 35ರಷ್ಟು ಸಿಂಗಲ್ಸ್‌ಗಳು ತಾವು ‘ಒಂಟಿ’ ಎಂಬ ಭಾವನೆ ಸದಾ ಕಾಡುತ್ತಿದೆ ಎಂದು ಹೇಳಿದ್ದಾರೆ.

RelatedPosts

ಪದೇ ಪದೇ ಹೊಟ್ಟೆ ಉಬ್ಬರ ಕಾಡುತ್ತಿದೆಯೇ? ಆಹಾರ ಸೇವನೆಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ!

ಅತಿಯಾದ ಉಪ್ಪು ಸೇವನೆಗೆ ಆರೋಗ್ಯ ಇಲಾಖೆ ಬ್ರೇಕ್; ಹೊಸ ಮಾರ್ಗಸೂಚಿ ಪ್ರಕಟ!

ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆ ಬೊಜ್ಜು, ಪ್ರೋಟೀನ್ ಕೊರತೆಯೇ ದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!

ಮೋಸಂಬಿ ಜ್ಯೂಸ್ ಕುಡಿಯುತ್ತೀರಾ? ಹಾಗಾದರೆ ಈ ವಿಷಯ ತಿಳಿಯಿರಿ!

ADVERTISEMENT
ADVERTISEMENT
ಒಂಟಿತನ ಕಾಡುತ್ತಿರುವುದೇಕೆ?

ಭಾರತೀಯ ಯುವಜನತೆಗೆ ಸಂಬಂಧಗಳನ್ನು ಬೆಳೆಸಲು ಅವಕಾಶಗಳ ಕೊರತೆಯೇನೂ ಇಲ್ಲ. ಶೇ. 75ರಷ್ಟು ಯುವಕ-ಯುವತಿಯರು ವಾರಕ್ಕೊಮ್ಮೆಯಾದರೂ ಹೊರಗಡೆ ಹೋಗಿ ಜನರನ್ನು ಭೇಟಿಯಾಗುತ್ತಿರುತ್ತಾರೆ. ಆದರೂ, ಕೆಲಸದ ಒತ್ತಡ ಮತ್ತು ಆಯಾಸ ಅವರನ್ನು ಹೈರಾಣಾಗಿಸಿದೆ.

ಶೇ. 64ರಷ್ಟು ಮಂದಿ ತಮ್ಮ ಸಾಮಾಜಿಕ ಜೀವನಕ್ಕಿಂತ ಓದು ಮತ್ತು ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದಾಗಿ ಹೇಳಿದ್ದಾರೆ. ಈ ಕೆಲಸವೇ ಮೊದಲು ಎಂಬ ಮಂತ್ರ, ಅವರನ್ನು ಒಂಟಿತನಕ್ಕೆ ತಳ್ಳಿದೆ.

ಎರಡನೇ ಕಾರಣ ಸುಸ್ತು, ಆಯಾಸ. ಶೇ. 55ರಷ್ಟು ಸಿಂಗಲ್ಸ್, ದಿನದ ಕೆಲಸ ಮುಗಿದ ಮೇಲೆ ಯಾರನ್ನಾದರೂ ಭೇಟಿಯಾಗಲು ಅಥವಾ ಮಾತನಾಡಲು ಸಾಧ್ಯವಾಗದಷ್ಟು ಸುಸ್ತಾಗಿರುತ್ತಾರೆ.

ಮತ್ತೊಂದೆಡೆ ಶೇ. 58ರಷ್ಟು ಮಂದಿ, “ಆನ್‌ಲೈನ್‌ನಲ್ಲಿ ನಾವು ಎಲ್ಲರೊಂದಿಗೂ ಬೆರೆತಿರುತ್ತೇವೆ, ಆದರೆ ನಿಜಜೀವನದಲ್ಲಿ ನಮಗೆ ಒಂಟಿತನ ಕಾಡುತ್ತದೆ,” ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ನೂರಾರು ಜನರಲ್ಲ, ಆಪ್ತರೊಬ್ಬರು ಬೇಕು; ‘ನಿಜ ಪ್ರೀತಿ’ ಮೇಲಿದೆ ಅಪಾರ ನಂಬಿಕೆ!

ಒಂಟಿತನ ಕಾಡುತ್ತಿದ್ದರೂ, ಪ್ರೀತಿ ಮತ್ತು ಸಂಬಂಧಗಳ ಮೇಲಿನ ನಂಬಿಕೆಯನ್ನು ಯುವಜನತೆ ಕಳೆದುಕೊಂಡಿಲ್ಲ. ಬದಲಾಗಿ, ತಮಗೆ ಎಂಥವರ ಸಾಂಗತ್ಯ ಬೇಕು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟತೆ ಹೊಂದಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 70ರಷ್ಟು ಮಂದಿ ಹೊಸ ಸಂಬಂಧಗಳನ್ನು ಬೆಳೆಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ. ಶೇ. 72ರಷ್ಟು ಯುವಜನತೆಗೆ ನೂರಾರು ಸ್ನೇಹಿತರ ಬದಲು, ಬೆರಳೆಣಿಕೆಯಷ್ಟಿದ್ದರೂ ‘ಗಾಢವಾದ ಮತ್ತು ಆಪ್ತವಾದ’ ಸಂಬಂಧಗಳ ಅಗತ್ಯ ಇದೆ ಎಂದು ತಿಳಿಸಿದ್ದಾರೆ.

ಶೇ. 78ರಷ್ಟು ಯುವಜನರು ಈಗಲೂ ‘ನಿಜವಾದ ಪ್ರೀತಿ’ ಇದೆ ಎಂದು ನಂಬಿದ್ದಾರೆ ಮತ್ತು ಶೇ. 77ರಷ್ಟು ಜನ ತಮಗಾಗಿ ಹುಟ್ಟಿದ ‘ಆ ವಿಶೇಷ ವ್ಯಕ್ತಿ’ ಖಂಡಿತಾ ಸಿಗುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಶೇ. 85ರಷ್ಟು ಮಂದಿ ‘ದೀರ್ಘಕಾಲಿಕ ಸಂಬಂಧ’ಗಳನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ ‘ಜೆನ್-ಝೀ’ ಯುವಜನತೆಯಲ್ಲಿ ಈ ಪ್ರಮಾಣ ಶೇ. 89ರಷ್ಟಿದೆ. ಅಷ್ಟೇ ಅಲ್ಲದೆ ತಮಗೆ ಒಗ್ಗದ ವ್ಯಕ್ತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬದಲು, ತಮಗೆ ಸೂಕ್ತವಾದ ವ್ಯಕ್ತಿ ಸಿಗುವವರೆಗೂ ಕಾಯಲು ಶೇ. 63ರಷ್ಟು ಮಂದಿ ಸಿದ್ಧರಿದ್ದಾರೆ.

ಡೇಟಿಂಗ್ ಆ್ಯಪ್‌ಗಳ ಪಾತ್ರ ಮತ್ತು ‘ಸುರಕ್ಷತೆ’ಗಿದೆ ಡಿಮಾಂಡ್

ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ.

ಶೇ. 40ರಷ್ಟು ಸಿಂಗಲ್ಸ್ ಪ್ರಸ್ತುತ ಯಾವುದಾದರೊಂದು ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರೆ. ಶೇ. 63ರಷ್ಟು ಮಂದಿ, ಡೇಟಿಂಗ್ ಆ್ಯಪ್‌ಗಳಿಂದ ತಮ್ಮ ಒಂಟಿತನ ದೂರವಾಗಿದೆ ಎಂದಿದ್ದಾರೆ. ಮುಂದಿನ 12 ತಿಂಗಳಲ್ಲಿ ಡೇಟಿಂಗ್ ಆ್ಯಪ್ ಬಳಸುವುದಾಗಿ ಶೇ. 55ರಷ್ಟು ಮಂದಿ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಪರಿಚಯ ಬೆಳೆಸುವಾಗ ಸುರಕ್ಷತೆಯ ಬಗ್ಗೆಯೂ ಯುವಜನತೆ ಎಚ್ಚರ ವಹಿಸಿದ್ದಾರೆ. ಶೇ. 60ರಷ್ಟು ಜನರಿಗೆ ಆನ್‌ಲೈನ್ ಡೇಟಿಂಗ್‌ನಲ್ಲಿ ‘ಸುರಕ್ಷತೆ’ಯ ಬಗ್ಗೆ ಕಳವಳವಿದೆ. ಹೀಗಾಗಿ, ಡೇಟಿಂಗ್ ಆ್ಯಪ್‌ಗಳನ್ನು ಆಯ್ಕೆ ಮಾಡುವಾಗ ‘ವೆರಿಫೈಡ್ ಪ್ರೊಫೈಲ್’ (ಖಚಿತಪಡಿಸಿದ ಖಾತೆಗಳು) ಮತ್ತು ಭದ್ರತಾ ನಿಯಮಗಳಿರುವ ಆ್ಯಪ್‌ಗಳಿಗೇ ಶೇ. 52ರಷ್ಟು ಜನ ಮೊದಲ ಆದ್ಯತೆ ನೀಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮ್ಯಾಚ್ ಗ್ರೂಪ್‌ನ ಇಂಡಿಯಾ ಮತ್ತು ಮಧ್ಯಪ್ರಾಚ್ಯದ ಪ್ರಾದೇಶಿಕ ಮುಖ್ಯಸ್ಥ ಅನುಕೂಲ್ ಕುಮಾರ್, “ಇಂದಿನ ಯುವಜನತೆ ತಮಗೆ ಎಂಥವರ ಒಡನಾಟ ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಯಾಂತ್ರಿಕವಾಗಿರುವ ಜೀವನಶೈಲಿಯಲ್ಲಿ ಆಪ್ತ ಸಂಬಂಧಗಳನ್ನು ಹುಡುಕುವುದು ಕಷ್ಟವಾಗುತ್ತಿದೆ. ಇಂಥ ಸಮಯದಲ್ಲಿ, ಜನರ ಆಸಕ್ತಿ ಮತ್ತು ಮನಸ್ಥಿತಿಗೆ ತಕ್ಕಂತಹ, ನೈಜ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಕಲ್ಪಿಸಿಕೊಡುವಲ್ಲಿ ತಂತ್ರಜ್ಞಾನ (ಡೇಟಿಂಗ್ ಆ್ಯಪ್‌ಗಳು) ಪ್ರಮುಖ ಪಾತ್ರ ವಹಿಸುತ್ತಿವೆ” ಎಂದು ವಿಶ್ಲೇಷಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 05T130537.941

ಗಾಯಕಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್

by ಶಾಲಿನಿ ಕೆ. ಡಿ
October 5, 2026 - 1:06 pm
0

Untitled design 2026 10 05T123016.022

ಮೈಸೂರು ದಸರಾ: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

by ಶಾಲಿನಿ ಕೆ. ಡಿ
October 5, 2026 - 12:31 pm
0

ಹಬ್ಬದ ವೇಳೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಡಿ (1)

ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ!: ಭಾರತದ ‘ಸಿಂಗಲ್ಸ್’ಗೆ ಕಾಡುತ್ತಿದೆ ಒಂಟಿತನ

by ಶಾಲಿನಿ ಕೆ. ಡಿ
October 5, 2026 - 12:07 pm
0

ಹಬ್ಬದ ವೇಳೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಡಿ

ಹಬ್ಬದ ವೇಳೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಡಿ: ಎಲ್ಲಾ ರಾಜ್ಯಗಳಿಗೆ NHRC ಮಹತ್ವದ ಆದೇಶ

by ಶಾಲಿನಿ ಕೆ. ಡಿ
October 5, 2026 - 11:36 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 05T072807.122
    ಪದೇ ಪದೇ ಹೊಟ್ಟೆ ಉಬ್ಬರ ಕಾಡುತ್ತಿದೆಯೇ? ಆಹಾರ ಸೇವನೆಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ!
    October 5, 2026 | 0
  • Your paragraph text (47)
    ಅತಿಯಾದ ಉಪ್ಪು ಸೇವನೆಗೆ ಆರೋಗ್ಯ ಇಲಾಖೆ ಬ್ರೇಕ್; ಹೊಸ ಮಾರ್ಗಸೂಚಿ ಪ್ರಕಟ!
    September 29, 2026 | 0
  • Untitled design (42)
    ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆ ಬೊಜ್ಜು, ಪ್ರೋಟೀನ್ ಕೊರತೆಯೇ ದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!
    September 25, 2026 | 0
  • Untitled design 2026 09 23T072525.147
    ಮೋಸಂಬಿ ಜ್ಯೂಸ್ ಕುಡಿಯುತ್ತೀರಾ? ಹಾಗಾದರೆ ಈ ವಿಷಯ ತಿಳಿಯಿರಿ!
    September 23, 2026 | 0
  • Untitled design 2026 09 22T072934.213
    ವಾರಕ್ಕೆ ಎಷ್ಟು ವ್ಯಾಯಾಮ ಮಾಡಿದ್ರೆ ಹೃದಯ ಆರೋಗ್ಯವಾಗಿರುತ್ತೆ? ವೈದ್ಯರ ಸಲಹೆ ಇಲ್ಲಿದೆ
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version