ಲೇಖಕರು: ಗಿರೀಶ್, ಇಎಸ್ಐ ಚರ್ಮರೋಗ ತಜ್ಞ
ಈ ದಿನ 11 ನೇ ಮೆ, ” ತಾಯಂದಿರ ದಿನಾಚರಣೆ” ಸುದಿನ. ಈ ಒಂದು ಸಂದರ್ಭದಲ್ಲಿ ನನ್ನ ಪುಟ್ಟ ಲೇಖನವನ್ನ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಅಮ್ಮ, ಅವ್ವ, ತಾಯಿ, ಮಾತಾ, ಇವೆಲ್ಲವೂ ಎರಡು ಅಕ್ಷರದ ಪದಗಳಾದರೂ , ಆ ವ್ಯಕ್ತಿತ್ವದ ಸ್ಥಾನ ಆಗಾದವಾದದ್ದು , ಹಾಗೇ ಆ ಸ್ಥಾನವನ್ನು ಯಾರು ಭರಿಸಲಾರರು. ಯಾಕೆಂದರೆ, ಅವಳು ಕರುಣಾಮಯಿ, ಪ್ರೇಮಮಯಿ ಮಮತೆಯ ಸಾಗರ, ಸಹನಶೀಲೆ, ಧೈರ್ಯವಂತೆ, ಇನ್ನೂ ಹೇಳುವ ಪದಗಳು ಇವೇ ಆದರೆ ನನ್ನಲ್ಲಿ ಪದಪುಂಜಗಳ ಕೊರತೆ ಇದೆ. ನಾವು ಕಾಣುವ ಪ್ರತ್ಯಕ್ಷವಾಗಿ ಕಾಣುವ “ದೈವ” ಅವಳು. ಅವಳ ಅಮೃತ್ ಪಾನವೇ ಕಂದಮ್ಮಗಳ ಜೀವಧಾರೆ.
ಮಗು ಬೆಳೆಯ ಬೇಳೆಯುತ್ತಿದ್ದಂತೆ, ಆಟೋಟ ನೋಟಗಳ್ಳಲ್ಲಿ ತೊಡಗಿ ತಾಯಿಯ ಮಮಕಾರದಲ್ಲಿ ಗ್ರಹಿಸಲು ಪ್ರಾರಂಭಿಸುತ್ತದೆ.
ಗಾದೆ ಮಾತುಗಳು ಹೇಳುವಂತೆ, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲು ಗುರು ಹಾಗೂ ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು, ಇವೂ ಅಕ್ಷರಶಃ ನಿಜ. ಒಂದು ಮಗು ಪ್ರಾರಂಭದಲ್ಲಿ ಕಲಿಯುವದೆಲ್ಲವೂ ಮನೆಯಲ್ಲಿಯೇ ಅದು ಕೂಡ ತಾಯಿಯ ದಿವ್ಯ ಮಾರ್ಗ ದರ್ಶನದಲ್ಲಿ. ಅದು ತೊದಲು ನುಡಿ ಆಗಿರಬಹುದು, ಆಟ ನೋಟ ವಾಗಿರಬಹುದು, ಉತ್ತಮ ಸಂಸ್ಕಾರ ಕೂಡ ತಾಯಿಯ ಒಂದು ವರ. ಅವಳೇ ಸಾಕ್ಷಾತ್ ಪರಮ ಗುರು. ಒಬ್ಬ ವ್ಯಕ್ತಿ ಉನ್ನತ್ತ ಸ್ಥಾನಕ್ಕೆ ಅಥವಾ ಅಧೋಗತಿಗೆ ಅವಳೇ ತಾಯಿಯೇ ಮುಖ್ಯ ಭೂಮಿಕೇ ವಹಿಸುತ್ತಾಳೆ.
ಏಕೆಂದರೆ ಉತ್ತನ್ನ ಸ್ಥಾನಕ್ಕೆ ಏರಲು ಸರಿಯಾದ ಮಾರ್ಗ ದರ್ಶನ, ಶಿಕ್ಷಣ, ನೈತಿಕ ಮೌಲ್ಯಗಳು, ಆರೋಗ್ಯದ ಬಗ್ಗೆ ಕಾಳಜಿ, ಸರಿಯಾದ ಜೀವನ ಕ್ರಮ್ಮ ಇವೆಲ್ಲವೂ ಬೇಕು. ಅದು ತಿಳಿ ಹೇಳುವುದು ತಾಯಿಯ ಆದ್ಯ ಕರ್ತವ್ಯ. ಹಾಗೆಯೇ ಒಬ್ಬ ವ್ಯಕ್ತಿಗೆ ಇವೆಲ್ಲವೂ ತಾಯಿಯಿಂದ ಸಿಗದೆ ಹೋದರೆ ಆ ವ್ಯಕ್ತಿ ಸಮಾಜಕ್ಕೆ ಒಂದು ಘಾತಕ ಶಕ್ತಿಯಾಗಿ ಪರಿಣಮಿಸುತ್ತಾನೆ.
ಎಲ್ಲ ವ್ಯಕ್ತಿಗಳ ಜೀವನದಲ್ಲಿ ಒಂದು ಸಮಾಜದಲ್ಲಿ ಉತ್ತಮ ಸ್ಥಾನ ಮಾನ ದೊರೆತ್ತಿದ್ದೇ ಆದಲ್ಲಿ ಆ ಯಶಸ್ಸಿನ ಹಿಂದಿನ ರೂವಾರಿ ,”ತಾಯಿ” ಯೇ ಅಲ್ಲವೇ.
ಆದಕಾರಣ ಈ ಒಂದು ತಾಯಿಯ ದಿನಾಚರಣೆಯ ಸುಸಂದರ್ಭದಲ್ಲಿ ಅವಳು ನಮಗಾಗಿ ಹಗಲಿರುಳು ಶ್ರಮಿಸಿ ಉತ್ತಮ್ಮ ವ್ಯಕ್ತಿಗಳನ್ನಾಗಿ ರೂಪಿಸಿದಕ್ಕೆ ನಾವೆಲ್ಲರೂ ಚಿರಋಣಿ. ಆದಕಾರಣ ನಮ್ಮ ನಮ್ಮ ತಾಯಂದಿರನ್ನ ಪೂಜಿಸಿ, ಪೋಷಿಸಿ, ಗೌರವಿಸುವ , ನೋಡಿಕೊಳ್ಳುವ, ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಯಾವ ಕಾರಣಕ್ಕೂ ವೃದ್ಧಾಶ್ರಮ ಅಥವಾ ಬೇರೆ ಇನ್ನಲ್ಲೂ ಸೇರಿಸುವಂತಹ ಹೇಯ ಕೃತ್ಯವನ್ನು ಮಾಡಲೇ ಬಾರದು. ಈ ನನ್ನ ಮನದಾಳದ ಮಾತುಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇಷ್ಟವಾದಲ್ಲಿ ಒಂದು ಮೆಚ್ಚುಗೆ ಇರಲಿ. ಮತ್ತೊಮ್ಮೆ “ತಾಯಂದಿರ ದಿನದ” ಹಾರ್ದಿಕ ಶುಭಾಶಯಗಳು.