ಬೆಂಗಳೂರು: ಪ್ರತಿಯೊಬ್ಬ ರಾಜಕೀಯ ನಾಯಕನಿಗೂ ಅಭಿಮಾನಿಗಳಿರುತ್ತಾರೆ. ಆದರೆ ಕೆಲವೊಮ್ಮೆ ಆ ಅಭಿಮಾನವನ್ನು ತೋರಿಸುವ ವಿಧಾನವೇ ವಿಭಿನ್ನ ಮತ್ತು ವಿಶಿಷ್ಠವಾಗಿರುತ್ತದೆ. ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಹನುಮಾಪುರ ಗ್ರಾಮದ ಯುವಕನೊಬ್ಬ ತನ್ನ ಆರಾಧ್ಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ‘ಕರ್ನಾಟಕದ ಮುಖ್ಯಮಂತ್ರಿ’ ಆಗಿ ಕಾಣುವ ತನ್ನ ಅಪಾರ ಬಾಂಧವ್ಯವನ್ನು ಅತ್ಯಂತ ಅಪರೂಪದ ರೀತಿಯಲ್ಲಿ ಪ್ರದರ್ಶಿಸಿದ್ದಾನೆ. ಈ ಕ್ರೇಜಿ ಅಭಿಮಾನದ ಹೊಸ ಇತಿಹಾಸ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಹನುಮಾಪುರ ಗ್ರಾಮದ ಗಿರಿ ಗೌಡ ಎಂಬ ಯುವಕ, ತಮ್ಮ ನೆಚ್ಚಿನ ನಾಯಕ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅದೇ ಐತಿಹಾಸಿಕ ಕ್ಷಣವನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿಶೇಷವೆಂದರೆ ಅವರು ಕೇವಲ ನಾಯಕನ ಹೆಸರು ಅಥವಾ ಚಿತ್ರವನ್ನಷ್ಟೇ ಅಲ್ಲ, ಪ್ರಮಾಣವಚನ ಸ್ವೀಕರಿಸಿದ ದಿನಾಂಕ ಮತ್ತು ಸಮಯವನ್ನೇ ಟ್ಯಾಟೂ ರೂಪದಲ್ಲಿ ತಮ್ಮ ಕೈಮೇಲೆ ಹಾಕಿಸಿಕೊಂಡಿದ್ದಾರೆ.
ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಈ ಯುವಕನ ಅಭಿಮಾನವನ್ನು ನೋಡಿ ಆಶ್ಚರ್ಯ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಇದನ್ನು “ಅತಿಯಾದ ಅಭಿಮಾನ” ಎಂದು ಕರೆಯುತ್ತಿದ್ದಾರೆ.
A die-hard fan of DK Shivakumar, Giri Gowda from Hanumapura in Kunigal constituency, has tattooed the date and time of DK Shivakumar’s Chief Minister swearing-in ceremony on his arms.@XpressBengaluru @NewIndianXpress @ramupatil_TNIE @mg_chetan @DKShivakumar pic.twitter.com/PxDszCYjxH
— Rakshith Gowda (@rakshithgowda06) June 3, 2026
ಗಿರಿ ಗೌಡ ಅವರ ಪ್ರಕಾರ, ತಮ್ಮ ನೆಚ್ಚಿನ ನಾಯಕ ಡಿಕೆಶಿ ಮುಖ್ಯಮಂತ್ರಿಯಾಗುವ ಕ್ಷಣವು ತಮ್ಮ ಜೀವನದಲ್ಲೇ ಮರೆಯಲಾಗದ ದಿನ. ಆ ಕ್ಷಣವನ್ನು ಕೇವಲ ನೆನಪಿನಲ್ಲಿ ಮಾತ್ರವಲ್ಲ, ಜೀವನಪೂರ್ತಿ ಉಳಿಯುವ ರೀತಿಯಲ್ಲಿ ದಾಖಲಿಸಬೇಕು ಎಂಬುದು ಅವರ ನಿರ್ಧಾರವಾಗಿತ್ತು. ಅದಕ್ಕಾಗಿ ಅವರು ಟ್ಯಾಟೂ ಕಲಾವಿದರನ್ನು ಸಂಪರ್ಕಿಸಿ, ಪ್ರಮಾಣವಚನದ ನಿಖರ ಸಮಯ ಹಾಗೂ ದಿನಾಂಕವನ್ನು ಕೈಮೇಲೆ ಕಲಾತ್ಮಕವಾಗಿ ಕೆತ್ತಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರವನ್ನು ಹಂಚಿಕೊಂಡ ನಂತರ, ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅನೇಕರು “ಇಂತಹ ಅಭಿಮಾನ ಅಪರೂಪ” ಎಂದು ಕಾಮೆಂಟ್ ಮಾಡುತ್ತಿದ್ದರೆ, ಕೆಲವರು “ಇದು ಅತಿಯಾದ ಭಾವನೆಗಳ ಪ್ರತಿಬಿಂಬ” ಎಂದು ಅಭಿಪ್ರಾಯಪಟ್ಟಿದ್ದಾರೆ.





