ರಾಮನಗರ: ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಈ ಘೋರ ಘಟನೆ ಬೆಂಗಳೂರು ದಕ್ಷಿಣದ ತಾವರೆಕೆರೆ ಟೌನ್‌ನಲ್ಲಿ ಬುಧವಾರ ನಡೆದಿದೆ.
ಬಂಧಿತ ಆರೋಪಿ ರಾಯಚೂರು ಮೂಲದವನು ಎಂದು ತಿಳಿದುಬಂದಿದೆ. ಬಾಲಕಿಯ ಕುಟುಂಬವು ಕೊಪ್ಪಳದಿಂದ ಕೆಲಸಕ್ಕಾಗಿ ತಾವರೆಕೆರೆಗೆ ಸ್ಥಳಾಂತರಗೊಂಡಿತ್ತು. ಬಾಲಕಿಯು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆಯ ದಿನ, ಬಾಲಕಿಯ ತಂದೆ-ತಾಯಿ ಮತ್ತು ಸಹೋದರ ಕೆಲಸಕ್ಕೆ ಹೋಗಿದ್ದ ವೇಳೆ, ಆರೋಪಿಯು ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ, ಸಿಲಿಂಡರ್‌ನಿಂದ ಆಕೆಯ ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ಆರೋಪಿಯು ಸಿಲಿಂಡರ್‌ನ್ನು ಪಕ್ಕದ ಗ್ರಾಮಕ್ಕೆ ಕೊಂಡೊಯ್ದು ಮಾರಾಟ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.