ಗ್ಯಾರಂಟಿ ನ್ಯೂಸ್ ಸ್ಯಾಟಲೈಟ್ ಸುದ್ದಿ ವಾಹಿನಿ ಮೂಡ್ ಆಫ್ ಕರ್ನಾಟಕ ಎಂಬ ಮೆಗಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸದ್ಯದ ಸ್ಥಿತಿಗತಿ ಹೇಗಿದೆ ಅನ್ನೋದ್ರ ಕುರಿತಾಗಿ ಜನರ ನಾಡಿಮಿಡಿತ ಗ್ರಹಿಸುವ ಕೆಲಸ ಮಾಡ್ತಿದೆ.
ಈ ಪೈಕಿ ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ನಡೆದ ವಿಧಾನಸಭಾ ಚುನವಣೆಯ ಫಲಿತಾಂಶದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಂಜುಳಾ ರವರು – 1,81,731 (54.31%)ಮತಗಳಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಹೆಚ್. ನಾಗೇಶ್- 1,37,230 (41.01%)ಮತ ಗಳಿಸಿದ್ದರು. ಎಎಪಿ ಸಿ ಆರ್ ನಟರಾಜ್-4551 (01.36%)ಮತ ಗಳಿಸಿದ್ದರು.ಈ ಚುನಾವಣೆಯಲ್ಲಿ ಮಂಜುಳಾ ಅವರು 1,81,731 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಹದೇವಪುರ ಕ್ಷೇತ್ರದ ಬಗ್ಗೆ ಮಾಹಿತಿ
ಮಹದೇವಪುರ ಕ್ಷೇತ್ರದಲ್ಲಿ ದಲಿತ ಮತಗಳದ್ದೇ ಹೆಚ್ಚು ಪ್ರಾಬಲ್ಯ. ಮಹದೇವಪುರ ಐಟಿ ಬಿಟಿ ಕಂಪನಿಗಳ ತವರು ಆಗಿದ್ದೆ. ತೆಲುಗು, ಉತ್ತರ ಭಾರತ, ತಮಿಳರ ಮತಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ತೆಕ್ಕೆಯಲ್ಲಿರೋ ಕ್ಷೇತ್ರದಲ್ಲಿ ಅರವಿಂದ್ ಲಿಂಬಾವಳಿ ಹವಾ.8 ವಾರ್ಡ್ ಗಳಲ್ಲಿ 3 ಕಾಂಗ್ರೆಸ್, 4 ಬಿಜೆಪಿ 1 ಪಕ್ಷೇತರ ಅಭ್ಯರ್ಥಿಗಳ ಬಲವಾಗಿದೆ. ದಲಿತ ನಾಯಕರೇ ಮಹದೇವಪುರ ನಿರ್ಣಾಯಕರಾಗಿದ್ದಾರೆ. ಟಿಕೆಟ್ ನಿರಾಕರಸಿದ್ದಕ್ಕೆ ಪತ್ನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದ ಲಿಂಬಾವಳಿ.
ಅದೇ ವಿಚಾರಕ್ಕೆ ಬಿಜೆಪಿಯ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ. ಬಿಜೆಪಿ ವಿರುದ್ಧವೇ ಬಂಡಾಯದಿಂದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಬಿಜೆಪಿಯ ಬಣ ಬಡಿದಾಟದಲ್ಲಿ ಸಕ್ರಿಯವಾಗಿರೋ ಅರವಿಂದ ಲಿಂಬಾವಳಿ, ವಿಜಯೇಂದ್ರ ವಿರುದ್ಧ ನಿಂತು ನೇರವಾಗಿ ಯತ್ನಾಳ್ ಗೆ ಬೆಂಬಲ ಸೂಚಿಸಿದ್ದರು. ಜೊತೆಯಲ್ಲೇ ಬಿಜೆಪಿಯಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪವೂ ಅವರ ಮೇಲಿದೆ. ಪತ್ನಿ ಶಾಸಕಿಯಾದ್ರೂ ಅಧಿಕಾರ ಅರವಿಂದ್ ಲಿಂಬಾವಳಿಯದ್ದೇ ಎನ್ನುವಂತಾಗಿದೆ. ಜೊತೆಗೆ ದಲಿತ ನಾಯಕರೊಂದಿಗೆ ಉತ್ತಮ ಒಡನಾಟದಲ್ಲಿರೋ ಲಿಂಬಾವಳಿಗೆ ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳೇ ಇಲ್ಲವಾಗಿದೆ.
ಮಹದೇವಪುರ ಕ್ಷೇತ್ರದ ಆಕಾಂಕ್ಷಿಗಳು ಯಾರು..?
ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳು ಯಾರು ಎಂದು ನೋಡುವುದಾದರೆ ಬಿಜೆಪಿಯಿಂದ ಅರವಿಂದ್ ಲಿಂಬಾವಳಿ ಅಥವಾ ಅವರ ಪತ್ನಿ ಮಂಜುಳಾ ಎಸ್ ಅವರಿಗೂ ಟಿಕೆಟ್ ಸಿಗಬಹುದಾಗಿದೆ. ಕಾಂಗ್ರೆಸ್ ನಿಂದ ಹೆಚ್ ನಾಗೇಶ್ ಟಿಕೆಟ್‌ಗಾಗಿ ಲಾಬಿ ನಡೆಸಬಹುದು. ಜೆಡಿಎಸ್ ನಿಂದ ಕೆ. ಸತೀಶ್ ಟಿಕೆಟ್ ಆಕಾಂಕ್ಷಿ..
ಜನರ ಒಲವು ಈಗಲೂ ಯಾರ ಕಡೆ?
ಮಹದೇವಪುರಲ್ಲಿ ಮತ್ತೊಮ್ಮೆ ಬಿಜೆಪಿಗೆ ಗೆಲ್ಲುವ ಸಾಧ್ಯತೆಯೇ ಹೆಚ್ಚು.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54