ವರದಿ: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ರೈಲ್ವೆಗೊಲ್ಲಹಳ್ಳಿ ಗ್ರಾಮದಲ್ಲಿರುವ ಶ್ರೀ ಬೈಲಾಂಜನೇಯಸ್ವಾಮಿ ದೇವಾಲಯದ ಪಾರುಪತ್ತೇದಾರ ಟಿ. ಶ್ರೀನಿವಾಸ್ ಅವರು ದೇವಲಯ ಕಟ್ಟಡ ಕಟ್ಟಲು ಭಕ್ತರಿಂದ ಸಂಗ್ರಹಿಸಲಾದ ದೇಣಿಗೆಯನ್ನು ಬಾರ್ ಕೋಡ್ ಮುಖಾಂತರ ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಿರುವ ಕುರಿತು ಗಂಭೀರ ಆರೋಪಗಳು ಹೊರ ಬಂದಿವೆ.
ದೇವಾಲಯದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತಾಧಿಗಳಿಂದ ಸಂಗ್ರಹಿಸಲಾಗಿದ್ದ ದೇಣಿಗೆಯ ಮೊತ್ತವನ್ನು, ನಿಯಮಾನುಸಾರ ದೇವಾಲಯದ ಉಳಿತಾಯ ಖಾತೆಗೆ ಜಮಾ ಮಾಡಬೇಕಿತ್ತು. ಅದರೆ, ಮುಜರಾಯಿ ಇಲಾಖೆಯ ಪಾರುಪತ್ತೆದಾರ ಶ್ರೀನಿವಾಸ್ ಅವರು ಖಾಸಗಿ ವ್ಯಕ್ತಿಯ ಸ್ಕ್ಯಾನರನ್ನು ದೇವಾಲಯದಲ್ಲಿ ಹಾಕಿ ‘ಫೋನ್ ಪೇ’ ಮೂಲಕ ತಮ್ಮ ಖಾತೆ (ಎಸ್.ಬಿ.ಐ., ಪರಮಣ್ಣ ಲೇಔಟ್, ಖಾತೆ ಸಂಖ್ಯೆ: 64002908774) ಹಾಗೂ ಖಾಸಗಿ ವ್ಯಕ್ತಿ ರೇಣುಕ ಪ್ರಸನ್ನ ಅವರ ಖಾತೆ (ಎಸ್.ಬಿ.ಐ., ಚೇಳೂರು ಶಾಖೆ, ಖಾತೆ ಸಂಖ್ಯೆ: 64151784348)ಗಳಿಗೆ ಸುಮಾರು
15ಲಕ್ಷ ರೂಪಾಯಿ ದೇಣಿಗೆಯ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ.
ಆದರೂ,ಮುಜರಾಯಿ ಇಲಾಖೆಯ ದೇವಾಲಯದ ಹಣವನ್ನು ವೈಯಕ್ತಿಕ ಖಾತೆಗಳಲ್ಲಿ ಸಂಗ್ರಹಿಸಿ, ಯಾವುದೇ ಅಧಿಕೃತ ಆದೇಶವಿಲ್ಲದೆ ಖರ್ಚು ಮಾಡಿರುವುದು ಹಾಗೂ ಬಳಸಿಕೊಂಡಿರುವುದು ಕಾನೂನು ಬಾಹಿರವೆಂದು ತಿಳಿದು, ನೆಲಮಂಗಲ ತಾಲೂಕಿನ ಇಒ ಅಧಿಕಾರಿ ಬೃಂದಾ ಅವರು ಪಾರುಪತ್ತೆದಾರ ಶ್ರೀನಿವಾಸ್ ಸೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ದೂರು ನೀಡಿ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಕುರಿತು ಕೂಲಂಕುಷವಾಗಿ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದ್ದು, ದೇವಾಲಯದ ಭದ್ರತೆ ಹಾಗೂ ಭಕ್ತಾದಿಗಳ ನಂಬಿಕೆಗೆ ಧಕ್ಕೆ ತರುವಂತಹ ಘಟನೆಗೆ ಗಂಭೀರವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ.





