• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಖಮೇನಿ ಅಂತ್ಯಕ್ರಿಯೆಗೆ ಜನಸಾಗರ: 3 ಕೋಟಿ ಜನರಿಂದ ಅಂತಿಮ ನಮನ, ಮೊಳಗಿತು ಪ್ರತೀಕಾರದ ಘೋಷಣೆ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
July 10, 2026 - 11:45 am
in ವಿದೇಶ
0 0
0
Web Photo Editor 2026 07 10T100722.080

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ, ಸಾವಿನ 131 ದಿನಗಳ ಬಳಿಕ ಗುರುವಾರ ತವರೂರು ಮಶಾದ್‌ನ ಇಮಾಮ್ ರೆಜಾ ಮಸೀದಿಯಲ್ಲಿ ನೆರವೇರಿತು. ಜುಲೈ 4ರಿಂದ ಆರಂಭವಾದ ಆರು ದಿನಗಳ ಧಾರ್ಮಿಕ ವಿಧಿವಿಧಾನಗಳ ಬಳಿಕ ಅಂತಿಮ ಸಂಸ್ಕಾರ ನಡೆದಿದ್ದು, ಖಮೇನಿ ಅವರೊಂದಿಗೆ ಮೃತಪಟ್ಟಿದ್ದ ಕುಟುಂಬ ಸದಸ್ಯರನ್ನೂ ಅವರ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ.

ಖಮೇನಿ ಅವರ ಪಾರ್ಥಿವ ಶರೀರವನ್ನು ಇರಾನ್‌ನ ಪ್ರಮುಖ ಧಾರ್ಮಿಕ ನಗರ ಕೋಂ ಸೇರಿದಂತೆ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಿಯಾ ಮುಸ್ಲಿಂ ಸಂಪ್ರದಾಯದಂತೆ ನಡೆದ ಈ ವಿಧಿವಿಧಾನಗಳ ವೇಳೆ ಇರಾನ್ ಹಾಗೂ ಇರಾಕ್‌ನಲ್ಲಿ ಭಾರೀ ಜನಸ್ತೋಮ ಸೇರಿದ್ದರೆ, ಒಟ್ಟಾರೆ ಸುಮಾರು 3 ಕೋಟಿ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಶವಪೆಟ್ಟಿಗೆಯನ್ನು ಹೊತ್ತ ವಿಮಾನ ಮಶಾದ್‌ಗೆ ಆಗಮಿಸುವಾಗ ಅದಕ್ಕೆ ಫೈಟರ್ ಜೆಟ್ ಬೆಂಗಾವಲು ನೀಡಿರುವುದು ಗಮನಸೆಳೆಯಿತು.

RelatedPosts

2030ರೊಳಗೆ ₹35,000 ಕೋಟಿ ವ್ಯಾಪಾರ ಗುರಿ: ಭಾರತ-ನ್ಯೂಜಿಲೆಂಡ್ ಮಹತ್ವದ ಒಪ್ಪಂದ

40 ವರ್ಷಗಳ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ಇತಿಹಾಸ ನಿರ್ಮಿಸಿದ ಮೋದಿ

ಮಾತುಕತೆಗೆ ಇರಾನ್ ಮನವಿ, ಕದನ ವಿರಾಮ ಅಂತ್ಯ: ಟ್ರಂಪ್

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ

ADVERTISEMENT
ADVERTISEMENT

ಮಶಾದ್‌ನಲ್ಲಿ ನಡೆದ ಅಂತಿಮ ಸಮಾರಂಭದಲ್ಲಿ ಸುಮಾರು 40 ಲಕ್ಷ ಜನರು ಭಾಗವಹಿಸಿದ್ದರು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಖಮೇನಿ ಅವರ ಇಚ್ಛೆಯಂತೆ ಅವರನ್ನು ಪವಿತ್ರ ಇಮಾಮ್ ರೆಜಾ ಮಸೀದಿಯಲ್ಲಿ ಸಮಾಧಿ ಮಾಡಲಾಯಿತು. ಶಿಯಾ ಇಸ್ಲಾಂನ ಎಂಟನೇ ಇಮಾಮ್ ಅಲಿ ಅಲ್-ರಿದಾ ಸಮಾಧಿಯನ್ನು ಹೊಂದಿರುವ ಈ ಮಸೀದಿ ವಿಶ್ವದ ಅತಿದೊಡ್ಡ ಮಸೀದಿ ಸಂಕೀರ್ಣಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಕೋಟ್ಯಂತರ ಭಕ್ತರು ಇಲ್ಲಿ ಯಾತ್ರೆ ಕೈಗೊಳ್ಳುತ್ತಾರೆ.

1989ರಿಂದ ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರಾಗಿದ್ದ ಖಮೇನಿ, 2026ರ ಫೆಬ್ರವರಿ 28ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಾವನ್ನಪ್ಪಿದ್ದರು. ಇದರಿಂದ ಅವರ 37 ವರ್ಷಗಳ ಆಡಳಿತಕ್ಕೆ ಅಂತ್ಯ ಕಂಡಿತ್ತು. ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಂಡಿದ್ದ ಯುದ್ಧ ಪರಿಸ್ಥಿತಿಯ ಕಾರಣ ಅಂತ್ಯಸಂಸ್ಕಾರ ಮುಂದೂಡಲಾಗಿತ್ತು. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯಾದ ಬಳಿಕ ಜುಲೈ 4ರಿಂದ ಅಂತಿಮ ವಿಧಿವಿಧಾನಗಳನ್ನು ಆರಂಭಿಸಿ ಆರು ದಿನಗಳ ಕಾಲ ನಡೆಸಲಾಯಿತು.

ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸಬೇಕೆಂದು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಖಾಲೀಬಾಫ್ ಕರೆ ನೀಡಿದ್ದ ಹಿನ್ನೆಲೆ, ದೇಶದ ನಾನಾ ಭಾಗಗಳಿಂದ ಜನರು ಮಶಾದ್‌ಗೆ ಹರಿದುಬಂದರು. ಸ್ಥಳೀಯ ಗವರ್ನರ್ ಹಸನ್ ಹುಸೇನಿ ಅವರ ಪ್ರಕಾರ, ಸುಮಾರು 1.5 ಕೋಟಿಗೂ ಅಧಿಕ ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಜನರು ಶಿಯಾ ಪಂಗಡದ ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳನ್ನು ಹಿಡಿದು ಅಮೆರಿಕ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದರ ನಡುವೆ, ಖಮೇನಿ ಅವರ ಅಂತ್ಯಕ್ರಿಯೆಯ ದಿನವೇ ಫೆಬ್ರವರಿ 28ರಂದು ಅವರ ನಿವಾಸದ ಮೇಲೆ ನಡೆದಿದ್ದ ದಾಳಿಯ 35 ಸೆಕೆಂಡುಗಳ ವಿಡಿಯೊವನ್ನು ಇರಾನ್ ಮಾಧ್ಯಮಗಳು ಬಿಡುಗಡೆ ಮಾಡಿವೆ. ಅಮೆರಿಕ-ಇಸ್ರೇಲ್ ಜಂಟಿ ಕ್ಷಿಪಣಿ ದಾಳಿಯಿಂದ ವಸತಿ ಸಮುಚ್ಚಯ ಸಂಪೂರ್ಣ ಧ್ವಂಸಗೊಂಡ ದೃಶ್ಯಗಳು ಅದರಲ್ಲಿ ಕಾಣಿಸಿಕೊಂಡಿವೆ.

ಗುರುವಾರ ಬೆಳಗ್ಗೆ ನಡೆಯಬೇಕಿದ್ದ ಅಂತಿಮ ವಿಧಿವಿಧಾನಗಳು, ಇರಾನ್ ಮೇಲಿನ ಅಮೆರಿಕದ ಹೊಸ ವೈಮಾನಿಕ ದಾಳಿಯಿಂದ ಕೆಲವು ಗಂಟೆಗಳ ಕಾಲ ವಿಳಂಬವಾದವು. 20 ದಿನಗಳ ಹಿಂದೆ ಜಾರಿಯಾದ ಕದನ ವಿರಾಮದಿಂದ ಶಾಂತಿ ನೆಲೆಸಲಿದೆ ಎನ್ನುವ ನಿರೀಕ್ಷೆ ಮೂಡಿದ್ದರೂ, ಇದೀಗ ಮತ್ತೆ ಅಮೆರಿಕ-ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಹೋರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಭಾರತಕ್ಕೆ ಹೊರಟಿದ್ದ ಹಡಗು ಸೇರಿದಂತೆ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ, ಪ್ರತಿದಾಳಿಯಾಗಿ ಅಮೆರಿಕ ಬುಧವಾರ ಇರಾನ್‌ನ 80 ಸ್ಥಳಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕುವೈತ್ ಮತ್ತು ಬಹ್ರೈನ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಗುರುವಾರವೂ ಅಮೆರಿಕ ಇರಾನ್‌ನ 90 ಸ್ಥಳಗಳ ಮೇಲೆ ದಾಳಿ ನಡೆಸಿದ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಗರಿಗೆದರಿದೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 07 11T165838.426

ಲವ್ ಜಿಹಾದ್‌‌ನಲ್ಲಿ ಆಮೀರ್ ಖಾನ್..ಬಜರಂಗದಳ ವಾರ್ನಿಂಗ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 4:59 pm
0

Untitled design 2026 07 11T163853.054

ಪೊಲೀಸ್ ಇಲಾಖೆಗೆ 32 ಫೋರೆನ್ಸಿಕ್ ವ್ಯಾನ್‌, 75 ಬೊಲೆರೋ

by ದಿಶಾ ಕೆ. ಎಸ್.
July 11, 2026 - 4:40 pm
0

Web Photo Editor 2026 07 11T134950.979

ಬದ್ರಿನಾಥ ದೇಗುಲದಲ್ಲಿ ಭಕ್ತರ ಕಾಣಿಕೆ ದುರ್ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ

by ದಿಶಾ ಕೆ. ಎಸ್.
July 11, 2026 - 2:57 pm
0

Web Photo Editor 2026 07 11T134950.979

ಮಾತು ತಪ್ಪಿದ್ರಾ ಪ್ರಜ್ವಲ್..? ಸಿಕ್ಸ್‌‌ಪ್ಯಾಕ್‌‌ ಸೀಕ್ರೆಟ್ ರಿವೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2026 - 2:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 11T085117.703
    2030ರೊಳಗೆ ₹35,000 ಕೋಟಿ ವ್ಯಾಪಾರ ಗುರಿ: ಭಾರತ-ನ್ಯೂಜಿಲೆಂಡ್ ಮಹತ್ವದ ಒಪ್ಪಂದ
    July 11, 2026 | 0
  • Web Photo Editor 2026 07 11T063234.327 (1)
    40 ವರ್ಷಗಳ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ಇತಿಹಾಸ ನಿರ್ಮಿಸಿದ ಮೋದಿ
    July 11, 2026 | 0
  • ‘ರಾಮಾಯಣ’ ಸಿನಿಮಾಗೆ ಭಾರಿ ಪ್ರಚಾರ 400ಕ್ಕೂ ಹೆಚ್ಚು ಶಾಲೆಗಳಲ್ಲಿ ಭರ್ಜರಿ ಪ್ರಚಾರ (1)
    ಮಾತುಕತೆಗೆ ಇರಾನ್ ಮನವಿ, ಕದನ ವಿರಾಮ ಅಂತ್ಯ: ಟ್ರಂಪ್
    July 10, 2026 | 0
  • Untitled design (26)
    ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ
    July 10, 2026 | 0
  • Untitled design (24)
    ಟ್ರಂಪ್ ಹತ್ಯೆಗೆ ಇರಾನ್ ಸಂಚು? ಇಸ್ರೇಲ್‌ನಿಂದ ಸ್ಫೋಟಕ ಮಾಹಿತಿ
    July 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version