ನಗರದ ಸಸ್ಯಕಾಶಿ ಎಂದೇ ಹೆಸರು ಪಡೆದಿರುವ ಲಾಲ್ ಭಾಗ್ ನಲ್ಲಿ ಇತ್ತಿಚಿನ ದಿನಗಳಲ್ಲಿ ರೀಲ್ಸ್ ಪ್ರೀ ವೆಡ್ಡಿಂಗ್ ಶೂಟ್ ಹಾವಳಿ ಜೋರಾಗಿದೆ ಇದಕ್ಕೆ ಬ್ರೇಕ್ ಹಾಕಲು ಲಾಲ್ ಬಾಗ್ ಅಡಳಿತ ಸಿದ್ದತೆ ನಡೆಸಿದೆ ಹಾಗಿದ್ರೆ ಯಾಕಿ ರೂಲ್ಸ್ ಈ ರೂಲ್ಸ್ ಗೆ ಜನ ಹೇಗೆ ರಿಯಾಕ್ಟ್ ಮಾಡ್ತಾರೆ.
ಸಸ್ಯಕಾಶಿ ಎಂದೆ ಹೆಸರು ಪಡೆದುಕೊಂಡಿರುವ ಲಾಲ್ ಬಾಗ್ ನಲ್ಲಿ ರೀಲ್ಸ್ ಹಾಗೂ ಫ್ರೀ ವೆಡ್ಡಿಂಗ್ ಶೂಟ್ ಹಾವಳಿ ಜೋರಾಗಿದ್ದು ಇದಕ್ಕೆ ಬ್ರೇಕ್ ಹಾಕಲು ಲಾಲ್ ಬಾಗ್ ಆಡಳಿತ ಮಂಡಳಿ ಸಿದ್ದತೆ ನಡೆಸಿಕೊಂಡಿದೆ. ಪೋಸ್ಟ್ ವೆಡ್ಡಿಂಗ್ ಶೂಟ್ಸ್ ಮಾಡೆಲಿಂಗ್ ರೀಲ್ಸ್, ಸಿನಿಮಾ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ಪ್ಲಾನ್ ಮಾಡಿಕೊಂಡಿದೆ.ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕಿನಲ್ಲಿ ಸಿನಿಮಾ, ಕಿರುತೆರೆ, ಪ್ರೀ ವೆಡ್ಡಿಂಗ್ ಶೂಟ್ ನಿಷೇಧ ಏರಲಾಗಿದೆ ಈ ಬೆನ್ನಲ್ಲೇ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಚಿತ್ರೀಕರಣ ನಿಷೇಧಕ್ಕೆ ಪ್ರಸ್ತಾವನೆ ತಯಾರಿ ನಡೆಯುತಿದೆ ಈ ನಡೆಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತಿದೆ.
ಚಿತ್ರೀಕರಣ ನಿಷೇಧಕ್ಕೆ ಕಾರಣಗಳೇನು?
– ಲಾಲ್ ಬಾಗ್ ನಲ್ಲಿ ಹೆಜ್ಜೇನು ಗೂಡು ಕಟ್ಟಿ ಕೊಂಡಿವೆ
– ಸಿನಿಮಾ ಚಿತ್ರೀಕರಣ ವೇಳೆ ಫ್ಲ್ಯಾಶ್ ಲೈಟ್ ಹಾಕಿದ್ರೆ ದಾಳಿ ಸಾಧ್ಯತೆ
– ಪ್ರೀ & ಪೋಸ್ಟ್ ವೆಡ್ಡಿಂಗ್ ಶೂಟ್ ವೇಳೆ ಸಾರ್ವಜನಿಕ ಸ್ಥಳ ಎಂಬ ಪ್ರಜ್ಞೆ ಇಲ್ಲದೇ ನಡವಳಿಕೆ
– ಹಿರಿಯ ನಾಗರಿಕರು ಪ್ರವಾಸಿಗರು ಮಕ್ಕಳು ಮಹಿಳೆಯರು ಪ್ರವಾಸಕ್ಕೆ ಬರುವವರಿಗೆ ಮುಜುಗರ
– ಗಿಡ ಮರಗಳ ಮೇಲೆ ಕುಳಿತು ಫೋಟೋ ವಿಡಿಯೋ ಚಿತ್ರೀಕರಣ ಮಾಡಿ ಅವುಗಳಿಗೆ ಹಾನಿ ಸಾಧ್ಯತೆ
– ಈ ಎಲ್ಲಾ ಅಂಶಗಳ ಪರಿಗಣನೆಗೆ ತೆಗೆದು ಕೊಂಡು ವಾರದೊಳಗೆ ಸಭೆ ನಡೆಸಿ ಪ್ರಸ್ತಾವನೆ ಸಲ್ಲಿಕೆಗೆ ತಯಾರಿ
ಜೀವ ವೈವಿಧ್ಯತೆಯ ತಾಣವಾಗಿರೋ ಲಾಲ್ ಬಾಗ್
ಪ್ರಾಣಿ ಪಕ್ಷಿಗಳಿಗೆ ವಾಸಿಸಲು ಧಕ್ಕೆಯಾಗದಂತೆ ಕ್ರಮವಹಿಸಲಾಗಿದ್ದು ಇಲಾಖೆಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಸಂತಸ ವ್ಯಕ್ತವಾಗುತಿದೆ. ರೀಲ್ಸ್ ಹಾಗೂ ಫ್ರೀ ವೆಡ್ಡಿಂಗ್ ಶೂಟ್ ನಿಂದಾಗಿ ನೆಮ್ಮದಿಯಾಗಿ ಪ್ರಕೃತಿ ಸೌಂದರ್ಯ ನೋಡಲು ಬಂದ ಪ್ರವಾಸಿಗರಿಗೆ ತೊಂದರೆಯಾಗುತಿದ್ದು ಇಲಾಖೆಯ ಈ ನಿರ್ಧಾರವನ್ನು ಜನ ಖುಷಿಯಿಂದ ಸ್ವಾಗತಿಸುತುದ್ದಾರೆ.
ನಗರದ ಪಾರ್ಕ್ ಗಳು ಶಿಸ್ತು ಕ್ರಮವಹಸಲು ಸಿದ್ದತೆ ನಡೆಸುತಿದ್ದು ರೀಲ್ಸ್ ಮಾಡಿ ಮರಗಳ ಮೇಲೆ ಕೋತಿಗಳಂತೆ ಹತ್ತಿ ಮುಜುಗರ ಉಂಟುಮಾಡುವ ರೀತಿ ವರ್ತಿಸುವ ಕಲವರು ಇನ್ನಾದರೂ ಎಚ್ಚರ ವಹಿಸಬೇಕಾಗಿದೆ.