ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಜಯದೇವ ಆಸ್ಪತ್ರೆ) ನೂತನ ನಿರ್ದೇಶಕರಾಗಿ ಡಾ. ಬಿ. ದಿನೇಶ್ ಅಧಿಕಾರ ವಹಿಸಿಕೊಂಡರು.
ಬುಧವಾರ ಸಂಜೆ ಡಾ. ಬಿ. ದಿನೇಶ್ ಅವರು ನಿರ್ದೇಶಕರಾಗಿ ಕರ್ತವ್ಯಕ್ಕೆ ವರದಿ ಮಾಡಿದ ಸಂದರ್ಭದಲ್ಲಿ, ಜಯದೇವ ಆಸ್ಪತ್ರೆಯ ಹಿಂದಿನ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ಹಾಗೂ ಸಿಬ್ಬಂದಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಡಾ. ದಿನೇಶ್ ಅವರು ಮೈಸೂರಿನ ಜಯದೇವ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಬಿ. ದಿನೇಶ್ ಅವರು ಹೃದ್ರೋಗ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದು, ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ತಮ್ಮ ಸೇವೆಯ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರ ನೇಮಕಾತಿಯಿಂದ ಜಯದೇವ ಆಸ್ಪತ್ರೆಯ ಸಂಶೋಧನೆ ಮತ್ತು ಚಿಕಿತ್ಸಾ ಸೇವೆಗಳು ಮತ್ತಷ್ಟು ಬಲವರ್ಧನೆಗೊಳ್ಳುವ ನಿರೀಕ್ಷೆಯಿದೆ.





